Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಸೋಂಪಿನಲ್ಲಿದೆ ಅದ್ಭುತ ಔಷಧೀಯ ಗುಣಗಳು
ಮನೆಯಾದರೆ ಸೋಂಪು ಇರಲೇಬೇಕು. ಏಕೆಂದರೆ ಸೋಂಪನ್ನು ಅನೇಕ ರೀತಿಯಲ್ಲಿ ಮನೆ ಮದ್ದಾಗಿ ಬಳಸಬಹುದು. ಸೋಂಪು ಧೈರ್ಯ ಮತ್ತು ಶಕ್ತಿಯ ಸಂಕೇತ ಕೂಡ ಹೌದು. ಅದರ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, antioxidants, ಖನಿಜಾಂಶಗಳಾದ ಸತು, ಕ್ಯಾಲ್ಸಿಯಂ, ಪೊಟಾಷ್ಯಿಯಂ, ಮ್ಯಾಗ್ನಿಷಿಯಂ ಹಾಗೂ ವಿಟಮಿನ್ಸ್ ಇದರಲ್ಲಿ ಅಧಿಕವಾಗಿದೆ.
ಇದರಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಭೂರಿ ಬೋಜನ ಮಾಡಿದಾಗ ಸೋಂಪು ಬಾಯಿಗೆ ಹಾಕಿದರೆ ಆಹಾರ ಸುಲಭವಾಗಿ ಜೀರ್ಣವಾಗುವುದರಿಂದ ಆಲಸ್ಯ ಉಂಟಾಗುವುದಿಲ್ಲ. 100 ಗ್ರಾಂ ಸೋಂಪಿನಲ್ಲಿ 39.8% ನಾರಿನಂಶವಿರುತ್ತದೆ.
ಇದನ್ನು ಮನೆ ಮದ್ದಾಗಿ ಈ ಕೆಳಗಿನ ಸಮಸ್ಯೆಗಳಿಗೆ ಬಳಸಿ ಪ್ರಯೋಜನ ಪಡೆಯಬಹುದು:

ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ
ಸೋಂಪು ಕಾಳನ್ನು ಪ್ರತಿದಿನ ಊಟವಾದ ಬಳಿಕ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. ಊಟದ ನಂತರ ತಿನ್ನುವುದರಿಂದ ಬಾಯಲ್ಲಿನ ವಾಸನೆಯೂ ಕಮ್ಮಿಯಾಗುತ್ತದೆ.

ಕಣ್ಣಿಗೆ ಒಳ್ಳೆಯದು
ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದರ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ತೊಂದರೆಗಳು ನಿವಾರಣೆಗಳಾಗುತ್ತವೆ.

ಮುಟ್ಟಿನ ನೋವು ನಿವಾರಿಸುತ್ತೆ
ಸೋಂಪು ಅನ್ನು ನೀರಿನಲ್ಲಿ ಕುದಿಸಿ, ಅದನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆನೋವು ಮತ್ತು ಇತರೆ ತೊಂದರೆ ನಿವಾರಣೆಯಾಗುವುದು ಹಾಗೂ ಮುಟ್ಟು ನಿಯಮಿತವಾಗುತ್ತದೆ.

ಮಗುವಿನ ಹೊಟ್ಟೆ ನೋವಿಗೆ ಮನೆ ಮದ್ದು
ಸೋಂಪು ಸ್ವಲ್ಪ ಸೋಂಪನ್ನು ಹುರಿದು ನುಣ್ಣನೆ ಪುಡಿ ಮಾಡಿ, ನೀರಿನಲ್ಲಿ ಕಲೆಸಿ ಕೊಟ್ಟರೆ ಹೊಟ್ಟೆ ನೋವು ಕಡಿಮೆಯಾಗುವುದು.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಅಜೀರ್ಣ ಸಮಸ್ಯೆಯಿಂದ ಬಳಲುವವರು ಊಟದ ನಂತರ ಸ್ವಲ್ಪ ಸೋಂಪು ತಿಂದರೆ ಸಾಕು ಜೀರ್ಣಕ್ರಿಯೆಗೆ ಸಹಕಾರಿಯಾಗುವುದು. ಸೋಂಪು ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ ರಕ್ತವನ್ನು ಶುದ್ಧೀಕರಿಸುತ್ತದೆ.

ಮೆದುಳಿನ ಆರೋಗ್ಯಕ್ಕೆ
ಸೋಂಫು ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಆಹಾರಗಳಲ್ಲಿ ಒಂದಾಗಿದೆ. ಇದು ಮೆದುಳಿನ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಉಸಿರಾಟದ ಕ್ರಿಯೆಗೆ ಸಹಾಯ ಮಾಡುತ್ತದೆ: ಅಲರ್ಜಿಯಿಂದ ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಂಡಿದ್ದರೆ ಇದನ್ನು ತಿಂದರೆ ಗುಣವಾಗುವುದು.

ಗ್ಯಾಸ್ಟ್ರಿಕ್ ಸಮಸ್ಯೆಗೆ
ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಸೋಂಪು ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಊಟದ ಮುಂಚೆ ಮತ್ತು ನಂತರ ಸೋಂಪು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ.

ಗಾಯವನ್ನು ಗುಣ ಪಡಿಸುವ ಗುಣ
ಇದರಲ್ಲಿ ಪ್ಲೇವೋನಾಯ್ಡ್ ಎಂಬ antioxidants ಇದ್ದು ಇದು ಸೋಂಕಾಣು, ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ, ಅಕಾಲಿಕ ನೆರಿಗೆ ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆ ಇವುಗಳು ಬರದಂತೆ ತಡೆಯುತ್ತದೆ.

ತ್ವಚೆಯ ಆರೋಗ್ಯ
ಸೋಂಪನ್ನು ಪ್ರತಿನಿತ್ಯ ತಿಂದರೆ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

ತೂಕ ನಿಯಂತ್ರಣಕ್ಕೆ
ಸೋಂಪು ದೇಹದಲ್ಲಿರುವ ಅಧಿಕ ಕೊಬ್ಬಿನಂಶವನ್ನು ಕರಗಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ತೂಕವನ್ನು ಹತೊಟಿಯಲ್ಲಿ ತರುವಲ್ಲಿ ಸೋಫು ಸಹಾಯ ಮಾಡುವುದು.

ನಿದ್ದೆ
ಮಲಗಿದ ತಕ್ಷಣ ನಿದ್ದೆ ಬರಲು ಸ್ವಲ್ಪ ಸೋಂಪು ತಿನ್ನುವುದು ಒಳ್ಳೆಯದು.



Click it and Unblock the Notifications