Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಆರೋಗ್ಯಕರ ಸ್ತನಕ್ಕಾಗಿ ಪಾಲಿಸಬೇಕಾದ ಟಿಪ್ಸ್
ಮಹಿಳೆಯರಿಗೆ ಆಕರ್ಷಕ ಭಂಗಿ ದೊರೆಯಲು ಸ್ತನ ಗಾತ್ರ ಕೂಡ ಮುಖ್ಯವಾಗುತ್ತದೆ. ಆರೋಗ್ಯಯುತವಾದ ಸರಿಯಾದಗಾತ್ರದ ಸ್ತನ ಹೊಂದಿದ್ದಲ್ಲಿ ಲುಕ್ ಕೂಡ ಸುಂದರವಾಗಿ ಕಾಣುವುದು. ವ್ಯಾಯಾಮಗಳನ್ನು ಮಾಡುವುದರ ಮೂಲಕ ಮತ್ತು ಒಳ್ಳೆಯ ಆಹಾರ ಸೇವಿಸುವುದರಿಂದ ಸ್ತನದ ಆರೋಗ್ಯವನ್ನು ಕಾಪಾಡಬಹುದು. ಮಹಿಳೆಯರನ್ನು ಕಡುತ್ತಿರುವ ಸ್ತನ ಕ್ಯಾನ್ಸರ್ ನಿಂದ ಪಾರಾಗಲು ಸ್ತನದ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿ ಪಡೆದುಕೊಳ್ಳುವುದು ಕೂಡ ಅಷ್ಟೇ ಅಗತ್ಯ. ಸ್ತನ ಕ್ಯಾನ್ಸರ್ ಬಗ್ಗೆ ಸಾಕಷ್ಟು ಸಂಶೋಧನೆಗಳು,ಅಧ್ಯಯನಗಳು ನಡೆಯುತ್ತಲೇ ಇವೆ.ಇವುಗಳ ಬಗ್ಗೆ ಸೂಕ್ಷ್ಮ ಮಾಹಿತಿ ಪದೆದುಕೊಂಡಲ್ಲಿ ಮಾರಕ ರೋಗಕ್ಕೆ ತುತ್ತಾಗುವುದನ್ನು ತಡೆಯಬಹುದು.
ಹಲವಾರು ಅಧ್ಯಯನಗಳು ಕೆಲವು ಆಹಾರವನ್ನು ತಿನ್ನುವುದರಿಂದ ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಹುದು ಎಂದು ತಿಳಿಸಿವೆ.ನಿಮ್ಮ ಆಹಾರಕ್ಕೆ ಕೆಲವು ಹಳದಿ ಮತ್ತು ಕೇಸರಿ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳನ್ನು ಅಂದರೆ ಬಟರ್ ನಟ್ ಸ್ಕ್ವಾಶ್ ಗಳನ್ನು ಬೆರೆಸಿ ತಿನ್ನುವುದರಿಂದ ಅದರಲ್ಲಿರುವ ಬೀಟಾ ಕ್ಯಾರೋಟಿನ್ ಹೊಂದಿರುವ ಉತ್ಕರ್ಷಣ ನಿರೋಧಕ ಸ್ತನ ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ ಎಂದು ಹೇಳಲಾಗಿದೆ.
ಸ್ತನ ಕ್ಯಾನ್ಸರ್ ಬರುವುದನ್ನು ತಡೆದು ಸ್ತನದ ಆರೋಗ್ಯ ಹೆಚ್ಚಿಸುವ ಬಗ್ಗೆ ನಮಗೆ ತಿಳಿದ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ನೋಡಿ:

ಒಮೆಗಾ 3 ಕೊಬ್ಬಿನಂಶ ಅಗತ್ಯ
ಅಗಸೆ ಬೀಜ,ವಾಲ್ನಟ್,ಕ್ರೇನ್ ಬೆರ್ರಿ ರಸ ಮತ್ತು ಒಮೇಗಾ -3 (ಮೀನು,ಬೆಣ್ಣೆಹಣ್ಣು ಮತ್ತು ಮೊಟ್ಟೆಗಳಲ್ಲಿ ಒಮೆಗಾ - 3 ಇರುತ್ತದೆ)ಇ ವುಗಳು ಸ್ತನ ಕ್ಯಾನ್ಸರ್ ಅನ್ನು ಬರದಂತೆ ತಡೆಯುವ ಗುಣ ಹೊಂದಿದೆ. ಮೆಗ್ನಿಷ್ಯಿಯಂ ಅಂಶ ಹೆಚ್ಚಿರುವ ಆಹಾರಗಳನ್ನು ತಿನ್ನುವುದರಿಂದ ಸ್ತನ ಊದಿಕೊಳ್ಳುವುದು ಮತ್ತು ಜೋತು ಬೀಳುವುದನ್ನು ತಡೆಯಬಹುದು.

ತಪ್ಪಾದ ಬ್ರಾ ಸೈಜ್
ಇದಲ್ಲದೆ ಶೇಖಡಾ 70 ರಷ್ಟು ಮಹಿಳೆಯರು ಸರಿಯಾದ ಬ್ರಾ ಆಯ್ಕೆ ಮಾಡಿಕೊಳ್ಳುವುದಿಲ್ಲ ಇದು ಕೇವಲ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ,ನಿಲುವನ್ನು ಮತ್ತು ಚರ್ಮದ ತುರಿಕೆ,ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತವೆ. ಜೊತೆಗೆ ಸ್ತನಕ್ಕೆ ಹಾನಿ ಉಂಟಾಗಿ ನೋವುಗಳಿಗೂ ಕಾರಣವಾಗುತ್ತದೆ.

ಗರ್ಭಿಣಿಯಾದಾಗ ಸ್ತನದ ಆರೈಕೆ
ಗರ್ಭಿಣಿಯಾದಾಗ,ತೂಕ ಹೆಚ್ಚು ಕಡಿಮೆ ಆದಾಗ ಮತ್ತು ಮುಟ್ಟು ನಿಲ್ಲುವ ಸಮಯದಲ್ಲಿ ಸ್ತನ ಗಾತ್ರ ಬದಲಾವಣೆ ಆಗುತ್ತಿರುತ್ತದೆ.ಆದ್ದರಿಂದ ಸ್ತನದ ಗಾತ್ರವನ್ನು ಆಗಾಗ ಸರಿಯಾಗಿ ಅಳೆಯುವುದು ಸೂಕ್ತ.

ವ್ಯಾಯಾಮ
ವ್ಯಾಯಾಮ ಮಾಡುವುದನ್ನು ರೂಡಿಸಿಕೊಳ್ಳಿ,ಸಂಶೋಧನೆಯ ಪ್ರಕಾರ ವಾರದಲ್ಲಿ 3 ರಿಂದ 4 ತಾಸು ವ್ಯಾಯಾಮ ಮಾಡುವುದರಿಂದ ಸ್ತನ ಕ್ಯಾನ್ಸರ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.ಕೆಲವು ಪ್ರತ್ಯೇಕ ಅಧ್ಯಯನಗಳು ವಾರದ ವ್ಯಾಯಾಮಗಳು ಅನಾರೋಗ್ಯವನ್ನು ಹೆಚ್ಚಿಸಬಹುದು ಎಂದಿದ್ದಾರೆ ಆದಾಗ್ಯೂ ವ್ಯಾಯಾಮ ಮಾಡುವುದರಿಂದ ಕೇವಲ ಅರೋಗ್ಯ ಮಾತ್ರವಲ್ಲ ನಿಮ್ಮ ಸ್ತನವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿಕೊಳ್ಳಬಹುದು.

ಎದೆಯ ವ್ಯಾಯಾಮ
ನೀವು ಎದೆಯ ವ್ಯಾಯಾಮ ಕೇವಲ ಪುರುಷರಿಗೆ ಮಾತ್ರ ಎಂದು ತಿಳಿದಿರಬಹುದು ಆದರೆ ಮಾಹಿತಿ ಪ್ರಕಾರ ಪುಶ್ ಅಪ್,ಬೆಂಚ್ ಪ್ರೆಸ್ ಇವುಗಳು ಸ್ತನದ ಆಕಾರವನ್ನು ಉತ್ತಮಗೊಳಿಸಲು ಸಹಕರಿಸುತ್ತವೆ.ನಿಮ್ಮ ಸ್ತನ ಮತ್ತು ಕತ್ತಿನ ಮೇಲೆ ಫ಼ರ್ಮಿಂಗ್ ಕ್ರೀಂ ಹಚ್ಚುವುದರಿಂದ ನೈಸರ್ಗಿಕವಾಗಿ ಮೇಲೆ ಎತ್ತಿರುವ ಸ್ತನವನ್ನು ಪಡೆಯಲು ಸಹಾಯವಾಗುತ್ತದೆ.

