Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮರೆವು ತಡೆಯಲು ಇವುಗಳನ್ನು ತಿನ್ನಲು ಮರೆಯಬೇಡಿ!
ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದಾಗಿ ನಾವು ನಮಗೆ ಅಪಾಯವನ್ನು ತಂದೊಡ್ಡುವ ಮಧುಮೇಹ, ಒತ್ತಡ, ಹೃದಯ ರೋಗ ಮತ್ತು ಅಲೈಮರ್ಸ್ ನಂತಹ ಕಾಯಿಲೆಗಳನ್ನು ನಿಯಂತ್ರಿಸಬಹುದು. ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಇತ್ತೀಚೆಗೆ ನಡೆಸಿದ ಸಂಶೋಧನೆಯ ಪ್ರಕಾರ ಆಹಾರ, ಪಥ್ಯ ಅಥವಾ ನಮ್ಮ ಜೀವನ ಶೈಲಿಯ ಮೂಲಕ ನಾವು ಅಲೈಮರ್ಸ್ ಕಾಯಿಲೆ ಬರದಂತೆ ತಡೆಯಬಹುದು ಎಂದು ಸಾಭೀತಾಗಿದೆ.
ಅಲೈಮರ್ಸ್ ಎಂಬುದು ಎಲ್ಲರನ್ನು ಭಯಪಡಿಸುವ ಕಾಯಿಲೆಯಾಗಿದೆ. ಈ ಕಾಯಿಲೆಯು ಒಮ್ಮೆ ಬಂದರೆ ಅದು ಆ ವ್ಯಕ್ತಿಯಲ್ಲಿರುವ ಕಾರಣ ನೀಡುವ ಸಾಮರ್ಥ್ಯ ಮತ್ತು ಚಿಂತಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಅಲೈಮರ್ಸ್ ಕಾಯಿಲೆಯು ಇತ್ತೀಚೆಗೆ ಎಳೆ ಮಕ್ಕಳಲ್ಲಿ ಸಾಮಾನ್ಯವಾಗುತ್ತಿದೆ. ಮುಖ್ಯವಾಗಿ ಅಲೈಮರ್ಸ್ ಕಾಯಿಲೆಯು ವಂಶವಾಹಿಗಳ ಪ್ರಭಾವದಿಂದ ಬರುತ್ತವೆ. ಆದರು ಆರೋಗ್ಯ ತಙ್ಞರು ಈ ಕಾಯಿಲೆ ಬರಲು ಇರುವ ಇನ್ನಿತರ ಕಾರಣಗಳ ಬಗ್ಗೆ ಪಟ್ಟಿ ನೀಡುತ್ತಾರೆ. ಅವುಗಳಲ್ಲಿ ಪೋಷಕಾಂಶಗಳು, ಶಿಕ್ಷಣ, ಮಧುಮೇಹ, ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳು ಸೇರಿವೆ.
ಇಲ್ಲಿ ನಿಮಗಾಗಿ ಡಿಮೆನ್ಶಿಯ ಮತ್ತು ಅಲೈಮರ್ಸ್ ಕಾಯಿಲೆಯನ್ನು ನಿಯಂತ್ರಿಸಲು ಇರುವ ಕೆಲವು ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದ್ದೇವೆ ಓದಿ.

1. ಧಾನ್ಯಗಳು ಮತ್ತು ಒಣ ಹಣ್ಣುಗಳು
ಧಾನ್ಯಗಳು ಜೀವಕೋಶಗಳ ಬೆಳವಣಿಗೆಯನ್ನು ಪುಷ್ಟೀಕರಿಸುತ್ತವೆ. ಅದರಲ್ಲಿಯೂ ಗೋಧಿಯು ಈ ವಿಚಾರದಲ್ಲಿ ಹೆಚ್ಚು ಪರಿಣಾಮಕಾರಿ. ಬಾದಾಮಿ, ಗೋಡಂಬಿ,ವಾಲ್ ನಟ್ಸ್ ಇವುಗಳಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಮತ್ತು ಕೊಬ್ಬಿನ ಆಮ್ಲಗಳು ಸಮೃದ್ಧವಾಗಿವೆ. ಹಾಗಾಗಿ ಅವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

