Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಈ ರೀತಿಯ ಪ್ರಲೋಭನೆಗಳು ತುಂಬಾ ಅಪಾಯಕಾರಿ
ಜೀವನದಲ್ಲಿ ಪ್ರಲೋಭನೆ ಎಂಬುದು ಇದ್ದೆ ಇರುತ್ತದೆ.ಕೆಲವು ಒಳ್ಳೆಯ ರೀತಿಯದ್ದು ಆಗಿದ್ದು, ಒಳ್ಳೆಯ ಪಲಿತಾಂಶ ನೀಡಿದರೆ, ಕೆಟ್ಟ ಪ್ರಲೋಭನೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಕೆಲವು ಪ್ರಲೋಭನೆಗಳಂತೂ ಗಂಭೀರ ತೊಂದರೆಗಳನ್ನು ತಂದೊಡ್ಡಬಹುದು.
ಕೆಲವೊಮ್ಮೆ ಸಣ್ಣಪುಟ್ಟ ಪ್ರಲೋಭನೆ/ಚಟಗಳು ಕೂಡ ದೇಹದ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಚಟಗಳನ್ನು ಒಮ್ಮೆ ಅಂಟಿಸಿಕೊಂಡರೆ ಮತ್ತೆ ಅದರಿಂದ ಹೊರಬರುವುದು ಬಹಳ ಕಷ್ಟ. ಆದ್ದರಿಂದ ಆದಷ್ಟು ಆರೋಗ್ಯದ ಮೇಲೆ ಗಮನವಿಟ್ಟು ಆರೋಗ್ಯಯುತವಾಗಿ ಇರಬೇಕು. ಇಲ್ಲದಿದ್ದಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚಟಗಳು ಹಲವಾರು ರೀತಿಯಲ್ಲಿರುತ್ತದೆ. ಮಧ್ಯಪಾನ,ಧೂಮಪಾನ ಇವುಗಳು ಕೆಟ್ಟ ಚಟಗಳಿಗೆ ಉದಾಹರಣೆಗಳು. ಇನ್ನು ಟಿವಿ ನೋಡುವುದು ಇನ್ನಿತರ ಸಣ್ಣ ಪುಟ್ಟ ಚಟಗಳು ನಮಗೆ ತಿಳಿಯದಂತೆ ಸಮಸ್ಯೆಗಳನ್ನು ತಂದೊಡ್ದುತ್ತವೆ. ಇವುಗಳ ಬಗ್ಗೆ ಗಮನ ಹರಿಸಿ ಅವುಗಳಿಗೆ ಪರಿಹಾರ ಕಂಡುಕೊಂಡರೆ ನೀವು ಆರೋಗ್ಯಯುತವಾಗಿ ಇರಬಹುದು.
ಇಲ್ಲಿ ಕೆಲವು ಚಟಗಳ ಬಗ್ಗೆ ತಿಳಿಸಲಾಗಿದೆ. ಆರೋಗ್ಯಯುತ ಜೀವನ ನಡೆಸಲು ಈ ಪ್ರಲೋಭನೆಗಳಿಂದ ದೂರ ಇರಲೇ ಬೇಕು, ಇಲ್ಲದಿದ್ದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

1)ಧೂಮಪಾನ
ನಿಮ್ಮ ಹುಟ್ಟಿದ ಹಬ್ಬ ಅಥವಾ ಯಶಸ್ಸನ್ನು ಆಚರಿಸುವಾಗ ಸಿಗರೇಟ್ ಸೇದದೆಯೇ ಆಚರಿಸಿ.ಧೂಮಪಾನ ಮಾಡುವುದು ಅಥವಾ ಧೂಮಪಾನ ಮಾಡುವವರ ಹತ್ತಿರದಲ್ಲಿ ಇರುವುದು ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ದಿನಕ್ಕೆ ಒಂದು ಸಿಗರೇಟ್ ಸೇದಿದರೂ ಅದು ರಕ್ತ ಹೆಪ್ಪುಗಟ್ಟುವಿಕೆಗೆ, ಅಪಧಮನಿ ಮತ್ತು ರಕ್ತ ನಾಳಗಳ ಸಂಚಲನಕ್ಕೆ ವಿಪತ್ತನ್ನು ತರುತ್ತದೆ.

2)ಅನೈತಿಕ ಸಂಬಂಧ
ಒಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಆರೋಗ್ಯಕರ ಆದರೆ ಹಲವಾರು ವ್ಯಕ್ತಿಗಳೊಡನೆ ಲೈಂಗಿಕ ಸಂಪರ್ಕ ಹೊಂದುವುದರಿಂದ ಖಂಡಿತವಾಗಿ ತೊಂದರೆಯಾಗುತ್ತದೆ ಮತ್ತು ಆಸ್ಪತ್ರೆ ಸೇರುವ ಸಂದರ್ಭ ಒದಗಿಬರಬಹುದು. ನಿಮಗೆ ನಂಬಿಕೆಯಿರುವ ಒಬ್ಬ ವ್ಯಕ್ತಿಯ ಜೊತೆ ಮಾತ್ರ ಲೈಂಗಿಕ ಸಂಪರ್ಕವನ್ನು ಹೊಂದಿರಿ ಮತ್ತು ಇತರ ತೊಂದರೆಗಳಿಂದ ದೂರವಿರಲು ರಕ್ಷಣೆಯನ್ನು ಬಳಸಿ.

3)ಹಲ್ಲುಗಳನ್ನು ಸ್ವಚ್ಚಗೊಳಿಸದೆ ಮಲಗುವುದು
ಇದು ನಾವೆಲ್ಲರೂ ಮಾಡುವ ಸಾಮಾನ್ಯ ತಪ್ಪು.ನಮ್ಮಲ್ಲಿ ಹೆಚ್ಚಿನವರು ಊಟ ಮಾಡಿ,ಸ್ವಲ್ಪ ಹೊತ್ತಿನಲ್ಲಿ ಹಾಗೆ ಮಲಗಲು ಹೋಗುತ್ತೇವೆ.ಇದನ್ನು ಆದಷ್ಟು ತಪ್ಪಿಸಿ. ಪ್ರತಿದಿನ ಮಲಗುವ ಮೊದಲು ಬ್ರಷ್ ಮಾಡದೆ ಮಲಗಿದರೆ ಅದು ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ಕಾಣಿಸಿಕೊಳ್ಳುತ್ತದೆ ಮತ್ತು ಇದು ಸೋಂಕು ಮತ್ತು ದಂತ ಕ್ಷಯಕ್ಕೆ ಕಾರಣವಾಗುತ್ತದೆ.

4)ಚರ್ಮವನ್ನು ನಿರಂತರವಾಗಿ ಮುಟ್ಟಿಕೊಳ್ಳುವುದು
ಪ್ರತಿಯೊಬ್ಬರೂ ನೋಡಲು ಸುಂದರವಾಗಿ ಕಾಣಿಸಲು ಬಯಸುತ್ತಾರೆ ಮತ್ತು ಅದಕ್ಕಾಗಿ ಸಮಯ ಸಿಕ್ಕಾಗಲೆಲ್ಲ ಮುಖವನ್ನು ಮುಟ್ಟಿಕೊಳ್ಳುತ್ತಲೇ ಇರುತ್ತೇವೆ. ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ ಅದನ್ನು ಚುಚ್ಚಿಕೊಳ್ಳುವುದನ್ನು ನಿಲ್ಲಿಸಿ. ಪದೇಪದೇ ಮೊಡವೆ ಹಿಚುಕುವುದರಿಂದ ಇನ್ನಷ್ಟು ದೊಡ್ಡದಾಗುತ್ತದೆ.

