Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಪಾರ್ಶ್ವವಾಯುವಿಗೆ ಮುನ್ನ ಕಂಡು ಬರುವ ಲಕ್ಷಣಗಳು
ಮನುಷ್ಯನಿಗೆ ಕಾಡುವ ಕಾಯಿಲೆಗಳು ಅನೇಕ. ಅದರಲ್ಲೂ ಕೆಲವು ಕಾಯಿಲೆಗಳು ತಿಳಿಯದೇ ನುಗ್ಗಿಬಿಡುತ್ತದೆ. ಅಂತಹ ಕಾಯಿಲೆಗಳಲ್ಲಿ ಪಾರ್ಶವಾಯು ಅಥವಾ ಲಕ್ವಾ ಕೂಡ ಒಂದು. ಈ ಪಾರ್ಶ್ವವಾಯು ಬರುವುದು ತಿಳಿಯುವುದು ಸ್ವಲ್ಪ ಕಷ್ಟ. ಆದ್ದರಿಂದ ಇಲ್ಲಿ ಕೆಲವು ಸೂಚನೆಗಳನ್ನು ನೀಡುತ್ತಿದ್ದೇವೆ. ಇದನ್ನು ಓದಿ ತಿಳಿದುಕೊಳ್ಳಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಬಳಿ ಧಾವಿಸಲು ಮರೆಯದಿರಿ!
ಮಿದುಳಿನ ರಕ್ತ ಸಂಚಾರ ಕಡಿಮೆಯಾಗಿ ಮಿದುಳಿನ ಕಾರ್ಯ ಶೀಘ್ರವಾಗಿ ಕಡಿತಗೊಳ್ಳುವುದನ್ನು ಮಿದುಳು ಲಕ್ವ ಎನ್ನಲಾಗುತ್ತದೆ. ಇದು ರಕ್ತದ ಕೊರತೆಯಿಂದ ಆಗಬಹುದು ಅಥವಾ ರಕ್ತ ಸ್ರಾವ ಮತ್ತು ಅಡತಡೆಗಳು ಕಾರಣವಾಗಬಹುದು.ಆದಾಗ್ಯೂ ಒಬ್ಬ ಸಾಮಾನ್ಯ ಮನುಷ್ಯನಿಗೆ ಈ ಸ್ಟ್ರೋಕ್ ನ ಬಗ್ಗೆ ಅಷ್ಟು ಅರಿವಿರುವುದಿಲ್ಲ ಮತ್ತು ಈ ರೀತಿ ಆದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅರಿವಿರುವುದಿಲ್ಲ.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಧೂಮಪಾನ, ಅಧಿಕ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಹೃದ್ರೋಗಗಳು ಪಾರ್ಶ್ವವಾಯುವಿಗೆ ಮುಖ್ಯ ಕಾರಣವಾಗಬಹುದು.
ಮಿದುಳಿನ ಪಾರ್ಶ್ವವಾಯುವಿಗೆ 8 ಎಚ್ಚರಿಕೆ ಸೂಚನೆಗಳು

1.ಮುಖ ಇಳಿಬೀಳುವಿಕೆ
ಮುಖ ಒಂದು ಕಡೆ ಇಳಿಬೀಳುವಂತೆ ಅನಿಸಿದರೆ ಅಥವಾ ಒಂದು ಕಡೆ ಸಂಪೂರ್ಣ ಜೋಮು ಹಿಡಿದಿರುವಂತೆ ಅನ್ನಿಸಿದರೆ ತಕ್ಷಣ ವೈದ್ಯರ ಬಳಿ ಹೋಗಬೇಕು.ಅಲ್ಲಿಯವರೆಗೆ ನೀವು ಆ ವ್ಯಕ್ತಿಯಲ್ಲಿ ನಗುವಂತೆ ಸೂಚಿಸಿ ಅದು ಕೂಡ ಸಾಧ್ಯವಾಗದಿದ್ದಲ್ಲಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.