2. ಮೃದ್ವಂಗಿಗಳು
ಒಯಿಸ್ಟರ್ (ಮೃದ್ವಂಗಿಗಳಲ್ಲಿ) ಸತು ಮತ್ತು ಕಬ್ಬಿಣಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಮೆದುಳನ್ನು ಚುರುಕಾಗಿಡುವುದಲ್ಲದೆ, ಏಕಾಗ್ರತೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

3. ಕಪ್ಪು ದ್ರಾಕ್ಷಿ
ಕಪ್ಪು ದ್ರಾಕ್ಷಿಗಳಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಸಮೃದ್ಧವಾಗಿರುತ್ತವೆ. ಇವುಗಳು ಫ್ರೀ ರಾಡಿಕಲ್‍ಗಳಿಂದ ಉಂಟಾದ ಜೀವಕೋಶಗಳ ಹಾನಿಯನ್ನು ಸರಿಪಡಿಸುತ್ತವೆ. ಈ ಹಣ್ಣುಗಳು ದೇಹದಲ್ಲಿರುವ ಜೀವಕೋಶಗಳಿಗೆ ವಯಸ್ಸಾದಂತೆ ದೇಹದೊಂದಿಗೆ ಹೊಂದಿಕೊಂಡು ಹೋಗುವ ಸಾಮರ್ಥ್ಯವನ್ನು ಒದಗಿಸುತ್ತವೆ.

4. ಚೆರ್ರಿ
ಚೆರ್ರಿಯಲ್ಲಿ ನಮ್ಮ ದೇಹಕ್ಕೆ ಅತ್ಯಗತ್ಯವಾದ ಎರಡು ಅಂಶಗಳು ಇವೆ.ಅವುಗಳಲ್ಲಿ ಒಂದು ಆಮ್ಲೀಯತೆ, ಮತ್ತೊಂದು ಉರಿಬಾವು. ಈ ಹಣ್ಣುಗಳು ಡಿಮೆನ್ಶಿಯಾ ಮತ್ತು ಹೃದಯಾಘಾತವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತವೆ.

5. ಮೀನು
ಮೀನುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮೀನುಗಳನ್ನು ತಿನ್ನುವುದರಿಂದ ಮೆದುಳಿನ ಬೆಳವಣಿಗೆಯುಂಟಾಗುತ್ತದೆ. ಮೀನಿನಲ್ಲಿರುವ ಸಮೃದ್ಧ ಪ್ರೊಟೀನ್ ಮತ್ತು ಕ್ಯಾಲ್ಸಿಯಂಗಳು ಇದಕ್ಕೆ ಕಾರಣವಾಗುತ್ತವೆ.

6. ಟೊಮಾಟೊ
ಟೊಮಾಟೊದಲ್ಲಿ ಲೈಕೊಪಿನ್ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇವು ದೇಹದಲ್ಲಿರುವ ಜೀವಕೋಶಗಳ ಹಾನಿಯನ್ನು ತಪ್ಪಿಸಿ ಡಿಮೆನ್ಶಿಯ ಮತ್ತು ಅಲೈಮರ್ಸ್ ಕಾಯಿಲೆಯು ಬರದಂತೆ ರಕ್ಷಿಸುತ್ತವೆ.

7. ಮೊಟ್ಟೆಗಳು
ಮೊಟ್ಟೆಗಳಲ್ಲಿ ವಿಟಮಿನ್ ಬಿ 12 ಅತ್ಯಧಿಕ ಪ್ರಮಾಣದಲ್ಲಿವೆ. ಇವು ಮೆದುಳಿನ ಜೀವಕೋಶಗಳನ್ನು ಹೆಚ್ಚಿಸಿ, ನೆನಪಿನಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.

