Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಈ ಲಕ್ಷಣಗಳು ಕಾಣಿಸಿದರೆ ಚರ್ಮದ ಕ್ಯಾನ್ಸರ್ ಇರಬಹುದು

ಈ ರೀತಿಯ ಚರ್ಮದ ಕ್ಯಾನ್ಸರ್ ಉಂಟಾದರೆ ತ್ವಚೆಯಲ್ಲಿ ಉಂಟಾಗುವ ಬದಲಾವಣೆಯಿಂದ ಮೊದಲನೇ ಹಂತದಲ್ಲಿಯೇ ಕಂಡು ಹಿಡಿಯಬಹುದು. ಆದರೆ ಬಹಳಷ್ಟು ಜನರು ಆವಾಗ ನಿರ್ಲಕ್ಷಿಸಿ ನಂತರ ಕಾಯಿಲೆ ಹೆಚ್ಚಾದಾಗ ಕಷ್ಟಪಡುತ್ತಾರೆ. ಈ ಕ್ಯಾನ್ಸರ್ ಅನ್ನು ಮೊದಲನೇ ಹಂತದಲ್ಲಿ ಗುರುತಿಸಿದರೆ ಕಾಯಿಲೆಯ ತೀವ್ರತೆಯನ್ನು ಸುಲಭವಾಗಿ ಕಡಿಮೆ ಮಾಡಬಹುದು.
ಈ ಕೆಳಗೆ ಚರ್ಮಕ್ಯಾನ್ಸರ್ ನ ಕೆಲವು ಲಕ್ಷಣಗಳನ್ನು ನೀಡಲಾಗಿದೆ. ತ್ವಚೆಯಲ್ಲಿ ಈ ಕೆಳಗಿನ ಬದಲಾವಣೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಕಂಡು ಪರೀಕ್ಷಿಸಿ ಚರ್ಮದ ಕ್ಯಾನ್ಸರ್ ಇದೆಯೇ? ಇಲ್ಲವೇ? ಎಂದು ತಿಳಿದುಕೊಳ್ಳುವುದು ಒಳ್ಳೆಯದು.
ಮಚ್ಚೆ: ಹುಟ್ಟಿದಾಗ ಇರುವ ಮಚ್ಚೆಗೆ ಹೆದರಬೇಕಾಗಿಲ್ಲ. ಆದರೆ ಇದ್ದಕ್ಕಿದ್ದ ಹಾಗೇ ಮಚ್ಚೆ ಬಂದು, ಆ ಮಚ್ಚೆ ದಪ್ಪಗಾದರೆ ಅಥವಾ ಆ ಭಾಗದಲ್ಲಿ ಏನಾದರೂ ಬದಲಾವಣೆ ಕಾಣಿಸಿದರೆ ನಿರ್ಲಕ್ಷಿಸಬಾರದು. ಮಚ್ಚೆಯಲ್ಲಿ ರಕ್ತ ಸುರಿಯುತ್ತಿದ್ದರೆ ಕೂಡ ಅದು ಕ್ಯಾನ್ಸರ್ ನ ಲಕ್ಷಣವಾಗಿದೆ. ಕೆಲವೊದು ಮಚ್ಚೆ ಹುಟ್ಟಿದಾಗ ಇದ್ದರೂ ನಂತರ ಅದರಲ್ಲಿ ಬದಲಾವಣೆ ಕಂಡರೆ ಆರೋಗ್ಯದ ಕಡೆಗೆ ಸ್ವಲ್ಪ ಗಮನ ಕೊಡುವುದು ಒಳ್ಳೆಯದು.
ಗಡ್ಡೆ: ಚರ್ಮದ ಕ್ಯಾನ್ಸರ್ ಬಂದರೆ ಚರ್ಮ ನೋಡಿದಾಗ ತಿಳಿಯುತ್ತದೆ. ಏಕೆಂದರೆ ಸೂರ್ಯನ ಕಿರಣಗಳು ತಾಗುವ ಚರ್ಮದ ಭಾಗದಲ್ಲಿ ಗಡ್ಡೆಗಳು ಏಳುತ್ತವೆ. ದೇಹದ ಯಾವುದೇ ಭಾಗದಲ್ಲಿ ಗಟ್ಟೆಗಳು ಮೂಡಿದರೂ ಅದರ ವೈದ್ಯರನ್ನು ಕಂಡು ಸಲಹೆಗಳನ್ನು ಪಡೆಯುವುದು ಒಳ್ಳೆಯದು.
ಊದಿಕೊಳ್ಳುವುದು: ಕೆಂಪು ಗುಳ್ಳೆಗಳು ಮತ್ತು ಮೈ ಊದಿಕೊಂಡು ಅದು ಕಡಿಮೆಯಾಗದಿದ್ದರೆ ಇದು ಕೂಡ ಚರ್ಮದ ಕ್ಯಾನ್ಸರ್ ನ ಒಂದು ಲಕ್ಷಣವಾಗಿದೆ.
ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೆ ನಿರ್ಲಕ್ಷಿಸಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
