Latest Updates
-
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್!
ಈ ಮದ್ದುಗಳಿರುವಾಗ ತಲೆನೋವಿಗೆ ಮಾತ್ರೆ ಏಕೆ?
ಮೈಗ್ರೇನ್ ಸಾಮಾನ್ಯವಾಗಿ 10ರಲ್ಲಿ ಒಬ್ಬರಿಗೆಗೆ ಕಂಡು ಬರುತ್ತದೆ. ಕೆಲವೊಮ್ಮೆ ಮೈಗ್ರೇನ್ ಬಂದರೆ ಒಂದು ವಾರದವರೆಗೆ ಇರುತ್ತದೆ. ತಲೆನೋವು ಕಾಣಿಸಿದರೆ ಆ ನೋವು ಕಡಿಮೆ ಮಾಡಲು ಮಾತ್ರೆ ನುಂಗುತ್ತೇವೆ. ಮಾತ್ರೆಯ ಪವರ್ ಸ್ವಲ್ಪ ಕಡಿಮೆಯಾದ ಮೇಲೆ ಆ ತಲೆನೋವು ಮತ್ತೆ ಮರುಕಳಿಸುತ್ತದೆ.
ತುಂಬಾ ತಲೆನೋವು ಕಾಣಿಸಿದರೆ ತಲೆನೋವಿನ ಜೊತೆಗೆ ವಾಂತಿ, ಸುಸ್ತು , ತಲೆ ಸುತ್ತು ಉಂಟಾಗುವುದು. ಆದರೆ ತಲೆನೋವಿಗೆ ಮಾತ್ರೆ ನುಂಗುವುದು ಅಷ್ಟು ಒಳ್ಳೆಯದಲ್ಲ. ಈ ಮಾತ್ರೆಗಳು ಅಡ್ಡ ಪರಿಣಾಮವನ್ನು ಕೂಡ ಬೀರಬಹುದು. ಆದ್ದರಿಂದ ತಲೆನೋವು ಕಡಿಮೆ ಮಾಡಲು ಮಾತ್ರೆ ನುಂಗುವ ಬದಲು ನೈಸರ್ಗಿಕವಾದ ಕೆಲವು ವಿಧಾನಗಳನ್ನು ಅನುಸರಿಸಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ, ತಲೆನೋವೂ ಕಡಿಮೆಯಾಗುವುದು.
ತಲೆನೋವನ್ನು ಶಮನ ಮಾಡುವ ನೈಸರ್ಗಿಕವಾದ, ಪರಿಣಾಮಕಾರಿಯಾದ ಮದ್ದುಗಳ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ:

ಸೊಪ್ಪು
ತಲೆನೋವು ಕಾಣಿಸಿದರೆ ಸೊಪ್ಪಿನ ಆಹಾರವನ್ನು ತಿನ್ನಿ. ಸೊಪ್ಪಿನಲ್ಲಿರುವ ಮ್ಯಾಗ್ನಿಸೆ ಮೈಗ್ರೇನ್ ಅನ್ನು ಕಡಿಮೆ ಮಾಡುತ್ತದೆ.

ಮೀನು
ಸಮುದ್ರಾಹಾರಗಳಲ್ಲಿ ಒಮೆಗಾ 3 ಅಧಿಕವಿರುತ್ತದೆ. ಮೈಗ್ರೇನ್ ಇರುವವರು ತಮ್ಮ ಆಹಾರಕ್ರಮದಲ್ಲಿ ಸಮುದ್ರಾಹಾರವನ್ನು ಸೇರಿಸಿದರೆ ಮೈಗ್ರೇನ್ ಬರದಂತೆ ತಡೆಯಬಹುದು.

ಹಾಲು
ಕೆನೆ ಇರುವ ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿ riboflavin ಅಂಶವಿದ್ದು ಇದು ಜೀವಕೋಶಗಳಲ್ಲಿ ಶಕ್ತಿಯನ್ನು ತುಂಬುತ್ತದೆ. ಜೀವಕೋಶಗಳಲ್ಲಿ ಶಕ್ತಿ ಕುಂದಿದಾಗ ತಲೆನೋವು ಕಂಡು ಬರುವುದು.

ಅಗಸದ ಬೀಜ (flax seeds)
ಇದರಲ್ಲಿ ಕೊಬ್ಬಿಣದಂಶ ಮತ್ತು ನಾರಿನಂಶ ಅಧಿಕವಿರುತ್ತದೆ. ಇದರಲ್ಲಿರುವ anti-inflammatory ಅಂಶವು ಮೈಗ್ರೇನ್ ಅನ್ನು ಕಡಿಮೆ ಮಾಡುತ್ತದೆ.

ಕಾಫಿ
ಕಾಫಿಯಲ್ಲಿ ಕೆಫೀನ್ ಅಂಶವಿದೆ. ಈ ಕೆಫೀನ್ ಅಂಶ ತಲೆ ನೋವನ್ನು ಕಡಿಮೆ ಮಾಡಿ, ನಿಮಗೆ ಚೈತ್ಯನ್ಯವನ್ನು ತುಂಬುತ್ತದೆ.

ರೆಡ್ ವೈನ್
ತುಂಬಾ ತಲೆನೋವು ಕಾಣಿಸಿಕೊಂಡರೆ ಸ್ವಲ್ಪ ರೆಡ್ ವೈನ್ ಕುಡಿಯಿರಿ. ಇದು ತಲೆನೋವನ್ನು ಕಡಿಮೆ ಮಾಡುತ್ತದೆ ಹಾಗೂ ಇದು ಆರೋಗ್ಯಕ್ಕೂ ಒಳ್ಳೆಯದು.

ಬ್ರೊಕೋಲಿ
ಬ್ರೊಕೋಲಿಯಲ್ಲಿ ಅಧಿಕ ಮ್ಯಾಗ್ನಿಷಿಯಂ ಅಂಶವಿದೆ. ಮೈಗ್ರೇನ್ ಇರುವವರು ಬ್ರೊಕೋಲಿಯನ್ನು ವಾರಕ್ಕೊಮ್ಮೆಯಾದರೂ ತಿನ್ನುವುದು ಒಳ್ಳೆಯದು.

ಶುಂಠಿ
ಆಹಾರದಲ್ಲಿ ಸ್ವಲ್ಪ ಶುಂಠಿ ಸೇರಿಸಿದರೆ ನಿಮ್ಮ ತಲೆನೋವನ್ನು ಹೋಗಲಾಡಿಸಬಹುದು. ಸ್ವಲ್ಪ ಶುಠಿ ಪುಡಿಯನ್ನು ಹಾಲಿನಲ್ಲಿ ಹಾಕಿ ಕುಡಿದರೂ ತಲೆನೋವು ಕಡಿಮೆಯಾಗುವುದು.



Click it and Unblock the Notifications
