Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಯಾವಾಗ ಡೆಂಗ್ಯೂ ಜ್ವರ ಪ್ರಾಣಕ್ಕೆ ಅಪಾಯಕಾರಿ?
ಡೆಂಗ್ಯೂ, ಹಕ್ಕಿ ಜ್ವರ ಈ ರೀತಿಯ ಕಾಯಿಲೆಗಳು ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಅದರಲ್ಲಿ ಡೆಂಗ್ಯೂ ಕಾಯಿಲೆಯಿಂದ ಹೆಚ್ಚಿನವರು ಸಾವನ್ನಪ್ಪಿದ್ದಾರೆ. ಇತ್ತೀಚಿಗೆ ಪ್ರಸಿದ್ಧ ಹಿಂದಿ ಚಿತ್ರದ ನಿರ್ದೇಶಕ ಯಶ್ ಛೋಪ್ರಾ ಡೆಂಗ್ಯೂ ಕಾಯಿಲೆಯಿಂದ ಸಾವನ್ನಪ್ಪಿ, ಮಾಧ್ಯಮಗಳಲ್ಲಿ ದೊಡ್ಡ ಸುದ್ಧಿಯಾಗಿತ್ತು. ಇದನ್ನೆಲ್ಲಾ ನೋಡಿದಾಗ ಜನಸಾಮಾನ್ಯರಿಗೆ ಡೆಂಗ್ಯೂ ಕಾಯಿಲೆ ಬಂದರೆ ಸಾಯುತ್ತೇವೆ ಎಂಬ ಭೀತಿ ಆವರಿಸಿದೆ.
ಡೆಂಗ್ಯೂ ಅಪಾಯಕಾರಿಯಾದ ಕಾಯಿಲೆಯಾಗಿದ್ದರೂ ಇದು ಬಂದರೆ ಸುಧಾರಿಸಿಕೊಳ್ಳಬಹುದು. ಈ ಜ್ವರದಿಂದ ಸುಧಾರಿಸಿಕೊಳ್ಳಲು ಕನಿಷ್ಠವೆಂದರೂ 10-11 ದಿನಗಳು ಬೇಕಾಗುತ್ತದೆ. ಜ್ವರ ತುಂಬಾ ಜಾಸ್ತಿಯಾದರೆ ಬಾಯಿ, ವಸಡು ಮತ್ತು ಮೂಗಿನಿಂದ ರಕ್ತ ಬರಲಾರಭಿಸುತ್ತದೆ. .
ಈ ಕೆಳಗಿನ ಸಮಸ್ಯೆಗಳಿದ್ದು ಡೆಂಗ್ಯೂ ಕಾಯಿಲೆ ಬಂದರೆ ಬದುಕುಳಿಯುವ ಸಾಧ್ಯತೆ ಕಡಿಮೆ.

* ಡೆಂಗ್ಯೂ ಕಾಯಿಲೆ ಬಂದರೆ ಕಿರುಬಿಲ್ಲೆಗಳ ( ವರ್ಣರಹಿತ ಜೀವದ್ರವ್ಯದ ಪುಟ್ಟ ಬಿಲ್ಲೆಗಳಲ್ಲೊಂದು) ಸಂಖ್ಯೆ ಕಡಿಮೆಯಾಗುತ್ತದೆ. ಇದರ ಪ್ರಮಾಣ ತುಂಬಾ ಕಡಿಮೆಯಾದರೆ ಸಾವು ಬರಬಹುದು. ಆದ್ದರಿಂದ ಡೆಂಗ್ಯೂ ಅಂತ ಗೊತ್ತಾದ ತಕ್ಷಣ ಒಳ್ಳೆಯ ಆಸ್ಪತ್ರೆ ಸೇರಿ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು.
* ಮೂಗು, ಬಾಯಿಯ ವಸಡು ಹಾಗೂ ಗುಪ್ತಾಂಗಗಳಲ್ಲಿ ರಕ್ತ ಸೋರಿಕೆ ಕಂಡು ಬಂದರೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೆ ಅಪಾಯ ಬರಬಹುದು.
* ಜ್ವರ ಬಂದಾಗ ಮನೆ ಮದ್ದು ಮಾಡುತ್ತಾ ಕುಳಿತರೆ, ಡೆಂಗ್ಯೂ ಬಂದಿದೆ ಎಂದು ತಿಳಿಯುವುದಿಲ್ಲ. ಈ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ವ್ಯಕ್ತಿ ಸಾವನ್ನಪ್ಪಬಹುದು. ಆದ್ದರಿಂದ ಜ್ವರ ಬಂದಾಗ ಕೂಡಲೇ ಪರೀಕ್ಷಿಸಿ ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು.
* ಡೆಂಗ್ಯೂ ಕಾಯಿಲೆಗೆ ವಯಸ್ಸಾದಾವರು ಮತ್ತು ಮಕ್ಕಳು ಬೇಗನೆ ತುತ್ತಾಗುತ್ತಾರೆ. ಇವರಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆ ಇರುವುದರಿಂದ ಡೆಂಗ್ಯೂ ಬಂದರೆ ಅಪಾಯಕಾರಿ.ಬೇರೆ ಯಾವುದೋ ಆರೋಗ್ಯದ ಸಮಸ್ಯೆಯಿರುವ ವ್ಯಕ್ತಿಗೆ ಡೆಂಗ್ಯೂ ಬಂದರೆ ಪ್ರಾಣಕ್ಕೆ ಅಪಯ ಉಂಟಾಗಬಹುದು. ಆದ್ದರಿಂದ ಜ್ವರ ಬಂದಾಗ ನಿರ್ಲಕ್ಷ್ಯ ಬೇಡ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
