Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನೀವು ಕುಡಿಯುವ ಫಿಲ್ಟರ್ ನೀರು ಶುದ್ಧವಾಗಿದೆಯೆ?

ಆದರೂ ಮಳೆಗಾಲದಲ್ಲಿ ಸರಿಯಾಗಿ ಕುದಿಸಿದ ನೀರಿನ ಬದಲು ಅಕ್ವಾಗಾರ್ಡ್ ನೀರು ಕುಡಿದು ಜನರು ಕಾಯಿಲೆ ಬೀಳುವುದನ್ನು ಕಾಣಬಹುದು. ಏಕೆಂದರೆ ಯಾವುದೇ ಅಕ್ವಾಗಾರ್ಡ್ ಆಗಿರಲಿ ಕೀಟಾಣುಗಳಿಂದ ಮುಕ್ತವಾದ 100% ಶುದ್ಧ ನೀರನ್ನು ಕೊಡಲು ಸಾಧ್ಯವಿಲ್ಲ. ಅಲ್ಲದೆ ಅಕ್ವಾಗಾರ್ಡ್ ಇದ್ದರೆ ಮಾತ್ರ ಸಾಲದು ಅದನ್ನು ಶುಚಿಯಾಗಿ ಇಟ್ಟುಕೊಡರೆ ಮಾತ್ರ ಶುದ್ಧ ನೀರು ಪಡೆಬಹುದು. ಇಷ್ಟಲ್ಲದೆ ಅಕ್ವಾಗಾರ್ಡ್ ಅಥವಾ ಫ್ಯೂರ್ ಇಟ್ ಬಳಸುವವರು ಈ ಕೆಳಗಿನ ಅಂಶಗಳನ್ನು ತಿಳಿದಿರುವುದು ಒಳ್ಳೆಯದು.
ಯಾವ ರೀತಿಯ ಫಿಲ್ಟರ್ ಬಳಸುತ್ತಿದ್ದೇವೆ?
ತುಂಬಾ ಜನರಿಗೆ ಫಿಲ್ಟರ್ ಕೊಳ್ಳಲು ಹೋಗುವಾಗ ಯಾವ ಬಗೆಯ ಫಿಲ್ಟರ್ ತೆಗೆದುಕೊಳ್ಳಬೇಕೆಂಬ ಐಡಿಯಾನೇ ಇರುವುದಿಲ್ಲ. ಅಂಗಡಿಗೆ ಹೋಗಿ ಅಂಗಡಿಯವನು ಯಾವುದಾದರೂ ಫಿಲ್ಟರ್ ತೋರಿಸಿ ತುಂಬಾ ಚೆನ್ನಾಗಿ ಬಾಳಿಕೆ ಬರುತ್ತದೆ ಅಂದರೆ ಅದನ್ನೆ ತಗೊಂಡು ಬಂದು ಬಿಡುತ್ತಾರೆ. ಫಿಲ್ಟರ್ ನಲ್ಲಿ ಎರಡು ಬಗೆಯ ಫಿಲ್ಟರ್ ಇದೆ. ಒಂದು ಫಿಲ್ಟರ್ ನಲ್ಲಿ ಬಿಸಿ ನೀರು ಸಿಗುತ್ತದೆ ಮತ್ತೊಂದು ಫಿಲ್ಟರ್ ನಲ್ಲಿ ತಣ್ಣೀರು ಬರುತ್ತದೆ. ಆದರೆ ತುಂಬಾ ಆಧುನಿಕ ಫಿಲ್ಟರ್ ಅನ್ನು ಟ್ಯಾಪ್ ಇರುವ ಕಡೆ ಅಳವಡಿಸಿದರೆ ಟ್ಯಾಪ್ ವಾಟರ್ ಅನ್ನು ನೇರವಾಗಿ ತೆಗೆದುಕೊಂಡು , ಅದರಲ್ಲಿರುವ ಕೀಟಾಣುಗಳನ್ನು ಹೋಗಲಾಡಿಸಿ ಶುದ್ಧ ನೀರು ದೊರೆಯುವಂತೆ ಮಾಡುತ್ತದೆ.
ಎಷ್ಟು ದಿನಗಳಿಗೊಮ್ಮೆ ಫಿಲ್ಟರ್ ಶುದ್ಧಗೊಳಿಸಬೇಕು?
ಫಿಲ್ಟರ್ ಕಶ್ಮಲ ನರನ್ನು ಶುದ್ಧೀಕರಿಸಿ ಕೀಟಾಣು ಮುಕ್ತ ನೀರು ಕಡುತ್ತದೆ. ಆದರೆ ಇದನ್ನು 12 ವಾರಕ್ಕೊಮ್ಮೆಯಾದರೂ ಶುಚಿಗೊಳಿಸದಿದ್ದರೆ ಶುದ್ಧ ನೀರು ಬರುವ ಬದಲು ಅದರಲ್ಲಿರುವ ಕಶ್ಮಲಗಳು ಬರಲಾರಂಭಿಸುತ್ತದೆ. ಆದ್ದರಿಂದ ಫಿಲ್ಟರ್ ಅನ್ನು ಆದಷ್ಟು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದನ್ನು ಕಂಪನಿಯಿಂದ ಪರಿಣಿತರನ್ನು ಕರೆತಂದು ಶುಚಿಗೊಳಿಸಬೇಕು.
