Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಬ್ರೇಕ್ ಫಾಸ್ಟ್ ಮಾಡದಿದ್ದರೆ ಮಿದುಳು ಜೋಕೆ!
ಮಿದುಳು ನಮ್ಮ ದೇಹದ ಮುಖ್ಯವಾದ ಅಂಗ. ಅದಕ್ಕೆ ಏನಾದರೂ ಹಾನಿಯಾದರೆ ನಮ್ಮ ದೇಹ, ನಮ್ಮ ಯೋಚನೆ ಶಕ್ತಿ ಎಲ್ಲವೂ ಜಡವಾಗಿ ಬಿಡುತ್ತದೆ. ನಮ್ಮ ಕೆಲವೊಂದು ಅಭ್ಯಾಸಗಳು ಕೂಡ ನಮ್ಮ ಮಿದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಗೊತ್ತಾ? ಅಭ್ಯಾಸ ಅಂದರೆ ಸಿಗರೇಟ್ ಈ ರೀತಿಯ ಕೆಟ್ಟ ಅಭ್ಯಾಸಗಳು ಮಾತ್ರ ಎಂದು ತಿಳಿದುಕೊಳ್ಳಬೇಡಿ, ಬೆಳಗ್ಗೆ ತಿಂಡಿ ತಿನ್ನದೆ ಉಪವಾಸ ಇದ್ದರೂ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ !
ಹಾಗಂತ ತುಂಬಾ ತಿಂದರೂ ಮಿದುಳಿಗೆ ಹಾನಿ. ನಮ್ಮ ಜೀವನ ಶೈಲಿ, ನಮ್ಮ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ನಾವು ಮಾಡುವ ಯಾವ ಕಾರ್ಯಗಳು ನಮ್ಮ ಮಿದುಳಿನ ಆರೋಗ್ಯ ಹಾಳು ಮಾಡುತ್ತದೆ ಎಂದು ನೋಡೋಣ ಬನ್ನಿ:

ಬೆಳಗ್ಗೆ ತಿಂಡಿ ತಿನ್ನದಿರುವುದು
ಬೆಳಗ್ಗೆ ತಿಂಡಿ ತಿನ್ನದಿದ್ದರೆ ರಕ್ತದಲ್ಲಿ ಸಕ್ಕರೆಯಂಶ ತುಂಬಾ ಕಡಿಮೆಯಾಗುವುದು. ಇದರಿಂದ ಮಿದುಳಿಗೆ ಅವಶ್ಯಕವಾದ ಪೋಷಕಾಂಶಗಳು ದೊರಕದೆ ಮಿದುಳಿನ ಸಾಮರ್ಥ್ಯ ಕಡಿಮೆಯಾಗುತ್ತಾ ಬರುತ್ತದೆ.

2. ಅತೀಯಾಗಿ ತಿನ್ನುವುದು
ಅತೀಯಾಗಿ ತಿಂದರೆ ಮಿದುಳಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ, ಇದರಿಂದ ಮಿದುಳಿನ ಸಾಮರ್ಥ್ಯ ಕಡಿಮೆಯಾಗುವುದು.

3. ಧೂಮಪಾನ
ಧೂಮಪಾನದ ಚಟವಿರುವವರಿಗೆ ಕ್ರಮೇಣ ಅಲ್ಜೈಮರ್ಸ್ ಉಂಟಾಗುವುದು. ಧೂಮಪಾನಿಗಳ ಮಿದುಳು ಯೋಚಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತಾ ಬರುತ್ತದೆ.

4. ಅಧಿಕ ಸಿಹಿ ತಿಂದರೆ
ಸಿಹಿ ಪ್ರಿಯರಾಗಿದ್ದರೆ ದೂರವಿರಿ. ಏಕೆಂದರೆ ಅಧಿಕ ಸಿಹಿ ತಿಂದರೆ ದೇಹವು ಪ್ರೊಟೀನ್ ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದರಿಂದ ಪೋಷಕಾಂಶದ ಕೊರತೆ ಉಂಟಾಗಿ ಮಿದುಳಿನ ಸಾಮರ್ಥ್ಯ ಕಡಿಮೆಯಾಗುವುದು.

5. ವಾಯು ಮಾಲಿನ್ಯ
ನಮ್ಮ ಭೂಮಿ ಕಲುಷಿತವಾಗಿದೆ, ಕಾರ್ಖಾನೆ, ವಾಹನಗಳಿಂದ ವಾಯು ಮಾಲಿನ್ಯ ಅಧಿಕವಾಗುತ್ತಿದೆ. ಅಧಿಕ ವಾಯು ಮಾಲಿನ್ಯ ನಮ್ಮ ಮಿದುಳಿನ ಮೇಲೆ ಬೇಗನೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

6. ನಿದ್ದೆ ಇಲ್ಲದಿರುವುದು
ಮೆದುಳಿಗೆ ನಿದ್ದೆಯಲ್ಲಿ ಸ್ವಲ್ಪ ವಿಶ್ರಾಂತಿ ಸಿಗುತ್ತದೆ. ಮೆದುಳಿಗೆ ವಿಶ್ರಾಂತಿ ಸಿಗದಿದ್ದರೆ ಮನುಷ್ಯ ಬೇಗನೆ ಸಾವನ್ನಪ್ಪುತ್ತಾನೆ.

7. ತಲೆ ಮುಚ್ಚಿ ಮಲಗಿದರೆ
ಹೆಚ್ಚಿನವರಿಗೆ ತಲೆ ಮುಚ್ಚಿಕೊಂಡು ಮಲಗುವ ಅಭ್ಯಾಸವಿರುತ್ತದೆ. ಈ ರೀತಿ ಮಾಡಿದರೆ ನಮ್ಮ ದೇಹದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗಿ, ಆಮ್ಲಜನಕದ ಕೊರತೆ ಉಂಟಾಗಿ ಮಿದುಳಿಗೆ ಹಾನಿಯಾಗುತ್ತದೆ.

8. ಹುಷಾರಿಲ್ಲದಿದ್ದಾಗ ಕೆಲಸ ಮಾಡುವುದು
ಹುಷಾರು ತಪ್ಪಿದಾಗ ವಿಶ್ರಾಂತಿ ಪಡೆಯಬೇಕು. ಈ ಸಮಯದಲ್ಲಿ ಕೆಲಸ ಮಾಡಿದರೆ ಮಿದುಳಿನ ಶಕ್ತಿ ಕುಂದುವುದು ಜೋಕೆ!

9. ಯೋಚನೆ ಮಾಡದಿರುವುದು
ನಮ್ಮ ಮಿದುಳಿಗೆ ಕೆಲಸ ಕೊಡಬೇಕು. ಅದನ್ನು ಜಡವಾಗಿ ಇಟ್ಟರೆ ನಮ್ಮ ನೆನಪಿನ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ.

10. ಕಮ್ಮಿ ಮಾತನಾಡುವುದು
ತುಂಬಾ ಕಮ್ಮಿ ಮಾತನಾಡುವುದು ಕೂಡ ಒಳ್ಳೆಯ ಅಭ್ಯಾಸವಲ್ಲ. ಒಳ್ಳೆಯ ವಿಷಯದ ಬಗ್ಗೆ ಮಾತನಾಡಿದರೆ, ಚರ್ಚಿಸಿದರೆ ನಿಮ್ಮ ಮೆದುಳಿನ ಸಾಮರ್ಥ್ಯ ಹೆಚ್ಚುವುದು.



Click it and Unblock the Notifications