5)ಬಿಂಗ್ / ಮದ್ಯ
ಬಿಂಗ್ ಕುಡಿಯುವುದರಿಂದ ಸಾವು ಸಂಭವಿಸಬಹುದು ಮತ್ತು ಸಾಕಷ್ಟು ಜನ ಆಸ್ಪತ್ರೆ ಸೇರುತ್ತಾರೆ. ಬಿಂಗ್ ಕುಡಿಯುವುದರಿಂದ ದೀರ್ಘ ಕಾಲದ ಕಾಯಿಲೆಗಳಾದ ಲಿವರ್ ತೊಂದರೆ ಮತ್ತು ತಕ್ಷಣದ ತೊಂದರೆಗಳಾದ ದೇಹ ತೂಕ ಹೆಚ್ಚುವುದು, ತಲೆತಿರುಗುವಿಕೆ ಮತ್ತು ಆಯಾಸ ಇವುಗಳೆಲ್ಲ ಪ್ರಾರಂಭವಾಗುತ್ತದೆ. ಇವೆಲ್ಲವುಗಳಿಂದ ತಪ್ಪಿಸಿಕೊಳ್ಳಲು ಮಿತಿಯಲ್ಲಿ ಇರುವುದು ಒಳ್ಳೆಯದು.

6)ಊಟದ ಜೊತೆಗೆ ಜಂಕ್ ಫುಡ್ ತಿನ್ನುವುದು
ವಾರದಲ್ಲಿ ಒಮ್ಮೆ ಜಂಕ್ ಆಹಾರ ತಿನ್ನುವುದರಿಂದ ದೇಹದ ತೂಕದ ಮೇಲೆ ಪರಿಣಾಮ ಬೀರುವುದಿಲ್ಲ.ಆದರೆ ಪ್ರತಿದಿನ ಜಂಕ್ ಫುಡ್ ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.ಏಕೆಂದರೆ ಅವುಗಳಲ್ಲಿ ಕೊಬ್ಬು,ಸಕ್ಕರೆ,ಮಸಾಲೆಗಳು ಮತ್ತು ಕೃತಕ ಸಂರಕ್ಷಕಗಳು ಹೆಚ್ಚಿರುತ್ತವೆ.ಜಂಕ್ ಆಹಾರಗಳಲ್ಲಿ ಕೊಬ್ಬು ಸಮೃದ್ಧವಾಗಿ ಇರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಮತ್ತು ಅಪಧಮನಿ ಗಟ್ಟಿಯಾಗುವಂತೆ ಮಾಡುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

7)ಟಿವಿಯನ್ನು ನಿಮ್ಮ ನೆಚ್ಚಿನ ಸ್ನೇಹಿತನನ್ನಾಗಿ ಮಾಡಿಕೊಳ್ಳುವುದು
ಮೂರ್ಖರ ಪೆಟ್ಟಿಗೆಯಾದ ಟಿವಿ ಮುಂದೆ ಕುಳಿತುಕೊಳ್ಳುವುದರಿಂದ ನಿಮ್ಮ ಕಣ್ಣು ಮತ್ತು ಹೃದಯದ ಮೇಲೆ ದುಷ್ಪರಿಣಾಮ ಬೀರುತ್ತದೆ.ತುಂಬಾ ಹೊತ್ತು ಟಿವಿ ನೋಡುವುದರಿಂದ ಹೃದಯಾಘಾತ,ಸ್ಥೂಲಕಾಯ ಮತ್ತು ಪಾರ್ಶ್ವವಾಯು ಆಗುವ ಸಂಭವ ಹೆಚ್ಚು.ನೀವು ಹೆಚ್ಚು ಟಿವಿ ನೋಡಲು ಪ್ರಾರಂಭಿಸಿದಂತೆ ನಿಮ್ಮ ರಕ್ತ ದಲ್ಲಿ ಸಕ್ಕರೆ ಅಂಶ ಮತ್ತು ತೂಕ ಹೆಚ್ಚುತ್ತಾ ಹೋಗುತ್ತದೆ.

