ಬೈಪೋಲಾರ್ ಡಿಸಾರ್ಡರ್ ನ ಲಕ್ಷಣಗಳಿವು

By Super

ಬೈಪೋಲಾರ್ ಡಿಸಾರ್ಡರ್ / ಅಸ್ವಸ್ಥತೆಯನ್ನು 'ಉನ್ಮಾದದ ಖಿನ್ನತೆ' ಎಂದು ಕರೆಯಲಾಗುತ್ತದೆ. ಹೆಸರೇ ಸೂಚಿಸುವಂತೆ, ಬೈಪೋಲಾರ್ ಡಿಸಾರ್ಡರ್ ಇರುವ ಯಾವುದೇ ವ್ಯಕ್ತಿ ತೀವ್ರ ಲಹರಿಯ/ಮೂಡ್ ನಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಾರೆ.

ಸಾಮಾನ್ಯವಾಗಿ ನೂರರಲ್ಲಿ ಒಬ್ಬರಿಗೆ ಬೈಪೋಲಾರ್ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಇದು ಹದಿಹರಯದ ವಯಸ್ಸಿನ ನಂತರದಲ್ಲಿ ಆರಂಭವಾಗುವಂತಹ ಖಾಯಿಲೆ. ಹೆಚ್ಚಾಗಿ 40 ವರ್ಷ ವಯಸ್ಸನ್ನು ಮೀರಿದವರಲ್ಲಿ ಈ ಸಮಸ್ಯೆ ಗಾಢವಾಗಿರುತ್ತದೆ. ಮಹಿಳೆಯರು ಹಾಗೂ ಗಂಡಸರಲ್ಲಿ ಸಮಾನವಾಗಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ.

ಇಲ್ಲಿ ಕೆಲವರ ಮೂಡ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀಡಲಾಗಿದೆ.

1. ಗ್ರೇಟ್ ಮೂಡ್

1. ಗ್ರೇಟ್ ಮೂಡ್

ಬೈಪೋಲಾರ್ ಖಾಯಿಲೆ ಕೆಲವರಲ್ಲಿ ಉನ್ಮಾದ ಹಾಗೂ ಖಿನ್ನತೆಯ ಎರಡು ಹಂತಗಳನ್ನು ಹೊಂದಿದೆ. ಸಾಮಾನ್ಯವಾಗಿ ಉನ್ಮಾದದ ಹಂತದಲ್ಲಿ ರೋಗಿಗಳು ವಾಸ್ತವಿಕತೆಯ ಅರಿವನ್ನು ಕಳೆದುಕೊಳ್ಳುತ್ತಾರೆ.

ಆದರೆ ಈ ಅಸ್ವಸ್ಥತೆಯ ಲಕ್ಷಣದ ತೀಕ್ಷ್ಣವಲ್ಲದ ಉನ್ಮಾದ ಹೊಂದಿರುವ ವ್ಯಕ್ತಿಯು ವಾಸ್ತವದ ಬಗ್ಗೆ ಅರಿವನ್ನು ಹೊಂದಿರುತ್ತಾನೆ.

2. ಕಾರ್ಯಗಳನ್ನು ಪೂರ್ಣಗೊಳಿಸಲು ಅಸಾಮರ್ಥ್ಯ

2. ಕಾರ್ಯಗಳನ್ನು ಪೂರ್ಣಗೊಳಿಸಲು ಅಸಾಮರ್ಥ್ಯ

ಪೂರ್ಣಗೊಳಿಸಲಾಗದೆ ಅರ್ಧ ಮುಗಿದಿರುವ ಯೋಜನೆಗಳು ಬೈಪೋಲಾರ್ ಡಿಸಾರ್ಡರ್ ಚಿಹ್ನೆಯಾಗಿದೆ. ವ್ಯಕ್ತಿ, ಹೈಪೋಮ್ಯಾನಿಕ್ ಹಂತದಲ್ಲಿ ಇರುವಾಗ ಅವನ ಶಕ್ತಿಯನ್ನು ಬಳಸಿಕೊಡು ಸರಿಯಾದ ಕಾರ್ಯ ಮಾಡಬಲ್ಲ.

3. ಖಿನ್ನತೆ

3. ಖಿನ್ನತೆ

ಯಾರು ಬೈಪೋಲಾರ್ ನ್ನು ಹೊಂದಿರುತ್ತಾರೋ ಅವರು ಸದಾ ಖಿನ್ನತೆಯಲ್ಲಿರುವವರಂತೆ ಕಾಣುತ್ತಾರೆ. ಬೈಪೋಲಾರ್ ವ್ಯಕ್ತಿತ್ವ ಇರುವ ರೋಗಿಗಳಿಗೆ ಖಿನ್ನತೆ ಉಪಶಮನ (ಆಂಟಿಡಿಪ್ರೆಸ್ಸೆಂಟ್ಸ್) ಔಷಧಿಗಳಷ್ಟೇ ನೆರವಾಗುವುದಿಲ್ಲ. ಇದು ಅವರ ಬದಲಾಗುವ ವ್ಯಕ್ತಿತ್ವದ ವೇಗವನ್ನು ಮತ್ತೂ ಹೆಚ್ಚಿಸಬಹುದು. ಇದು ಅವರ ಪರಿಸ್ಥಿತಿಯನ್ನು ಮತ್ತೂ ಬಿಗಡಾಯಿಸುತ್ತದೆ ಅಥವಾ ಒಂದು ವ್ಯಕ್ತಿತ್ವವನ್ನು ಬ್ರೇಕ್-ವಿತ್-ರಿಯಾಲಿಟಿ ಹಂತಕ್ಕೆ ತರಬಹುದು.