8. ಬ್ರೊಕೋಲಿ
ಬ್ರೊಕೋಲಿಯಲ್ಲಿ ಅತ್ಯಧಿಕ ಪೋಷಕಾಂಶಗಳು ಇರುತ್ತವೆ. ಅದರಲ್ಲಿಯೂ ಹೆಚ್ಚಾಗಿ ವಿಟಮಿನ್ ಕೆ ಇರುತ್ತದೆ. ಇದು ಮೆದುಳಿನ ಒಟ್ಟು ಮೊತ್ತ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.

9. ಬ್ರಾಹ್ಮೀ ಎಲೆ
ಬ್ರಾಹ್ಮೀ ಎಲೆಯಿಂದ ಚಟ್ನಿ ಮಾಡಬಹುದು, ತಂಬುಳಿ ಮಾಡಬಹುದು. ಈ ಆಹಾರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ.

10. ಮೊಸರು
ಮೊಸರಿನಲ್ಲಿ ಅಮೈನೋ ಆಮ್ಲಗಳು ಅಧಿಕವಿರುತ್ತವೆ. ಇವು ಒತ್ತಡವನ್ನು ಕಡಿಮೆ ಮಾಡುತ್ತವೆ. ಒತ್ತಡವು ನಿಮ್ಮ ಮೆದುಳಿನಲ್ಲಿರುವ ಕೋಶಗಳು ಕ್ಷಿಪ್ರಗತಿಯಲ್ಲಿ ವಯಸ್ಸಾಗುವಂತೆ ಮಾಡುತ್ತವೆ ಎಂಬುದು ತಿಳಿದಿರಲಿ.

11. ಚಾಕಲೇಟ್
ಅತಿಯಾಗಿ ಚಾಕಲೇಟ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ ಸಹ ಡಾರ್ಕ್ ಚಾಕೊಲೇಟ್ ನಿಮ್ಮ ಮೆದುಳಿಗೆ ತುಂಬಾ ಒಳ್ಳೆಯದು. ಚಾಕಲೇಟಿನಲ್ಲಿ ಪ್ಲೇವೋನಾಯ್ಡ್ ಇವೆ. ಇವು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುತ್ತವೆ.

12. ಕಾಫೀ
ಕೆಫೀನ್ ಮತ್ತು ಆಂಟಿ ಆಕ್ಸಿಡೆಂಟ್ ಅಧಿಕವಾಗಿರುವ ಕಾಫೀಯು ಡಿಮೆನ್ಶಿಯ ಮತ್ತು ಅಲೈಮರ್ಸ್ ಕಾಯಿಲೆ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಆದರೂ ಸಹ ಇದನ್ನು ನೀವು ಹೆಚ್ಚಾಗಿ ಸೇವಿಸದಿದ್ದರೆ ಒಳ್ಳೆಯದು.
ಏಕೆಂದರೆ ಇದು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
ತಙ್ಞರ ಪ್ರಕಾರ ಈ ಕಾಯಿಲೆಗಳನ್ನು ನಿಯಂತ್ರಿಸಲು ನೀವು ನಿಯಮಿತವಾಗಿ ವ್ಯಾಯಾಮ ಮಾಡುವುದ ಅತ್ಯಾವಶ್ಯಕ. ಹಾಗಾಗಿ ಅಲೈಮರ್ಸ್ ಕಾಯಿಲೆಯನ್ನು ನಿಯಂತ್ರಿಸಲು ಆರೋಗ್ಯಕರ ಆಹಾರಗಳ ಜೊತೆಗೆ ಪ್ರತಿ ದಿನ
ವ್ಯಾಯಾಮ ಸಹ ಮಾಡುವುದು ಒಳ್ಳೆಯದು.



Click it and Unblock the Notifications









