Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
ಯಕೃತ್ತು ಹಾನಿಯಾದರೆ ಕಂಡು ಬರುವ 8 ಲಕ್ಷಣಗಳು
ಲಿವರ್ (ಪಿತ್ತಜನಕಾಂಗ) ತನ್ನ ಕಾರ್ಯವನ್ನು ಸರಿಯಾಗಿ ನಡೆಸಿದರೆ ಮಾತ್ರ ಆರೋಗ್ಯದಿಂದ ಇರಲು ಸಾಧ್ಯ. ಲಿವರ್ ಗೆ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾದರೆ ಅದನ್ನು ಸರಿಪಡಿಸಬಹುದು. ಆದರೆ ಲಿವರ್ ಗೆ ತುಂಬಾ ಹಾನಿಯಾದರೆ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ. ಮದ್ಯಪಾನ, ತುಂಬಾ ಎಣ್ಣೆ ಪದಾರ್ಥಗಳನ್ನು ತಿನ್ನುವುದು, ಫ್ಯಾಟಿ ಲಿವರ್ ಈ ಕಾರಣಗಳಿಂದ ಪಿತ್ತಜನಕಾಂಗ ತನ್ನ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ತೀವ್ರ ಅನಾರೋಗ್ಯ ಉಂಟಾಗುವುದು.
ಪಿತ್ತಜನಕಾಂಗಕ್ಕೆ ಹಾನಿಯುಂಟಾದರೆ ಕೆಲವೊಂದು ಲಕ್ಷಣಗಳಿಂದ ಕಂಡು ಹಿಡಿಯಬಹುದು, ಆದರೆ ನಾವು ಆ ಲಕ್ಷಣಗಳನ್ನು ಪ್ರಾರಂಭದಲ್ಲಿ ಗಮನಿಸದೆ , ಲಿವರ್ ಸಂಪೂರ್ಣ ಹಾನಿಗೊಳಾದಾಗ ಚಿಕಿತ್ಸೆಗೆ ಹೋಗುತ್ತೇವೆ. ಇದನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಲಿವರ್ ನ ಹಾನಿಯನ್ನು ಸೂಕ್ತ ಚಿಕಿತ್ಸೆ ಪಡೆಯುವುದರ ಮೂಲಕ ಗುಣಪಡಿಸಬಹುದು.
ಪಿತ್ತಜನಕಾಂಗವು ತನ್ನ ಕಾರ್ಯ ನಿರ್ವಹಿಸಿಲು ವಿಫಲವಾದರೆ ಕಂಡು ಬರುವ ಲಕ್ಷಣಗಳು:

ಬಾಯಿ ದುರ್ವಾಸನೆ
ಲಿವರ್ ಸರಿಯಾಗಿ ತನ್ನ ಕಾರ್ಯವನ್ನು ನಿರ್ವಹಿಸದಿದ್ದರೆ ಬಾಯಿ ತುಂಬಾ ದುರ್ವಾಸನೆ ಬೀರುತ್ತದೆ. ಲಿವರ್ ತನ್ನ ಕಾರ್ಯನಿರ್ವಹಿಸಲು ವಿಫಲವಾದರೆ ದೇಹದಲ್ಲಿ ತುಂಬಾ ಅಮೋನಿಯಂ ಉತ್ಪತ್ತಿಯಾಗಿ ಬಾಯಿ ಕೆಟ್ಟ ವಾಸನೆ ಬೀರುತ್ತದೆ.

ಕಣ್ಣಿನ ಸುತ್ತ ಕಪ್ಪು ವರ್ತುಲ ಮತ್ತು ಬಳಲಿದ ಕಣ್ಣುಗಳು
ಲಿವರ್ ಹಾಳಾದರೆ ಸುಸ್ತಾಗುವುದು. ಕಣ್ಣಿನ ಸುತ್ತ ಕಪ್ಪು ಕಲೆಗಳು ಕಂಡು ಬರುತ್ತದೆ, ಕಣ್ಣಿನಲ್ಲಿ ಸುಸ್ತು ಎದ್ದು ಕಾಣುತ್ತದೆ.