8)ತಡವಾಗಿ ಮಲಗಿಕೊಳ್ಳುವುದು
ಸಾಕಷ್ಟು ಜನ ಪರೀಕ್ಷೆ ತಯಾರಿ ಅಥವಾ ಕೆಲಸದ ಕಾರಣದಿಂದ ಮಧ್ಯರಾತ್ರಿ ಕಳೆದರೂ ಮಲಗುವುದಿಲ್ಲ.ಆದರೆ ಇದು ಹೀಗೆ ಮುಂದುವರೆದರೆ ನಿಮ್ಮ ದೇಹ ತೊಂದರೆಗೆ ಒಳಗಾಗುತ್ತದೆ.ಪ್ರತಿದಿನ 6 ರಿಂದ 8 ತಾಸಿನ ನಿದ್ದೆ ಮಾಡದಿದ್ದಲ್ಲಿ ನಿಮ್ಮ ರಕ್ಷಣಾ ವ್ಯವಸ್ಥೆ ಮತ್ತು ಇತರ ವ್ಯವಸ್ಥೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ನಿದ್ರಾ ಹೀನತೆಯಿಂದಾಗಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ ಮತ್ತು ಪರಿಸರದ ಸಾಮಾನ್ಯ ಮಾಲಿನ್ಯವನ್ನು ತಡೆದುಕೊಳ್ಳುವ ಶಕ್ತಿ ಕುಂದುತ್ತಾ ಹೋಗುತ್ತದೆ.

9)ಸದಾ ಸಂಗೀತ ನಿರತರಾಗಿರುವುದು
ದಿನನಿತ್ಯದ ಜಂಜಾಟದಲ್ಲಿ ಸಂಗೀತ ಏಕೈಕ ಒಡನಾಡಿಯಾಗಿರಬಹುದು.ಸಮಯ ಕಳೆಯಲು, ಕೆಲಸ ನಿರ್ವಹಿಸಲು, ಪ್ರಯಾಣ ಮಾಡುವಾಗ ಎಲ್ಲಾ ಸಮಯದಲ್ಲೂ ನಾವು ಸಂಗೀತ ಕೇಳುತ್ತೇವೆ. ಆದರೆ ನೀವು ಸ್ವಲ್ಪವೂ ಬ್ರೇಕ್ ತೆಗೆದುಕೊಳ್ಳದೆ ಗಂಟೆಗಟ್ಟಲೆ ಸಂಗೀತ ಕೇಳುತ್ತಿದ್ದರೆ ಅದು ಕೂಡ ಕೆಟ್ಟ ಪರಿಣಾಮ ಬೀರುತ್ತದೆ.

10) ಹೀಲ್ಡ್ ಸ್ಲಿಪ್ಪರ್ ಬಳಸುವುದು
ಮಹಿಳೆಯರು ಪ್ರತಿದಿನ ಹೀಲ್ಡ್ ಬಳಸುತ್ತಾರೆ, ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ.ಹೈ ಹೀಲ್ಡ್ ಬಳಸುವುದರಿಂದ ಸಂಧಿ ವಾತ ಕಾಣಿಸಿಕೊಳ್ಳಬಹುದು. ಬೆನ್ನು ನೋವು ಮತ್ತು ಸ್ನಾಯು ಗಾಯಗಳು ಕೂಡ ಸಂಭವಿಸಬಹುದು.

11)ಹೆಚ್ಚು ತಿನ್ನುವುದು
ನಮ್ಮಲ್ಲಿ ಹೆಚ್ಚಿನವರು ತಿನ್ನುವುದನ್ನೇ ಸ್ನೇಹಿತರನ್ನಾಗಿ ಮಾಡಿಕೊಂಡಿರುತ್ತಾರೆ. ಹೀಗೆ ಮಾಡಿದಲ್ಲಿ ಇದು ನಿಮ್ಮ ದಿನನಿತ್ಯದ ತಿನ್ನುವ ಕ್ರಮವನ್ನು ಕೆಡಿಸುತ್ತದೆ. ಇದು ನಿಮಗೆ ಹಸಿವೆ ಆಗುವುದನ್ನೇ ತಿಳಿಸುವುದಿಲ್ಲ ಮತ್ತು ಆ ಕಾರಣದಿಂದಾಗಿ ನೀವು ಎಷ್ಟು ತಿನ್ನಬೇಕು ಎಂಬುದೇ ತಿಳಿಯುವುದಿಲ್ಲ. ಹೀಗೆ ನೀವು ಹೆಚ್ಚು ತಿನ್ನುವುದರಿಂದ ನಿಮ್ಮ ತೂಕ ಹೆಚ್ಚುತ್ತದೆ ಮತ್ತು ಅರೋಗ್ಯ ಸಮಸ್ಯೆಗಳಾದ ಹೃದಯ ಕಾಯಿಲೆ, ಮಧುಮೇಹ ಇನ್ನಿತರ ಕಾಯಿಲೆಗಳು ಬರಬಹುದು.

