Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ವ್ಯಕ್ತಿಯ ಈ ರೀತಿಯ ವರ್ತನೆಗಳು ಸ್ವಭಾವವಲ್ಲ, ಕಾಯಿಲೆ
ಹೈಪರ್ ಆಕ್ಟಿವ್ ಡಿಸಾರ್ಟರ್ ಬಗ್ಗೆ ಕೇಳಿದ್ದೀರಾ? ಈ ಹೈಪರ್ ಆಕ್ಟಿವ್ ಕಾಯಿಲೆಯನ್ನು ವೈದ್ಯಕೀಯ ಭಾಷೆಯಲ್ಲಿ Attention Deficit Hyperactivity Disorder (ADHD) ಎಂದು ಕರೆಯುತ್ತಾರೆ. ಈ ಕಾಯಿಲೆ ಬಗ್ಗೆ ಹೇಳುವಾಗ ತುಂಬಾ ಸಿಂಪಲ್ ಅನಿಸಬಹುದು, ಆದರೆ ಇದು ನಾವು ತಿಳಿದುಕೊಂಡಷ್ಟು ಸಿಂಪಲ್ ಆದ ಕಾಯಿಲೆಯಲ್ಲ!
ಈ ಕಾಯಿಲೆ ಇರುವವರನ್ನು ನೋಡಿದಾಗ ಅವರ ಗುಣವೇ ಹಾಗೇ ಎಂದು ಯೋಚಿಸುತ್ತೇವೆ ಹೊರತು ಮೇಲ್ನೋಟಕ್ಕೆ ಅದೊಂದು ಕಾಯಿಲೆಯೆಂಬುದು ಗೊತ್ತಾಗುವುದೇ ಇಲ್ಲ! ಈ ಕಾಯಿಲೆ ಕೆಲವರಿಗೆ ಬಾಲ್ಯದಲ್ಲಿಯೇ ಇರುತ್ತದೆ, ಆದರೆ ಗುರುತಿಸಿರುವುದಿಲ್ಲ. ಈ ಕಾಯಿಲೆ ಇರುವವರನ್ನು ಸಂಬಾಳಿಸುವುದೇ ದೊಡ್ಡ ಕಷ್ಟ. ಅದನ್ನು ಅವರ ಸ್ವಭಾವೆಂದು ನಾವೂ ಸುಮ್ಮೆನಿರುತ್ತೇವೆ.
ಮೊದಲೇ ಹೇಳಿದಂತೆ ಈ ಕಾಯಿಲೆಯನ್ನು ನಾವು ಅವರಲ್ಲಿ ಗುರುತಿಸಿರುವುದಿಲ್ಲ, ಆದ್ದರಿಂದ ಅವರ ಗುಣ ಆ ರೀತಿಯೇ ಎಂದು ತಪ್ಪಾಗಿ ತಿಳಿದುಕೊಂಡಿರುತ್ತೇವೆ. ಹೈಪರ್ ಆಕ್ಟಿವ್ ಕಾಯಿಲೆ ಇದೆಯೆಂದು ಈ ಕೆಳಗಿನ ಲಕ್ಷಣಗಳಿಂದ ಗುರುತಿಸಬಹುದು.

ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ
ಯಾರಾದರೂ ಏನಾದರೂ ಮಾತನಾಡುತ್ತಿದ್ದರೆ ಪೂರ್ಣವಾಗಿ ಕೇಳಿಸಿಕೊಳ್ಳುವ ತಾಳ್ಮೆ ಇರುವುದಿಲ್ಲ. ಅವರ ಮಾತನ್ನು ತುಂಡರಿಸಿ ತಾವು ಮಧ್ಯದಲ್ಲಿ ಬಾಯಿ ಹಾಕುತ್ತಾರೆ.

ಚಂಚಲ ಸ್ವಭಾವ
ಅವರ ಸ್ವಭಾವದಲ್ಲಿ ತುಂಬಾ ಚಂಚಲತೆ ಇರುತ್ತದೆ. ಕಾಲಿಂಗ್ ಬೆಲ್, ಫೋನ್ ರಿಂಗ್, ಟ್ರಾಫಿಕ್ ಶಬ್ದ ಇವುಗಳೆಲ್ಲಾ ಅವರನ್ನೂ ತುಂಬಾ ಡಿಸ್ಟರ್ಬ್ ಮಾಡುತ್ತದೆ, ಇವುಗಳನ್ನು ಕೇಳಿದರೆ ಮನಸ್ಸು ಚಂಚಲವಾಗಿ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ.