ಜೀರ್ಣಕ್ರಿಯೆಯಲ್ಲಿ ತೊಂದರೆ
ಲಿವರ್ ನಲ್ಲಿ ಸಮಸ್ಯೆಯಿದ್ದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ ತುಂಬಾ ಅಜೀರ್ಣ ಸಮಸ್ಯೆ ಉಂಟಾಗುವುದು. ಮಲಬದ್ಧತೆ ಸಮಸ್ಯೆ ತುಂಬಾ ಕಾಲ ಕಂಡು ಬಂದರೆ ಲಿವರ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿರುವುದಿಲ್ಲ. ಆದ್ದರಿಂದ ಈ ರೀತಿ ಕಂಡು ಬಂದರೆ ವೈದರನ್ನು ಕಂಡು ಪರೀಕ್ಷಿಸಿಕೊಳ್ಳಿ.

ತ್ವಚೆಯಲ್ಲಿ ವೈಟ್ ಪ್ಯಾಚಸ್
ಮುಖದಲ್ಲಿ ವೈಟ್ ಪ್ಯಾಚಸ್ (ಬಿಳಿಯಾದ ಚುಕ್ಕಿಗಳು) ಕಂಡು ಬಂದರೆ ಅದು ಕೂಡ ಲಿವರ್ ಸಮಸ್ಯೆಯಿಂದ ಇರಬಹುದು. ಕೆಲವೊಮ್ಮೆ ತ್ವಚೆ ಸಮಸ್ಯೆಯಿಂದ ಕೂಡ ಈ ರೀತಿ ಕಂಡು ಬರುತ್ತದೆ.

ಮೂತ್ರದಲ್ಲಿ ಬಣ್ಣ ವ್ಯತ್ಯಾಸ
ಮೂತ್ರದ ಬಣ್ಣ ಕಡು ಹಳದಿ ಬಣ್ಣದಲ್ಲಿರುತ್ತದೆ. ಯಾವಾಗಾದರೂ ಒಮ್ಮೆ ಈ ರೀತಿ ಉಂಟಾದರೆ ಅದು ದೇಹದಲ್ಲಿ ನಿರ್ಜಲೀಕರಣದಿಂದಾಗಿ ಉಂಟಾಗಿರುತ್ತದೆ. ಸಾಕಷ್ಟು ನೀರು ಕುಡಿದರೆ ಸರಿಯಾಗುವುದು. ಅದೇ ಪ್ರತಿಬಾರಿ ಹೋದಾಗಲೂ ಮೂತ್ರದ ಬಣ್ಣ ತುಂಬಾ ಹಳದಿಯಿದ್ದರೆ ಲಿವರ್ ಸಮಸ್ಯೆ ಇರಬಹುದು.

ಹಳದಿ ಕಣ್ಣುಗಳು
ಕಣ್ಣುಗಳು ಹಳದಿಯಾದರೆ, ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದರೆ ಅರಿಶಿಣ ಕಾಮಲೆ ಅಥವಾ ಪಿತ್ತಜನಕಾಂಗದಲ್ಲಿರುವ ತೊಂದರೆಯಿಂದ ಈ ರೀತಿ ಉಂಟಾಗುತ್ತದೆ.

ಬಾಯಿಯಲ್ಲಿ ಕಹಿ ನೀರು ಬರುವುದು
ಬಾಯಿಯಲ್ಲಿ ಕಹಿ ನೀರು ಬರುವುದು, ಬಾಯಿಯಲ್ಲಿ ಏನೋ ಕಹಿ ವಸ್ತು ಇಟ್ಟಂತೆ ಅನಿಸಿದರೆ ಇವೆಲ್ಲಾ ಲಿವರ್ ಪ್ರಾಬ್ಲಮ್ ನ ಮತ್ತೊಂದು ಲಕ್ಷಣವಾಗಿದೆ

ಕೆಳ ಹೊಟ್ಟೆ ಊದಿಕೊಳ್ಳುವುದು
ಕೆಳಹೊಟ್ಟೆ ಊದಿಕೊಳ್ಳುವ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣಿ. ಏಕೆಂದರೆ ಪಿತ್ತಜನಕಾಂಗಕ್ಕೆ ಹಾನಿಯಾದರೆ ಈ ರೀತಿಯ ಲಕ್ಷಣಗಳು ಕಂಡು ಬರುತ್ತದೆ.
ಲಿವರ್ ನ ಸಮಸ್ಯೆಯನ್ನು ಮೊದಲೇ ಗುರುತಿಸಿದರೆ ಗುಣಪಡಿಸುವುದು ಸುಲಭ.



Click it and Unblock the Notifications