12)ಪ್ರತಿದಿನ ಮಾತ್ರೆ ತೆಗೆದುಕೊಳ್ಳುವುದು
ಪ್ರತಿದಿನ ತಲೆನೋವು ಅಥವಾ ಮುಟ್ಟಿನ ತೊಂದರೆ ಅಥವಾ ಹೊಟ್ಟೆ ನೋವಿನ ಕಾರಣಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ನಿಲ್ಲಿಸುವುದು ಒಳ್ಳೆಯದು. ಮಾತ್ರೆಗಳನ್ನು ತೆಗೆದುಕೊಳ್ಳುವುದು ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಆದ್ದರಿಂದ ಮಾತ್ರೆ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ.

13) ಬೆಳಗ್ಗಿನ ತಿಂಡಿಯನ್ನು ತಿನ್ನದಿರುವುದು
ಬ್ರೇಕ್ ಫಾಸ್ಟ್ ದಿನದಲ್ಲಿ ಅತಿ ಮುಖ್ಯವಾದ ಆಹಾರ. ಪ್ರತಿದಿನ ನಿಮ್ಮ ತಿಂಡಿ ಕೇವಲ ಒಂದು ಕಪ್ ಟೀ ಮತ್ತು ರೋಸ್ಟ್ ಟೋಸ್ಟ್ ಎಂದಾದಲ್ಲಿ ನೀವು ಆರೋಗ್ಯದ ಸಮಸ್ಯೆ ಅನುಭವಿಸುವುದು ಖಂಡಿತ. ಇದು ನಿಮ್ಮ ಜೀರ್ಣಾಂಗದ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಶಕ್ತಿಯನ್ನು ಕುಂದಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

14)ವ್ಯಾಯಾಮವನ್ನು ಸ್ಕಿಪ್ ಮಾಡುವುದು
ಎಲ್ಲಾದರು ಒಮ್ಮೆ ವ್ಯಾಯಾಮವನ್ನು ಸ್ಕಿಪ್ ಮಾಡಬಹುದು.ಆದರೆ ಪ್ರತಿ ಭಾರಿ ವ್ಯಾಯಾಮದಿಂದ ತಪ್ಪಿಸಿಕೊಳ್ಳುವುದು ಒಳ್ಳೆಯ ಅಭ್ಯಾಸವಲ್ಲ.ಸಾಧ್ಯವಾದಷ್ಟು ವ್ಯಾಯಾಮವನ್ನು ಸ್ಕಿಪ್ ಮಾಡಬೇಡಿ.

15)ಸಿಹಿ ತಿಂಡಿಗಳ ಗೀಳು ಅಂಟಿಸಿಕೊಳ್ಳುವುದು
ಪ್ರತಿದಿನ ಸಿಹಿ ತಿಂಡಿ ತಿನ್ನುವುದು ನಿಮ್ಮ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸಬಹುದು. ಇದು ದೇಹದಲ್ಲಿ ಇನ್ಸುಲಿನ್ ಅಂಶವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಿಹಿಯನ್ನು ಕೆಲವೊಮ್ಮೆ ಮಾತ್ರ ತಿನ್ನಿ.

16)ಒಂಟಿಯಾಗಿ ಇರುವುದು
ನಮ್ಮಲ್ಲಿ ಸಾಕಷ್ಟು ಜನರು ಎಲ್ಲಾ ಸಂಬಂಧಗಳಿಂದ ದೂರವಿದ್ದು ಒಂಟಿಯಾಗಿ ಇರಲು ಬಯಸುತ್ತೇವೆ. ಆದರೆ ಒಂಟಿತನ ನಿಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮತ್ತು ಇದು ನಿಮ್ಮ ರೋಗ ನಿರೋಧಕ ವ್ಯವಸ್ಥೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ.

