Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಒಳ್ಳೆಯ ಅಭ್ಯಾಸಗಳು ಕೂಡ ಅನಾರೋಗ್ಯಕರವಾಗಬಹುದೇ?
ನಮಗೆ ಯಾವುದು ಒಳ್ಳೆಯದು? ಯಾವುದು ಕೆಟ್ಟದು? ಎಂಬ ಪರಿಜ್ಞಾನವಿದ್ದೇ ಇರುತ್ತದೆ. ಕೆಲವೊಮ್ಮೆ ಒಳ್ಳೆಯದು ಎಂದು ನಂಬಿ ಮಾಡುವ ಕೆಲಸಗಳಿಂದ ಹಾನಿ ಉಂಟಾದರೆ ಉಂಟಾದರೆ ಖಂಡಿತ ಅಚ್ಚರಿ ಆಗುತ್ತದೆ ಅಲ್ಲವೇ?
ಹೌದು, ದಿನನಿತ್ಯ ನಾವು ಮಾಡುವಂತಹ ಅನೇಕ ವಿಷಯಗಳು ಉದಾಹರಣೆಗೆ ಹಲ್ಲುಜ್ಜುವುದು, ಕ್ಲೀನಿಂಗ್, ನೀರು ಕುಡಿಯುವುದು ಇಂತಹ ವಿಷಯಗಳನ್ನು ಒಳ್ಳೆಯದೆಂದು ಮಾಡುತ್ತೇವೆ, ಆದರೆ ಅವುಗಳಿಂದ ಕೂಡಹಾನಿ ಉಂಟಾಗಬಹುದೆಂದು ಎಂದು ಹೇಳಿದರೆ ನಂಬುತ್ತಿರಾ? ನಂಬಲು ಸ್ವಲ್ಪ ಕಷ್ಟವಲ್ಲವೇ?
ಆದರೆ ನಂಬಲೇಬೇಕು, ಏಕೆಂದರೆ ಯಾವುದೇ ವಿಷಯವನ್ನು ಒಳ್ಳೆಯದೆಂದು ಅತಿಯಾಗಿ ಮಾಡಿದರೆ ಅದರಿಂದ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಮನುಷ್ಯನ ಆರೋಗ್ಯಕ್ಕೆ ನಿದ್ದೆ ಮುಖ್ಯ, ಆದರೆ ಅತೀಯಾದ ನಿದ್ದೆ ಮಾಡಿದರೆ ಆಲಸ್ಯ, ತಲೆನೋವು, ಬೊಜ್ಜು ಮುಂತಾದ ತೊಂದರೆ ಉಂಟಾಗುವುದು.
ಈ ಲೇಖನದಲ್ಲಿ ನಮ್ಮ ದಿನನಿತ್ಯದ ಜೀವನದಲ್ಲಿ ಪಾಲಿಸಲೇಬೇಕಾದ ಕೆಲವೊಂದು ಒಳ್ಳೆಯ ಅಭ್ಯಾಸಗಳು ಹೇಗೆ ಹಾನಿಯನ್ನು ಉಂಟುಮಾಡುತ್ತದೆ ಎಂದು ವಿವರಿಸಲಾಗಿದೆ ನೋಡಿ:

ಹಲ್ಲುಜ್ಜುವುದು:
ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಒಳ್ಳೆಯದು. ಅದೇ ಕೆಲವರಿಗೆ ಆಗಾಗ ಹಲ್ಲುಜ್ಜುವ ಅಭ್ಯಾಸವಿರುತ್ತದೆ. ಆಗಾಗ ಹಲ್ಲುಜ್ಜಿದರೆ ಹಲ್ಲು ಸವಿಯುವುದು ಹಾಗೂ ಹಲ್ಲುಗಳು ತುಂಬಾ ಸೂಕ್ಷ್ಮವಾಗುವುದು.

ವಿಟಮಿನ್ ಮಾತ್ರೆಗಳು:
ವಿಟಮಿನ್ ಗಳ ಕೊರತೆ ಉಂಟಾದರೆ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ವಿಟಮಿನ್ ಮಾತ್ರೆಗಳನ್ನು ಒಳ್ಳೆಯದೆಂದು ಭಾವಿಸಿ ಪ್ರತಿನಿತ್ಯ ತೆಗೆದುಕೊಂಡರೆ ಬೇಧಿ ತ್ವಚೆ ಅಲರ್ಜಿ, ಅಜೀರ್ಣ ಮುಂತಾದ ಸಮಸ್ಯೆ ಕಂಡು ಬರುವುದು.

ಮನೆ ಶುಚಿ ಮಾಡುವುದು:
ಆರೋಗ್ಯವಾಗಿರಲು ಮನೆ ಹಾಗೂ ಸುತ್ತ ಮುತ್ತಲಿನ ಪ್ರದೇಶವನ್ನು ಶುಚಿಯಾಗಿಡಬೇಕು. ಅದೇ ವಿಪರೀತ ಮನೆ ಶುಚಿ ಮಾಡುವ ಅಭ್ಯಾಸ ಇದೆಯೆಲ್ಲಾ ಅದು ಒಳ್ಳೆಯದಲ್ಲ. ಕಸವಿಲ್ಲದಿದ್ದರೂ ಆಗಾಗ ಗುಡಿಸುವುದು ಕೈಯನ್ನು ಆಗಾಗ ತೊಳೆಯುವುದು, ತೊಳೆದ ಪಾತ್ರೆಗಳನ್ನು ಪದೇ-ಪದೇ ತೊಳೆದು ಇಡುವುದು ಈ ರೀತಿಯ ಅತಿಯಾದ ಶುಚಿ ಒಂದು ಬಗೆಯ ಮಾನಸಿಕ ಕಾಯಿಲೆ ಆಗಿದೆ.

ನೋವು ನಿವಾರಕ ಔಷಧಿಗಳು:
ಮೈಕೈ ನೋವು ಇದೆಯೆಂದು ಆಗಾಗ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ಇದ್ದರೆ ಆ ಮಾತ್ರೆಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುವುದು.

ನಿದ್ದೆ:
ಆರೋಗ್ಯವಾಗಿರಲು ದಿನದಲ್ಲಿ 6-8 ಗಂಟೆ ನಿದ್ದೆ ಮಾಡಬೇಕು. ನಿದ್ದೆ ಹೆಚ್ಚಾದರೆ ಆಲಸ್ಯ, ತಲೆನೋವು, ಮಂಕು ಮುಂತಾದ ಸಮಸ್ಯೆ ಕಂಡುಬರುವುದು

ನೀರು ಕುಡಿಯುವುದು:
ದಿನಕ್ಕೆ 8-10 ಗ್ಲಾಸ್ ಮಾತ್ರ ನೀರು ಕುಡಿಯಬೇಕು. ಮಿತಿಯಾಗಿ ನೀರು ಕುಡಿದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾಗುವುದು, ಇದರಿಂದ ತಲೆ ಸುತ್ತು, ವಾಂತಿ ಮುಂತಾದ ಸಮಸ್ಯೆ ಕಂಡುಬರುವುದು ಅಲ್ಲದೆ ತುಂಬಾ ನೀರು ಕುಡಿದರೆ ಕಿಡ್ನಿಯ ಮೇಲೆ ಹೆಚ್ಚು ಒತ್ತಡ ಬೀರುವುದರಿಂದ ಅಷ್ಟು ಒಳ್ಳೆಯದಲ್ಲ.



Click it and Unblock the Notifications
