Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನೋಮೋಫೋಬಿಯಾ ಕಾಯಿಲೆಯ ಲಕ್ಷಣಗಳು
ನೋಮೋಫೋಬಿಯಾ ಎಂಬ ಕಾಯಿಲೆಯ ಬಗ್ಗೆ ಕೇಳಿದ್ದೀರಾ? 'ಅನೇಕ ಬಗೆಯ ಫೋಬಿಯಾದ ಬಗ್ಗೆ ಕೇಳಿದ್ದೇವೆ, ಇದೇನು ಹೊಸ ಬಗೆಯ ಫೋಬಿಯಾ?' ಎಂದು ನೀವು ಆಶ್ಚರ್ಯದಿಂದ ಕಣ್ಣರಳಿಸಬಹುದು. ಹೌದು ಇದೊಂದು ಆಧುನಿಕ ಜೀವನ ಶೈಲಿಯಿಂದ ಬಂದಂತಹ ಕಾಯಿಲೆಯಾಗಿದೆ.
ಇದು ಮೊಬೈಲ್ ಗೆ ಸಂಬಂಧಿಸಿದ ಕಾಯಿಲೆ ಅಂದರೆ ಮೊಬೈಲ್ ಕಳೆದುಹೋಗಬಹುದು ಎಂಬ ಭಯದಿಂದ ಮೊಬೈಲ್ ಬಿಟ್ಟು ಇರದಿರುವುದು. ಇತ್ತೀಚಿಗೆ ನಡೆಸಿದ ಸಮೀಕ್ಷೆಯಲ್ಲಿ ಶೇ.66ರಷ್ಟು ಜನರಲ್ಲಿ ಈ ನೋಮೋಫೋಬಿಯಾ ಇದೆ ಎಂದು ತಿಳಿದು ಬಂದಿದೆ. ನಿಮಗೂ ಈ ರೀತಿಯ ನೋಮೋಫೋಬಿಯಾ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ನೋಪೋಬಿಯಾದ ಲಕ್ಷಣಗಳು:
1. ಮೊಬೈಲ್ ಕಳೆದುಹೋದಂತೆ ಕನಸ್ಸು ಬೀಳುವುದು: ಯಾರೋ ನಮ್ಮ ಮೊಬೈಲ್ ಕಿತ್ತುಕೊಂಡು ಹೋದಂತೆ ಅಥವಾ ಮೊಬೈಲ್ ಕಳೆದುಹೋದಂತೆ ಕನಸ್ಸು ಬೀಳುವುದು. ಈ ರೀತಿ ಬಿದ್ದರೆ ನಿಮಗೆ ಮೊಬೈಲ್ ಬಿಟ್ಟು ಒಂದು ಕ್ಷಣ ಕಳೆಯುವುದು ಕೂಡ ಕಷ್ಟ ಎಂದು ಅರ್ಥ.
2. ಮೊಬೈಲ್ ಹಿಡಿದುಕೊಂಡೇ ನಿದ್ದೆ ಮಾಡುವುದು: ಕೆಲವರು ಮೊಬೈಲ್ ಅನ್ನು ಕೈಯಲ್ಲಿ ಹಿಡಿದುಕೊಂಡೇ ನಿದ್ದೆ ಮಾಡುತ್ತಾರೆ. ಎಲ್ಲಿ ಮೊಬೈಲ್ ಬೇರೆಯವರು ತೆಗೆದು ಬಿಡುತ್ತಾರೋ ಅಥವಾ ಕಾಣದಾಗುತ್ತದೆಯೋ ಎಂದು ಕೈಯಲ್ಲಿ ಹಿಡಿದುಕೊಂಡೇ ನಿದ್ದೆ ಮಾಡುತ್ತಾರೆ. ಇದು ನೋಮೋಫೋಬಿಯಾದ ಲಕ್ಷಣಗಳಾಗಿವೆ.
3. ಮೊಬೈಲ್ ಕಾಣದಿದ್ದಾಗ ತುಂಬಾ ಒತ್ತಡಕ್ಕೆ ಒಳಗಾಗುವುದು: ಮನೆಯಲ್ಲಿ ಮೊಬೈಲ್ ಒಂದು ಕಡೆ ಇಟ್ಟಿರುತ್ತೀರಾ. ಅದನ್ನು ಬೇರೆಯವರು ತೆಗೆದು ಬೇರೆ ಕಡೆ ಇಟ್ಟಿರುತ್ತಾರೆ. ನೀವು ನೋಡಿದಾಗ ಮೊಬೈಲ್ ಕಾಣುವುದಿಲ್ಲ. ಆಗ ತುಂಬಾ ಗೊಂದಲ ಹಾಗೂ ಟೆನ್ಷನ್ ಗೆ ಒಳಗಾಗುವುದು. ಈ ರೀತಿ ಇದ್ದರೆ ಮೊಬೈಲ್ ಕಳೆದು ಹೋಗಬಹುದೆಂಬ ಭಯವಿದೆ ನಿಮ್ಮನ್ನು ಆವರಿಸಿಕೊಂಡಿರುತ್ತಾರೆ.