2. ತೋಳುಗಳಲ್ಲಿ ನಿಶ್ಯಕ್ತಿ
ಪಾರ್ಶ್ವವಾಯು ಆಗುವ ಸೂಚನೆ ಇದ್ದರೆ ಮೊದಲು ಅವಳ/ಅವನ ತೋಳುಗಳು ಮರಗೆಟ್ಟಿದ ಅನುಭವವಾಗುತ್ತದೆ.ನೀವು ಅವರಲ್ಲಿ ಕೈಯನ್ನು ಮೇಲಕ್ಕೆ ಎತ್ತುವಂತೆ ಹೇಳಬೇಕು,ಲಕ್ವ ರೋಗಿಗಳಿಗೆ ಕೈ ತಕ್ಷಣ ಕೆಳಗೆ ಇಳಿ ಬಿದ್ದುಬಿಡುತ್ತದೆ.

3. ಮಾತನಾಡಲು ಕಷ್ಟವಾಗುತ್ತದೆ
ಪಾರ್ಶ್ವವಾಯು ರೋಗಿಗಳಿಗೆ ಮಾತು ತೊದಲುತ್ತದೆ.ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಿ ಅವರು ಉತ್ತರಿಸಲು ಕಷ್ಟ ಪಡುತ್ತಿದ್ದಲ್ಲಿ ಅದು ಸ್ಟ್ರೋಕ್ ನ ಮುನ್ಸೂಚನೆ.

4. ಸಮತೋಲನದ ನಷ್ಟ
ಪಾರ್ಶ್ವವಾಯುವಿನ ಸೂಚನೆಗಳಲ್ಲಿ ಇದು ಕೂಡ ಒಂದು,ದೇಹವನ್ನು ಬ್ಯಾಲೆನ್ಸ್ ಮಾಡುವುದು ಕಷ್ಟ ಎನಿಸುತ್ತದೆ ಮತ್ತು ಚಲಿಸಲು ಆಗುವುದಿಲ್ಲ.

5. ತಲೆನೋವು
ಇದ್ದಕ್ಕಿದ್ದಂತೆ ತಲೆನೋವು ಕಾಣಿಸಿಕೊಳ್ಳುತ್ತದೆ ಮತ್ತು ಇದು ರಕ್ತಸ್ರಾವದ ಪಾರ್ಶ್ವವಾಯುವಿನ ಲಕ್ಷಣವಾಗಿರುತ್ತದೆ.

6. ನೆನಪಿನ ಶಕ್ತಿ ಕಳೆದುಕೊಳ್ಳುತ್ತಾರೆ
ಈ ಹಿಂದೆ ಏನಾಗಿದೆ ಎಂಬುದನ್ನು ಸ್ವಲ್ಪ ಕಾಲ ಸಂಪೂರ್ಣವಾಗಿ ಮರೆತುಬಿಡಬಹುದು. ತಕ್ಷಣಕ್ಕೆ ಏನೂ ನೆನಪಿಗೆ ಬಾರದಿರಬಹುದು.ಇದು ಕೂಡ ಪಾರ್ಶ್ವವಾಯುವಿನ ಸೂಚನೆ ಎನ್ನಲಾಗುತ್ತದೆ.

7. ದೃಷ್ಟಿ ದುರ್ಬಲತೆ ಕಾಣಿಸಿಕೊಳ್ಳಬಹುದು
ಹಠಾತ್ ಕಣ್ಣು ಕತ್ತಲೆ ಎನಿಸುವುದು ಮತ್ತು ದೃಷ್ಟಿ ಸಮಸ್ಯೆ ಕೂಡ ಮಿದುಳಿನ ಪಾರ್ಶ್ವವಾಯುವಿನ ಒಂದು ಚಿನ್ಹೆ.

8. ತಲೆತಿರುಗುವುದು ಮತ್ತು ಸಮತೋಲನ ತಪ್ಪುವುದು
ಪಾರ್ಶ್ವವಾಯುವಿನ ಸೂಚನೆ ಇರುವವರು ಯಾವುದೇ ಕಾರಣವಿಲ್ಲದೆ ತಕ್ಷಣ ತಲೆ ತಿರುಗಿ ಸಮತೋಲನ ತಪ್ಪಿಬಿಡಬಹುದು



Click it and Unblock the Notifications