Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಇವೆಲ್ಲಾ ನಮ್ಮಲ್ಲಿರುವ ವಿಚಿತ್ರವಾದ ಕೆಟ್ಟ ಅಭ್ಯಾಸಗಳು
ವ್ಯಸನ ಅಥವಾ ಚಟ ಎಂದರೆ ನಮಗೆ ಸಾಮಾನ್ಯವಾಗಿ ಗಮನಕ್ಕೆ ಬರುವುದು ಮದ್ಯ ವ್ಯಸನ, ಸಿಗರೇಟ್ ಸೇದುವುದು, ಡ್ರಗ್ಸ್, ಮೊದಲಾದವು. ಆದರೆ ಇವುಗಳ ಹೊರತಾಗಿ ನಮ್ಮ ನಿತ್ಯದ ಜೀವನದಲ್ಲಿ ನಮಗೆ ಗೊತ್ತಿಲ್ಲದ ಹಾಗೂ ಕೆಲವು ಚಟಗಳು ನಮಗೂ ಅಭ್ಯಾಸವಾಗಿರಬಹುದು. ಅವುಗಳಲ್ಲಿ ಒಳ್ಳೆಯದೂ ಅಥವಾ ಕೆಟ್ಟದ್ದು ಎರಡೂ ವಿಧಗಳಲ್ಲಿರಬಹುದು.
ನಾವು ಬಿಟ್ಟಿರದ ರೀತಿಯಲ್ಲಿ ಕೆಲವು ಅಭ್ಯಾಸಗಳಿಗೆ ನಾವು ಒಗ್ಗಿಕೊಂಡಿದ್ದೇವೆ. ಆ ಅಭ್ಯಾಸಗಳನ್ನು ಪ್ರಾರಂಭಿಸಿದ್ದು ಹೇಗೆ ಎಂಬುದೇ ಗೊತ್ತಿಲ್ಲದಿದ್ದರೂ ಆ ಅಭ್ಯಾಸಗಳು ನಮ್ಮನ್ನು ಆವರಿಸಿದ್ದಂತೂ ಸುಳ್ಳಲ್ಲ. ಈ ಕೆಳಗಿನ ಅಭ್ಯಾಸಗಳಲ್ಲಿ ನೀವು ಯಾವ ಅಭ್ಯಾಸಕ್ಕೆ ಒಳಗಾಗಿದ್ದೀರಿ ?

ವ್ಯಸನ 1: ನೋವಿನ ಅನ್ವೇಷಣೆ
ಈ ಜಗತ್ತಿನಲ್ಲಿ ನೋವನ್ನು ಹುಡುಕುವವರು ಯಾರಿದ್ದಾರೆ ಅಂದು ಆಶ್ವರ್ಯವಾಗಬಹುದು. ಆದರೆ ಇಂಥವರೂ ನಮ್ಮ ನಡುವೆ ಇದ್ದಾರೆ. ತಮಗೆ ಇಲ್ಲದ ನೋವನ್ನು ಕಲ್ಪನೆ ಮಾಡಿಕೊಂಡು ಅಥವಾ ಸಣ್ಣ ನೋವನ್ನು ದೊಡ್ಡದಾಗಿ ಪರಿಗಣಿಸಿ ಕೊನೆಯಲ್ಲಿ ಆತ್ಮಹತ್ಯೆಯ ಹಂತದವರೆಗೂ ಹೋಗುವವರಿದ್ದಾರೆ.

ವ್ಯಸನ 2 : ಅಂತಂರ್ಜಾಲವನ್ನು ಮಿತಿಮೀರಿ ಬಳಸುವುದು
ನಿಮಗೆ ಗೊತ್ತಿಲ್ಲದಂತೆ, ಕಂಪ್ಯೂಟರ್ - ಅಂತರ್ಜಾಲಗಳ ಅವಲಂಬಿತರಾಗಿರುತ್ತೀರಿ. ಬೆಳಿಗ್ಗೆ ಏಳುತ್ತಿದ್ದಂತೆ ಮೇಲ್ ನೋಡುವುದು ಅಥವಾ ಇನ್ಯಾವುದೇ ಕೆಲಸವನ್ನು ಕಂಪ್ಯೂಟರ್ ನಲ್ಲಿ ಮಾಡುವ ಮೂಲಕವೇ ದಿನವನ್ನು ಆರಂಭಿಸುತ್ತೀರಿ.

