Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಹೊಳೆಯುವ ಹಲ್ಲಿಗೆ ಇಲ್ಲಿವೆ 20 ಟಿಪ್ಸ್
ಏಳನೇ ತಿಂಗಳಿನಲ್ಲಿ ಮೂಡುವ ಹಲ್ಲುಗಳು ನಮ್ಮ ಎಪ್ಪತ್ತನೇ ವಯಸ್ಸಿನವರೆಗೂ, ಸ್ವಲ್ಪ ಎಚ್ಚರ ವಹಿಸಿದರೆ ಜೀವನದ ಕೊನೆಯವರೆಗೂ ಸಾಥ್ ಕೊಡುತ್ತವೆ. ಇವು ನಿಮಗೆ ಮಾತನಾಡಲು, ಆಹಾರ ಅಗಿಯಲು ಮಾತ್ರವಲ್ಲದೇ ನಿಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಸಹ ಸಹಕಾರಿಯಾಗಿವೆ. ಈಗಂತೂ ದಂತ ಮಾರುಕಟ್ಟೆಯಲ್ಲಿ ಹಲ್ಲುಗಳನ್ನು ಬಿಳಿ ಮಾಡುವ ಅನೇಕ ಉತ್ಪನ್ನಗಳು ಲಭ್ಯವಿವೆ. ಅಲ್ಲದೆ ನಿಮ್ಮ ದಂತಪಂಕ್ತಿಗಳನ್ನು ಮುತ್ತಿನಂತೆ ಹೊಳೆಯುವಂತೆ ಮಾಡುವ ದುಬಾರಿ ದಂತ ಚಿಕಿತ್ಸೆಗಳೂ ಲಗ್ಗೆಇಟ್ಟಿವೆ. ಆದರೆ ಇವೆಲ್ಲ ಎಷ್ಟು ಸುರಕ್ಷಿತ ಎಂಬುದು ಮಾತ್ರ ಅವರವರ ಯೋಚನೆಗೆ ಬಿಟ್ಟಿದ್ದು.
ಸ್ವಾಭಾವಿಕವಾಗಿ ನಿಮ್ಮ ನಗು ಹೊಳೆಯುವಂತೆ ಮಾಡಲು, ನಾವು ತಂದಿದ್ದೇವೆ ಈ 20 ಸೂಚನೆಗಳನ್ನು. ಯಾವುದೇ ಅಡ್ಡಪರಿಣಾಮಗಳಿಲ್ಲದ, ಖರ್ಚಿಲ್ಲದ ಈ ಸುಲಭ ಮಾರ್ಗೋಪಾಯಗಳನ್ನು ಅನುಸರಿಸಿ ನಿಮ್ಮ ದಂತಪಂಕ್ತಿಯ ಸೌಖ್ಯ ಮತ್ತು ಸೌಂದರ್ಯ ವೃದ್ಧಿಸಿಕೊಳ್ಳಿ.

1. ಮೌತ್ವಾಶ್ , ಕಾಫಿ ಮತ್ತು ಸೋಡಾಗಳಿಂದ ಸಾಧ್ಯವಾದಷ್ಟೂ ದೂರವಿರಿ
ಕಾಫಿ , ಸೋಡಾಗಳಿಂದ ಮತ್ತು ಕೆಲವೊಮ್ಮೆ ಮೌತ್ವಾಶ್ ನ ಕೆಲವು ಬ್ರಾಂಡ್ ಗಳ ಬಳಕೆಯಿಂದ ನಿಮ್ಮ ಹಲ್ಲುಗಳ ಮೇಲೆ ಹಳದಿ ಕಲೆಗಳಾಗುವ ಸಾಧ್ಯತೆಗಳಿವೆ. ಆದ್ದರಿಂದ ಆದಷ್ಟು ಇವುಗಳಿಂದ ದೂರ ಇರುವುದು ಒಳ್ಳೆಯದು.

