ಸ್ತನ ಕ್ಯಾನ್ಸರ್ ಎಂಬ ಮಹಾಮಾರಿ ತಡೆಗಟ್ಟಲು ಟಿಪ್ಸ್

'ಸ್ತನ ಕ್ಯಾನ್ಸರ್' ಮಹಿಳೆಯರ ದುಃಸ್ವಪ್ನ. ಇತ್ತೀಚಿನ ದಿನಗಳಲ್ಲಂತೂ ಮಗುವಿಗೆ ಅಮೃತ ನೀಡಿದ ಸ್ತನ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ, ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ ಗೆ ಬಲಿಯಾಗುತ್ತಿರುವುದು ದುರಂತವೇ ಸರಿ. ಸ್ತನ ಕ್ಯಾನ್ಸರ್ ಹೆಚ್ಚಾಗಲು ಅದರ ಬಗ್ಗೆ ನಮಗೆ ಇರುವ ಅಜ್ಞಾನವೇ ಕಾರಣವೆನ್ನಬಹುದು.

ಎಷ್ಟೋ ಮಹಿಳೆಯರು ಪ್ರಾರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಗಮನಿಸದೆ ಕೊನೆಯ ಹಂತದಲ್ಲಿ ವೈದ್ಯರ ಬಳಿ ಬರುತ್ತಾರೆ. ಇದರಿಂದಲೇ ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಅಧಿವಾಗಿದೆ. ಮೊದಲೇ ಗುರುತಿಸಿದರೆ ಸ್ತನವನ್ನು ತೆಗೆದು ಹಾಕಿದರೆ ಕ್ಯಾನ್ಸರ್ ಭಯವಿಲ್ಲದೆ ಉಳಿದ ಜೀವನವನ್ನು ಕಳೆಯಬಹುದು.

ಸ್ತನ ಕ್ಯಾನ್ಸರ್ ವಂಶ ಪಾರಂಪರ್ಯವಾಗಿಯೂ ಬರಬಹುದು. ಆದ್ದರಿಂದ ಎಚ್ಚರ ಉಳಿದಂತೆ ಅನಾರೋಗ್ಯಕರ ಆಹಾರಕ್ರಮ, ಅಬಾರ್ಷನ್, ಮಗುವಿಗೆ ಹಾಲುಣಿಸದಿರುವುದು ಇವೆಲ್ಲಾ ಸ್ತನ ಕ್ಯಾನ್ಸರ್ ಗೆ ಪ್ರಮುಖ ಕಾರಣಗಳಾಗಿವೆ. ಹಾಲಿವುಡ್ ನಟಿ ಏಂಜಲೀನಾ ಜೋಲಿ ಸ್ತನ ಛೇದನ ಮಾಡಿಸಿ ಮಹಿಳೆಯರಿಗೆ ಅರಿವು ಮೂಡಿಸುವುದರಲ್ಲಿ ಮಾದರಿಯಾಗಿದ್ದಾರೆ. ಅವರ ತಾಯಿಗೆ ಸ್ತನ ಕ್ಯಾನ್ಸರ್ ಇತ್ತು ಅವರನ್ನು ಪರೀಕ್ಷಿಸಿದಾಗ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 87 ಇದೆ ಎಂದು ತಿಳಿದು ಬಂತು, ಆದ್ದರಿಂದ ಸ್ತನ ಛೇದನ ಮಾಡಿ ಕ್ಯಾನ್ಸರ್ ನಿಂದ ಪಾರಾದರು.

20 ವರ್ಷ ದಾಟಿದ ಪ್ರತಿಯೊಬ್ಬ ಮಹಿಳೆಯೂ ಸ್ವ ಸ್ತನ ಪರೀಕ್ಷೆ ಮಾಡುವುದು, ಪರೀಕ್ಷೆಗೆ ಒಳ ಪಡುವುದು ಅಗತ್ಯ. ಹೀಗೆ ಮಾಡಿದರೆ ಸ್ತನ ಕ್ಯಾನ್ಸರ್ ಅನ್ನು ಸುಲಭದಲ್ಲಿ ಗುಣ ಪಡಿಸಬಹುದು. ಪ್ರೊಟೀನ್ ಯುಕ್ತ ಈ ಕೆಳಗಿನ ಆಹಾರಗಳು ಕೂಡ ಸ್ತನ ಕ್ಯಾನ್ಸರ್ ತಡೆಯುವಲ್ಲಿ ಸಹಕಾರಿಯಾಗಿದೆ:

1. ಹಳದಿ/ಕೇಸರಿ, ಕೆಂಪು ಹಣ್ಣು ಮತ್ತು ತರಕಾರಿ

1. ಹಳದಿ/ಕೇಸರಿ, ಕೆಂಪು ಹಣ್ಣು ಮತ್ತು ತರಕಾರಿ

ಹಳದಿ ದುಂಡುಮೆಣಸಿನ ಕಾಯಿ, ಬಾಳೆಹಣ್ಣು, ಕಿತ್ತಳೆ, ಕ್ಯಾರೆಟ್ ಮುಂತಾದವು ನಿಮ್ಮ ದೇಹಕ್ಕೆ ಅಗತ್ಯ ಶಕ್ತಿ ನೀಡುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿರುವ ವಿಟಮಿನ್ ಸಿ, ಎ ದೇಹಕ್ಕೆ ಅವಶ್ಯಕ. ಇವುಗಳಲ್ಲಿ ಯಾವುದಾದರೂ ಒಂದನ್ನು ದಿನನಿತ್ಯ ತಿನ್ನುತ್ತಿದ್ದರೆ ಸ್ತನ ಕ್ಯಾನ್ಸರ್ ಎಂಬ ಗಂಭೀರ ಸಮಸ್ಯೆಯಿಂದ ಪಾರಾಗಬಹುದು.

