Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಳೆಗಾಲದಲ್ಲಿ ಟಾನ್ಸಿಲ್ ಸಮಸ್ಯೆ ಬಗ್ಗೆ ಎಚ್ಚರ

ಆದರೆ, ಕೆಲವೊಮ್ಮೆ ಈ ಟಾನ್ಸಿಲ್‌ಗಳಿಗೂ ಸೋಂಕು ತಗುಲುವುದು. ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳ ದಾಳಿಯಿಂದಾಗಿ ಟಾನ್ಸಿಲ್‌ಗಳು ಉರಿಯೂತಕ್ಕೊಳಗಾಗಿ, ಊದಿಕೊಳ್ಳುವುದು. ಈ ರೀತಿ ಉಂಟಾದರೆ ಟಾನ್ಸಿಲೈಟಿಸ್ ಎಂದು ಕರೆಯಲಾಗುವುದು. ಟಾನ್ಸಿಲೈಟಿಸ್ ಅಥವಾ ಟಾನ್ಸಿಲ್‌ಗಳ ಉರಿಯೂತವು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಂಡು ಬರುತ್ತದೆ. ಟಾನ್ಸಿಲ್ ಗಳು ಒಮ್ಮೆ ಸೋಂಕಿಗೆ ಒಳಗಾದರೆ ಆಗಾಗ ಸೋಂಕಿಗೆ ಒಳಗಾಗುತ್ತಲೇ ಇರುತ್ತವೆ. ಈ ರೀತಿ ತೊಂದರೆಯಿಂದ ಬಳಲುವವರು ಹವಾಮಾನ ಬದಲಾಗುತ್ತಿದ್ದಂತೆ ತುಂಬಾ ಎಚ್ಚರಿಕೆ ವಹಿಸಬೇಕು, ಅದರಲ್ಲೂ ಮಳೆಗಾಲದಲ್ಲಿ ಕೆಮ್ಮು, ಶೀತ ಅಧಿಕ ಉಂಟಾಗುವುದರಿಂದ ಈ ಟಾನ್ಸಿಲ್ ತೊಂದರೆ ಮರುಗಳಿಸಬಹುದು.
ಟಾನ್ಸಿಲ್ ತೊಂದರೆಯು ಅಡೆನೋವೈರಸ್‌ಗಳು, ಇನ್ ಫ್ಲೂಯೆಂಜಾದಂತಹ ವೈರಸ್ ಗಳಿಂದ ಉಂಟಾಗುವುದು. ಈ ಕಾಯಿಲೆ ಕಾಣಿಸಿಕೊಂಡರೆ ಈ ಕೆಳಗಿನ ಪ್ರಮುಖ ಲಕ್ಷಣಗಳಿಂದ ಗುರುತಿಸಬಹುದು.
ಲಕ್ಷಣಗಳು:
* ಟಾನ್ಸಿಲ್‌ಗಳು ಉರಿ ಊತಕ್ಕೊಳಗಾಗಿ ಬಾತುಕೊಳ್ಳುವುದು.
* ಶ್ವಾಸನಾಳದ ಅಡಚಣೆ ಉಂಟಾದರೆ ನೋವು ಮತ್ತು ಉಸಿರಾಟದ ತೊಂದರೆ
*ಗಂಟಲು ನೋವು (ಗಂಟಲು ಮುಟ್ಟಲೂ ಸಾಧ್ಯವಾಗದಂತಹ ನೋವು)
* ಟಾನ್ಸಿಲ್‌ಗಳು ಕೆಂಪಾಗುವುದು
* ಗಂಟಲಿನಲ್ಲಿ ನೋವಿನಿಂದ ಕೂಡಿದ ಮಚ್ಚೆಗಳು ಅಥವಾ ಹುಣ್ಣುಗಳು.
* ಧ್ವನಿ ವ್ಯತ್ಯಾಸ ಉಂಟಾಗುವುದು ಅಥವಾ ಸ್ವರ ಇಲ್ಲದಾಗುವುದು
* ತಲೆನೋವು.
* ಹಸಿವು ಇಲ್ಲದಿರುವುದು ಮತ್ತು ತಿನ್ನಲು ಸಾಧ್ಯವಾಗುವುದಿಲ್ಲ
* ಕಿವಿನೋವು.
* ಬಾಯಿವಾಸನೆ , ಕುತ್ತಿಗೆ ಹಾಗೂ ದವಡೆಯ ಬಳಿ ಗ್ರಂಥಿಗಳು ಊದಿಕೊಳ್ಳುವುದು.
ಟಾನ್ಸಿಲ್ ಬಂದರೆ ಪಾಲಿಸಬೇಕಾದ ಎಚ್ಚರಿಕೆಗಳು:
1. ಸ್ವಚ್ಛತೆ: ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಊಟವನ್ನು ಮಾಡುವ ಮೊದಲು ಕೈಗಳನ್ನು ಶುಚಿಗೊಳಿಸಬೇಕು. ಶೀತ, ಕೆಮ್ಮು ಇದ್ದರೆ ಸ್ಪೂನ್ ಬಳಸಿ ಊಟ ಮಾಡುವುದು ಒಳ್ಳೆಯದು. ಇತರರು ಕೆಮ್ಮುವಾಗ ಅಥವಾ ಸೀನುವಾಗ ಅವರಿಂದ ಸ್ವಲ್ಪ ದೂರವಿರಬೇಕು.
2. ತಣ್ಣಗಿನ ಪದಾರ್ಥ ತಿನ್ನಬಾರದು: ತಣ್ಣೀರು ಕುಡಿಯುವುದಾಗಲಿ, ತಣ್ಣಗಿನ ಪದಾರ್ಥ ತಿನ್ನುವುದಾಗಲಿ ಮಾಡಬಾರದು.
3. ಹರ್ಬಲ್ ಟೀ: ಟಾನ್ಸಿಲ್ ತೊಂದರೆ ಇರುವವರು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.
4. ಸಿಟ್ರಸ್ ಅಂಶವಿರುವನ್ನು ತಿನ್ನಬಾರದು: ಸಿಟ್ರಸ್ ಅಂಶವಿರುವ ಪದಾರ್ಥಗಳಿಂದ ದೂರವಿರಬೇಕು.
5. ಮದ್ಯಪಾನ ಮತ್ತು ದೂಮಪಾನದಿಂದ ದೂರವಿರಬೇಕು: ಟಾನ್ಸಿಲ್ ತೊಂದರೆ ಇರುವವರು ಮದ್ಯ ಮತ್ತು ಧೂಮಪಾನ ಅಭ್ಯಾಸವಿದ್ದರೆ ಅದನ್ನು ಬಿಡಬೇಕು.
6. ಆಹಾರ: ಟಾನ್ಸಿಲ್ ಬಂದರೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಮೃದುವಾದ ಆಹಾರ ಸೇವನೆ ಮಾಡಬೇಕು.
ಚಿಕಿತ್ಸೆ:
ಈ ರೀತಿ ತೊಂದರೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಈ ರೋಗ ಉಲ್ಬಣಗೊಂಡರೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಿ ಗುಣಪಡಿಸಲಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