ಕ್ರೀಂ
ಸ್ತನದ ಗಾತ್ರವನ್ನು ಹೆಚ್ಚಿಸಲು ಕ್ರೀಂ ಬಳಸುವುದು ಅಷ್ಟೇನೂ ಗಮನಾರ್ಹವಾದ ಬದಲಾವಣೆ ತರುವುದಿಲ್ಲ ಆದರೆ ಕ್ರೀಂ ಹಚ್ಚಿ ಮಸಾಜ್ ಮಾಡುವುದರಿಂದ ಸ್ತನ ನೆರಿಗೆ ಬೀಳುವುದನ್ನು,ಜೋಲುವುದನ್ನು ತಪ್ಪಿಸಿ ನಿಮ್ಮ ಲುಕ್ ಅನ್ನು ಹೆಚ್ಚಿಸಬಹುದು.

ಡ್ರೆಸ್
ಕುತ್ತಿಗೆಯಿಂದ ಸ್ವಲ್ಪ ಕೆಳಗೆ ಕಾಣುವಂತ ಡ್ರೆಸ್ ಧರಿಸುವುದರಿಂದ ಎದೆಯ ಸೀಳು ಕಾಣುತ್ತದೆ ಮತ್ತು ಈ ರೀತಿ ಮೇಕಪ್ ನಿಂದ ಸ್ತನದ ಗಾತ್ರ ದೊಡ್ದದಿರುವಂತೆ ತೋರಲು ಸಾಧ್ಯ.ನಿಮ್ಮ ಲುಕ್ ಅನ್ನು ಹೆಚ್ಚಿಸಲು ಲಘುವಾಗಿ ಸೀಳು ಕಾಣಿಸುವುದರ ಜೊತೆಗೆ ನೆರಳು ಬೀಳುವಂತ ಡ್ರೆಸ್ ಹಾಕಿದರೆ ಸರಿಯಾದ ಶೇಪ್ ದೊರಕುತ್ತದೆ.ಸ್ತನದ ಮೇಲ್ಭಾಗ ಪೌಡರ್ ಸಿಂಪಡಿಸಿ ಹೊಳೆಯುತ್ತಿರುವಂತೆ ಮಾಡಿ.

ಸ್ತನವನ್ನು ಆಗಾಗ ಚೆಕ್ ಮಾಡಿ
ಸ್ತನ ಕ್ಯಾನ್ಸರ್ ನ ಕುರಿತಾದ ಸರ್ವೇಯ ಪ್ರಕಾರ ಕೇವಲ ಶೇಖಡಾ 35 ರಷ್ಟು ಮಹಿಳೆಯರು ಸ್ತನವನ್ನು ಪ್ರತಿದಿನ ಪರಿಶೀಲಿಸುತ್ತಾರೆ.ಸ್ತನ ಕ್ಯಾನ್ಸರ್ ನಿಂದ ಸಾವು ಕೂಡ ಸಂಭವಿಸಬಹುದು ಆದರೆ ಮೊದಲ ಹಂತದಲ್ಲೇ ಗುರುತಿಸಿದಲ್ಲಿ ಸಂಪೂರ್ಣ ಗುಣಪಡಿಸುವ ಅವಕಾಶವಿದೆ.ಆದ್ದರಿಂದ ಮಹಿಳೆಯರು ಪ್ರತಿ ತಿಂಗಳು ಸ್ತನದ ಗಾತ್ರ,ಬಣ್ಣದ ಬದಲಾವಣೆ,ಸೋರಿಕೆ,ತುರಿಕೆ,ಗಂಟುಗಳು ಇವುಗಳ ಬಗ್ಗೆ ಪರಿಶೀಲಿಸುತ್ತಿರಬೇಕು.ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ಸ್ತನ ಪರಿಶೀಲನೆಗೆ ಸಂಬಂಧ ಪಟ್ಟ ವೆಬ್ ಸೈಟ್ ನಲ್ಲಿ ನೋಡಿ ಅಥವಾ ವೈದ್ಯರೊಂದಿಗೆ ಸಲಹೆ ಪಡೆದು ಪರಿಶೀಲಿಸಿಕೊಳ್ಳಿ.

ಧೂಮಪಾನ ಮಾಡುವುದನ್ನು ಬಿಡಿ
ಧೂಮಪಾನ ದೊಡ್ಡ ರೋಗಗಳನ್ನು ತರಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.ಬ್ರೆಸ್ಟ್ ಕ್ಯಾನ್ಸರ್ ಇದಕ್ಕೆ ಹೊರತಲ್ಲ.ಕ್ಯಾಲಿಫೋರ್ನಿಯ ಅರೋಗ್ಯ ಇಲಾಖೆ ಅಧ್ಯಯನದ ಪ್ರಕಾರ ಧೂಮಪಾನ ಮಾಡುವ ಮಹಿಳೆಯರಲ್ಲಿ ಎಂದೂ ಧೂಮಪಾನ ಮಾಡದ ಮಹಿಳೆಯರಿಗಿಂತ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಖಡಾ 30 ರಷ್ಟು ಅಧಿಕವಾಗಿರುತ್ತದೆ.ಬೇರೊಂದು ಸಂಶೋಧನೆ ಸಿಗರೇಟ್ ಸೇದುವುದರಿಂದ ಕ್ಯಾನ್ಸರ್ ಸಂಭವ ಹೆಚ್ಚು ಎಂದು ತಿಳಿಸಿದೆ.ಆದ್ದರಿಂದ ಧೂಮಪಾನ ಬಿಟ್ಟು ಬಿಡುವುದರಿಂದ ಅನಾರೋಗ್ಯವನ್ನು ತಪ್ಪಿಸಬಹುದು.

