Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೆಟ್ಟ ಚಟದಿಂದ ತಲೆನೋವು ನಿವಾರಣೆ ಸಾಧ್ಯವೆ?

ತಲೆನೋವು ಜಾಸ್ತಿಯಾಯ್ತು ಎಂದಾಗ ಒಂದು ಸಿಗರೇಟ್ ಸೇದುವುದು, ಕಾಫಿ ಟೀ ಕುಡಿಯುವುದು ಮಾಡುತ್ತಾರೆ. ಆದರೆ ಇದು ತಾತ್ಕಾಲಿಕವಾಗಿ ತಲೆನೋವು ಕಡಿಮೆಮಾಡಬಹುದು. ತಲೆನೋವು ಕಡಿಮೆ ಮಾಡುವ ಈ ಚಟಗಳು ಬೇರೊಂದು ರೀತಿಯಲ್ಲಿ ನಮ್ಮ ಆರೋಗ್ಯ ಕೆಡಿಸಬಹುದು. ತಲೆನೋವು ಕಡಿಮೆ ಮಾಡುವ ಜನರ ಸಾಮಾನ್ಯ ಚಟಗಳು ಇಲ್ಲಿವೆ.
1. ಕಾಫಿ ಅಥವಾ ಚಹಾ: ಸ್ಟ್ರಾಂಗ್ ಕಾಫಿ/ಚಹಾ ಕುಡಿಯುವುದು ತಲೆನೋವು ಹೋಗಲಾಡಿಸುವ ಸಾಮಾನ್ಯ ಔಷಧಿಯಾಗಿದೆ. ಕಾಫಿ/ಚಹಾ ತಲೆನೋವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಿದರೆ ತಪ್ಪು. ಕಾಫಿ ಒಂದು ಡ್ರಗ್ ರೀತಿ. ಅದು ತಾತ್ಕಾಲಿಕವಾಗಿ ನೋವನ್ನು ಮರೆಸುತ್ತದೆ. ನಂತರ ತಲೆನೋವು ಮತ್ತಷ್ಟು ಹೆಚ್ಚಾಗುವುದು. ತುಂಬಾ ಕಾಫಿ ಕುಡಿಯುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ ಆದ್ದರಿಂದ ಅಧಿಕ ಕಾಫಿ/ಟೀ ಕುಡಿಯುವುದು ಒಳ್ಳೆಯದಲ್ಲ.
2. ಧೂಮಪಾನ: ಅಧಿಕ ಕೆಲಸದ ಒತ್ತಡದಿಂದ ತಲೆನೋವು ಕಾಣಿಸಿಕೊಂಡರೆ ಸಿಗರೇಟ್ ಸೇದುವ ಅಭ್ಯಾಸವಿರುವವರು ತಲೆನೋವು ಕಡಿಮೆಯಾಗಲು ಮತ್ತೆರಡು ಸಿಗರೇಟ್ ಜಾಸ್ತಿ ಎಳೆಯುತ್ತಾರೆ. ಆದರೆ ಸಿಗರೇಟ್ ಸೇವಿಸಿದಾಗ ಆ ಕ್ಷಣದಲ್ಲಿ ಸ್ವಲ್ಪ ನಿರಾಳವೆನಿಸದರೂ ಸಿಗರೇಟ್ ನಲ್ಲಿರುವ ನಿಕೋಟಿನ್ ರಕ್ತನಾಳದಲ್ಲಿ ಸೇರಿ ಅದರ ಮುಖಾಂತರ ಮೆದುಳನ್ನು ತಲುಪಿ ತಲೆನೋವು ಮತ್ತಷ್ಟು ಹೆಚ್ಚಾಗಿಸುತ್ತದೆ.
3. ಗಾಂಜಾ: ಮೈಗ್ರೇನ್ ಬಂದರೆ ಸಹಿಸಲು ಅಸಾಧ್ಯವಾದ ನೋವು ಉಂಟಾಗುತ್ತದೆ. ಈ ರೀತಿಯ ತಲೆನೋವು ನಿವಾರಣೆ ಮಾಡಲು ಕೆಲವರು ಗಾಂಜಾ ಸೇದುತ್ತಾರೆ. ಆದರೆ ಈ ಗಾಂಜಾ ಸಿಗರೇಟ್ ಗಿಂತ ತುಂಬಾ ಅಪಾಯಕಾರಿಯಾದ ವಸ್ತುಯಾಗಿದೆ.
4.ಚಾಕಲೇಟ್: ಕಪ್ಪು ಚಾಕಲೇಟ್ ತಿಂದರೆ ತಲೆನೋವು ನಿವಾರಣೆಯಾಗುತ್ತದೆ. ಆದರೆ ಮಿತಿಮೀರಿ ಚಾಕಲೇಟ್ ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಏಕೆಂದರೆ ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ.
ಚಟಗಳಿಗಿಂತ ದೊಡ್ಡ ತಲೆನೋವು ಇನ್ಯಾವುದು ಇಲ್ಲ. ಹೀಗಾಗಿ ಇಂತಹ ಅಭ್ಯಾಸಗಳ ಮೊರೆ ಹೋಗುವ ಬದಲು ತಲೆನೋವಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