ಆಂಟಿ ಡಿಪ್ರೆಸೆಂಟ್ಸ್ ಔಷಧಗಳು ರೋಗಿಗಳನ್ನು ಚಿತ್ತ ವಿಕಾರ (ಮೇನಿಯಾ) ಸ್ಥಿತಿಗೆ ಕೊಂಡೊಯ್ಯುವ ಕಾರಣ ಅಪಾಯಕರವಾಗಿವೆ.

4. ಸಿಡುಕುತನ

4. ಸಿಡುಕುತನ

ಕೆಲವು ವ್ಯಕ್ತಿಗಳು "ಮಿಶ್ರ ಉನ್ಮಾದ/ ಮೇನಿಯಾ" ದಿಂದ ಬಳಲುತ್ತಾರೆ. ಇದು ಕೂಡ ಬೈಪೋಲಾರ್ ನ ಒಂದು ಲಕ್ಷಣ. ಈ ಲಕ್ಷಣವನ್ನು ಹೊಂದಿರುವವರು ಬಹಳ ಬೇಗ ಖಿನ್ನತೆಗೆ ಒಳಗಾಗುತ್ತಾರೆ. ಈ ಲಕ್ಷಣವನ್ನು ಗುರುತಿಸುವುದು ಕಷ್ಟ.

ಇದರಿಂದಾಗಿ ಅವರು ಕೆಲವೊಮ್ಮೆ ಅತಿಯಾದ ಸಿಡುಕುತನವನ್ನು ತೋರಿಸಬಹುದು. ಈ ತೀವ್ರವಾದ ಸಿಟ್ಟು ಸಂಬಂಧಗಳಲ್ಲೂ ಬಿರುಕು ಮೂಡಿಸಬಹುದು.

5. ಕ್ಷಿಪ್ರ ಮಾತು

5. ಕ್ಷಿಪ್ರ ಮಾತು

ಕೆಲವು ವ್ಯಕ್ತಿಗಳು ಸ್ವಾಭಾವಿಕವಾಗಿಯೇ ಮಾತುಗಾರರಾಗಿರುತ್ತಾರೆ. ಆದರೆ "ಒತ್ತಡದ ಮಾತು" ಬೈಪೋಲಾರ್ ನ ಒಂದು ಲಕ್ಷಣವಾಗಿದೆ.

ಈ ಖಾಯಿಲೆಯನ್ನು ಹೊಂದಿರುವವರು ಮುಖಾಮುಖಿ ಮಾತುಗಳಿಗಿಂತ ತಾವು ಒಬ್ಬರೇ ಮಾತಾಡುತ್ತಾರೆ. ಎದುರಿಗಿರುವವರ ಮಾತುಗಳನ್ನು ಕೇಳದೆ ಅವರೇ ಮಾತನಾಡುತ್ತಾರೆ. ಅಲ್ಲದೇ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಮಾತನ್ನು ಬದಲಾಯಿಸುತ್ತಾರೆ.

6. ಕೆಲಸದಲ್ಲಿ ತೊಂದರೆ

6. ಕೆಲಸದಲ್ಲಿ ತೊಂದರೆ

ಈ ಸಮಸ್ಯೆಯನ್ನು ಹೊಂದಿರುವವರಿಗೆ ಕೆಲಸ ಮಾಡಲು ಕಷ್ಟವಾಗುತ್ತದೆ. ಅವರ ಸಾಮರ್ಥ್ಯವನ್ನು ಕೆಲಸದಲ್ಲಿ ತೋರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗೂ ಬೇರೆಯವರೊಂದಿಗೆ ಬೆರೆಯುವುದು ಕೂಡ ಅವರಿಗೆ ಅಸಾಧ್ಯ.

ಅವರ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗರಿರುವುದು ಮಾತ್ರವಲ್ಲದೆ ನಿದ್ದೆ ಇಲ್ಲದಿರುವುದು, ಸಿಡುಕುತನ ವಿಪರೀತ ಉನ್ಮಾದದಿಂದಾಗಿ ಅಹಂ, ಖಿನ್ನತೆ ಇವೆಲ್ಲವೂ ಕಾಣಿಸಿಕೊಳ್ಳಬಹುದು. ಅಲ್ಲದೇ ಇನ್ನೂ ಕೆಲವು ಸಂದರ್ಭಗಳಲ್ಲಿ ಅತಿಯಾದ ನಿದ್ದೆ ಹಾಗೂ ಹೆಚ್ಚಾದ ಮೂಡ್ / ಚಿತ್ತ ಸಮಸ್ಯೆಗಳನ್ನೂ ಅನುಭವಿಸಬೇಕಾಗುತ್ತದೆ.

