Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಮುತ್ತಿನಂತಹ ಹಲ್ಲುಗಳಿಗಾಗಿ ನೈಸರ್ಗಿಕ ವಿಧಾನ
ಗಟ್ಟಿ ಮುಟ್ಟಾದ ಹಲ್ಲುಗಳು ಬೇಕೆಂದರೆ ಬರೀ ಪೇಸ್ಟ್ ನಿಂದ ಹಲ್ಲುಜ್ಜಿದರೆ ಸಾಲದು ಕೆಲವೊಂದು ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಕೂಡ ಹಲ್ಲುಜ್ಜಬೇಕು. ಈ ನೈಸರ್ಗಿಕ ವಸ್ತುಗಳನ್ನು ಬಳಸಿದರೆ ಹಲ್ಲು ಹುಳಾಗುವುದು, ಹಲ್ಲು ತುಂಬಾ ಸೂಕ್ಷ್ಮವಾಗುವುದು ಮುಂತಾದ ಸಮಸ್ಯೆ ಕಂಡುಬರುವುದಿಲ್ಲ. ಅಲ್ಲದೆ ಈ ವಸ್ತುಗಳನ್ನು ಬಳಸಿದರೆ ಬಾಯಿ ದುರ್ಬವಾಸನೆ ಬೀರುವುದನ್ನು ತಡೆಯಬಹುದು. ಹಲ್ಲು ಹಾಗೂ ಬಾಯಿಯ ಶುಚಿತ್ವಕ್ಕೆ ಬಳಸಬೇಕಾದ ಆ ನೈಸರ್ಗಿಕ ವಸ್ತುಗಳು ಯಾವುವು ನೋಡೋಣ ಬನ್ನಿ.
ಕಹಿ ಬೇವಿನ ಮರದ ಚಿಕ್ಕ ಕಡ್ಡಿ: ಪೇಸ್ಟ್ ಬಳಸಿ ಹಲ್ಲುಜ್ಜಿದ ನಂತರ ಕಹಿ ಬೇವಿನ ಮರದ ಚಿಕ್ಕ ಕಡ್ಡಿಯನ್ನು ಚೆನ್ನಾಗಿ ಜಜ್ಜಿ ಅದರಿಂದ ಹಲ್ಲುಜ್ಜಿದರೆ ಬಾಯಿ ದುರ್ವಾಸನೆ, ದವಡೆಯಲ್ಲಿ ಹುಣ್ಣು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ.

ಉಪ್ಪು: ಹಲ್ಲು ಗಟ್ಟಿಯಾಗಲು ಉಪ್ಪು ಬಳಸುವುದು ತುಂಬಾ ಒಳ್ಳೆಯದು. ಮೊದಲು ಉಪ್ಪಿನಿಂದ ಹಲ್ಲುಜ್ಜಿ ನಂತರ ಪೇಸ್ಟ್ ಬಳಸಿ ಹಲ್ಲು ತಿಕ್ಕಿ. ಈ ರೀತಿ ಮಾಡಿದರೆ ಹಲ್ಲು ಬೆಳ್ಳಗೆ ಕಾಣುವುದಲ್ಲದೆ ಗಟ್ಟಿಮುಟ್ಟಾಗುವುದು, ಬಾಯಿ ದುರ್ವಾಸನೆ ಕೂಡ ಇರುವುದಿಲ್ಲ.
ಉಪ್ಪು ಮತ್ತು ಸಾಸಿವೆಯೆಣ್ಣೆ: ಹಲ್ಲು ಹಳದಿ ಬಣ್ಣದಲ್ಲಿ ಇದೆಯೇ? ಹಾಗಾದರೆ ಉಪ್ಪು ಹಾಗೂ ಸಾಸಿವೆಯೆಣ್ಣೆ ಬಳಸಿ ಹಲ್ಲುಜ್ಜಿ ನಿಮ್ಮ ಹಲ್ಲು ಬೆಳ್ಳಗಾಗುವುದು.
ನಿಂಬೆ ಹಣ್ಣು: ನಿಂಬೆ ಹಣ್ಣು ದವಡೆ ಹಾಗೂ ಹಲ್ಲಿನ ಶುಚಿಗೆ ತುಂಬಾ ಒಳ್ಳೆಯದು. ನಿಂಬೆ ಹಣ್ಣನ್ನು ಕತ್ತರಿಸಿ ಅದರಿಂದ ಹಲ್ಲನ್ನು ತಿಕ್ಕಿದರೆ ಸಾಕು. ಹೀಗೆ ಮಾಡಿದರೆ ಹಲ್ಲಿನ ಸಮಸ್ಯೆ ಉಂಟಾಗುವುದನ್ನು ತಡೆಯಬಹುದು.
ಬೆಳ್ಳುಳ್ಳಿ: ಬೆಳ್ಳುಳ್ಳಿ ಪುಡಿಯಿಂದ ಹಲ್ಲುಜ್ಜಿದರೆ ಹಲ್ಲು ಬಿಳಿಯಾಗುವುದು ಹಾಗೂ ಹಲ್ಲು ನೋವು ಇರುವವರು ಇದನ್ನು ಬಳಸಿ ಹಲ್ಲುಜ್ಜುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
