Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೈನಸ್ ಸಮಸ್ಯೆಗೆ ಪರಿಣಾಮಕಾರಿಯಾದ ಮನೆಮದ್ದು

ಸೈನಸ್ ಗೆ ಮನೆಮದ್ದು:
ಆಪಲ್ ಸೈಡರ್ ವಿನಿಗರ್: ಆಪಲ್ ಸೈಡರ್ ವಿನಿಗರ್ ಸೈನಸ್ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ. ಶೀತ, ಮೂಗು ತುರಿಸುವುದು ಮುಂತಾದ ಲಕ್ಷಣಗಳು ಕಾಣಿಸಿಕೊಂಡಾಗ ಇದನ್ನು ಟಾನಿಕ್ ರೀತಿ ತೆಗೆದುಕೊಂಡರೆ ಅಲರ್ಜಿ ಹೆಚ್ಚಾಗುವುದಿಲ್ಲ, ಇದರಿಂದ ಸೈನಸ್ ಸಮಸ್ಯೆ ನಿವಾರಣೆಯಾಗುವುದು. ವಿನಿಗರ್ ಅನ್ನು ಈ ರೀತಿ ಸೇವಿಸಿ:
* ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ವಿನಿಗರ್ ಹಾಕಿ ಪ್ರತಿನಿತ್ಯ ಕುಡಿದರೆ ಒಳ್ಳೆಯದು.
* ಒಂದು ಚಮಚ ವಿನಿಗರ್ ಅನ್ನು ಸಲಾಡ್ ಜೊತೆ ಹಾಕಿ ಬೇಕಾದರೆ ತಿನ್ನಬಹುದು.
ಅಲ್ಲದೆ ಈ ಕೆಳಗಿನ ವಿಧಾನಗಳನ್ನು ಕೂಡ ಬಳಸಬಹುದು:
* ಜೀರಿಗೆ: ಕಪ್ಪು ಜೀರಿಗೆಯನ್ನು ತೆಳುಬಟ್ಟೆಗೆ ಹಾಕಿ ಕಟ್ಟಿ ಅದನ್ನು ಮೂಗಿನ ಬಳಿ ಇಟ್ಟುಕೊಂಡು ಜೋರಾಗಿ ಉಸಿರಾಡಿದರೆ ಉಸಿರಾಟ ಮುಕ್ತವಾಗುತ್ತದೆ.
* ನೀಲಗಿರಿ ತೈಲ: ಬಿಸಿ ನೀರಿಗೆ ಕೆಲವು ಹನಿ ನೀಲಗಿರಿ ತೈಲ ಹಾಕಿ ಅದರ ಆವಿಯನ್ನು ತೆಗೆದುಕೊಂಡರೆ ಸೈನಸ್ ನಿಂದ ರಿಲೀಫ್ ನೀಡುತ್ತೆ.
* ಆಲಿವ್ ಎಣ್ಣೆ: ಮೂಗು ಕಟ್ಟಿದಂತಿದ್ದರೆ ನಿಮ್ಮ ಮೂಗಿನ ಮತ್ತು ಕಣ್ಣಿನ ಸುತ್ತ ಆಲಿವ್ ಎಣ್ಣೆ ಹಚ್ಚಿಕೊಳ್ಳಿ.
* ಈರುಳ್ಳಿ, ಬೆಳ್ಳುಳ್ಳಿ: ಸೈನಸ್ ಸಮಸ್ಯೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತುಂಬಾ ಪರಿಣಾಮಕಾರಿ ಎನ್ನಲಾಗಿದೆ. ನಿಮ್ಮ ಆಹಾರದಲ್ಲಿ ಇವುಗಳನ್ನು ಹೆಚ್ಚು ಬಳಸಿದರೆ ಉತ್ತಮ.
* ಕ್ಯಾರೆಟ್: ಕ್ಯಾರೆಟ್ ಜ್ಯೂಸ್ ಸೇವನೆ ಸೈನಸ್ ಕಡಿಮೆಗೊಳಿಸುತ್ತದೆ ಎನ್ನಲಾಗಿದೆ.
* ಮೆಂತ್ಯೆ ಕಾಳು: ಮೆಂತ್ಯೆ ಕಾಳು ಕೂಡ ಸೈನಸ್ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಒಂದು ಚಮಚ ಮೆಂತ್ಯೆಯನ್ನು 250 ಮಿಲಿ ನೀರಿನೊಂದಿಗೆ ಬೆರೆಸಿ ಅದು ಅರ್ಧವಾಗುವವರೆಗೂ ಕುದಿಸಿ ಸೇವಿಸಿದರೆ ಒಳ್ಳೆಯದು. ಇದು ಸೈನಸ್ ನಿಂದ ತಗುಲುವ ಜ್ವರಕ್ಕೂ ಪರಿಹಾರ ನೀಡಿ, ದೇಹದಿಂದ ವಿಷಕಾರಿ ಅಂಶವನ್ನು ತೊಲಗಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
