Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಕೆಟ್ಟ ಅಭ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದು
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕೆಟ್ಟ ಅಭ್ಯಾಸವಿದ್ದೇ ಇರುತ್ತದೆ. 'ಈ ಕೆಟ್ಟ ಅಭ್ಯಾಸಗಳು ನಮಗೆ ಪ್ರಯೋಜಕಾರಿಯೇ?' ಎಂದು ನಾವು ಕೇಳಿದರೆ 'ಪ್ರಯೋಜನಕಾರಿಯಾಗಿದ್ದರೆ ಅದನ್ನು ಕೆಟ್ಟ ಅಭ್ಯಾಸಗಳೆಂದು ಹೇಳುತ್ತಿರಲಿಲ್ಲ' ಎಂದು ನೀವು ಹೇಳಬಹುದು.
ಆದರೆ ಕೆಲವೊಂದು ಕೆಟ್ಟ ಅಭ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದಂತೆ! ಇಲ್ಲಿ ನಾವು ಆರೋಗ್ಯಕರವಾದ ಕೆಲ ಕೆಟ್ಟ ಚಟಗಳ ಬಗ್ಗೆ ಹೇಳಿದ್ದೇವೆ. ಆ ಕೆಟ್ಟ ಅಭ್ಯಾಸಳಾವುವು? ಅವು ಹೇಗೆ ಆರೋಗ್ಯಕರವಾದ ಅಭ್ಯಾಸವಾಗುತ್ತವೆ ಎಂದು ತಿಳಿಯುವ ಕುತೂಹಲವೇ? ಹಾಗಾದರೆ ಮುಂದೆ ಓದಿ:

ಉಗುರು ಕಚ್ಚುವುದು
ಕೆಲವರು ತುಂಬಾ ಟೆನ್ಷನ್ ಆದಾಗ, ಏನಾದರೂ ಚಿಂತೆ ಮಾಡುತ್ತಿರುವಾಗ ಉಗುರು ಕಚ್ಚುತ್ತಿರುತ್ತಾರೆ. ಈ ರೀತಿ ಉಗುರು ಕಚ್ಚುವ ಅಭ್ಯಾಸವನ್ನು ಕೆಟ್ಟ ಅಭ್ಯಾಸವೆಂದು ಹೇಳುತ್ತೇವೆ. ಮಕ್ಕಳಲ್ಲಿ ಈ ಅಭ್ಯಾಸ ಕಂಡು ಬಂದರೆ ಪೋಷಕರು ಅವರನ್ನು ಜೋರು ಮಾಡಿ ಈ ಅಭ್ಯಾಸ ನಿಲ್ಲಿಸುವಂತೆ ಮಾಡುತ್ತಾರೆ.
ಆದರೆ ಈ ರೀತಿ ಉಗುರು ಕಚ್ಚುವ ಅಭ್ಯಾಸವು ಟೆನ್ಷನ್ ಅನ್ನು ಕಮ್ಮಿ ಮಾಡಿ, ರೋಗ ನಿರೋಧಕಕ ಶಕ್ತಿಯನ್ನು ಹೆಚ್ಚಿಸುವುದಂತೆ.

ಗ್ಯಾಸ್
ಕೆಲವರಿಗೆ ಆಗಾಗ ಗ್ಯಾಸ್ ಹೋಗುತ್ತಾ ಇರುತ್ತದೆ, ಇದರಿಂದ ಅವರ ಅಕ್ಕ-ಪಕ್ಕದವರಿಗೆ ತುಂಬಾ ಕಿರಿಕಿರಿ ಉಂಟಾಗುತ್ತದೆ. ಆದರೆ ಹೊಟ್ಟೆಯಲ್ಲಿರುವ ಗ್ಯಾಸ್ ಹೊರಹೋದರೆ ಹೊಟ್ಟೆ ಉಬ್ಬಿಕೊಳ್ಳುವುದಿಲ್ಲ ಹಾಗೂ ಗ್ಯಾಸ್ ತುಂಬಿ ಹೊಟ್ಟೆ ನೋವಿನ ಸಮಸ್ಯೆ ಕಂಡು ಬರುವುದಿಲ್ಲ.

