Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಂಡಸರನ್ನು ಕಂಗೆಡಿಸುತ್ತಿರುವ 7 ಕಾಮನ್ ಕಾಯಿಲೆ
ಈ ಹಿಂದೆ ಒಂದು ಲೇಖನದಲ್ಲಿ ಶೇ. 80ರಷ್ಟು ಪುರುಷರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡದೆ ಕಾಯಿಲೆ ತುಂಬಾ ಗಂಭೀರವಾದಾಗ ಚಿಕಿತ್ಸೆಗೆ ಬರುತ್ತಾರೆ ಎಂದು ಸಂಶೋಧನೆಯಿಂದ ದೃಢ ಪಟ್ಟಿದೆ ಎಂದು ಹೇಳಿದ್ದೆವು.
ಕಾಯಿಲೆಗಳನ್ನು ಮೊದಲನೇ ಹಂತದಲ್ಲಿ ಗುರುತಿಸಿದರೆ ಗುಣಪಡಿಸುವುದು ಸುಲಭ. ಆದ್ದರಿಂದ ದೇಹದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಅದರಲ್ಲೂ ಈ ಕೆಳಗಿನ ಕಾಯಿಲೆಗಳು ಪುರುಷರಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ ದೇಹದ ಆರೋಗ್ಯದ ಕಡೆಗೆ ಗಮನ ಕೊಡುವುದು

1. ಮಧುಮೇಹ
ಮಧುಮೇಹ ಕಾಯಿಲೆಯು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಸಮಯ ಸಿಕ್ಕಿದಾಗ ವೈದ್ಯರನ್ನು ಕಂಡು ನಿಮ್ಮ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

2. ಒತ್ತಡ
ಮಾನಸಿಕ ಒತ್ತಡವಿದ್ದರೆ ದೇಹದ ಆರೋಗ್ಯ ಸಂಪೂರ್ಣವಾಗಿ ಹಾಳಾಗುತ್ತದೆ. ಆದ್ದರಿಂದ ಮಾನಸಿಕ ಒತ್ತಡವನ್ನು ಯೋಗ, ಧ್ಯಾನಗಳಿಂದ ಕಡಿಮೆ ಮಾಡಿಕೊಳ್ಳಬೇಕು. ತುಂಬಾ ಮಾನಸಿಕ ಒತ್ತಡವಿದ್ದರೆ ಆಪ್ತರಲ್ಲಿ ಹೇಳಿಕೊಳ್ಳಿ ಅಥವಾ ಕೌನ್ಸಿಲಿಂಗ್ ತೆಗೆದುಕೊಳ್ಳಿ.

3. ರಕ್ತದೊತ್ತಡ:
ತುಂಬಾ ಮಾನಸಿಕ ಒತ್ತಡ, ಸುಸ್ತು, ತಟ್ಟನೆ ಕೋಪ ಬರುವುದು ಈ ರೀತಿಯ ಸಮಸ್ಯೆಗಳಿದ್ದರೆ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಅಧಿಕ ರಕ್ತದೊತ್ತಡದಿಂದಾಗಿ ಈ ರೀತಿ ಉಂಟಾಗುತ್ತದೆ.

4. ಹೃದಯದ ಬಡೆತ:
ರಕ್ತದೊತ್ತಡದ ಜೊತೆಗೆ ಹೃದಯದ ಬಡೆತ ಸರಿಯಾದ ರೀತಿಯಲ್ಲಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಒಂದು ವೇಳೆ ಹೃದಯ ಬಡಿತದಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ.

5. ಕೊಲೆಸ್ಟ್ರಾಲ್
ಕೊಲೆಸ್ಟ್ರಾಲ್ 30 ವರ್ಷ ದಾಟಿದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ನೀವು ಆರೋಗ್ಯವಾಗಿದ್ದರೂ ವರ್ಷಕ್ಕೊಮ್ಮೆ ಅಥವಾ 6 ತಿಂಗಳಿಗೊಮ್ಮೆ ವೈದ್ಯರನ್ನು ಕಂಡು ಆರೋಗ್ಯವನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

6. ಶ್ವಾಸಕೋಶದ ಪರೀಕ್ಷೆ
ಒಂದು ವೇಳೆ ನಿಮಗೆ ಧೂಮಪಾನ ಅಭ್ಯಾಸವಿದ್ದರೆ ಅದರಿಂದ ಶ್ವಾಸಕೋಶದ ಆರೋಗ್ಯ ಹಾಳಾಗುವುದು, ಇದರಿಂದ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುವುದು. ಆದ್ದರಿಂದ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಒಳ್ಳೆಯದು.

7. ಫಿಟ್ ನೆಸ್
ಆದಷ್ಟು ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಿ. ದೃಢಕಾಯರಾಗಿ ಇದ್ದರೆ ಸೌಂದರ್ಯ ಹೆಚ್ಚಾಗುವುದು ಮಾತ್ರವಲ್ಲ ದೇಹದ ಆರೋಗ್ಯಕ್ಕೂ ಒಳ್ಳೆಯದು.



Click it and Unblock the Notifications