ವ್ಯಸನ 3 ಸಾಮಾಜಿಕ ತಾಣ
ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವ ಉದ್ದೇಶದಿಂದ ಫೇಸ್ ಬುಕ್ ನಂಥ ಮಾದ್ಯಮಗಳನ್ನು ಬಳಸುತ್ತೇನೆ ಎಂದು ವಾದ ಮಾಡಿದರೂ ನೀವು ಇದಕ್ಕೆ ಎಡಿಟ್ ಆಗಿರುವ ಕಾರಣ ಸ್ನೇಹಿತರು ಜೊತೆಗಿದ್ದರೂ ಸಾಮಾಜಿಕ ತಾಣಗಳ ಸಂಪರ್ಕದಲ್ಲಿರುತ್ತೀರಿ.

ವ್ಯಸನ 4: ಮಿತಿಮೀರಿ ತಿನ್ನುವಿಕೆ
ಹೊಟ್ಟೆಬಾಕತನ ಅಥವಾ ದುರಾಸೆಯೂ ಕೂಡ ಒಂದು ವ್ಯಸನವೇ. ನಿಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಲು ನೀವು ಅತೀಯಾಗಿ ತಿನ್ನಿತ್ತೀರಾದರೆ ಇದನ್ನು ಇಮೋಶನಲ್ ಈಟಿಂಗ್ ಎನ್ನುತ್ತಾರೆ. ಈ ಅಭ್ಯಾಸ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ವ್ಯಸನ 5: ಹುಚ್ಚು ಪ್ರೀತಿ(ಪ್ರೀತಿಯ ಗೀಳು)
ಇವು ಅತಿಯಾದ ಪ್ರೀತಿ ಗೀಳಿನ ಚಿಹ್ನೆಗಳು:
1. ರೋಮ್ಯಾನ್ಸ್ ಇರುವ ಹಾಡುಗಳು ಹಾಗೂ ಸಿನಿಮಾಗಳನ್ನು ಇಷ್ಟ ಪಡುತ್ತೀರಿ.
2. ಅವನು ಅಥವಾ ಅವಳು ನಿಮಗೆ ಸರಿಹೊಂದುವುದಿಲ್ಲ ಎನ್ನಿಸಿದರೂ ಅವರ ಸಂಬಂಧಗಳಿಂದ ಹೊರಬರಲು ಮನಸ್ಸಾಗದಿರುವುದು
3. ನೀವು ಒಡನಾಟದ ಸಲುವಾಗಿ ಕೆಟ್ಟ ಸಂಬಂಧಗಳನ್ನೂ ಮುಂದುವರೆಸಬಹುದು.
4. ನೀವು ಸಂಗಾತಿಯನ್ನು ಹೊಂದಿಲ್ಲದ್ದರೆ ಶೀಘ್ರವಾಗಿ ಸಂಗಾತಿಯನ್ನು ಹುಡುಕಲು ಮುಂದಾಗುವ ಗುಣ, ಏನೂ ಯೋಚನೆ ಮಾಡದೆ ಪ್ರೀತಿಯಲ್ಲಿ ಬೀಳುವ ಆತುರ
5. ನಿಮ್ಮನ್ನು ನೀವು ಯಾರನ್ನಾದರೂ ಪ್ರೀತಿ ಮಾಡುವಂತೆ ಒತ್ತಾಯ ಪಡಿಸುತ್ತಿದ್ದೀರಾ?

ವ್ಯಸನ 6 : ಲೈಂಗಿಕತೆ
ಲೈಂಗಿಕತೆಯೂ ಒಂದು ವ್ಯಸನವೇ ಆದರೆ ಇದು ಕೆಲವರಲ್ಲಿ ಮಾತ್ರ ಕಂಡುವರುವಂಥದ್ದು. ಮನಸ್ಸಿನಲ್ಲಿಯೀ ಈ ವಿಚಾರಗಳೇ ತುಂಬಿದ್ದರೆ ನೀವು ಲೈಂಗಿಕತೆಗೆ ಅಡಿಕ್ಟ್ ಆಗಿದ್ದೀರಿ ಎಂದೇ ಅರ್ಥ!

ವ್ಯಸನ 7 : ಸೈಬರ್ ಸೆಕ್ಸ್
ಕಂಪ್ಯೂಟರ್ ಮೂಲಕ ಲೈಂಗಿಕತೆಗೆ ಸಂಬಂಧಿಸಿದ ವಿಡಿಯೋಗಳು, ಸಂದೇಶಗಳನ್ನು ಕವಾನಿಸುವುದೂ ಚಟವೆನಿಸಿಕೊಳ್ಳುತ್ತದೆ.

