Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಸಂಧಿವಾತ ತಡೆಗಟ್ಟಲು ಈ ರೀತಿ ಮಾಡಿ
ಸಂಧಿವಾತ ಮಧ್ಯವಯಸ್ಸು ದಾಟಿದವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದಾಗ ಸಂಧಿವಾತ ಕಂಡು ಬರುವುದು. ಪ್ರೊಟೀನ್ ತುಂಬಾ ಅವಶ್ಯಕವಾದ ಪೋಷಕಾಂಶವಾದರೂ ದೇಹದಲ್ಲಿ ಪ್ರೊಟೀನ್ ಅಂಶ ಅತ್ಯಧಿಕವಾದರೆ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುತ್ತದೆ. ಕಿಡ್ನಿ ಅತ್ಯಧಿಕವಾದ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರಹಾಕಲು ವಿಫಲವಾಗುತ್ತದೆ. ಇದರಿಂದಾಗಿ ಸಂಧಿವಾತ ಉಂಟಾಗುವುದು.
ಸಂಧಿವಾತ ಯಾರಲ್ಲಿ ಹೆಚ್ಚು ಕಂಡು ಬರುತ್ತದೆ, ಇದನ್ನು ಹೋಗಲಾಡಿಸಲು ಯಾವ ರೀತಿಯ ಆಹಾರಗಳನ್ನು ತಿಂದರೆ ಒಳ್ಳೆಯದು ಎಂದು ತಿಳಿಯಲು ಮುಂದೆ ಓದಿ:

ಸಂಧಿವಾತಕ್ಕೆ ಪ್ರಮುಖ ಕಾರಣಗಳು
* ವಂಶಪಾರಂಪರ್ಯವಾಗಿ ಬರುವುದು
* ಒಬೆಸಿಟಿ ಅಥವಾ ಬೊಜ್ಜು ಮೈ ಇರುವವರಲ್ಲಿ ಈ ಸಮಸ್ಯೆ ಕಂಡು ಬರುವುದು
* ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡು ಬರುವುದು.
* ಪ್ಯೂರೈನ್ ಅಧಿಕವಿರುವ ಆಹಾರಗಳನ್ನು ತಿನ್ನುವುದು
* ಮದ್ಯಪಾನ
* ಅತ್ಯಲ್ಪ ನೀರು ಕುಡಿಯುವುದು
* ತಣ್ಣನೆಯ ಹವಾಮಾನ

ಈ ಆಹಾರಗಳನ್ನು ಮಿತಿಯಲ್ಲಿ ತಿನ್ನಿ
* ಪ್ಯೂರೈನ್ಸ್(purines) ಅಧಿಕವಿರುವ ಆಹಾರಗಳನ್ನು ಮಿತಿಯಲ್ಲಿ ತಿನ್ನಿ. ಮಾಂಸಾಹಾರ, ಮೀನು, ಪಾಲಾಕ್, ಎಲೆಕೋಸು. ಧಾನ್ಯಗಳು, ಬೀನ್ಸ್, ಬಟಾಣಿ, ಅಣಬೆ, ನಾನ್ ವೆಜ್ ಸೂಪ್, ಓಟ್ಸ್, ಗೋಧಿ, ಚಿಕನ್ ಇವುಗಳನ್ನು ತಿನ್ನುವುದನ್ನು ಕಮ್ಮಿ ಮಾಡಿ.

ಮೈ ತೂಕ ಹೆಚ್ಚಾಗದಿರಲಿ
* ಸಮತೂಕ ಮೈ ಕಟ್ಟು ಪಡೆಯಬೇಕು. ಆರೋಗ್ಯಕರವಾದ ಡಯಟ್ ಪಾಲಿಸಿ, ವ್ಯಾಯಾಮ ಮಾಡಿದರೆ ಮೈ ತೂಕ ಕಮ್ಮಿಯಾಗುವುದು.

ಸಮತೋಲಿತ ಆಹಾರ
* ತಿನ್ನುವ ಆಹಾರದಲ್ಲಿ 55-60% ಕಾರ್ಬೋಹೈಡ್ರೇಟ್ಸ್, ಪ್ರೊಟೀನ್ 25-30% ಮತ್ತು ಕೊಬ್ಬಿನಂಶ ಇರುವಂತೆ ನೋಡಿಕೊಳ್ಳಿ.

ಮದ್ಯಪಾನ
* ಮದ್ಯಪಾನದಿಂದ ದೂರವಿರುವುದು ಒಳ್ಳೆಯದು. ಮದ್ಯಪಾನ ಮಾಡಿದರೆ ಯಾವುದೇ ಔಷಧಿಗಳು ಸಂಧಿವಾತದ ಮೇಲೆ ಪರಿಣಾಮ ಬೀರುವುದಿಲ್ಲ.

ನೀರು
* ದಿನಕ್ಕೆ 2 ಲೀಟರ್ ನೀರು ಕುಡಿಯಬೇಕು. ದೇಹದಲ್ಲಿ ನೀರಿನಂಶ ಕಮ್ಮಿಯಾದರೆ ನಿರ್ಜಲೀಕರಣದಿಂದಾಗಿ ಸಂಧಿವಾತ ಉಂಟಾಗುವುದು.

* ವ್ಯಾಯಾಮ ಮಾಡಬೇಕು
ವ್ಯಾಯಾಮ ಬರೀ ಸಂಧಿವಾತವನ್ನು ತಡೆಯುವುದು ಮಾತ್ರವಲ್ಲ, ಅನೇಕ ಕಾಯಿಲೆಗಳನ್ನು ದೂರವಿಟ್ಟು ನಿಮ್ಮ ಒಟ್ಟು ಮೊತ್ತ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.

ಸೂಚನೆ
ಪ್ರೊಟೀನ್ ಹೆಚ್ಚಾಗಿ ಈ ಸಂಧಿವಾತ ಬರುತ್ತದೆ ಎಂದು ಸಂಪೂರ್ಣವಾಗಿ ಪ್ರೊಟೀನ್ ಇರುವ ಆಹಾರಗಳನ್ನು ವರ್ಜಿಸಬೇಡಿ. ತಜ್ಞರ ಬಳಿ ಸೂಕ್ತ ಸಲಹೆ ತೆಗೆದುಕೊಂಡು ಪ್ರೊಟೀನ್, ಕಾರ್ಬೋಹೈಡ್ರೇಟ್ಸ್ ಮತ್ತು ಕೊಬ್ಬಿನಂಶವಿರುವ ಆಹಾರಗಳನ್ನು ತೆಗೆದುಕೊಳ್ಳಿ.



Click it and Unblock the Notifications