ಬರೀ ಶುದ್ಧಗಳಿಸಿದರಷ್ಟೇ ಸಾಕೆ?
ಫಿಲ್ಟರ್ ಶುದ್ಧ ಮಾಡುತ್ತಾ ಇದ್ದರೆ ಮಾತ್ರ ಸಾಲದು. ಅದನ್ನು ಹಳೆಯಾದಾಗ ಬದಲಾಯಿಸಬೇಕು. ಏಕೆಂದರೆ ಇದರಲ್ಲಿ ಕಾರ್ಬನ್ ಕ್ಲೀನಿಂಗ್ ವಿಧಾನವನ್ನು ಅಳವಡಿಸಿ ಅದರಿಂದ ನೀರನ್ನು ಶುದ್ಧೀಕರಿಸಲಾಗುವುದು. ಈ ಕಾರ್ಬನ್ ಸೂಕ್ಷ್ಮಾಣುಗಳನ್ನು ಮತ್ತು ಕಶ್ಮಲಗಳನ್ನು ಹೀರಿಕೊಂಡು ಶುದ್ಧ ನೀರು ದೊರೆಯುವಂತೆ ಮಾಡುತ್ತದೆ. ಆದರೆ ಈ ಕಾರ್ಬನ್ ತುಂಬಾ ಹಳೆಯದಾದರೆ ಅದನ್ನು ಬದಲಾಯಿಸಿ ಹೊಸ ಕಾರ್ಬನ್ ಉಪಕರಣವನ್ನು ಅಳವಡಿಸಬೇಕು ಅಥವಾ ಫಿಲ್ಟರ್ ಬದಲಾಯಿಸುವುದು ಒಳ್ಳೆಯದು. ವರ್ಷಕ್ಕೆ ಒಮ್ಮೆ ಅಕ್ವಾಗಾರ್ಡ್ ನ ಫಿಲ್ಟರ್ ಬದಲಾಯಿಸಬೇಕು. ಆಗ ಅದರಿಂದ ಮತ್ತಷ್ಟು ಶುದ್ಧವಾದ ನೀರನ್ನು ಪಡೆಯಬಹುದು.
ಫಿಲ್ಟರ್ ಕೊಳ್ಳುವಾಗ ಅದರಲ್ಲಿರುವ ಸೂಚನೆಗಳನ್ನು ಓದಿ ಅದರಂತೆ ಬಳಕೆ ಮಾಡಬೇಕು. ಅಲ್ಲದೆ ನಾವು ಬಳಸುವ ನೀರು ಎಷ್ಟು ಶುದ್ಧವಾಗಿದೆ ಎಂದು ಟಿಡಿಎಸ್ ಮೀಟರ್(Total Dissolved Solids Meter) ಬಳಸಿ ಕಂಡುಹಿಡಿಯಬಹುದಾಗಿದೆ. ಈ ಮೀಟರ್ ನಿಮ್ಮ ಕುಡಿಯುವ ನೀರಿನಲ್ಲಿ ಎಷ್ಟು ಪ್ರಮಾಣದಲ್ಲಿ ಕಶ್ಮಲ ಅಂಶವನ್ನು ಹೊಂದಿದೆ ಎಂದು ತೋರಿಸುತ್ತದೆ.
ಈ ಮೀಟರ್ ಅನ್ನು ಬಳಸುವ ವಿಧಾನ: ಮೀಟರಿನ ಸ್ವಿಚ್ ಅನ್ ಮಾಡಿ, ಅದರ ತುರಿಯನ್ನು ತಿರುಗಿಸಿ ನೀರಿನ ಸ್ಯಾಂಪಲ್ ನಲ್ಲಿ ಹಾಕಿಟ್ಟು ಸ್ವಲ್ಪ ಹೊತ್ತು ಬಿಡಬೇಕು. ಆಗ ಅದರಲ್ಲಿ ನೀರಿನ ಶುದ್ಧತೆಯ ಪ್ರಮಾಣವನ್ನು ತೋರಿಸಲಾಗುವುದು. ಈ ಅಳತೆ ಮಾಪಕದಲ್ಲಿ ಅಳತೆಯು 0-999 ನಡುವೆ ಇರುತ್ತದೆ. ಈ ಮೀಟರ್ 0 ಅಂಕಿಯನ್ನು ತೋರಿಸಿದರೆ ನೀರು ತುಂಬಾ ಶುದ್ಧವಾಗಿದೆಯೆಂದು ಅರ್ಥ. ಕಶ್ಮಲವಿಲ್ಲದ ಮಳೆ ನೀರು ಮತ್ತು ಡಿಸ್ಟಿಲ್ಡ್ ವಾಡರ್ ಈ ಅಕಿ ಅಂಶವನ್ನು ತೋರಿಸುವುದು. ಈ ಮೀಟರ್ ಪಾಕೆಟ್ ಗಾತ್ರದಲ್ಲಿ ಇರುವುದರಿಂದ ಜೊತೆಯಲ್ಲಿ ಕೊಂಡೊಯ್ಯಬಹುದಾಗಿದ್ದು, ನಾವು ಕುಡಿಯುವ ನೀರಿನ ಶುದ್ಧತೆ ಬಗ್ಗೆ ತಿಳಿಯಲು ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









