Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಪ್ಪು ಮೈ ಬಣ್ಣದವರಿಗೆ ಈ ಚಟ ಬಿಡುವುದು ಕಷ್ಟ!
ಧೂಮಪಾನ ಚಟ ಬೆಳೆಸಿಕೊಂಡರೆ ಬಿಡುವುದು ತುಂಬಾ ಕಷ್ಟ. ಅದರಲ್ಲೂ ಕಪ್ಪು ಮೈ ಬಣ್ಣ ಹೊಂದಿರುವರಿಗರ ಬಿಡುವುದು ತುಂಬಾನೆ ಕಷ್ಟ ಎಂದು ವೈದ್ಯಕೀಯ ಸಮಾಜಶಾಸ್ತ್ರಜ್ಞ ಪೆನ್ ಸ್ಟೇಟ್ ನಡೆಸಿದ ಸಂಶೋಧನೆಯು ಹೇಳುತ್ತದೆ. ಧೂಮಪಾನ ಚಟಕ್ಕೆ ಬಲಿಯಾಗಿ ಕ್ಯಾನ್ಸರ್ ಸಂಬಂಧಿ ಕಾಯಿಲೆಗಳು ಆಫ್ರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಈ ಸಂಶೋಧನೆ ಹೇಳುತ್ತದೆ.
ನಿಕೋಟಿನ್‌ನಲ್ಲಿ ಮೆಲನಿನ್ ಜೊತೆ ಬೇಗನೆ ಬೆರೆತುಕೊಳ್ಳುತ್ತದೆ. ನಮ್ಮ ದೇಹದಲ್ಲಿರುವ ಮೆಲನಿನ್ ಪ್ರಮಾಣದ ಪ್ರಕಾರ ನಮ್ಮ ಮೈ ಬಣ್ಣವಿರುತ್ತದೆ. ಕಪ್ಪು ಬಣ್ಣದವರಲ್ಲಿ ಬಿಳಿ ಬಣ್ಣದವರಿಗಿಂತ ಮೆಲಲಿನ್ ಅಂಶ ಅಧಿಕವಿರುತ್ತದೆ. ಧೂಮಪಾನದಲ್ಲಿರುವ ನಿಕೊಟಿನ್ ಮೆಲನಿನ್ ಜೊತೆ ಸುಲಭವಾಗಿ ಸೇರಿಕೊಳ್ಳುತ್ತದೆ. ಇದರಿಂದ ಕ್ಯಾನ್ಸರ್ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತದೆ.
ಕಪ್ಪಗಿರುವ ಜನರರಲ್ಲಿ ಅಷ್ಟೆ ಅಲ್ಲ, ಅಧಿಕ ಬಿಸಿಲಿನಲ್ಲಿ ಕೆಲಸ ಮಾಡುವವರಲ್ಲಿ ತ್ವಚೆ ಕಪ್ಪಾಗಿ ಮೆಲನಿನ್ ಉತ್ಪತ್ತಿ ಜಾಸ್ತಿಯಾಗುತ್ತದೆ. ಅತೀ ಹೆಚ್ಚು ಸಿಗರೇಟ್ ಸೇದುವುದರಿಂದ ತುಟಿಯಷ್ಟೇ ಅಲ್ಲ ಹಣೆ ಕೂಡ ಕಪ್ಪಾಗುತ್ತದೆ. ಸಾಮಾನ್ಯರಿಗಿಂತ ಮಾನಸಿಕ ಖಿನ್ನತೆಯಿಂದ ಬಳಲುವವರಿಗೆ ಧೂಮಪಾನ ಚಟದಿಂದ ದೂರ ಸರಿಯುವುದು ತುಂಬಾ ಕಷ್ಟ ಅನಿಸುವುದು.
ಈ ರೀತಿ ಖಿನ್ನತೆಯಿಂದ ಈ ಚಟವನ್ನು ಮುಂದೆವರೆಸಿಕೊಂಡು ಹೋದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಈ ಸಮಯದಲ್ಲಿ ಮನೆಯವರು ಅಥವಾ ಸ್ನೇಹಿತರು ಅವರನ್ನು ಈ ಚಟದಿಂದ ಹೊರಬರುವಂತೆ ಮಾಡಬೇಕು.
ಸಿಗರೇಟ್ ಸೇದುವುದು ಬಿಡಬೇಕು ಎಂದು ಭಾವಿಸಿ ಅನೇಕರು ವಿಫಲರಾಗುತ್ತಾರೆ. ಸಿಗರೇಟ್ ಸೇದುವ ಅಭ್ಯಾಸವನ್ನು ನಿಧಾನಕ್ಕೆ ಕಡಿಮೆ ಮಾಡುತ್ತಾ ಬಂದರೆ ಅದನ್ನು ಸೇದುವ ಅಭ್ಯಾಸ ಬಿಡಬಹುದು. ಗಂಟೆಗೊಮ್ಮೆ ಸೇದುವ ಅಭ್ಯಾಸವಿರುವವರು ಅದನ್ನು ಎರಡು ಗಂಟೆಗೊಮ್ಮೆ ಸೇದಬೇಕು. ದಿನಕ್ಕೆ 10 ಸಿಗರೇಟ್ ಸೇದುತ್ತಿದ್ದರೆ ಅದನ್ನು 5 ನಂತರ ನಾಲ್ಕು, ಎರಡು, ದಿನಕ್ಕೆ ಒಂದು ಹೀಗೆ ಕಮ್ಮಿ ಮಾಡುತ್ತಾ ಬರಬೇಕು.
ಸಿಗರೇಟ್ ಸೇದುವುದನ್ನು ತಕ್ಷಣ ಬಿಟ್ಟರೆ ದೇಹದಲ್ಲಿ ನಿಕೋಟಿನ್ ಅಂಶವಿರುವುದರಿಂದ ತಲೆನೋವು, ಖಿನ್ನತೆ ಉಂಟಾಗುವುದು, ಅಲ್ಲದೆ ಮನಸ್ಸು ಸಿಗರೇಟ್ ಸೇದಬೇಕೆಂದು ಒತ್ತಡ ಹಾಕುತ್ತಿರುತ್ತದೆ. ಆದ್ದರಿಂದಲೆ ಅನೇಕ ಜನರಿಗೆ ಸಿಗರೇಟ್ ಸೇದುವುದನ್ನು ಬಿಡುವುದು ಕಷ್ಟದ ಕೆಲಸವಾಗಿದೆ. ಈ ಮೇಲಿನ ವಿಧಾನ ಅನುಸರಿಸಿದರೆ ಈ ಚಟದಿಂದ ಸುಲಭವಾಗಿ ಹೊರಬರಬಹುದು, ಆರೋಗ್ಯ ಕೂಡ ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