2. ದಿನಕ್ಕೆ ಕನಿಷ್ಠ ಎರಡು ಬಾರಿ ಬ್ರಷ್ ಮಾಡಿ
ನಿಮ್ಮ ಹಲ್ಲುಗಳ ನಡುವೆ ಸಿಕ್ಕಿ ಬೀಳುವ ಆಹಾರದ ತುಣುಕುಗಳನ್ನು ತೆಗೆದುಹಾಕಿ ಅಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು ಹಾಗು ಅವುಗಳಿಂದ ನಿಮ್ಮ ಹಲ್ಲುಗಳ ಮೇಲೆ ಕಲೆಗಳಾಗದಂತೆ ಮಾಡಲು ದಿನವೊಂದಕ್ಕೆ ಕನಿಷ್ಠ ಎರಡು ಸಾರಿ ಹಲ್ಲುಜ್ಜುವುದು ಅತ್ಯವಶ್ಯಕ.

3. ಹಣ್ಣುಗಳನ್ನು ಹೆಚ್ಚಾಗಿ ತಿನ್ನಿರಿ
ಕೆಲವೊಮ್ಮೆ ನೀವು ಅವಸರದಲ್ಲಿರುತ್ತೀರಿ ಅಥವಾ ನಿಮಗೆ ಹಲ್ಲುಜ್ಜುವುದು ಸಾಧ್ಯವಾಗದಿದ್ದರೆ ಚಿಂತಿಸಬೇಕಾಗಿಲ್ಲ. ಊಟದ ನಂತರ ನಾರುಯುಕ್ತ ಹಣ್ಣು ಸೇವಿಸಿದರೆ ಸಾಕು. ಈ ಹಣ್ಣು ನಿಮ್ಮ ಹಲ್ಲುಗಳ ಮೇಲೆ ನೈಸರ್ಗಿಕ ಬ್ರಷ್ ಥರ ವರ್ತಿಸಿ ಅವನ್ನು ಸ್ವಚ್ಛಗೊಳಿಸುವವು. ಅಂತೆಯೇ ಸಿಟ್ರಸ್ ಆಮ್ಲ ಉಳ್ಳ ಹಣ್ಣುಗಳು ಹಲ್ಲುಗಳ ಮೇಲಿನ ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಕಾರಿ. ಈ ಆಮ್ಲವು ಬಾಯನ್ನು ಸ್ವಚ್ಛಗೊಳಿಸಿ ಹಲ್ಲುಗಳನ್ನು ಹೊಳೆಯುವಂತೆ ಮಾಡುವ ಲಾಲಾರಸವನ್ನು ಹೆಚ್ಚು ಸ್ರವಿಸುವಂತೆ ಮಾಡುತ್ತದೆ. ಸಿ ಜೀವಸತ್ವ ಹೆಚ್ಚಿರುವ ಸ್ಟ್ರಾಬೆರ್ರಿ, ಕಿವಿಸ್ ಗಳಂತಹ ಹಣ್ಣುಗಳಿಂದ ನಿಮ್ಮ ಒಸಡುಗಳು ಗಟ್ಟಿಯಾಗುವವು. ಸೇಬು ಮತ್ತು ಪಿಯರ್ ಗಳಲ್ಲಿ ಹೆಚ್ಚು ನೀರಿನಂಶವಿದ್ದು ಅದು ಜೊಲ್ಲುರಸದ ಸ್ರವಿಕೆಯನ್ನು ಪ್ರಚೋದಿಸುವಲ್ಲಿ ಬಹಳ ಉಪಯುಕ್ತವಾಗಿವೆ .

4. ಫ್ಲೋಸಿಂಗ್ ( ತೆಳುವಾದ ರೇಷ್ಮೆ ದಾರದಿಂದ ಹಲ್ಲನ್ನು ಸ್ವಚ್ಛಗೊಳಿಸುವುದು)
ಹಲವಾರು ಜನರಿಗೆ ಫೋಸಿಂಗ ಬಗ್ಗೆ ತಪ್ಪುಕಲ್ಪನೆ ಇದೆ. ಫ್ಲೋಸಿಂಗ್ ನಿಂದ ಒಸಡುಗಳಲ್ಲಿ ರಕ್ತಸ್ರಾವವಾಗುವದೆಣ್ಬ ಭಯವೂ ಅವರಲ್ಲಿದೆ. ಆದರೆ ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ಮಾಡುವ ಫ್ಲೋಸಿಂಗ್ ನಿಂದ ನಿಮ್ಮ ಹಲ್ಲುಗಳ ಆರೋಗ್ಯ ಕಾಯ್ದುಕೊಳ್ಳಲುವಲ್ಲಿ ಸಹಾಯವಾಗುತ್ತದೆ. ಮತ್ತು ಪ್ರತಿಯಾಗಿ ನಿಮ್ಮ ಹಲ್ಲುಗಳ ಮೇಲಿನ ಕಲೆಗಳನ್ನೂ ತಡೆಗಟ್ಟಬಹುದು.