17)ಹೆಚ್ಚು ಕಾಫಿ ಕುಡಿಯುವುದು
ನೀವು ಪ್ರತಿ ಭಾರಿ ಒಂದು ಲೋಟ ಕಾಫಿ ಎಕ್ಸ್ಟ್ರಾ ಕುಡಿದಾಗ ನಿಮ್ಮ ಅರೋಗ್ಯ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಕಾಫಿಯಲ್ಲಿ ಇರುವ ಹೆಚ್ಚುವರಿ ಕ್ರೀಂ ನಿಮ್ಮ ದೇಹದ ತೂಕ ಹೆಚ್ಚಲು ಕಾರಣವಾಗುತ್ತದೆ.

18)ಬೇಗ ತಿನ್ನುವುದು
ನಿಮಗೆ ಸಾಕಷ್ಟು ತಿಂಡಿಗಳನ್ನು ಒಟ್ಟಿಗೆ ನೋಡಿದಾಗ ಬೇಗ ಬೇಗ ಎಲ್ಲವನ್ನೂ ತಿಂದು ಮುಗಿಸಬೇಕು ಎಂದೆನಿಸುತ್ತದೆ. ಆದ್ರೆ ಇದು ನಿಮ್ಮ ಜೀರ್ಣ ಕ್ರಿಯೆ ಮಳೆ ಹೆಚ್ಚು ಪರಿಣಾಮ ಬೀರುತ್ತದೆ. ಅಸಿಡಿಟಿಯನ್ನು ತಡೆಯಲು ನಿಮಗೆ ಎಷ್ಟು ಜೀರ್ಣಿಸಿಕೊಳ್ಳಲು ಸಾಧ್ಯವೋ ಅಷ್ಟನ್ನೇ ತಿನ್ನುವ ಅಭ್ಯಾಸ ರೂಡಿ ಮಾಡಿಕೊಳ್ಳಿ.

19) ಮಾಂಸಕ್ಕಾಗಿ ತುಡಿಯುವುದು
ಮಾಂಸಾಹಾರ ರುಚಿಕರವಾಗಿರುತ್ತದೆ ಮತ್ತು ನೀವು ನೂರಕ್ಕಿಂತ ಹೆಚ್ಚು ರುಚಿಕರ ಖಾದ್ಯಗಳನ್ನು ಇದರಿಂದ ತಯಾರಿಸಬಹುದು. ಆದರೆ ಕೆಂಪು ಮಾಂಸವನ್ನು ಅಪರೂಪಕ್ಕೆ ಒಮ್ಮೆ ತಿನ್ನುವುದು ರೂಡಿಸಿ ಕೊಳ್ಳಿ. ಕೆಂಪು ಮಾಂಸದಲ್ಲಿ ಕೊಬ್ಬು ಹೆಚ್ಚಿರುವುದರಿಂದ ಕ್ಯಾನ್ಸರ್ ಮತ್ತು ಹೃದಯ ಸಮಸ್ಯೆಗಳನ್ನು ತರುತ್ತದೆ.

20) ಪ್ರತಿದಿನ ತೂಕ ನೋಡುವುದು
ನೀವು ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದರೆ ಪ್ರತಿದಿನ ನಿಮಗೆ ತೂಕ ನೋಡಲು ಕುತೂಹಲವಿರುತ್ತದೆ. ಇದರಿಂದ ನಿಮಗೆ ನಿರಾಸೆ ಆಗಬಹುದು ಮತ್ತು ಆಹಾರ ಕ್ರಮದಲ್ಲಿ ಅಡೆತಡೆ ಉಂಟಾಗಬಹುದು ಆದ್ದರಿಂದ ಕೆಲವು ದಿನಗಳಾದ ನಂತರ ಮಾತ್ರ ತೂಕ ಚೆಕ್ ಮಾಡಿಕೊಳ್ಳಿ.



Click it and Unblock the Notifications