4. ಬಾತ್ ರೂಂಗೂ ಮೊಬೈಲ್ ತೆಗೆದುಕೊಂಡು ಹೋಗುವುದು: ಯಾರಾದರೂ ನನ್ನ ಮೊಬೈಲ್ ಅನ್ನು ತೆಗೆದು ನೋಡುತ್ತಾರೆ ಅಥವಾ ಮೊಬೈಲ್ ಜೊತೆಯಲ್ಲಿಯೇ ಇರಲಿ ಯಾರಾದದರೂ ಕಾಲ್ ಮಾಡಬಹುದು ಎಂದು ಸ್ನಾನಕ್ಕೆ ಹೋಗುವಾಗಲೂ ಜೊತೆಗೆ ತೆಗೆದುಕೊಂಡು ಹೋಗುವುದು ಮಾಡಿದರೆ ನಿಮಗೆ ಮೊಬೈಲ್ ಬಗ್ಗೆ ಯೋಚಿಸಿ ತುಂಬಾ ಭಯ ಪಡುತ್ತೀರಿ ಎಂದು ಅರ್ಥ.
5. ಎರಡು ಮೊಬೈಲ್ ಇಟ್ಟುಕೊಳ್ಳುವುದು: ಹೆಚ್ಚಿನವರು ಎರಡು ಮೊಬೈಲ್ ಅನ್ನು ಇಟ್ಟುಕೊಂಡಿರುತ್ತಾರೆ. ಒಂದು ಕಳೆದು ಹೋದರೆ ಮತ್ತೊಂದು ಇರುತ್ತದೆ ಎಂಬ ಧೈರ್ಯಕ್ಕಾಗಿಯೂ ಮೊಬೈಲ್ ಇಟ್ಟುಕೊಳ್ಳುತ್ತಾರೆ. ಇದು ಮೊಬೈಲ್ ಬಗ್ಗೆ ಅರ್ಥವಿಲ್ಲದ ಭಯವಾಗಿದೆ.
6. ಬ್ಯಾಟರಿ ಕಡಿಮೆಯಾದರೆ ಮೂಡ್ ಅಪ್ ಸೆಟ್ : ಹೊರಗಡೆ ಹೋಗಿರುತ್ತೀರಾ, ಮೊಬೈಲ್ ನಲ್ಲಿ ಚಾರ್ಜ್ ಕಡಿಮೆಯಾಗಿರುತ್ತದೆ. ಆಗ ಮೊಬೈಲ್ ನಲ್ಲಿ ಚಾರ್ಜ್ ಇಲ್ಲ, ಯಾರಾದರೂ ಕಾಲ್ ಮಾಡಿದರೆ ಮಾತನಾಡುವುದು ಹೇಗೆ ಎಂದು ವಿನಾಕಾರಣ ಅಪ್ ಸೆಟ್ ಆಗುವಿರಿ. ಇದು ಕೂಡ ಒಂದು ರೀತಿಯ ಫೋಬಿಯಾ ಎಂದು ಸಮೀಕ್ಷೆಯೂ ಹೇಳುತ್ತದೆ.
7. ಫ್ಲೈಟ್ ಮೂಡ್: ವಿಮಾನದಿಂದ ಇಳಿದ ತಕ್ಷಣ ಒಂದು ನಿಮಿಷ ಸುಧಾರಿಸಿಕೊಳ್ಳದೆ ಮೊಬೈಲ್ ಸ್ವಿಚ್ ಆನ್ ಮಾಡುವ ವ್ಯಕ್ತಿ ನೀವಾಗಿದ್ದರೆ ನಿಮಗೆ ನೋಮೋಫೋಬಿಯಾ ಅಂದರೆ ನಿಮಗೆ ಮೊಬೈಲ್ ಇಲ್ಲದೆ ಇರುವುದು ಕಷ್ಟ ಎಂದು ಅರ್ಥ.
ಮೊಬೈಲ್ ನಮ್ಮ ದಿನನಿತ್ಯದ ಜೀವನಕ್ಕೆ ಅವಶ್ಯಕವಾದ ವಸ್ತುವಾಗಿದೆ. ಆದರೆ ಅದನ್ನು ಮಿತಿಯಲ್ಲಿ ಬಳಸಬೇಕು, ಮೊಬೈಲ್ ಇಲ್ಲದೆ ಇರುವುದು ಕಷ್ಟ ಅನ್ನುವಷ್ಟು ಅದನ್ನು ಬಳಸಲು ಹೋಗಬೇಡಿ, ಹಾಗೂ ಅದು ಕಳೆದುಹೋಗಬಹುದೆಂಬ ಭಯ ನಿಮಗೆ ಮಾನಸಿಕ ಒತ್ತಡ ತರುವುದರಿಂದ ಆ ಭಯ ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