ನೆಟ್ಟಿಗೆ ಮುರಿಯುವುದು
ನೆಟ್ಟಿಗೆ ಮುರಿಯುವುದನ್ನು ಕೆಟ್ಟ ಅಭ್ಯಾಸ ಅನ್ನುವುದಕ್ಕಿಂತ , ಕೆಟ್ಟ ನಡುವಳಿಕೆ ಅನ್ನುತ್ತಾರೆ. ಆದರೆ ಈ ರೀತಿ ಮಾಡಿದರೆ ಕೈ ಮೂಳೆಗಳಿಗೆ ಒಳ್ಳೆಯದಂತೆ.

ಉಗುಳುವುದು
ಯಾರಾದರೂ ಉಗುಳುವುದನ್ನು ನೋಡುವಾಗ ನಮಗೆ ಅಸಹ್ಯ ಅನಿಸುತ್ತದೆ ಅಲ್ಲವೇ? ಆದರೆ ಉಗುಳುವುದು ಒಳ್ಳೆಯದಂತೆ. ವ್ಯಾಯಾಮ ಮಾಡಿದ ಬಳಿಕ ಉಗುಳಿದರೆ ಉಸಿರಾಟದ ಕ್ರಿಯೆಗೆ ತುಂಬಾ ಒಳ್ಳೆಯದಂತೆ.
ಆದರೆ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿ, ಮತ್ತೊಬ್ಬರಿಗೆ ಕಿರಿಕಿರಿ ಮಾಡುವುದು ಮಾತ್ರ ತಪ್ಪು.

ಮೂಗಿಗೆ ಕೈ ಹಾಕುವುದು
ಯಾರಾದರೂ ಮೂಗಿನಲ್ಲಿ ಕೈ ಹಾಕುವುದು ನೋಡಿದರೆ ಅಸಹ್ಯ ಅನಿಸುವುದು. ಆದರೆ ಈ ಅಭ್ಯಾಸ ಮಿದುಳನ್ನು ಚುರುಕಾಗಿಸುವುದಂತೆ. ಈ ಅಭ್ಯಾಸದ ಬದಲು ಮಿದುಳು ಚುರುಕುಗೊಳಿಸಲು ಇತರ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದೇ ವಾಸಿ, ಇಲ್ಲದಿದ್ದರೆ ಇತರರು ನಮ್ಮನ್ನು ಅಸಹ್ಯ ಪ್ರಾಣಿಯಂತೆ ನೋಡುವಂತಾಗುವುದು.

ಮಿತಿ ಮೀರಿ ನಿದ್ದೆ ಮಾಡುವುದು
ಇದನ್ನು ಕೇಳಿದರೆ ನಿದ್ರೆ ಪ್ರಿಯರಿಗೆ ತುಂಬಾ ಇಷ್ಟವಾಗುವುದು ಅಂತ ಗೊತ್ತು, ಹಾಗಂತ ತುಂಬಾ ಸಂತೋಷ ಪಡಬೇಡಿ, ತುಂಬಾ ಬಳಲಿದಾಗ ವಾರಕ್ಕೊಮ್ಮೆ ತುಂಬಾ ಹೊತ್ತು ನಿದ್ದೆ ಮಾಡಿದರೆ ಒಳ್ಳೆಯದು, ದಿನಾ 10-12 ಗಂಟೆ ನಿದ್ದೆ ಮಾಡಲು ಪ್ರಾರಂಭಿಸಿದರೆ ಮೈ ತೂಕ ಡಬಲ್ ಆಗುವುದರಲ್ಲಿ ಸಂಶಯವಿಲ್ಲ.

