ಎಳನೀರಿನಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಗೊತ್ತಾ?

ಬೇಸಿಗೆಯಲ್ಲಿ ಎಲ್ಲರಿಗೂ ಅತ್ಯಂತ ತಂಪಾದ ಪಾನೀಯಗಳನ್ನು ಕುಡಿಯುವುದೆಂದರೆ ಎಲ್ಲಿಲ್ಲದ ಪ್ರೀತಿ. ಆದರೆ ನಾವು ಕುಡಿಯುವ ಪಾನೀಯದಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಯಾವತ್ತಾದರೂ ಯೋಚಿಸಿದ್ದೇವೆಯೇ? ಬೇಸಿಗೆಯಲ್ಲಿ ದಾಹ ನೀಗಿಸುವಂಥ ಯಾವುದೇ ಪಾನೀಯಕ್ಕಿಂಥ ನೈಸರ್ಗಿಕವಾದ ಎಳನೀರು ಅತ್ಯಂತ ಆರೋಗ್ಯಕರ.

ಬೇಸಿಗೆ ತಾಪವನ್ನು ನೇರವಾಗಿ ನೀಗಿಸಬಲ್ಲ ಹಸಿರು ಎಳೆನೀರು ದೈವದತ್ತವಾದುದು. ಇದು ಕೇವಲ ರಿಫ್ರೆಶ್ ವಸ್ತು ಮಾತ್ರವಾಗಿರದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ತೆಂಗಿನಕಾಯಿ ನೀರಿನಲ್ಲಿ, ಜೀವಸತ್ವಗಳು, ಖನಿಜಗಳು, ಎಲೆಕ್ಟ್ರೋಲೈಟ್, ಕಿಣ್ವಗಳು, ಅಮೈನೋ ಆಮ್ಲಗಳು ಮತ್ತು ಸೈಟೊಕಿನ್ ಅಂಶಗಳು ಸಮೃದ್ಧವಾಗಿವೆ. ಎಳನೀರು ಇದೀಗ ತನ್ನೆಲ್ಲಾ ರಿಫ್ರೆಶ್ ಮತ್ತು ಅತ್ಯುತ್ತಮವಾದ ರುಚಿ, ಹಾಗೆಯೇ ತನ್ನ ಆರೋಗ್ಯದ ಲಾಭದಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.

Health Benefits of Coconut Water

* ಎಳೆನೀರು, ಅತಿಸಾರವನ್ನು ಕಡಿಮೆ ಮಾಡುವಲ್ಲಿ ತುಂಬಾ ಅನುಕೂಲಕರವಾಗಿದೆ. ಅಮೈನೊ ಆಮ್ಲಗಳು, ಕಿಣ್ವಗಳು, ಆಹಾರದ ಫೈಬರ್, ಸಿ ಜೀವಸತ್ವ ಮತ್ತು ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ಮ್ಯಾಂಗನೀಸ್ ಖನಿಜಗಳು ಎಳನೀರಿನಲ್ಲಿ ಸಮೃದ್ಧವಾಗಿದೆ. ಜೊತೆಗೆ ಇದು ಕೊಲೆಸ್ಟ್ರಾಲ್ ಮತ್ತು ಕ್ಲೋರೈಡ್ ರಹಿತ ಪಾನೀಯ ಕೂಡ.

* ತೆಂಗಿನಕಾಯಿಯ ನೀರು ಪೊಟ್ಯಾಷಿಯಂ ಅನ್ನು ಉತ್ತಮ ಪ್ರಮಾಣದಲ್ಲಿ ಹೊಂದಿದೆ, ಆದ್ದರಿಂದ ಇದು ದೇಹದ ದ್ರವಗಳಿಗೆ ಎಲೆಕ್ಟ್ರೋಲೈಟ್ ಸಂಯೋಜನೆಯನ್ನು ನೀಡುತ್ತದೆ.