ಸನ್ ಸ್ಕ್ರೀನ್ ಲೋಷನ್ ಬಳಸಿ
ನಮ್ಮಲ್ಲಿ ಹೆಚ್ಚು ಜನ ಪ್ರತಿದಿನ ಸನ್ ಸ್ಕ್ರೀನ್ ಲೋಷನ್ ಹಚ್ಚದಿರುವುದು ಚರ್ಮದ ಕ್ಯಾನ್ಸರ್ ಗೆ ಕಾರಣ ಎಂಬುದನ್ನು ತಿಳಿದಿಲ್ಲ.ಸನ್ ಸ್ಕ್ರೀನ್ ಲೋಷನ್ ಹಚ್ಚದಿರುವುದರಿಂದ ಕೇವಲ ಕ್ಯಾನ್ಸರ್ ಅಥವಾ ಸನ್ ಬರ್ನ್ ಮಾತ್ರವಲ್ಲ ,ಸ್ತನ ಅತಿ ಬೇಗ ವಯಸ್ಸಾದಂತೆ ತೋರುತ್ತದೆ.ಈ ರೀತಿ ನೆರಿಗೆ ಬೀಳುವುದನ್ನು ತಡೆಯಲು ಸೂರ್ಯನ ಬಿಸಿಲಿಗೆ ಹೋಗುವಾಗ SPF 15 ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯದಿರಿ.ವರ್ಕ್ ಔಟ್ ಮಾಡುವಾಗ ಸ್ಪೋರ್ಟ್ಸ್ ಬ್ರಾ ಉಪಯೋಗಿಸಲು ಮರೆಯದಿರಿ ಇಲ್ಲದಿದ್ದರೆ ಸ್ತನದಲ್ಲಿ ನೋವುಗಳು ಕೂಡ ಕಾಣಿಸಿಕೊಳ್ಳಬಹುದು.ಅದ್ದರಿಂದ ವ್ಯಾಯಾಮ ಮಾಡುವಾಗ ವ್ಯಾಯಾಮ ಬ್ರಾ ವನ್ನೇ ಉಪಯೋಗಿಸಿ ಸ್ತನಗಳು ಫಿಟ್ ಆಗಿ ಇರುವಂತೆ ನೋಡಿಕೊಳ್ಳಿ.

ನಿಮ್ಮ ನಿಲುವನ್ನು ಸುಧಾರಿಸಿಕೊಳ್ಳಿ
ನಿಮ್ಮ ಸ್ತನ ಜೋತು ಬೀಳದಂತೆ ತಡೆಯುವ ಸುಲಭ ಮಾರ್ಗವೆಂದರೆ ನೀವು ಕುಳಿತುಕೊಳ್ಳುವ ಭಂಗಿಯನ್ನು ಸುಧಾರಿಸಿಕೊಳ್ಳುವುದು.ಈ ರೀತಿ ಮಾಡುವುದರಿಂದ ಎದೆಯ ಸ್ನಾಯುಗಳು ಫಿಟ್ ಆಗಿರುತ್ತವೆ.ನೇರ ನಡಿಗೆ ಮಾಡುವುದರಿಂದ ಎದೆ ಗಾತ್ರ ದೊಡ್ಡದಾಗಿ ಕಾಣುವಂತೆ ಮಾಡುತ್ತದೆ.ನೀವು ಪ್ರತಿದಿನ ಹೇಗೆ ಕುಳಿತುಕೊಳ್ಳುತ್ತೀರಿ ಮತ್ತು ನಡೆದಾಡುತ್ತೀರಿ ಎಂದು ಗಮನಿಸಿ ಮತ್ತು ನಿಮ್ಮ ನಿಲುವನ್ನು ಸುಧಾರಿಸಲು ಯೋಗ ಅಥಾವಾ ಟೈ ಚಿ ಮುಂತಾದ ವ್ಯಾಯಾಮಗಳನ್ನು ಮಾಡಿ.



Click it and Unblock the Notifications