7. ಆಲ್ಕೋಹಾಲ್ ಅಥವಾ ಮಾದಕ ವಸ್ತುಗಳ ಬಳಕೆ

7. ಆಲ್ಕೋಹಾಲ್ ಅಥವಾ ಮಾದಕ ವಸ್ತುಗಳ ಬಳಕೆ

ಸುಮಾರು ಶೇ 50 ಗಿಂತಲೂ ಹೆಚ್ಚು ಬೈಪೋಲಾರ್ ಸಮಸ್ಯೆ ಹೊಂದಿರುವವರ ಮಾದಕ ದ್ರವ್ಯ ಸೇವನೆ ಅಥವಾ ನಿರ್ದಿಷ್ಟವಾಗಿ ಮದ್ಯಪಾನ ಮಾಡುತ್ತಾರೆ.

ಉನ್ಮಾದದ ಮಟ್ಟ ಅಧಿಕವಾಗಿರುವಾಗ ಅದನ್ನು ಕಡಿಮೆಗೊಳಿಸಲು ಹಾಗೂ ಖಿನ್ನತೆಯಲ್ಲಿರುವಾಗ ಮೂಡ್ ಸುಧಾರಿಸಿಕೊಳ್ಳಲು ಮದ್ಯವನ್ನು ನಿರಂತರವಾಗಿ ಸೇವಿಸುತ್ತಾರೆ.

8. ಅನಿರ್ದಿಷ್ಟ ನಡವಳಿಕೆ

8. ಅನಿರ್ದಿಷ್ಟ ನಡವಳಿಕೆ

ಅತಿಯಾದ ಉನ್ಮಾದದಿಂದ ಹೆಚ್ಚು ಸ್ವಾಭಿಮಾನಿಗಳಂತೆ ವರ್ತಿಸಬಹುದು. ಹೆಮ್ಮೆಯಿಂದ ವರ್ತಿಸಬಹುದು ಹಾಗೂ ಯಾವುದೇ ಪರಿಣಾಮದ ಬಗ್ಗೆ ಅವರಿಗೆ ಗಮನವಿರುವುದಿಲ್ಲ. ಎಲ್ಲವೂ ಅವರಿಗೆ ಉತ್ತಮವಾಗಿಯೇ ಗೋಚರಿಸಬಹುದು.

ಉನ್ಮಾದದ ಹಂತದಲ್ಲಿರುವಾಗ ಎರಡು ಸಾಮಾನ್ಯ ನಡವಳಿಕೆಯೆಂದರೆ ಅಮಲು ಮತ್ತು ಲೈಂಗಿಕ ವರ್ತನೆ.

9. ನಿದ್ದೆ ಸಮಸ್ಯೆ

9. ನಿದ್ದೆ ಸಮಸ್ಯೆ

ಬೈಪೋಲಾರ್ ರೋಗಿ ಕೆಲವೊಮ್ಮೆ ನಿದ್ದೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಖಿನ್ನತೆಯಲ್ಲಿರುವಾಗ ಅವರು ಅತಿಯಾಗಿ ಮಲಗಬಹುದು ಮತ್ತು ಸದಾ ಸುಸ್ತಾದಂತೆ ಇರಬಹುದು.

ಉನ್ಮಾದದ ಹಂತದಲ್ಲಿ (manic phase) ಅವರು ಹೆಚ್ಚಾಗಿ ನಿದ್ದೆ ಮಾಡದಿರಬಹುದು. ಆದರೂ ಸುಸ್ತಾದಂತೆ ಅವರು ಕಾಣುವುದಿಲ್ಲ.

ಅಲ್ಲದೇ ರಾತ್ರಿಯ ವೇಳೆ ಸ್ವಲ್ಪ ಹೊತ್ತು ಮಲಗಿದ್ದರೂ ಆರಾಮವಾಗಿ ಹೆಚ್ಚು ಎನರ್ಜಿಯನ್ನು ಹೊಂದಿದವರಂತೆಯೂ ಇರಬಹುದು.

10. ಕಲ್ಪನೆಗಳು

10. ಕಲ್ಪನೆಗಳು

ಬೈಪೋಲಾರ್ ನ ಲಕ್ಷಣವಾದ ವ್ಯಕ್ತಿಗಳ ಮನಸ್ಸಿನ ಕಲ್ಪನೆಯನ್ನು ಕಂಡುಹಿಡಿಯುವುದು ಸ್ವಲ್ಪ ಕಷ್ಟ. ಅವರ ಮನಸ್ಸು ಎಲ್ಲೋ ಹಾರಾಡಿದಂತೆ, ಅವರ ನಿಯಂತ್ರಣಕ್ಕೆ ಸಿಗದಂತೆ ಭಾಸವಾಗಬಹುದು.

ಈ ಕಲ್ಪನೆಗಳ ಹಾರಾಟದಿಂದಾಗಿ ಭಾಷಣ(ಅತಿಯಾದ ಮಾತು) ಗಳೂ ಹುಟ್ಟಿಕೊಳ್ಳಬಹುದು!

X
Desktop Bottom Promotion