* ತೆಂಗಿನಕಾಯಿ ನೀರು ದೇಹದಲ್ಲಿ ಯಶಸ್ವಿಯಾಗಿ ಅಭಿದಮನಿಯ ಸಂಚಲನ ನಡೆಯುವಂತೆ ಮಾಡುತ್ತದೆ. ದೂರದ ಪ್ರದೇಶಗಳಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲದಿರುವ ಸ್ಥಳದಲ್ಲೂ ರೋಗಿಯೊಬ್ಬನ ಜೀವ ಉಳಿಸುವ ಶಕ್ತಿ ನೈಸರ್ಗಿಕವಾದ ಎಳನೀರಿಗಿದೆ. ಎಳನೀರಿನಲ್ಲಿ ಕೊಬ್ಬಿನಂಶ ಅತ್ಯಂತ ಕಡಿಮೆಯಿರುವುದರಿಂದ ತೂಕ ಇಳಿಸಲು ಸಹಾಯಕವಾಗುತ್ತದೆ. ಇದು ಇತರ ಆಹಾರದ ಕಡುಬಯಕೆಗಳನ್ನು ಕಡಿಮೆ ಮಾಡಿ ಪರಿಪೂರ್ಣ ಭಾವನೆ ಹೊಂದಲು ಸಹಾಯಮಾಡುತ್ತದೆ.

* ಎಳನೀರು ಮಧುಮೇಹಿಗಳಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

* ಯಾವುದೇ ವ್ಯಕ್ತಿ ಜ್ವರ ಪೀಡಿತವಾಗಿದ್ದರೆ, ವೈರಸ್ ಗಳು ದೇಹವನ್ನು ಆಕ್ರಮಿಸಿದ್ದರೆ ತೆಂಗಿನ ನೀರು ಬಹಳ ಅನುಕೂಲಕರ.

* ಇದು ಪೊಟ್ಯಾಷಿಯಂ ಅಂಶವನ್ನು ಸಮೃದ್ಧವಾಗಿ ಹೊಂದಿರುವ ಎಳನೀರು ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಇದು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಂಥ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಎಳನೀರಿನಲ್ಲಿರುವ ಖನಿಜಗಳು, ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಅಂಶಗಳ ಕಾರಣ ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ಬಹುಮಟ್ಟಿಗೆ ತಡೆಯುತ್ತದೆ.

* ತೆಂಗಿನಕಾಯಿ ನೀರನ್ನು ಮೊಡವೆ, ಕಲೆಗಳು, ಸುಕ್ಕುಗಳು, ಸೆಲ್ಯುಲೈಟ್ ಮತ್ತು ಎಸ್ಜಿಮಾ ಜಾಗಗಳಿಗೆ ನಿರಂತರವಾಗಿ ಎರಡರಿಂದ ಮೂರು ವಾರಗಳ ಕಾಲ ರಾತ್ರಿ ಹಚ್ಚಿ ಮಲಗಿದರೆ ತ್ವಚೆ ಸ್ವಚ್ಛವಾಗುತ್ತದೆ. ಹಾಗೂ ಕಾಂತಿಯುತವಾಗುತ್ತದೆ.

ಕೆಲವು ಸಂಶೋಧಕರು, ಎಳನೀರು ಸೈಟೋಕೈನಿನ್ ನ್ನು ಹೊಂದಿದ್ದು, ಇಳೆ ವಯಸ್ಸಿನಲ್ಲಿ ಮುಪ್ಪು ಉಂಟಾಗುವುದು, ಕ್ಯಾನ್ಸರ್ ಮತ್ತು ಥ್ರಂಬೋಟಿಕ್ ಪರಿಣಾಮಗಳನ್ನು ಪ್ರಯೋಜನಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉದಾಹರಣೆಗೆ ಸೆಲೆನಿಯಮ್ ಕಾಂಪೌಂಡ್ಸ್ ಹೊಂದಿರುವ ಎಳನೀರು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ.

ಹ* ಲವಾರು ಪ್ರಾಣಿ ಅಧ್ಯಯನಗಳು, ಹೇಳುವಂತೆ ತೆಂಗಿನ ನೀರು ಕಡಿಮೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಕಡಿಮೆ ಮಾಡಬಹುದು ಎಂದು ಹೇಳಿವೆ. ಇತರ ಪಾನೀಯಗಳಿಗೆ ಹೋಲಿಸಿದರೆ ಎಳೆನೀರು ಅತ್ಯಂತ ಆರೋಗ್ಯಕರ ಆಯ್ಕೆ ಎನ್ನುವುದು ಅಕ್ಷರಶಃ ಸತ್ಯ.

