Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾಯಿಯ ಸ್ವಾಸ್ಥ್ಯಕ್ಕಾಗಿ ಉತ್ತಮವಾದ ಮನೆ ಮದ್ದು

ಬಾಯಿ ದುರ್ವಾಸನೆ ತಡೆಯಲು ಮನೆ ಮದ್ದು:
1. ಆಗಾಗ ಪಾಲಾಕ್ ಸೊಪ್ಪನ್ನು ಅಗೆಯುತ್ತಾ ಇದ್ದರೆ ಬಾಯಿ ದುರ್ವಾಸನೆ ಬೀರುವುದಿಲ್ಲ.
2. ಬೆಳಗ್ಗೆ ಹಲ್ಲುಜ್ಜಿದ ಬಳಿಕ ಒಂದು ತುಂಡು ಈರುಳ್ಳಿಯನ್ನು ತೆಗೆದು 3-4 ನಿಮಿಷ ಚೆನ್ನಾಗಿ ಅಗೆಯಬೇಕು. ಈ ರೀತಿ ಮಾಡಿದರೆ ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ನಂತರ ಈರುಳ್ಳಿ ವಾಸನೆಯನ್ನು ಹೋಗಲಾಡಿಸಲು ಬಾಯಿಗೆ ನೀರು ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು.
3. ಕ್ಯಾಲ್ಸಿಯಂ ಮತ್ತು ಖನಿಜಾಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.
4. ಊಟವಾದ ನಂತರ 2 ಹನಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಒಂದು ಲೋಟ ನೀರಿಗೆ ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು. ಈ ರೀತಿ ಮಾಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ.
5. ನಿಂಬೆ ಹಣ್ಣಿನ ಒಂದು ತುಂಡನ್ನು ಪ್ರತಿದಿನ ಸಿಪ್ಪೆ ಸಹಿತ ತಿನ್ನುತ್ತಾ ಬಂದರೆ ಬಾಯಿ ಸುರ್ವಾಸನೆ ಬರದಂತೆ ತಡೆಯಬಹುದು.
6. ಕೊತ್ತಂಬರಿ ಸೊಪ್ಪನ್ನು ಆಗಾಗ ಅಗೆಯುತ್ತಿದ್ದರೆ ಬಾಯಿ ದುರ್ನಾತ ಬೀರದಂತೆ ತಡೆಯಬಹುದು.
7. ಬಿಸಿ ನೀರಿಗೆ ಸ್ವಲ್ಪ ನಿಂಬೆ ಮತ್ತು ಶುಂಠಿ ರಸ ಹಾಕಿ ಮಿಶ್ರ ಮಾಡಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ
8. ಊಟದ ನಂತರ ಸ್ವಲ್ಪ ಮೆಂತೆ ತಿನ್ನುವುದು ಒಳ್ಳೆಯದು.
9. ಆಗಾಗ ನೀರು ಕುಡಿಯುತ್ತಾ ಇರಬೇಕು.
ಹಲ್ಲು ನೋವಿನ ಸಮಸ್ಯೆಯಿದ್ದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
1. ಒಂದು ಬೆಳ್ಳುಳ್ಳಿ ಎಸಳು ಜೊತೆ ಒಂದು ಕಲ್ಲುಪ್ಪು ಹಾಕಿ ಅದನ್ನು ನೋವು ಇರುವ ಕಡೆ ಇಟ್ಟರೆ ನೋವು ಕಡಿಮೆಯಾಗುವುದು.
2. ವೀಟ್ ಗ್ರಾಸ್ ಜ್ಯೂಸ್ ಕುಡಿದರೆ ಹಲ್ಲು ನೋವು ಕಡಿಮೆಯಾಗುವುದು.
ಈ ಸಲಹೆಗಳನ್ನು ಪಾಲಿಸಿದರೆ ಹಲ್ಲಿನಲ್ಲಿ ಯಾವುದೇ ಹುಳುಕು ಉಂಟಾಗುವುದಿಲ್ಲ, ಬಾಯಿ ಕೂಡ ದುರ್ವಾಸನೆ ಬೀರುವುದಿಲ್ಲ ಆದ್ದರಿಂದ ಯಾವುದೇ ದಂತ ವೈದ್ಯರನ್ನು ಭೇಟಿ ಆಗಬೇಕಾದ ಪರಿಸ್ಥಿತಿ ಉಂಟಾಗುವುದಿಲ್ಲ. ಹಲ್ಲಿನ ಸಂರಕ್ಷಣೆಗೆ ನಿಮಗೆ ಗೊತ್ತಿರುವ ಮನೆ ಮದ್ದು ಬರೆದು ಕಳುಹಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
