Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಯೂಸ್ ಅಂಡ್ ಥ್ರೋ ಗ್ಲಾಸ್ ಆರೋಗ್ಯಕ್ಕೆ ಅಪಾಯ

ತುಂಬಾ ಜ್ಯೂಸ್ ಸೆಂಟರ್ ಗಳಲ್ಲಿ ಇಂತಹ ಯೂಸ್ ಅಂಡ್ ಥ್ರೋ ಗ್ಲಾಸ್ ನಲ್ಲಿ ಜ್ಯೂಸ್ ಕೊಡುತ್ತಾರೆ. ಈ ಗ್ಲಾಸ್ ನಲ್ಲಿ ಕುಡಿಯವಾಗ ಅಂಗಡಿಯವ ಚೆನ್ನಾಗಿ ಗ್ಲಾಸ್ ತೊಳೆದಿರಬಹುದಾ ಎಂಬ ಸಂಶಯವಿರುವುದಿಲ್ಲ, ತುಂಬಾ ಪ್ರಯೋಜನಕಾರಿ ಎಂದು ಬಳಸುವ ಈ ಗ್ಲಾಸ್ ನಿಂದ ಆರೋಗ್ಯಕ್ಕೆ ಅಪಾಯವೇ ಹೆಚ್ಚು!
ಸ್ಟೈರೊಫಾಮ್ ಕಪ್ (Styrofoam cups)ಎಂದು ಕರೆಯಲಾಗುವ ಈ ಕಪ್ ಅನ್ನು ಪಾಲಿಸ್ಟೈರಿನ್(polystyrene) ನಿಂದ ತಯಾರಿಸಲಾಗುವುದು. ಉತ್ತಮ ಗುಣಮಟ್ಟದ ಪಾಲಿಸ್ಟೈರಿನ್ ಅನ್ನು ಹೆಲ್ಮೆಟ್ ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸಲು ಬಳಸಲಾಗುವುದು. ಅನೇಕ ಪೇಪರ್ ಕಪ್ ಗಳಿಗೆ ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಅದರ ಸಾಮರ್ಥ್ಯ ಹೆಚ್ಚಿಸಲು ಪಾಲಿಸ್ಟೈರಿನ್ ಲೇಪನ ನೀಡಲಾಗುವುದು.
ಈ ಗ್ಲಾಸ್ ನಲ್ಲಿ ನೀರು ಅಥವಾ ಇತರ ಪಾನೀಯಗಳನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಸಂಶೋಧನಾ ನಡೆಸುತ್ತಿರುವ ರೊಡೇಲ್(Rodale) ಅನ್ನುವ ಅಂತರಾಷ್ಟ್ರೀಯ ಏಜೆನ್ಸಿಯು ಪೇಪರ್ ಗ್ಲಾಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಂಶವನ್ನು ತನ್ನ ಸಂಶೋಧನೆಯಲ್ಲಿ ಹೇಳಿದೆ.
ಈ ಸ್ಟೈರೊಫಾಮ್ ಗ್ಲಾಸ್ ಬಿಸಿ ಮಾಡಿದರೆ ಈ ಗ್ಲಾಸ್ ನಿಂದ ರಾಸಾಯನಿಕಗಳು ಹೊರಬರುತ್ತವೆ. ಆದ್ದರಿಂದ ಈ ಗ್ಲಾಸ್ ಗೆ ಬಿಸಿಯಾದ ನೀರು ಅಥವಾ ಇತರ ವಸ್ತುಗಳನ್ನು ಹಾಕಿದಾಗ ಅದರಲ್ಲಿರುವ ರಾಸಾಯನಿಕಗಳು ಗ್ಲಾಸ್ ನಲ್ಲಿರುವ ಆಹಾರ ವಸ್ತುಗಳಲ್ಲಿ ಸೇರಿ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.
ಪರಿಸರಕ್ಕೆ ಹಾನಿ: ಈ ಪೇಪರ್ ಗ್ಲಾಸ್ ತಯಾರಿಸಲು ಅನೇಕ ಮರಗಳನ್ನು ಕತ್ತರಿಸಲಾಗುವುದು, ಅಲ್ಲದೆ ಇದನ್ನು ಮಣ್ಣಿನಲ್ಲಿ ಹಾಗಾಯೇ ಹಾಕಿದರೆ ಕರಗುವುದಿಲ್ಲ. ಇದನ್ನು ಹೆಚ್ಚಾಗಿ ಮರುಬಳಕೆ ಮಾಡುವುದಿಲ್ಲ, ಆದರೆ ಕೆಲ ಕಡೆಗಳಲ್ಲಿ ಇದನ್ನು ಮರುಬಳಕೆ ಮಾಡುವ ಸೌಲಭ್ಯವಿದ್ದು , ಪೇಪರ್ ಗ್ಲಾಸ್ ಸುಮ್ಮನೆ ಮಣ್ಣಿಗೆ ಬಿಸಾಡದೆ ಮರುಬಳಕೆ ಮಾಡುವ ಕೇಂದ್ರಗಳಿಗೆ ಕೊಡುವುದರಿಂದ ಪರಿಸರ ರಕ್ಷಣೆ ಮಾಡಬಹುದು.
ಆರೋಗ್ಯ ಮತ್ತು ಪರಿಸರದ ರಕ್ಷಣೆ ಮಾಡ ಬಯಸುವವರು ಈ ಗ್ಲಾಸ್ ಬಳಕೆ ಮಾಡುವ ಬದಲು ಸ್ಟೀಲ್ ಅಥವಾ ಗಾಜಿನ ಗ್ಲಾಸ್ ಬಳಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