* ತೆಂಗಿನಕಾಯಿ ನೀರಿನಲ್ಲಿರುವ ಆಮ್ಲ ಫಾಸ್ಫೇಟ್, ಅನೇಕ ನೈಸರ್ಗಿಕ ಜೈವಿಕಕ್ರಿಯಾಶೀಲ ಕಿಣ್ವಗಳು. ಕ್ರಿಯಾವರ್ಧಕ, ಡಿಹೈಡ್ರೋಜಿನೇಸ್, ಡಯಸ್ಟೇಟ್, ಪೆರಾಕ್ಸಿಡೇಸ್, ಆರ್ ಎನ್ ಎ-ಪಾಲಿಮರೇಸ್ ಇತ್ಯಾದಿ ಪರಿಣಾಮ ಕಿಣ್ವಗಳು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ.

* ಬಹಳ ಕಡಿಮೆ ಸಾಂದ್ರತೆಯ ಹೊರತಾಗಿಯೂ, ಕಿತ್ತಳೆ ಮುಂತಾದ ಹಣ್ಣುಗಳಲ್ಲಿರುವುದಕ್ಕಿಂತ ಹೆಚ್ಚು ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನೀಷಿಯಂ, ಮತ್ತು ಜಿಂಕ್ ರೀತಿಯ ಖನಿಜಗಳ ಉತ್ತಮ ಸಂಯೋಜನೆ ಹೊಂದಿದೆ.

* ಎಳನೀರು ಬಿ-ಕಾಂಪ್ಲೆಕ್ಸ್ ಜೀವಸತ್ವಗಳಾದ ನಿಯಾಸಿನ್, ಥಯಮಿನ್, ಪಿರಿಡಾಕ್ಸಿನ್ ಮೊದಲಾದವುಗಳ ಉತ್ತಮ ಮೂಲವಾಗಿದೆ. ಈ ಜೀವಸತ್ವಗಳು ಮಾನವ ದೇಹಕ್ಕೆ ಅತ್ಯಂತ ಅಗತ್ಯವಿರುವಂಥಹವು.

* ತೆಂಗಿನಕಾಯಿ ನೀರು ಎಲೆಕ್ಟ್ರೋಲಟ್ ಪೊಟ್ಯಾಷಿಯಂನ ಉತ್ತಮ ಪ್ರಮಾಣವನ್ನು ಹೊಂದಿದೆ. ಎಳನೀರಿನ 100 ಮಿಲಿ ನೀರು 250 ಮಿಗ್ರಾಂ ಪೊಟ್ಯಾಷಿಯಂ ಮತ್ತು 105 ಮಿಗ್ರಾಂ ಸೋಡಿಯಂ ಅಂಶಗಳನ್ನು ಹೊಂದಿದೆ. ಈ ಇಲೆಕ್ಟ್ರೊಲೈಟ್ಸ್ ಅಂಶಗಳು ಅತಿಸಾರದಂಥಹ ಸಮಸ್ಯೆಯನ್ನು ತಡೆಯುತ್ತವೆ.

* ಇದಲ್ಲದೆ, ತಾಜಾ ತೆಂಗಿನ ನೀರು ವಿಟಮಿನ್ ಸಿ (ಆಸ್ಕೋರ್ಬಿಕ್ ಆಮ್ಲ) ಯ ಒಂದು ಸಣ್ಣ ಪ್ರಮಾಣವನ್ನು ಹೊಂದಿದೆ. ಇದು 2.4 ಮಿಗ್ರಾಂ ಅಥವಾ ಶೇ 4. ಆರ್ ಡಿ ಎ ಪ್ರಮಾಣವನ್ನು ಒದಗಿಸುತ್ತದೆ.

* ಒಟ್ಟಿನಲ್ಲಿ ಬೇರೆ ಯಾವುದೇ ಪಾನೀಯಕ್ಕಿಂತ ಎಳನೀರು ಆರೋಗ್ಯಪೂರ್ಣ ಪಾನೀಯ ಎಂಬುದನ್ನು ಒಪ್ಪುತ್ತೀರಿ ತಾನೇ?

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion