Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅನಿಯಮಿತ ಮುಟ್ಟಿನ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಸಲ್ಲದು

ಈ ತಿಂಗಳು ಮುಟ್ಟಾದ ನಂತರ ಮುಂದಿನ ಬಾರಿಯ ಮುಟ್ಟಿಗೆ 22 ದಿನ ಮತ್ತೆ ಕೆಲವರಲ್ಲಿ 36 ದಿನಗಳ ವ್ಯತ್ಯಾಸವಿರುತ್ತದೆ. ಈ ವ್ಯತ್ಯಾಸವು ದೇಹದಲ್ಲಿರುವ ಹಾರ್ಮೋನ್ ಗಳನ್ನು ಅವಲಂಭಿಸಿದೆ. ಆದರೆ ಮತ್ತೆ ಕೆಲವರಿಗೆ 15 ದಿನಕ್ಕೊಮ್ಮೆ ಮುಟ್ಟಾಗುವುದು. ಈ ರೀತಿ ಉಂಟಾದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಂಡು ಚಿಕಿತ್ಸೆಯನ್ನು ಪಡೆಯಬೇಕು. ಇಲ್ಲದಿದ್ದರೆ ಅದು ಮುಂದೆ ಬೇರೆ ರೀತಿಯ ಸಮಸ್ಯೆಗಳನ್ನು ತರಬಹುದು.
ಋತುಸ್ರಾವವನ್ನು ಲೆಕ್ಕ ಇಡುವುದು ಹೇಗೆ?
ಮುಟ್ಟಾದ ದಿನದಿಂದ ಮುಂದಿನ ಬಾರಿ ಋತುಸ್ರಾವ ಪ್ರಾರಂಭವಾಗುವ ದಿನದವರೆಗೆ ಲೆಕ್ಕ ಇಟ್ಟುಕೊಳ್ಳಬೇಕು. ಆರೋಗ್ಯವಂತ ಮಹಿಳೆಯರಿಗಾದರೆ ಮೇಲೆ ಹೇಳಿದಂತೆ 22 ದಿನಗಳ ವ್ಯತ್ಯಾಸವಿರುತ್ತದೆ. ಎರಡು ದಿನಗಳು ಹೆಚ್ಚು ಕಡಿಮೆ ಆಗಬಹುದು. ನಿಮ್ಮ ಮಾಸಿಕ ಋತುಚಕ್ರ ನಿಯಮಿತವಾಗಿದೆಯೇ ಎಂದು ತಿಳಿಯಲು ಮುಟ್ಟಾದ ದಿನದಂದು ಕ್ಯಾಲೆಂಟರ್ ನಲ್ಲಿ ಗುರುತು ಹಾಕಿಕೊಳ್ಳಬೇಕು. ಮುಂದಿನ ತಿಂಗಳು ಮುಟ್ಟಾದ ನಂತರ ಆ ದಿನವನ್ನು ಕ್ಯಾಲೆಂಡರ್ ನಲ್ಲಿ ಗುರುತು ಹಾಕಬೇಕು.ಈ ರೀತಿ 6 ತಿಂಗಳವರೆಗೆ ಮಾಡಬೇಕು.
ಉದಾಹರಣೆಗೆ ಜೂನ್ ತಿಂಗಳಿನಲ್ಲಿ ಋತುಸ್ರಾವ ಪ್ರಾರಂಭವಾದ ದಿನವನ್ನು ಕ್ಯಾಲೆಂಡರ್ ನಲ್ಲಿ ಗುರುತು ಹಾಕಿಕೊಳ್ಳಬೇಕು. ನಂತರ ಜುಲೈ ತಿಂಗಳಿನಲ್ಲಿ ಯಾವ ದಿನ ಮುಟ್ಟಾಗುತ್ತಾರೊ ಆ ದಿನವನ್ನು ಗುರುತು ಹಾಕಬೇಕು. ನಂತರ ಆ ಎರಡು ದಿನಾಂಕಗಳನ್ನು ತಾಳೆ ಹಾಕಬೇಕು. ಜೂನ್ 1 ಕ್ಕೆ ಮುಟ್ಟಾಗಿದ್ದರೆ ಮುಂದಿನ ಬಾರಿ ಜೂನ್ 28 ಕ್ಕೆ ಅಥವಾ ಜುಲೈ 1ರಿಂದ 3ರ ಒಳಗೆ ಆಗಬೇಕು. ಆದರೆ ಈ ಎರಡು ಮುಟ್ಟಿನ ದಿನಾಂಕಗಳ ನಡುವೆ ತುಂಬಾ ವ್ಯತ್ಯಾಸ ಕಂಡು ಬಂದರೆ ಮುಂದಿನ ತಿಂಗಳು ಕೂಡ ಇದೇ ರೀತಿ ಪರೀಕ್ಷಿಸಿ ನೋಡಿ. ಆದರೆ ಮುಂದೆ ಕೂಡ ಹಿಂದೆ ಮುಟ್ಟಾದ ದಿನಾಂಕಕ್ಕಿಂತ ತುಂಬಾ ವಿಳಂಬವಾಗಿ ಮುಟ್ಟಾದರೆ ಅಥವಾ ಅನಿನಿಯಮಿತ ಮುಟ್ಟು ಉಂಟಾದರೆ ದೇಹದಲ್ಲಿ ಹಾರ್ಮೋನ್ ಗಳಲ್ಲಿ ಏರುಪೇರಾಗಿದೆ ಎಂದು ಅರ್ಥ.
ಮುಟ್ಟಿನ ಸಮಯ ಹತ್ತಿರ ಬರುತ್ತಿದ್ದ ಹಾಗೆ ದೇಹದಿಂದ ಬಿಳುಪು ಬರಲಾರಂಭಿಸುತ್ತದೆ. ಕೆಲವರಿಗೆ ತುಂಬಾ ಬಿಳುಪು ಹೋದರೆ ಮತ್ತೆ ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದಕ್ಕಾಗಿ ಭಯಪಡಬೇಕಾದ ಅಗತ್ಯವಿಲ್ಲ, ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಈ ರೀತಿ ಉಂಟಾಗುತ್ತದೆ.
ಆದರೆ ಕೆಲವರಿಗೆ ಮುಟ್ಟಿನ ದಿನದಲ್ಲಿ ತುಂಬಾ ವ್ಯತ್ಯಾಸ ಅದರೆ ಜೂನ್ ತಿಂಗಳ ಮೊದಲ ವಾರದಲ್ಲಿ ಮುಟ್ಟಾಗಿದ್ದರೆ ನಂತರ ಮುಟ್ಟಿನ ಅವಧಿ ಜುಲೈ ಕೊನೆಯ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಉಂಟಾದರೆ ನಿಮಗೆ ಅನಿನಿಯಮಿತ ಮುಟ್ಟಿನ ಸಮಸ್ಯೆ ಇದ್ದು, ವೈದ್ಯರನ್ನು ಕಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.
ಒಬೆಸಿಟಿ, ಕಾಯಿಲೆ, ರಕ್ತಹೀನತೆ ಮುಂತಾದ ಸಮಸ್ಯೆ ಇರುವವರಲ್ಲಿ ಈ ರೀತಿಯ ಅನಿನಿಯಮಿತ ಮುಟ್ಟಿನ ಸಮಸ್ಯೆ ಕಂಡು ಬರುತ್ತದೆ. ಮಹಿಳೆಯರು ಆರೋಗ್ಯವಂತರಾಗಿರಲು ನಿಯಮಿತ ಮುಟ್ಟು ಕೂಡ ಪ್ರಮುಖವಾದ ಅಂಶವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
