Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಚಿತ್ರ ಮಾಹಿತಿ: ಸಂಧಿವಾತಕ್ಕೆ ಕಾರಣ ಮತ್ತು ಚಿಕಿತ್ಸೆ
ಸಂಧಿವಾತ ಮೂಳೆ ಸಂಬಂಧಿಯಾದ ಕಾಯಿಲೆಯಾಗಿದೆ. ಇದು ಸಂಧಿಗಳಲ್ಲಿ ಯೂರಿಕ್ ಆಸಿಡ್ ಘನ ರೀತಿಯಲ್ಲಿ ಆಗುವುದರಿಂದ ಈ ರೀತಿಯ ತೊಂದರೆ ಕಂಡು ಬರುತ್ತದೆ. ಸಾಮಾನ್ಯವಾಗಿ ನಾವು ತಿನ್ನುವ ಎಲ್ಲಾ ಆಹಾರಗಳಲ್ಲಿ ಯೂರಿಕ್ ಆಸಿಡ್ ಕಂಡು ಬರುತ್ತದೆ. ದೇಹವು ಈ ಯೂರಿಕ್ ಆಸಿಡ್ ಅನ್ನು ನಿರ್ವಹಿಸುವಲ್ಲಿ ವಿಫಲವಾದರೆ ಸಂಧಿನೋವು, ಕಿಡ್ನಿ ಸಮಸ್ಯೆ ಕಂಡು ಬರುತ್ತದೆ.
ಸಂಧಿವಾತದ ಲಕ್ಷಣಗಳು:
* ಸಂಧಿ ನೋವು ಕಾಣಿಸಿಕೊಳ್ಳುತ್ತದೆ.
* ಹೆಬ್ಬರಳಿನಲ್ಲಿ ನೋವು ಕಂಡುಬರುತ್ತದೆ.
* ಮೊಣಕೈ, ಮಣಿಗಂಟು, ಬೆರಳುಗಳಲ್ಲಿ ನೋವು ಕಂಡು ಬರುತ್ತದೆ.
* ಕೆಲವರಿಗೆ ಹೆಬ್ಬರಳಿಗೆ ಬೆಡ್ ಶೀಟ್ ತಾಗಿದರೂ ನೋವು ಕಂಡು ಬರುತ್ತದೆ.
ಈ ಕಾಯಿಲೆ ಮಧ್ಯವಯಸ್ಸು ದಾಟಿದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲೂ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮದ್ಯ ಸೇವಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ಸಂಧಿನೋವು
ದೇಹದಲ್ಲಿ ಯೂರಿಕ್ ಆಸಿಡ್ ಮೂಳೆಗಳ ಗಂಟುಗಳಲ್ಲಿ ಶೇಖರವಾಗಿ ಸಂಧಿ ನೋವು ಕಾಣಿಸಿಕೊಳ್ಳುತ್ತದೆ.

ಸಂಧಿವಾತಕ್ಕೆ ಕಾರಣಗಳು :
ಒಬೆಸಿಟಿ, ದೇಹದ ತೂಕ ಹೆಚ್ಚಾಗುವುದು, ಅತ್ಯಾಧಿಕ ಮದ್ಯಪಾನ, ಅಧಿಕ ರಕ್ತದೊತ್ತಡ, ಕಿಡ್ನಿಯ ಸಮಸ್ಯೆಗಳು ಇವುಗಳು ಸಂಧಿವಾತಕ್ಕೆ ಮುಖ್ಯ ಕಾರಣಗಳಾಗಿವೆ.

ಸಂಧಿವಾತ ಬಂದ ಬೆರಳುಗಳ ಲಕ್ಷಣ:
ಯೂರಿಕ್ ಆಸಿಡ್ ಸಂಗ್ರಹಣೆಯಾಗಿ ಬೆರಳುಗಳು ಊದಿಕೊಳ್ಳುತ್ತದೆ ಹಾಗೂ ಆ ಭಾಗ ಮುಟ್ಟಿದರೆ ತುಂಬಾ ನೋವಾಗುವುದು.

ವೈದ್ಯಕೀಯ ಪರೀಕ್ಷೆ:
ಸಂಧಿವಾತಕ್ಕೆ ಕಾರಣವಾಗುವ ಯೂರಿಕ್ ಆಸಿಡ್ ನ ಪ್ರಮಾಣ ತಿಳಿಯಲು ರಕ್ತ ಪರೀಕ್ಷೆ ಮಾಡಲಾಗುವುದು. ನಂತರ ಅದರ ಪ್ರಕಾರ ಚುಚ್ಚುಮದ್ದು ಹಾಗೂ ಮಾತ್ರೆಗಳನ್ನು ನೀಡಲಾಗುವುದು.

ಸಂಧಿವಾತ ಬರದಂತೆ ತಡೆಯುವುದು ಹೇಗೆ?
ಸಾಕಷ್ಟು ನೀರು ಕುಡಿಯಬೇಕು. ಮದ್ಯ ಯೂರಿಕ್ ಆಸಿಡ್ ಗಟ್ಟಿಯಾಗುವಂತೆ ಮಾಡುವುದರಿಂದ ಮದ್ಯ ಸೇವಿಸಬಾರದು. ವ್ಯಾಯಾಮ ಮಾಡುವುದು ಕೂಡ ತುಂಬಾ ಒಳ್ಳೆಯದು.

ಸಂಧಿವಾತ ತಡೆಯುವ ಆಹಾರ:
ಹಾಲಿನ ಉತ್ಪನ್ನಗಳು, ಸಮುದ್ರಾಹಾರಗಳು, ಮಾಂಸ ಇವುಗಳನ್ನು ಸೇವಿಸಿದರೆ ಸಂಧಿವಾತ ಬರದಂತೆ ತಡೆಯಬಹುದು. ಇದು ಬಂದರೆ ಔಷಧಿಯನ್ನು ತೆಗೆದುಕೊಂಡರೆ ಕಡಿಮೆಯಾಗುವುದು. ಅಧಿಕ ಕೊಬ್ಬಿನ ಪದಾರ್ಥಗಳಿಂದ ದೂರವಿರಬೇಕು.



Click it and Unblock the Notifications