2. ಕೋಸು

2. ಕೋಸು

ಹೂಕೋಸು, ಎಲೆಕೋಸು, ಮೊಳಕೆ ಒಡೆದ ಕಾಳು, ಬ್ರೊಕೊಲಿ, ಮರಕೋಸು, ಹೀಗೆ ಸಾಸಿವೆ ಜಾತಿಯಿಂದ ಬಂದಿರುವ ಈ ತರಕಾರಿಗಳು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ. ಇದರಲ್ಲಿರುವ ಐಸೊಥಿಯೊಸೈನೇಟ್ಸ್ ಅಂಶ ಸ್ತನ ಕ್ಯಾನ್ಸರ್ ನಿವಾರಣೆಗೆ ಸಹಕಾರಿ. ಆದರೆ ಥೈರಾಯ್ಡ್ ಸಮಸ್ಯೆ ಇದ್ದವರು ಇದನ್ನು ಹೆಚ್ಚು ಸೇವಿಸಬಾರದು.

3. ವಿಟಮಿನ್ ಇ ಪೂರಿತ ಆಹಾರ

3. ವಿಟಮಿನ್ ಇ ಪೂರಿತ ಆಹಾರ

ಹಲವು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸ್ತನದಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ವಿಟಮಿನ್ ಇ ಹೆಚ್ಚಿರುವ ಆಹಾರ ಸೇವನೆ ತುಂಬಾ ಮುಖ್ಯ. ಬಾದಾಮಿ ಮತ್ತು ಅವಕಾಡೊ (ಬೆಣ್ಣೆ ಹಣ್ಣು) ಈ ನೋವಿಗೆ ಉಪಶಮನ ನೀಡುತ್ತದೆ.

4. ಎಳ್ಳು ಮತ್ತು ಎಳ್ಳೆಣ್ಣೆ

4. ಎಳ್ಳು ಮತ್ತು ಎಳ್ಳೆಣ್ಣೆ

ಎಳ್ಳು ಅಥವಾ ಹುಚ್ಚೆಳ್ಳಿನಲ್ಲಿ ಒಮೆಗಾ 3 ಮತ್ತು ಒಮೆಗಾ 6 ಫ್ಯಾಟಿ ಆಸಿಡ್ ಹೆಚ್ಚಿದೆ. ಎಳ್ಳಿನಲ್ಲಿರುವ ಈ ಅಂಶ ಸ್ತನ ಕ್ಯಾನ್ಸರ್ ಪ್ರಚೋದಕವಾಗಿರುವ ಈಸ್ಟ್ರೊಜೆನ್ ಮಟ್ಟವನ್ನು ನಿಯಂತ್ರಿಸುತ್ತದೆ. ಆದರಿಂದ ಎಳ್ಳಿನ ಸೇವನೆ ಸ್ತನ ಕ್ಯಾನ್ಸರ್ ತಡೆಗೆ ಸೂಕ್ತ.

 5. ಆಲೀವ್ ಮತ್ತು ಮೀನೆಣ್ಣೆ

5. ಆಲೀವ್ ಮತ್ತು ಮೀನೆಣ್ಣೆ

ಆಹಾರದಲ್ಲಿ ಆಲಿವ್ ಅಥವಾ ಮೀನೆಣ್ಣೆ ಬಳಕೆಯಿಂದ ದೇಹದಲ್ಲಿನ ಎಲ್ಲ ಜೀವಕಣಗಳಿಗೂ ಅನುಕೂಲವಾಗಲಿದೆ. ಸ್ತನ ಕ್ಯಾನ್ಸರ್ ತಡೆಯಲ್ಲೂ ಕೂಡ ಈ ಎಣ್ಣೆ ಹೆಚ್ಚು ಸಹಕಾರಿ. ಆದ್ದರಿಂದ ಯಾವುದೇ ಚಿಂತೆಯಿಲ್ಲದೆ ಈ ಎರಡೂ ಎಣ್ಣೆಯನ್ನು ನಿಮ್ಮ ಆಹಾರದೊಂದಿಗೆ ಬಳಸಬಹುದು.