5. ಡೈರಿ ಉತ್ಪನ್ನಗಳು , ಚೀಸ್ ಹಾಗು ಮೊಸರು
ಡೈರಿ ಉತ್ಪನ್ನಗಳು ವಸಡು ಸಂಬಂಧಿ ರೋಗಗಳನ್ನು ಕಡಿಮೆ ಮಾಡುತ್ತದೆ. ಮತ್ತು ನಮ್ಮ ಹಲ್ಲಿನ ಬಿಳುಪು ವೃದ್ಧಿಯಾಗುವಂತೆ ನೋಡಿಕೊಳ್ಳುತ್ತವೆ. ಮೃದು ಚೀಸ್ ಗಳಿಗಿಂತಲೂ ಚೆಡ್ಡಾರ್ ದಂತಹ ಗಡಸು ಚೀಸ್ ನಮ್ಮ ದಂತಕವಚವನ್ನು ರಕ್ಷಿಸುವ ಮತ್ತು ಬಲಪಡಿಸುವುದರ ಜೊತೆಗೆ ಹಲ್ಲುಗಳನ್ನು ಸ್ವಚ್ಛಗೊಳಿಸುವಲ್ಲಿ ಮತ್ತು ಅವುಗಳ ಹೊಳಪನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ .

6. ಎಳ್ಳು ಬೀಜಗಳನ್ನು ಬಳಸಿ
ಎಳ್ಳು ಬೀಜಗಳು ದಂತಕುಳಿಗಳನ್ನು ನಾಶಮಾಡಿ, ಹಲ್ಲಿನ ದಂತಕವಚದ ವೃದ್ಧಿಗೆ ಸಹಕಾರಿಯಾಗಿವೆ. ಅವುಗಳಲ್ಲಿ ಅತಿಹೆಚ್ಚು ಕ್ಯಾಲ್ಸಿಯಂ ಇರುವುದರಿಂದ ನಿಮ್ಮ ಹಲ್ಲುಗಳು ಮತ್ತು ಒಸಡಿನ ಸುತ್ತ ಇರುವ ಮೂಳೆಯ ಬಲವೃದ್ಧಿಗೆ ಸಹಕಾರಿ.
ಅಲ್ಲದೆ ಸೂರ್ಯಕಾಂತಿ ಬೀಜಗಳು ಮೆಗ್ನೀಸಿಯಮ್ ನಂತಹ ಪ್ರಮುಖ ಖನಿಜಗಳನ್ನು ಒದಗಿಸುವದಲ್ಲದೇ, ಫೈಬರ್ , ಪ್ರೋಟೀನ್ ಮತ್ತು ಇ ಜೀವಸತ್ವದ ಉತ್ತಮ ಆಕರವಾಗಿದೆ. ಇವನ್ನು ಅಗಿಯುವುದರಿಂದ ಉಸಿರಿನ ದುರ್ಗಂಧ ದೂರವಾಗುವದಲ್ಲದೆ ಹಲ್ಲುಗಳ ಕಲೆಗಳೂ ನಿಯಂತ್ರಿಸಲ್ಪಡುವವು.

7. ಸ್ಟ್ರಾ ಬಳಸಿ
ಸ್ಟ್ರಾ ಬಳಕೆಯಿಂದ ಹಲ್ಲುಗಳ ಮೇಲೆ ಬೀಳಬಹುದಾದ ಕಲೆಗಳನ್ನು ತಪ್ಪಿಸಬಹುದು. ಯಾವುದೇ ಬಣ್ಣದ ಪಾನೀಯ ಕುಡಿಯುವಾಗಲೂ ಸ್ಟ್ರಾ ಬಳಸಿದರೆ ಆ ಪಾನೀಯವು ನಿಮ್ಮ ಹಲ್ಲುಗಳ ಸಂಪರ್ಕಕ್ಕೆ ಬರದೆ ಅವುಗಳ ಹಿಂದಿನಿಂದ ಹಾಯ್ದು ಹೋಗುತ್ತದೆ. ಕಾರಣ ಹಲ್ಲುಗಳ ಮೇಲೆ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ.