ಬೆಡ್ ನಲ್ಲಿಯೇ ಬ್ರೇಕ್ ಫಾಸ್ಟ್ ಮಾಡುವುದು
ಕೆಲವರಿಗೆ ಈ ರೀತಿಯ ಕೆಟ್ಟ ಅಭ್ಯಾಸವಿರುತ್ತದೆ. ಬೆಡ್ ಕಾಫಿ ಮಾತ್ರವಲ್ಲ, ಬ್ರೇಕ್ ಫಾಸ್ಟ್ ಅನ್ನು ಬೆಡ್ ನಲ್ಲಿಯೇ ಮಾಡುತ್ತಾರೆ! ವಿಚಿತ್ರ ಸ್ವಭಾವದವರು ಅಲ್ವಾ? ಆದರೆ ಈ ಕೆಟ್ಟ ಅಭ್ಯಾಸ ಜೀರ್ಣಕ್ರಿಯೆಗೆ ಒಳ್ಳೆಯದಂತೆ. ನಾವೆಲ್ಲಾ ಬೆಡ್ ನಲ್ಲಿಯೇ ಬ್ರೇಕ್ ಫಾಸ್ಟ್ ತಿಂದರೆ ಹೊಟ್ಟೆ ತೊಳಸಿ ಬರುವುದಂತು ಗ್ಯಾರಂಟಿ, ಏನಂತೀರಿ?

ಕೆಲವೊಮ್ಮೆ ವ್ಯಾಯಾಮ ಮಾಡದಿರುವುದು
ಕೆಲವೊಮ್ಮೆ ಬೆಳಗ್ಗೆ ಎದ್ದು ವ್ಯಾಯಾಮ ಮಾಡಲು ಮೂಡ್ ಬರುವುದಿಲ್ಲ, ಆಗ ಇನ್ನೂ ಸ್ವಲ್ಪ ಹೊತ್ತು ಹೊದ್ದುಕೊಂಡು ಮಲಗುತ್ತೇವೆ. ಕೆಲವೊಮ್ಮೆ ವ್ಯಾಯಾಮ ಮಾಡಿದರುವುದು ಒಳ್ಳೆಯದೇ? ಏಕೆಂದರೆ ಸ್ನಾಯುಗಳು ಸ್ವಲ್ಪ ವಿಶ್ರಾಂತಿ ದೊರೆಯುವುದು.

ತೇಗು
ಊಟದ ಬಳಿಕ ತೇಗು ತೆಗೆಯುವ ಅಭ್ಯಾಸ ಹೆಚ್ಚಿನಜವರಲ್ಲಿರುತ್ತದೆ, ಅವರ ಆ ಅಭ್ಯಾಸ ಪಕ್ಕದಲ್ಲಿರುವವರನ್ನು ಕಿರಿಕಿರಿ ಮಾಡುತ್ತದೆ.
ಆದರೆ ತೇಗು ಬಂದಾಗ ತೇಗು ತೆಗೆಯದಿದ್ದರೆ ಎದೆ ಉರಿ ಕಂಡು ಬರುವುದು, ಆದ್ದರಿಂದ ತೇಗು ಬಂದಾಗ ತಡೆಹಿಡಿಯುವ ಪ್ರಯತ್ನ ಮಾಡಬೇಡಿ.

ಚ್ಯೂವಿಂಗ್ ಗಮ್
ಚ್ಯೂವಿಂಗ್ ಗಮ್ ಅಗೆಯುತ್ತಾ ಹಿರಿಯರ ಜೊತೆ ಮಾತನಾಡುವುದು ಒಳ್ಳೆಯ ಮ್ಯಾನರ್ಸ್ ಅಲ್ಲ. ಹಾಗಂತ ಇದು ಕೆಟ್ಟ ಅಭ್ಯಾಸವಲ್ಲ, ಏಕೆಂದರೆ ಚ್ಯೂಯಿಂಗ್ ಗಮ್ ಅಗೆಯುವುದರಿಂದ ಮಿದುಳು ಚುರುಕಾಗಿರುತ್ತದೆ ಮತ್ತು ಮಿತಿ ಮೀರಿ ತಿನ್ನುವುದಕ್ಕೆ ಕಡಿವಾಣ ಹಾಕಬಹುದು.



Click it and Unblock the Notifications