6. ಅಣಬೆ

6. ಅಣಬೆ

ಅಂತರರಾಷ್ಟ್ರೀಯ ಕ್ಯಾನ್ಸರ್ ನಿಯತಕಾಲಿಕೆಯಲ್ಲಿ ಪ್ರಕಟಿಸಿರುವ ಸಂಶೋಧನೆ ಪ್ರಕಾರ, ಅಣಬೆಯಲ್ಲಿ ಗಂಟನ್ನು ನಿವಾರಿಸುವ ವಿಶೇಷ ಗುಣವಿರುವುದರಿಂದ ಸ್ತನ ಕ್ಯಾನ್ಸರ್ ಬರುವುದನ್ನು ಮುನ್ನವೇ ತಡೆದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಸ್ತನದಲ್ಲಿ ಗಡ್ಡೆ ಬೆಳೆಯಲು ಕಾರಣವಾಗುವ ಹಾರ್ಮೋನನ್ನು ಪ್ರತಿಬಂಧಿಸುವ ಶಕ್ತಿಯನ್ನು ಅಣಬೆ ಹೊಂದಿದೆ.

7. ದಾಳಿಂಬೆ

7. ದಾಳಿಂಬೆ

ದಾಳಿಂಬೆ ಹಣ್ಣಿನಲ್ಲಿರುವ polyphenols ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಅಲ್ಲದೆ ದಾಳಿಂಬೆ ಹಣ್ಣು ತಿಂದರೆ ಹಲ್ಲುಗಳು ಬಲವಾಗುವುದು, ತ್ವಚೆ ಕಾಂತಿ ಹೆಚ್ಚುವುದು, ರಕ್ತ ಶುದ್ಧವಾಗುವುದು, ಹೀಗೆ ಹತ್ತು ಹಲವು ಪ್ರಯೋಜನ ಪಡೆಯಬಹುದು.

8. ಬ್ರೊಕೋಲಿಯ ಎಳೆ ಚಿಗುರು

8. ಬ್ರೊಕೋಲಿಯ ಎಳೆ ಚಿಗುರು

ಬ್ರೊಕೋಲಿ ಬೀಜ ಬಿತ್ತಿ ಅದು ಮೊಳಕೆ ಬರುವಾಗ ಅವುಗಳನ್ನು ತಿನ್ನುವುದು ಸ್ತನ ಕ್ಯಾನ್ಸರ್ ತಡೆಗಟ್ಟಲು ಸೂಕ್ತ ಮಾರ್ಗವಾಗಿದೆ.

9. ಸೋಯಾ

9. ಸೋಯಾ

ಸೋಯಾ ತಿಂದಷ್ಟು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ.

10. ಪ್ರೊಟೀನ್

10. ಪ್ರೊಟೀನ್

ಪ್ರೊಟೀನ್ ಮತ್ತು ವಿಟಮಿನ್ ಇರುವ ಆಹಾರಗಳು ಪ್ರತಿನಿತ್ಯದ ಆಹಾರಕ್ರಮದಲ್ಲಿ ಇರಲಿ.

 ಸ್ತನ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು

ಸ್ತನ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು

ಧೂಮಪಾನ: ಫ್ಯಾಷನ್ ಹೆಸರಿನಲ್ಲಿ ಮಹಿಳೆಯರು ಧೂಮಪಾನ ಮಾಡುತ್ತಾರೆ. ಫ್ಯಾಷನ್ ಗಾಗಿ ಪ್ರಾರಂಭಿಸಿದ ಧೂಮಪಾನ ಬಂಜೆತನ, ಸ್ತನ ಕ್ಯಾನ್ಸರ್ ಈ ರೀತಿಯ ಅನೇಕ ತೊಂದರೆಗಳನ್ನು ತರಬಹುದು.

 ಸ್ತನ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು

ಸ್ತನ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು

ಕೃತಕ ಜೋಡನೆ: ಸ್ತನವನ್ನು ಕೃತಕವಾಗಿ ಜೋಡಿಸುವುದರಿಂದ ಸಹ ಸ್ತನ ಕ್ಯಾನ್ಸರ್ ಉಂಟಾಗಬಹುದು. ಗರ್ಭ ನಿರೋಧಕ ಮಾತ್ರೆಗಳನ್ನು ಅಧಿಕವಾಗಿ ತೆಗೆದುಕೊಳ್ಳುವುದರಿಂದ ಸಹ ಕ್ಯಾನ್ಸರ್ ಬರಬಹುದು.

 ಸ್ತನ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು

ಸ್ತನ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು

ಸ್ತನದ ಪರಿಶೀಲನೆ: ಸ್ತನವನ್ನು ಸ್ವತಃ ಪರಿಶೀಲಿಸುತ್ತಾ ಇರಬೇಕು. ಸ್ತನದಲ್ಲಿ ಯಾವುದಾದರೂ ಬಣ್ಣ ವ್ಯತ್ಯಾಸ, ನೋವು, ಗಂಟು ಕಂಡು ಬಂದರೆ ವೈದ್ಯರನ್ನು ಕಾಣುವುದು ಒಳ್ಳೆಯದು.

 ಸ್ತನ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು

ಸ್ತನ ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು

ಸಿಹಿ ಪದಾರ್ಥಗಳು: ಸಿಹಿ ಪದಾರ್ಥಗಳನ್ನು ಮಿತಿಯಲ್ಲಿ ತಿನ್ನಿ.

X
Desktop Bottom Promotion