8. ತರಕಾರಿಗಳು
ಒಂದು ರೀತಿಯ ಕೋಸುಗಡ್ಡೆ , ಕ್ಯಾರೆಟ್ , ಕುಂಬಳಕಾಯಿ , ಇತ್ಯಾದಿಗಳಲ್ಲಿ ಜೀವಸತ್ವಗಳು ಸಮೃದ್ಧವಾಗಿರುವದರಿಂದ ಇವು ದಂತಕವಚದ ರಚನೆಗೆ ಸಹಾಯಕಾರಿಯಾಗಿವೆ . ಇವುಗಳನ್ನು ಹಸಿಯಾಗಿ ತಿನ್ನುವುದರಿಂದ ಒಸಡುಗಳಿಗೆ ಸ್ವಾಭಾವಿಕವಾಗಿ ಮಸಾಜ್ ಆಗುವುದು, ಹಲ್ಲಿನ ನಡುವಿನ ಭಾಗ ಸ್ವಚ್ಛಗೊಳ್ಳುವುದು ಮತ್ತು ಹಲ್ಲುಗಳ ಬಿಳುಪು ವೃದ್ಧಿಸುವುದು.

9. ನಿಂಬೆ ಮತ್ತು ಉಪ್ಪು ಮಿಶ್ರಣವನ್ನು ಬಳಸುವುದು
ನಿಂಬೆಯಲ್ಲಿ ನೈಸರ್ಗಿಕವಾಗಿ ಸಿಟ್ರಿಕ್ ಆಮ್ಲ ಇರುತ್ತದೆ. ಉಪ್ಪಿನೊಂದಿಗೆ ಬೆರೆತಾಗ ಇದು ಅದ್ಬುತವಾಗಿ ಕೆಲಸ ಮಾಡಿ ನಿಮ್ಮ ಹಲ್ಲುಗಳನ್ನು ಚಕ-ಚಕ ಹೊಳೆಯುವಂತೆ ಮಾಡಬಲ್ಲದು. ಬಿಳಿ ಹಲ್ಲುಗಳನ್ನು ಪಡೆಯಲು , ನಿಯಮಿತವಾಗಿ ನಿಂಬೆ ಮತ್ತು ಉಪ್ಪು ಮಿಶ್ರಣದಿಂದ ಬ್ರಷ್ ಮಾಡಿರಿ.

10. ಪ್ರತಿ ಎರಡು ತಿಂಗಳಿಗೊಂದು ಹೊಸ ಬ್ರಷ್ ಬಳಸಿ
ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ನಿಮ್ಮ ಬ್ರಷ್ ಬದಲಾಯಿಸುವುದು ಬಹಳ ಮುಖ್ಯ . ಅವಧಿಯ ನಂತರ ನಿಮ್ಮ ಬ್ರಷ್ ಕಠಿಣವಾಗಿ ನಿಮ್ಮ ಹಲ್ಲುಗಳಲ್ಲಿ ಕಲೆಗಳು ಗೊಚರಿಸಬಹುದು ಅಲ್ಲದೆ ಒರಟು ಬ್ರಷ್ ನಿಮ್ಮ ಹಲ್ಲುಗಳ ದಂತಕವಚವನ್ನೂ ಹಾಳುಮಾಡಬಹುದು.

11. ನಿಮ್ಮ ಕ್ಯಾಲ್ಸಿಯಂ ಯುಕ್ತ ಆಹಾರಗಳ ಸೇವನೆ ಮುಂದುವರೆಸಿ
ಕ್ಯಾಲ್ಸಿಯಂಯುಕ್ತ ಆಹಾರಗಳ ಸೇವನೆಯಿಂದ ನಿಮ್ಮ ಹಲ್ಲು ಬಲಪಡಿಸುವಲ್ಲಿ ಮತ್ತು ಹಲ್ಲುಗಳ ರಚನೆಯನ್ನು ನಿರ್ವಹಿಸುವಲ್ಲಿ ಸಹಾಯವಾಗುತ್ತದೆ.

