Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ರಕ್ತ ಶುದ್ಧೀಕರಿಸಲು ನಿಮ್ಮ ಪ್ರಯತ್ನವೂ ಇರಲಿ!
ಇಂದು ವಿಶ್ವ ಪ್ರಕೃತಿ ದಿನ(World Nature Day). ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಸರ್ಗದಲ್ಲಿ ಅನೇಕ ಔಷಧಿಗಳಿವೆ. ಇವತ್ತು ನಾವು ನೈಸರ್ಗಿಕವಾದ ವಿಧಾನದಿಂದ ರಕ್ತಕಣಗಳನ್ನು ಶುದ್ಧವಾಗಿಟ್ಟು, ರಕ್ತ ಹೀನತೆ ಸಮಸ್ಯೆ ಕಾಡದಂತೆ ನೋಡಿಕೊಳ್ಳುವುದು ಹೇಗೆ ಎಂದು ನೋಡೋಣ.
ದೇಹದಲ್ಲಿ ರಕ್ತ ಕಡಿಮೆಯಾದರೆ ನಿಶ್ಯಕ್ತಿ, ತಲೆಸುತ್ತು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುವುದು. ಕಾಯಿಲೆ ಅಥವಾ ಆರೋಗ್ಯಕರವಲ್ಲದ ಆಹಾರಕ್ರಮದಿಂದಾಗಿ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಈ ರೀತಿ ರಕ್ತ ಕಡಿಮೆಯಾದರೆ ರಕ್ತದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಚಿಕಿತ್ಸೆ ಪಡೆಯಬೇಕು, ಆ ಚಿಕಿತ್ಸೆ ಮತ್ತಷ್ಟು ಪರಿಣಾಮಕಾರಿಯಾಗಲು ಈ ಕೆಳಗಿನ ವಿಧಾನಗಳನ್ನು ಪಾಲಿಸಬಹುದು:

ವ್ಯಾಯಾಮ:
ವ್ಯಾಯಾಮ ಮಾಡಿದಾಗ ದೇಹದಲ್ಲಿ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ನಡೆಯಲು ಸಹಕಾರಿಯಾಗುವುದು. ವ್ಯಾಯಾಮ ಮಾಡಿದಾಗ ದೇಹವು ಅಧಿಕ ಆಮ್ಲಜನಕವನ್ನು ತೆಗೆದುಕೊಳ್ಳುವುದರಿಂದ ರಕ್ತ ಕಣಗಳ ಉತ್ಪತ್ತಿ ಹೆಚ್ಚಾಗುವುದು.
ವ್ಯಾಯಾಮದಲ್ಲಿ ನಡೆಯುವ, ಓಡುವ, ಸ್ವಿಮಿಂಗ್, ಪ್ರಾಣಯಾಮ ಹೀಗೆ ಯಾವ ಬಗೆಯ ವ್ಯಾಯಾಮವನ್ನು ಬೇಕಾದರೂ ಮಾಡಬಹುದು.

ಆಹಾರ:
ಬೀಟ್ ರೂಟ್, ಮೊಟ್ಟೆ, ಸೀಬೆಕಾಯಿ, ಚಾಕಲೇಟ್, ಪಾಲಾಕ್ ಹಾಗೂ ಇತರ ಸೊಪ್ಪು, ಕುಂಬಳಕಾಯಿಯ ಬೀಜ, ಆಲೂಗೆಡ್ಡೆ, ದವಸ ಧಾನ್ಯಗಳು, ಮೃದ್ವಂಗಿಗಳು ಇಂತಹ ಆಹಾರಗಳು ರಕ್ತ ಹೀನತೆ ಸಮಸ್ಯೆಯನ್ನು ಪರಿಹರಿಸಲು ತುಂಬಾ ಸಹಾಯಕಾರಿ.

ಮೆದ್ಧಗೂಳಿ ಹಮ್ಬು ಬೇರು(sarsaparilla root):
ಇದರ ಬೇರು ರಕ್ತ ಹೀನತೆ ಸಮಸ್ಯೆಯನ್ನು ಗುಣಪಡಿಸುವಲ್ಲಿ ತುಂಬಾ ಪ್ರಯೋಜನಕಾರಿಯಾರಿಯಾಗಿದೆ. ಇದು ರಕ್ತದಲ್ಲಿರುವ ಹಾನಿಕಾರಕ ಸೂಕ್ಷ್ಮಾಣುಗಳನ್ನು ನಾಶಪಡಿಸಿ ರಕ್ತವನ್ನು ಶುದ್ಧೀಕರಿಸುತ್ತದೆ.

ಲೋಳೆಸರ:
ಲೋಳೆಸರ ಕೂಡ ರಕ್ತವನ್ನು ಶುದ್ಧೀಕರಿಸುವುದರಜೊತೆ ರಕ್ತ ಕಣಗಳ ಉತ್ಪತ್ತಿಗೆ ತುಂಬಾ ಸಹಕಾರಿಯಾಗಿದೆ. ಇದರ ಜ್ಯೂಸ್ ಮಾಡಿ ಕುಡಿಯಿರಿ ರಕ್ತ ಹೆಚ್ಚಾಗುವುದರ ಜೊತೆ ಇನ್ನು ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಬಾಡಿ ಕ್ರೀಮ್:
ಕೆಮಿಕಲ್ ಇರುವ ಬಾಡಿ ಕ್ರೀಮ್ ಹಚ್ಚುವ ಬದಲು ನೈಸರ್ಗಿಕವಾದ ಬಾಡಿಕ್ರೀಮ್ ಹಚ್ಚಬೇಕು

ಏರ್ ಫ್ರೆಶನರ್ ಹಾಗೂ ಸೊಳ್ಳೆ ಕಾಯಿಲ್:
ಈ ಎರಡು ಸಾಧನಗಳಿಂದ ಅನೇಕ ರೀತಿಯ ಅಡ್ಡ ಪರಿಣಾಮ ಉಂಟಾಗುತ್ತದೆ. ರಕ್ತಹೀನತೆ, ಅಸ್ತಮಾ ಕಾಯಿಲೆ ಇರುವವರು ಇವುಗಳನ್ನು ಬಳಸದಿದ್ದರೆ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications