Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿದ್ದೆ ಹೊಡೆದದ್ದು ಸಾಕು ಏಳ್ರಿ, ಹೋಗ್ಬೇಕು ಹೊತ್ತಾಯ್ತು

ರಜಾ ದಿನದಂದು ಸೂರ್ಯ ನೆತ್ತಿಯವರೆಗೆ ಬರುವರೆಗೆ ಹೊದ್ದುಕೊಂಡು ಮಲಗುವುದು ಕೆಲವರಿಗೆ ಪಂಚಪ್ರಾಣ. ಆಫೀಸ್ ಗೆ ಹೊತ್ತಾಯಿತು, ಬಾಸ್ ಬೈಯ್ಯುತ್ತಾರೆ ಎಂಬ ಯಾವುದೇ ಚಿಂತೆ ಇಲ್ಲದೆ ನಿದ್ದೆ ಮಾಡಿ ಅಬ್ಬಾ! ಎಷ್ಟು ನಿದ್ದೆ ಮಾಡಿದೆ ಎಂದು ಸಂತೋಷಪಡುತ್ತೇವೆ. ಆದರೆ ಮರುದಿನ ಶರೀರದಲ್ಲಿ ತುಂಬಾ ಆಲಸ್ಯ, ಕೆಲಸ ಮಾಡಲು ಸೋಮಾರಿತನ ಉಂಟಾಗುತ್ತದೆ.
ಅಷ್ಟು ನಿದ್ದೆ ಮಾಡಿ ಸುಸ್ತು ಕಾಣಿಸಿಕೊಂಡಾಗ ದೇಹಕ್ಕೆ ವಿಶ್ರಾಂತಿ ಸಾಕಾಗಲಿಲ್ಲ ಎಂದು ಭಾವಿಸಿದರೆ ತಪ್ಪು. ಏಕೆಂದರೆ ಈ ರೀತಿಯ ತಲೆನೋವು ತುಂಬಾ ಹೊತ್ತು ನಿದ್ದೆ ಮಾಡುವುದರಿಂದ ಉಂಟಾಗುತ್ತದೆ. ಇದು ಸ್ವಲ್ಪ ಆಲ್ಕೋಹಾಲ್ ಕುಡಿದು ಮಲಗಿ ಬೆಳಗ್ಗೆ ಏಳುವಾಗ ಕಾಣಿಸಿಕೊಳ್ಳುವ ತಲೆನೋವಿನ ಹಾಗೆ ತಲೆನೋವು ಕಾಣಿಸಿಕೊಳ್ಳುತ್ತದೆ.
ಅತಿ ನಿದ್ದೆಯಿಂದ ತಲೆನೋವು ಉಂಟಾಗಲು ಕಾರಣ:
1. ಆಮ್ಲಜನಕದ ಕೊರತೆ: ನಿದ್ದೆಯಲ್ಲಿ ಒಮ್ಮೆ ಉಸಿರಾಡುವಾಗ ಮಧ್ಯೆ -ಮಧ್ಯೆ ಸ್ವಲ್ಪ ಹೊತ್ತು ನಿಲ್ಲಿಸಿ ನಂತರ ಉಸಿರಾಡುವುದರಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ತಲೆನೋವು ಕಾಣಿಸಿಕೊಳ್ಳುತ್ತದೆ.
2. ಒತ್ತಡ: ನಿದ್ದೆ ಮಾಡುವಾಗ ದುಃಖ ಅಥವಾ ಒತ್ತಡವನ್ನು ಮರೆಯಬಹುದು ಎಂದು ಕೆಲವರು ಹೆಚ್ಚು ಹೊತ್ತು ನಿದ್ದೆ ಮಾಡುತ್ತಾರೆ. ಈ ರೀತಿ ನಿದ್ದೆ ಮಾಡಿದಾಗ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ ಅದರ ಜೊತೆಗೆ ಮನದಲ್ಲಿರುವ ಒತ್ತಡ ಎಲ್ಲಾ ಸೇರಿ ಕುತ್ತಿಗೆ ನೋವು, ತಲೆನೋವು ಕಾಣಿಸಿಕೊಳ್ಳುತ್ತದೆ.
ನಿದ್ದೆ ತರುವ ತಲೆನೋವನ್ನು ಹೋಗಲಾಡಿಸುವ ವಿಧಾನ:
1. ಮನುಷ್ಯ ಆರೋಗ್ಯವಾಗಿರಲು ಮತ್ತು ಚಟುವಟಿಕೆಯಿಂದರಲು (ಗರಿಷ್ಠ) 8 ಗಂಟೆ ನಿದ್ದೆ ಸಾಕು. ಆದ್ದರಿಂದ ಇದಕ್ಕಿಂತ ಹೆಚ್ಚಾಗಿ ನಿದ್ದೆ ಮಾಡಬಾರದು.
2.ಮಧ್ಯಾಹ್ನ 2-3 ಗಂಟೆ ನಿದ್ದೆ ಮಾಡುವ ಅಭ್ಯಾಸವನ್ನು ಬಿಡಬೇಕು. ಕೆಫೀನ್, ಮದ್ಯ ಮತ್ತು ತುಂಬಾ ಖಾರದ ಪದಾರ್ಥಗಳನ್ನು ನಿದ್ದೆ ಮಾಡುವ ಮುಂಚೆ ಸೇವಿಸಬಾರದು.
3. ಹಾಸಿಗೆ ಮತ್ತು ದಿಂಬನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಮಂಚದಲ್ಲಿಯೆ ಕುಳಿತು ಊಟ ಮಾಡುವುದಾಗಲಿ, ಲ್ಯಾಪ್ ಟಾಪ್ ಸೊಟ್ಟಾಪಟ್ಟಾ ಇಟ್ಟುಕೊಂಡು ಕೆಲಸ ಮಾಡುವುದಾಗಲಿ ಮಾಡಬಾರದು.
4.ನಿದ್ದೆ ಮಾಡುವ ಮುಂಚೆ ಹಾಡುಗಳನ್ನು ಕೇಳುವುದು ಅಥವಾ ಧ್ಯಾನವನ್ನು ಮಾಡುವುದು ಒಳ್ಳೆಯದು.
ಇನ್ನು ಮುಂದೆ ಸೋಮಾರಿಗಳಾಗಿ ತುಂಬಾ ಹೊತ್ತು ನಿದ್ದೆ ಮಾಡಿ ತಲೆನೋವು ಬರೆಸಿಕೊಳ್ಳುವ ಬದಲು 6-8 ಗಂಟೆ ನಿದ್ದೆ ಮಾಡಿ ಚಟುವಟಿಕೆಯಿಂದ ಇರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