12. ಟಾಯ್ಲೆಟ್ ನಿಂದ ನಿಮ್ಮ ಬ್ರಷ್ ಕನಿಷ್ಠ 6 ಅಡಿ ದೂರವಿರಲಿ.
ಪ್ಲೆಶ್ ನಿಂದ ಉಂಟಾಗುವ ಗಾಳಿಯ ಮೂಲಕ ಹರಡುವ ಕಣಗಳಿಂದ ದೂರವಿರಲು, ನಿಮ್ಮ ಬ್ರಷ್ ಇಡುವ ಜಾಗವು, ಟಾಯ್ಲೆಟ್ ರೂಂನಿಂದ ಕನಿಷ್ಠ 6 ಅಡಿ ದೂರವಿರುವುದು ಒಳ್ಳೆಯದು.ದಂತವೈದ್ಯರು ಸಹ ಬಲವಾಗಿ ಪ್ರತಿಪಾದಿಸುವ ಈ ಚಿಕ್ಕ ಬದಲಾವಣೆಯಿಂದ ನಿಮ್ಮ ಬಾಯಿಯ ಸ್ವಚ್ಛತೆ ಹಾಗೂ ಆರೋಗ್ಯ ವೃದ್ಧಿಸುವುದು.

13. ನಿಯಮಿತವಾಗಿ ದಂತವೈದ್ಯರ ಭೇಟಿ
ನಿಮ್ಮ ಹಲ್ಲುಗಳ ಆರೋಗ್ಯವನ್ನು ಉತ್ತಮವಾಗಿರಿಸಲು ದಂತವೈದ್ಯ ಭೇಟಿ ಕಡ್ಡಾಯ .ವಾಸ್ತವವಾಗಿ ನಿಯಮಿತವಾಗಿ ಹಲ್ಲುಗಳ ಪರೀಕ್ಷೆ ಮಾಡಿಸಿಕೊಳ್ಳುವ ಹಾಗೂ ದಂತವೈದ್ಯರ ಸಲಹೆಯಂತೆ ನಡೆಯುವವರ ಹಲ್ಲುಗಳು, ವರ್ಷಾನುಗಟ್ಟಲೆ ದಂತವೈದ್ಯರ ಬಳಿ ಹೋಗದವರಿಗಿಂತ ಕಡಿಮೆ ಹಾನಿಗೊಳಗಾಗಿರುತ್ತವೆ.

14. ಹಲ್ಲುಗಳನ್ನು ಬಿಳಿಮಾಡುವ ಚಿಕಿತ್ಸೆಗಳು
ನಿಮ್ಮ ಹಲ್ಲುಗಳ ಮೇಲೆ ಕಲೆಗಳಿದ್ದು, ಅವು ಮನೆಯ ಮದ್ದುಗಳಿಂದ ವಾಸಿಯಾಗದಿದ್ದಲ್ಲಿ, ನಿಮ್ಮ ಹಲ್ಲುಗಳನ್ನು ಬಿಳಿಮಾಡುವ ಚಿಕಿತ್ಸೆಗಳು ಸಹ ಲಭ್ಯವಿವೆ. ಈ ಚಿಕಿತ್ಸೆಯಿಂದ ನಿಮ್ಮ ಹಲ್ಲುಗಳು ಗಣನೀಯವಾಗಿ ಬಿಳುಪಾಗುವವು.

15. ಪ್ರಬಲ ಪುದಿನ ಯುಕ್ತ ಟೂತ್ಪೇಸ್ಟ್ ಬಳಸಿ
ಪುದೀನ, ನಿಮ್ಮ ಹಲ್ಲುಗಳನ್ನು ಬಿಳಿಮಾಡಲು ಸಹಕಾರಿ ಎಂದು ಸಾಬೀತಾಗಿದೆ . ಇದು ತಕ್ಷಣದ ಫಲಿತಾಂಶ ತೋರುವುದಿಲ್ಲ. ಆದರೆ ಕೆಲವು ದಿನಗಳ ಸತತ ಬಳಕೆಯಿಂದ ಖಂಡಿತವಾಗಿ ಧನಾತ್ಮಕ ಫಲಿತಾಂಶ ಕಂಡುಬರುತ್ತದೆ.

16. ಅನುವಂಶಿಯತೆಯ ಕಾರಣಗಳು
ಆನುವಂಶಿಕ ಕಾರಣಗಳಿಂದಲೂ ಅನೇಕ ಬಾರಿ ಹಲ್ಲುಗಳ ಮೇಲೆ ಕಲೆಗಳಾಗುತ್ತವೆ. ಆದರೆ ಈ ವಿಷಯ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ . ಆದ್ದರಿಂದ ದಂತವೈದ್ಯರ ಸಹಾಯದಿಂದ ನಿಮ್ಮ ಹಲ್ಲಿನ ಕಲೆಗಳ ಸರಿಯಾದ ಕಾರಣ ತಿಳಿಯಬಹುದು ಮತ್ತು ಅವುಗಳನ್ನು ಗುಣಪಡಿಸಬಹುದು .

