Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು 5 ಸಲಹೆಗಳು
ಚಳಿಗಾಲದಲ್ಲಿ ಜ್ವರ, ಗೆಂಟಲು ಕೆರತ ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ. ಈ ರೀತಿಯ ತೊಂದರೆಗಳು ವಾತಾವರಣದ ವ್ಯತ್ಯಾಸದಿಂದಾಗಿ ಉಂಟಾಗುತ್ತವೆ. ಜ್ವರ, ಶೀತ ಬಂದರೆ ಒಬ್ಬರಿಂದ-ಮತ್ತೊಬ್ಬರಿಗೆ ಬೇಗನೆ ಹರಡುತ್ತದೆ. ಕಾಯಿಲೆ ಬಂದು ಕಷ್ಟ ಪಡುವ ಬದಲು ಅದು ಬರದಂತೆ ಮುಂಜಾಗ್ರತೆಯ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.
ಅದಕ್ಕಾಗಿ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತರಬೇಕು. ಆಹಾರಕ್ರಮ ಹಾಗೂ ಉಡುಗೆ-ತೊಡುಗೆಗಳನ್ನು ಬದಲಾಯಿಸಬೇಕು. ಬಿಸಿ-ಬಿಸಿಯಿರುವ ಆಹಾರ ತಿನ್ನಬೇಕು, ಅದರಲ್ಲೂ ಚಳಿಗಾಲದಲ್ಲಿ ಬೆಳೆಯುವಂತಹ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಈ ಲೇಖನದಲ್ಲಿ 5 ಸರಳ ಆರೋಗ್ಯಕರ ಟಿಪ್ಸ್ ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ಶೀತ, ಕೆಮ್ಮು, ಮೈಕೈ ನೋವು, ತ್ವಚೆ ಒಡೆಯುವುದು ಈ ರೀತಿ ಚಳಿಗಾಲದಲ್ಲಿ ಕಾಡುವ ಕಾಡುವ ಸಮಸ್ಯೆಯನ್ನು ದೂರವಿಡಬಹುದು.

1. ಚಳಿಗಾಲಕ್ಕೆ ಆಹಾರ
ಈ ಸಮಯದಲ್ಲಿ ಸೀಸನ್ ಫುಡ್ಸ್ ತಿನ್ನುವುದು ಒಳ್ಳೆಯದು. ಕಿತ್ತಳೆ ಈ ಸಮಯದಲ್ಲಿ ಹೆಚ್ಚಾಗಿ ದೊರೆಯುವುದರಿಂದ ಇದನ್ನು ಪ್ರತಿನಿತ್ಯ ಒಂದು ತಿನ್ನಿ. ತುಂಬಾ ಸಿಹಿ ಹಾಗೂ ಎಣ್ಣೆಯಂಶದ ಆಹಾರಗಳನ್ನು ತಿನ್ನಲು ಹೋಗಬೇಡಿ. ಚಳಿಗಾಲದಲ್ಲಿ ಕುರುಕಲು ತಿಂಡಿಗಳನ್ನು ತಿಂದರೆ ಬೇಗನೆ ದಪ್ಪಗಾಗುತ್ತೇವೆ. ಆದ್ದರಿಂದ ಇಂತಹ ಪದಾರ್ಥಗಳಿಂದ ದೂರವಿರಬೇಕು. ಸತು ಹಾಗೂ ಕಬ್ಬಿಣಂಶವಿರುವ ಆಹಾರವನ್ನು ಹೆಚ್ಚಾಗಿ ತಿನ್ನಬೇಕು. ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ಚಕ್ಕೆ, ಲವಂಗ ಈ ರೀತಿಯ ಮಸಾಲೆ ಸಾಮಾಗ್ರಿಗಳನ್ನು ಬಳಸುವುದು ಒಳ್ಳೆಯದು. ಇವು ಮೈಯನ್ನು ಬೆಚ್ಚಗೆ ಇಡುವುದರ ಜೊತೆಗೆ ಶೀತ, ಕೆಮ್ಮು ಈ ರೋಗಗಳ ವಿರುದ್ಧ ಹೋರಾಡುತ್ತವೆ.

ಬೆಚ್ಚಗೆ ಮಲಗಿ:
ಮಲಗುವಾಗ ಬೆಚ್ಚಗೆ ಹೊದ್ದುಕೊಂಡು ಮಲಗಿ. ಈ ಸಮಯದಲ್ಲಿ ಚೆನ್ನಾಗಿ ನಿದ್ದೆ ಬರುತ್ತದೆ. ಮಲಗುವಾಗ ಮುನ್ನ ಮೈಗೆ ಕೋಲ್ಡ್ ಕ್ರೀಮ್ ಅಥವಾ ಬಾಡಿ ಲೋಷನ್ ಹಚ್ಚಿ ಮಲಗಿ. ಇದರಿಂದ ತ್ವಚೆ ಒಡೆಯುವ ಸಮಸ್ಯೆ ಕಂಡು ಬರುವುದಿಲ್ಲ.

ಟೀ:
ಹರ್ಬಲ್ ಟೀ ಹಾಗೂ ಮಸಾಲೆ ಟೀಯನ್ನು ಈ ಕಾಲದಲ್ಲಿ ಕುಡಿಯುವುದು ಒಳ್ಳೆಯದು. ಇದರಿಂದ ಶೀತ, ಕೆಮ್ಮು ಈ ರೀತಿಯ ಸಮಸ್ಯೆಗಳನ್ನು ದೂರವಿಡಬಹುದು.

4. ಉಣ್ಣೆಯ ಬಟ್ಟೆಗಳನ್ನು ಧರಿಸಿ
ಈ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗುವಾಗ ಉಣ್ಣೆಯ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಟ್ರಾವಲ್ ಮಾಡುವಾಗ ಮುಖಕ್ಕೆ ತೆಳುವಾದ ಹತ್ತಿಯ ಬಟ್ಟೆಯನ್ನು ಸುತ್ತಿ. ಇದರಿಂದ ಮುಖ ಒಡೆಯುವುದಿಲ್ಲ. ಹೊರಗಡೆ ಹೋಗುವಾಗ ಕೋಲ್ಡ್ ಕ್ರೀಮ್ ಬಳಸಲು ಮರೆಯಬಾರದು. ಚಳಿಯಿಂದಾಗಿ ಮಂಡಿ ನೋವು, ಮೈಕೈ ನೋವು ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ್ಯೆ ಬರದಿರಲು ಬೆಚ್ಚನೆಯ ಬಟ್ಟೆಗಳನ್ನು ಧರಿಸಿ.

ವ್ಯಾಯಾಮ:
ಚಳಿಯಿದೆ ಎಂದು ವ್ಯಾಯಾಮ ಮಾಡುವುದನ್ನು ನಿಲ್ಲಿಸಬಾರದು. ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಡಿದರೆ ಮೈ ಬೆಚ್ಚಗೆ ಆಗುತ್ತದೆ, ಇದರಿಂದ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ನಡೆಯಲು ತುಂಬಾ ಸಹಕಾರಿಯಾಗುವುದು.
ಈ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.



Click it and Unblock the Notifications