ಸ್ಪೀಡ್ ಡ್ರೈವಿಂಗ್
ಸ್ಪೀಡ್ ಡ್ರೈವಿಂಗ್ ಇಷ್ಟ ಪಟ್ಟು ಓಡಿಸುವುದು ಬೇರೆ, ತಾಳ್ಮೆಯಿಲ್ಲದೆ ಸ್ಲೀಡ್ ಡ್ರೈವ್ ಮಾಡುವುದೇ ಬೇರೆ. ಸಿಗ್ನಲ್ ಇದೆ, ಸ್ಪೀಡ್ ಅಧಿಕವಿದೆ ಏನೂ ಗಮನಿಸುವುದಿಲ್ಲ, ತಾಳ್ಮೆ ಕಳೆದುಕೊಂಡು ಸ್ಪೀಡ್ ಡ್ರೈವ್ ಮಾಡುತ್ತಾರೆ, ಇದರಿಂದ ಆಗಬಹುದಾದ ಅಪಘಾತದ ಬಗ್ಗೆ ಯೋಚಿಸುವುದೂ ಇಲ್ಲ.

ಶುಚಿತ್ವದ ಕಡೆ ಗಮನ ಕೊಡುವುದಿಲ್ಲ
ತಮ್ಮ ವಸ್ತುಗಳನ್ನು ನೀಟಾಗಿ ಇಡುವುದಿಲ್ಲ, ಶುಚಿತ್ವದ ಕಡೆಗೆ ಗಮನ ಕೊಡುವುದಿಲ್ಲ. ಹೈಪರ್ ಆಕ್ಟಿವ್ ಕಾಯಿಲೆ ಇರುವವರು ತಮ್ಮ ವಸ್ತುಗಳನ್ನು ನೀಟಾಗಿ ಇಡುವುದಿಲ್ಲ.

ಎಲ್ಲ ವಿಷಯದಲ್ಲಿಯೂ ನಿರ್ಲಕ್ಷ್ಯ ತೋರುವುದು
ತಮ್ಮ ಪರ್ಸನಲ್ ವಿಷಯ ಮಾತ್ರವಲ್ಲ, ಯಾವುದಾದರು ಮೀಟಿಂಗ್, ಫಂಕ್ಷನ್ ಗೆ ಹೋಗುವುದಾದರೆ ತಡ ಮಾಡಿ ಹೋಗುವುದು ಇವೆಲ್ಲಾ ಅವರ ಅಭ್ಯಾಸವಾಗಿರುತ್ತದೆ.

ತಾಳ್ಮೆಯೇ ಇಲ್ಲದಿರುವುದು
ಆ ವ್ಯಕ್ತಿ ಸಮಧಾನದಿಂದ ಕುಳಿತು ಒಂದು ಕಪ್ ಕಫಿ ಕೂಡ ಕುಡಿಯುವುದಿಲ್ಲ, ಕೈ ಕಾಲುಗಳನ್ನು ಕುಣಿಸುವುದು ಹೀಗೆ ಏನೋ ಒಂದು ಮಾಡುತ್ತಾ ಬ್ಯುಸಿಯಾಗಿರುತ್ತಾರೆ.

ಇವರ ಹತ್ತಿರದವರು ತೊಂದರೆಯನ್ನು ಅನುಭವಿಸುತ್ತಾರೆ
ಹೇಳಿದ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳುವುದು, ವಿಚಿತ್ರವಾದ ವರ್ತನೆ ಈ ಎಲ್ಲಾ ಕಾರಣದಿಂದ ಅ ವರ ಮನೆಯವರು ಅಥವಾ ಅವರ ಸಮೀಪದ ವ್ಯಕ್ತಿಗಳು ತೊಂದರೆಯನ್ನು ಅನುಭವಿಸುತ್ತಾರೆ.