17. ಆಂಟಿಬಯಾಟಿಕ್ ಗಳ ಅಧಿಕ ಡೋಸೇಜ್ ಗಳನ್ನು ತಪ್ಪಿಸಿ
ಆಂಟಿಬಯಾಟಿಕ್ ಗಳ ಅಧಿಕ ಡೋಸೇಜ್ ಗಳಿಂದ ಹಲ್ಲುಗಳು ವರ್ಣರಹಿತವಾಗುವ ಅಪಾಯವಿದೆ. ಆದ್ದರಿಂದ ಆಂಟಿಬಯಾಟಿಕ್ ಗಳ ಅನಗತ್ಯ ಸೇವನೆಯನ್ನು ತಪ್ಪಿಸಿ.

18. ಸೋನಿಕ್ ಬ್ರಷ್ ಬಳಸಿ
ಹಸ್ತಚಾಲಿತ ಬ್ರಷ್ ಗಳಿಂದ ಜನರು ಸಾಮಾನ್ಯವಾಗಿ ಗಟ್ಟಿಯಾಗಿ ಹಲ್ಲುಜ್ಜುವರು ಮತ್ತು ಇದು ಒಸಡು ಮತ್ತು ಹಲ್ಲುಗಳ ಸವೆತಕ್ಕೆ ಕಾರಣವಾಗುವುದು. ಇದರಿಂದ ಹಲ್ಲು ನೋವೂ ಬರುವುದು . ಆದರೆ ಸೋನಿಕ್ ಬ್ರಷ್ಷು ಬಳಕೆಯಿಂದ ನೀವು ಈ ಎಲ್ಲ ಸಮಸ್ಯೆಗಳನ್ನು ತಪ್ಪಿಸಬಹುದು. ಹಾಗೂ ನಿಮ್ಮ ಹಲ್ಲು ಬಿಳಿಯಾಗಿಡಲೂ ಇದು ಪ್ರಯೋಜನಕಾರಿ ಎಂದು ಸಾಬೀತಾಗಿದೆ.

19. ದಂತದ ಹೊಳಪಿಗೆ ಕಿಟ್ ಗಳು
ಹಲ್ಲುಗಳ ಬಿಳುಪನ್ನು ಉಳಿಸಿಕೊಳ್ಳುವಲ್ಲಿ ದಂತದ ಹೊಳಪಿನ ಕಿಟ್ ಗಳು ಸಹಾಯಕರ ಎಂದು ಸಾಬೀತು . ಆದರೆ ಸುರಕ್ಷಿತ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಬ್ರ್ಯಾಂಡ್ ಗಳನ್ನು ತಿಳಿಯಲು ನಿಮ್ಮ ದಂತವೈದ್ಯರ ಸಲಹೆ ಪಡೆಯಿರಿ.

20. ಅನುಚಿತ ಪಚನಕ್ರಿಯೆಯನ್ನು ಸುಧಾರಿಸಿ ಕೊಳ್ಳಿ
ಅನುಚಿತ ಚಯಾಪಚಯದಿಂದ ನಿಮ್ಮ ಹಲ್ಲುಗಳು ಬಣ್ಣಗುಂದಬಹುದು. ಆದ್ದರಿಂದ ನಿಮ್ಮ ಆಹಾರ ಪದ್ಧತಿಯನ್ನು ಸರಿಪಡಿಸುವದು, ನಿಯಮಿತವಾದ ವ್ಯಾಯಾಮ ಮತ್ತು ತೀವ್ರತರ ಒತ್ತಡಗಳಿಂದ ದೂರ ಉಳಿಯುವುದು ಅತೀ ಮುಖ್ಯ.
ದಾಳಿಂಬೆ ಬೀಜದಂತಹ ದಂತಗಳು ನಿಮ್ಮದಾಗಬೇಕಿದ್ದರೆ, ಮೇಲೆ ಹೇಳಿದ ಸೂಚನೆಗಳನ್ನು ಪಾಲಿಸಿ.



Click it and Unblock the Notifications