ವ್ಯಸನ 8 : ವ್ಯಾಯಾಮ
ಸದೃಢತೆಗೆ ವ್ಯಾಯಾಮ ಮಾಡುವುದು ಒಳ್ಳೆಯದು ಆದರೆ ಇದು ಅತೀಯಾದರೆ, ಹೆಚ್ಚಿನ ಸಮಯವನ್ನು ಜಿಮ್ ಗಳಲ್ಲಿಯೇ ಕಳೆದರೆ ಇದನ್ನು ವ್ಯಸನವೆನ್ನಬಹುದು.

ವ್ಯಸನ 9 : ವಿಡಿಯೋ ಗೇಮ್
ವಿಡಿಯೋ ಗೇಮ್ ಅಥವಾ ಕಂಪ್ಯೂಟರ್ ಗೇಮ್ ಅತ್ಯಂತ ದೊಡ್ದ ವ್ಯಸನ. ನೀವು ಇಂಥಹ ಗೇಮ್ ಗಳಲ್ಲಿ ಹಂತವನ್ನು ಪೂರ್ಣಗೊಳಿಸುವುದಕ್ಕಾಗಿ ಇಡೀದಿನ ಅದರಲ್ಲಿಯೇ ಸಮಯ ಕಳೆಯುತ್ತೀರಿ.

ವ್ಯಸನ 10 : ಶಾಪಿಂಗ್
ಹುಡುಗರು ವಿಡಿಯೋ ಗೇಮ್ ಗಳನ್ನು ಇಷ್ಟಪಟ್ಟರೆ ಹುಡುಗಿಯರು ಶಾಪಿಂಗ್ ಮಾಡುವುದನ್ನು ಇಷ್ಟಪಡುತ್ತಾರೆ. ತಮ್ಮ ಹೆಚ್ಚಿನ ಸಮಯವನ್ನು ಇದಕ್ಕಾಗಿಯೇ ಮೀಸಲಿಡುತ್ತಾರೆ. ಇದೊಂದು ಗಂಭೀರವಾದ ವ್ಯಸನವಾಗಿದ್ದು ಬೇಗ ಇದರಿಂದ ಹೊರಬರುವುದು ಒಳ್ಳೆಯದು.

ವ್ಯಸನ 11: ಕಳ್ಳತನ
ಕಳ್ಳತನವು ಒಂದು ಖಾಯಿಲೆ ಮಾತ್ರವಲ್ಲದೆ ವ್ಯಸನವೂ ಕೂಡ. ಇದರ ಜೊತೆಗೆ ಅತಿಯಾಗಿ ತಿನ್ನುವುದು ಕೂಡ ಚಟವಾಗಿದೆ. ಇದು ಆರೋಗ್ಯಕ್ಕೂ ಹಾನಿಕಾರಕ.

ವ್ಯಸನ 12: ಅತಿಯಾದ ಕೆಲಸ
ಕೆಲವರಿಗೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ, ನಿತ್ಯದ ಕೆಲಸದ ಜೊತೆಗೆ ಹೆಚ್ಚುವರಿಯಾದ ಎಷ್ಟೇ ಕೆಲಸವಿದ್ದರೂ ಮಾಡುತ್ತಾರೆ. ಈ ಪರಿಯ ಚಟದಿಂದಾಗಿ ಪ್ರೀತಿಪಾತ್ರರಿಂದ ದೂರಾಗುವ ಸನ್ನಿವೇಶವನ್ನು ಎದುರಿಸಬೇಕಾಗಬಹುದು.

ವ್ಯಸನ 13 : ಧಾರ್ಮಿಕ ಭಕ್ತಿ
ಈ ವಿಷಯ, ಧರ್ಮದ ವಿರುದ್ಧ ಮಾತಾಡಿದ ಹಾಗೆ ಅಥವಾ ಅಪಚಾರವೆಸಗಿದಂತೆ ಕಾಣಬಹುದು. ಆದರೆ ಅತೀಯಾಗಿ ದಿನಂಪ್ರತಿ ಪೂಜಾ ವಿಧಿ ವಿಧಾನಗಳನ್ನು ಮಾಡುವುದು ಕೂಡ ವ್ಯಸನವೆ!
ಒಟ್ಟಾರೆಯಾಗಿ ನಮಗೆ ಗೊತ್ತಿಲ್ಲದೆಯೋ ಗೊತ್ತಿದ್ದೋ ಒಂದೊಂದೊ ವ್ಯಸನವನ್ನು ಹೊಂದಿರುವುದಂತೂ ನಿಜ. ಈಗ ಹೇಳಿ ನೀವು ಯಾವ ವ್ಯಸನಕ್ಕೆ ದಾಸರು ?



Click it and Unblock the Notifications