Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಹಸಿವು ಇಲ್ಲದಿರುವುದು ಒಂದು ಭಯಂಕರ ಕಾಯಿಲೆ!
ನಿಮ್ಮ ಪ್ರೀತಿ-ಪಾತ್ರರ ಆಹಾರಕ್ರಮದಲ್ಲಿ ಮತ್ತು ನಡುವಳಿಕೆಯಲ್ಲಿ ದಿಢೀರನೆ ಬದಲಾವಣೆ ಆಗಿದೆಯೇ? ಹಾಗಾದರೆ ಅವರ ಬಗ್ಗೆ ಸ್ವಲ್ಪ ಅಧಿಕ ಗಮನ ಕೊಡಿ. ಏಕೆಂದರೆ ಅವರು ಅನೊರೆಕ್ಸಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರಬಹುದು.
ಅನೊರೆಕ್ಸಿಯಾ ಅಂದರೆ ಹಸಿವು ಇಲ್ಲದಿರುವುದು, ಇದು ಮನುಷ್ಯನ ಆಹಾರ ಸೇವನೆಯನ್ನು ಕುಂಠಿತ ಮಾಡುವಂತಹ ರೋಗ. ಈ ರೋಗವನ್ನು ನಾವು ಲಘುವಾಗಿ ಪರಿಣಗಣಿಸಬಾರದು. ನೀವು ಅಥವಾ ನಿಮ್ಮ ಪ್ರೀತಿ ಪಾತ್ರರು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆಯಾ ಎನ್ನುವುದನ್ನು ಕಂಡುಹಿಡಿಯಲು ಕೆಲವು ಲಕ್ಷಣಗಳು ಇಲ್ಲಿವೆ.

1. ಹಸಿವನ್ನು ಕಡೆಗಣಿಸುವುದು
ಹಸಿವಿದ್ದರೂ ಕೂಡ ಅದನ್ನು ಕಡೆಗಣಿಸುವುದು ಈ ರೋಗದ ಅತ್ಯಂತ ಅಪಾಯಕಾರಿ ಅಂಶ. ಜೋರಾಗಿ ಹಸಿವಾಗಿದ್ದರೂ ತಿನ್ನಲು ಹಾಗೂ ಊಟ ಮಾಡಲು ನಿರಾಕರಿಸುವುದು.

2. ತಿನ್ನುವ ಪದ್ಧತಿಯಲ್ಲಿ ಹಠಾತ್ ಬದಲಾವಣೆ
ಒಬ್ಬ ವ್ಯಕ್ತಿ ಹಠಾತ್ ಆಗಿ ತನ್ನ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆತ ಅಥವಾ ಆಕೆ ಅನೊರೆಕ್ಸಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆಂದರ್ಥ. ಊಟವನ್ನು ಗುಟ್ಟಾಗಿ ಮಾಡುವುದು ಅಥವಾ ಕೆಲವು ವಿಧದ ತಿಂಡಿಗಳನ್ನು ಮಾತ್ರ ಸೇವಿಸುವುದು ಅಥವಾ ತಿಂಡಿಯನ್ನು ತುಂಬಾ ಸಣ್ಣಸಣ್ಣ ಭಾಗಗಳಾಗಿ ಮಾಡಿ ತಿನ್ನುವುದು.

3. ತೂಕ ಕಳಕೊಳ್ಳುವುದು
ಅನೊರೆಕ್ಸಿಯಾ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ತಡೆಹಿಡಿಯುತ್ತದೆ. ಈ ರೋಗದ ಪ್ರಮುಖ ಲಕ್ಷಣವೆಂದರೆ ತೂಕ ಕಳಕೊಳ್ಳುವುದು. ತೂಕ ಕಳಕೊಳ್ಳುವುದನ್ನು ಲಘುವಾಗಿ ಪರಿಗಣಿಸಬಾರದು.

4. ಜೋಲಾಡುವ ಅಥವಾ ದೊಡ್ಡ ಬಟ್ಟೆಗಳನ್ನು ಧರಿಸುವುದು
ಈ ಕಾಯಿಲೆಯಿಂದ ಬಳಲುವವರು ಜೋಲಾಡುವ ಅಥವಾ ದೊಡ್ಡ ಬಟ್ಟೆಗಳನ್ನು ಧರಿಸಿ ತೂಕ ಕಳಕೊಂಡಿರುವುದನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ.

5. ದೇಹದ ಮೇಲೆ ಅತಿಯಾದ ಕೂದಲು
ದೇಹ ತೂಕ ಕಳಕೊಂಡ ಕಾರಣ ಉಷ್ಣಾಂಶ ಕಡಿಮೆಯಾಗಿ ಕಾಲು, ಮುಖ ಮತ್ತು ತೋಳುಗಳಲ್ಲಿ ಅತಿಯಾದ ಕೂದಲು ಬೆಳೆಯಬಹುದು.

6. ಪದೇ ಪದೇ ತೂಕ ಮಾಡುವುದು
ಯಾವುದೇ ವ್ಯಕ್ತಿ ಪದೇ ಪದೇ ತೂಕ ಪರಿಶೀಲಿಸುತ್ತಿದ್ದರೆ ಮತ್ತು ತೂಕ ಹೆಚ್ಚಿಸಿಕೊಳ್ಳಲು ಅತಿಯಾದ ಆಸಕ್ತಿ ಹೊಂದಿದ್ದರೆ ಆತ ಅನೊರೆಕ್ಸಿಯಾದಿಂದ ಬಳಲುತ್ತಿದ್ದಾನೆಂದರ್ಥ.

7. ದೇಹ ವಿಕಾರವಾಗಿ ಕಾಣುತ್ತಿದೆ ಅನ್ನುವ ಭಾವನೆ
ಅನೊರೆಕ್ಸಿಯಾದಿಂದ ಬಳಲುತ್ತಿರುವವರಿಗೆ ಅವರ ದೇಹ ಹಾಗೂ ತೂಕದ ಬಗ್ಗೆ ತೃಪ್ತಿ ಇರುವುದಿಲ್ಲ. ತುಂಬಾ ತೆಳ್ಳಗಿದ್ದರೂ ತಾವು ತುಂಬಾ ತೂಕ ಹೊಂದಿದ್ದೇವೆ ಎಂದು ಭಾವಿಸುತ್ತಾರೆ.

8. ಋತುಚಕ್ರದ ಮಾದರಿಯಲ್ಲಿ ಬದಲಾವಣೆ
ಯುವತಿಯ ಹಾಗೂ ಹದಿಹರೆಯದ ಹುಡುಗಿಯರಾದರೆ ಸತತವಾಗಿ ಮೂರ್ನಾಲ್ಕು ಬಾರಿ ಮುಟ್ಟು ಆಗದಿದ್ದರೆ ಇದು ಅನೊರೆಕ್ಸಿಯಾದ ಲಕ್ಷಣವಾಗಿರಬಹುದು.

9. ನಡವಳಿಕೆಯಲ್ಲಿ ಬದಲಾವಣೆ
ಅನೊರೆಕ್ಸಿಯಾದಿಂದ ಬಳಲುವವರು ಹೆಚ್ಚಾಗಿ ಏಕಾಂಗಿಯಾಗಿರಲು ಬಯಸುತ್ತಾರೆ. ಅವರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುವುದಿಲ್ಲ ಮತ್ತು ತಮ್ಮ ಚಟುವಟಿಕೆಗಳನ್ನು ಆದಷ್ಟು ಗುಟ್ಟಾಗಿರಿಸಲು ಬಯಸುತ್ತಾರೆ.



Click it and Unblock the Notifications