ಕೆಲಸವನ್ನು ಪ್ರಾರಂಭಿಸಲು ಹಿಂದೇಟು
ಕೆಲಸವನ್ನು ಬೇಗ ಮಾಡಿಕೊಂಡು ಮುಗಿಸಬೇಕೆಂಬ ಮನೋಭಾವ ಅವರಲ್ಲಿ ಇರುವುದಿಲ್ಲ, ಅರ್ಧ ಗಂಟೆಯಲ್ಲಿ ಮುಗಿಸುವ ಕೆಲಸಕ್ಕೆ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತಾರೆ ಹಾಗೂ ಅದಕ್ಕೆ ಕಾರಣಗಳನ್ನೂ ನೀಡುತ್ತಾರೆ.

ಇದ್ದಕ್ಕಿದ್ದಂತೆ ಕೋಪಗೊಳ್ಳುವುದು
ಹೈಪರ್ ಆಕ್ಟಿವ್ ಕಾಯಿಲೆ ಇರುವ ವ್ಯಕ್ತಿಗೆ ಬೇಗನೆ ಕೋಪ ಬರುತ್ತದೆ, ಆದರೆ ನಾವು ಅವರಲ್ಲಿ ಕಾಯಿಲೆ ಇದೆ ಎಂದು ಗುರುತಿಸುವ ಬದಲು ಮುಂಗೋಪಿ ಎಂದೇ ತಿಳಿಯುತ್ತೇವೆ.

ತಮ್ಮ ಸರದಿಗಾಗಿ ಕಾಯುವ ತಾಳ್ಮೆ ಇರುವುದಿಲ್ಲ
ಈ ವ್ಯಕ್ತಿ ಸೊಪರ್ ಮಾರ್ಕೆಟ್ ಗೆ ಹೋದರು ಅಂದಿಟ್ಟುಕೊಳ್ಳಿ, ಅಲ್ಲಿ ಬಿಲ್ ಪಾವತಿಗೆ ಉದ್ದದ ಕ್ಯೂ ಇದ್ದರೆ ತಮ್ಮ ಸರದಿ ಬರುವವರೆಗೆ ಕಾಯುವಷ್ಟು ತಾಳ್ಮೆ ಇವರಲ್ಲಿ ಇರುವುದಿಲ್ಲ, ಅಲ್ಲಿ ಎಲ್ಲರನ್ನು ತಳ್ಳಿ ಮುಂದೆ ಹೋಗಿ ಬಿಲ್ ಪಾವತಿ ಮಾಡುವುದು ಹೀಗೆ ಏನಾದರೂ ಮಾಡಿ ಜನರು ಇವರತ್ತ ವಿಚಿತ್ರವಾಗಿ ನೋಡುವಂತಾಗುವುದು.

ಕೊಟ್ಟ ಮಾತನ್ನು ನಡೆಸಿಕೊಳ್ಳುವುದಿಲ್ಲ
ಇಂತಹ ವ್ಯಕ್ತಿ ಯಾವುದೇ ಕಮಿಟ್ ಮೆಂಟ್ ಪಾಲಿಸುವುದಿಲ್ಲ.

ತನ್ನ ವಸ್ತುಗಳನ್ನು ಕಳೆದು ಹಾಕಿ ಹುಡುಕುವುದು
ಈ ವ್ಯಕ್ತಿ ತನ್ನ ವಸ್ತುಗಳನ್ನು ಒಂದು ಕಡೆ ಇಡುವುದಿಲ್ಲ, ನಂತರ ವಸ್ತುಗಳನ್ನು ಎಲ್ಲಿ ಇಟ್ಟಿದ್ದೇನೆ ನೆನಪಾಗದೆ ತುಂಬಾ ಹುಡುಕುತ್ತಾರೆ, ಆ ವಸ್ತು ಸಿಕ್ಕಿದ ಮೇಲೆ ಮತ್ತೆ ಅದನ್ನು ಜೋಪಾನವಾಗಿ ಇಡುವುದಿಲ್ಲ, ಬೇಕಾ ಬಿಟ್ಟಿ ಇಡುತ್ತಾರೆ.



Click it and Unblock the Notifications