Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಲೋಳೆಸರದಿಂದ ಡಯಾಬಿಟಿಸ್ ಕಡಿಮೆಯಾಗಬಹುದಾ?

ಲಿಲ್ಲಿ ಸಸ್ಯದ ತಳಿಯಿಂದ ಬಂದಿರುವ ಲೋಳೆಸರ ನಿಮ್ಮ ಮನೆಯಲ್ಲೇ ಇದ್ದರೂ ಅದರ ಉಪಯೋಗ ಮಾತ್ರ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ಲೋಳೆಸರದ ರಸದಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಅದು ಹೇಗೆಂದು ಮುಂದೆ ತಿಳಿದುಕೊಳ್ಳಿ.
ಲೋಳೆಸರದಿಂದ ಯಾವ ಸಮಸ್ಯೆ ನೀಗಿಸಿಕೊಳ್ಳಬಹುದು?
* ಸಂಧಿವಾತ: ಮೂಳೆಗಳಲ್ಲಿರುವ ಸೈವೊನಿಯರ್ ಅಂಶ ಒಣಗಿದಾಗಲೇ ಕೀಲುಗಳಲ್ಲಿ ನೋವುಂಟಾಗಿ ಸಂಧಿವಾತಕ್ಕೆ ಕಾರಣವಾಗುತ್ತದೆ. ಈ ಅಂಶ ಮೂಳೆಗಳು ಒಂದಕ್ಕೊಂದು ತಾಗಿ ಸವೆಯುವುದನ್ನು ತಪ್ಪಿಸುತ್ತದೆ. ಆದರೆ ಈ ಅಂಶ ಒಣಗಿದರೆ ನೋವು, ಉರಿಯುಂಟಾಗುತ್ತದೆ. ಲೋಳೆಸರದಲ್ಲಿನ ಫಂಗಸ್ ವಿರೋಧಿ ಅಂಶ ಮತ್ತು ಉರಿ ನಿವಾರಕ ಅಂಶ ಈ ಸಮಸ್ಯೆಗೆ ಉತ್ತರ ಹೇಳುತ್ತದೆ.
ಸಂಧಿವಾತಕ್ಕೆ ಪರಿಣಾಮಕಾರಿ ಉತ್ತರ ಕಂಡುಕೊಳ್ಳಲು 2 ಚಮಚ ಲೋಳೆಸರವನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು. ಊಟಕ್ಕೆ ಮುನ್ನ 30 ನಿಮಿಷದ ಮುಂಚೆ ಇದನ್ನು ತೆಗೆದುಕೊಳ್ಳಬೇಕು. ಅಲ್ಲದೆ ಈ ಲೋಳೆಸರವನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಂಡರೆ ನೋವು ಕಡಿಮೆಯಾಗುವುದಲ್ಲದೆ ತಿಂಗಳಿನಲ್ಲಿ ಇದರ ಫಲಿತಾಂಶ ಗೋಿಸುತ್ತದೆ.
* ಮಧುಮೇಹ: ಬ್ಯಾಂಕಾಕ್ ನ ವಿಶ್ವವಿದ್ಯಾಲಯವೊಂದು ನಡೆಸಿದ ಪ್ರಯೋಗದಿಂದ ಲೋಳೆಸರದಿಂದ ಮಧುಮೇಹವನ್ನು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ. ಇನ್ಸುಲಿನ್ ತೆಗೆದುಕೊಳ್ಳದ ಸುಮಾರು 72 ರೋಗಿಗಳನ್ನು ಎರಡು ಗುಂಪುಗಳಾಗಿ ಮಾಡಿ ಒಂದು ಗುಂಪಿಗೆ 1 ತಿಂಗಳಿನ ಅವಧಿ ಎರಡು ದಿನಕ್ಕೊಮ್ಮೆ 15 ಮಿಲಿ ಲೋಳೆಸರ ನೀಡಲಾಯಿತು. ಇನ್ನೊಂದು ಗುಂಪು ಔಷಧೋಪಚಾರವನ್ನೇ ಮುಂದುವರೆಸಿತ್ತು.
ಚಿಕಿತ್ಸೆ ನಂತರ ಈ ಎರಡೂ ಗುಂಪುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಲೋಳೆ ಸರ ಸೇವಿಸಿದವರಲ್ಲಿ ಶೇಕಡಾ 43 ರಷ್ಟು ಸಕ್ಕರೆ ಅಂಶ ಕಡಿಮೆಯಾಗಿದ್ದು ಕಂಡುಬಂದಿತ್ತು.
* ರಕ್ತದೊತ್ತಡ: ಹೆಚ್ಚಿನ ರಕ್ತದೊತ್ತಡವನ್ನು ಲೋಳೆಸರ ಕಡಿಮೆ ಮಾಡುತ್ತದೆ. ಲೋಳೆಸರ ಹೊಟ್ಟೆಯಲ್ಲಿ ಮತ್ತು ರಕ್ತದಲ್ಲಿ ಆಸಿಡ್ ಅಂಶವನ್ನು ಕಡಿಮೆ ಮಾಡಿ ಅಲ್ಸರ್ ಸಾಧ್ಯತೆಯನ್ನೂ ತಳ್ಳಿಹಾಕಿ ಪರೋಕ್ಷವಾಗಿ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ರಕ್ತನಾಳಗಳನ್ನೂ ಈ ಗಿಡಮೂಲಿಕೆ ಸಧೃಢಗೊಳಿಸುತ್ತದೆ.
ಇವುಗಳ ಹೊರತಾಗಿ ಲೋಳೆಸರದಲ್ಲಿ ಇನ್ನೂ ಹಲವು ಪ್ರಯೋಜನವಿದೆ. ನಿರಂತರವಾಗಿ ಲೋಳೆಸರ ಸೇವನೆ ಮಾಡಿದರೆ ರೋಗನಿರೋಧಕ ಶಕ್ತಿ ಜೆಚ್ಚಾಗಿ ಕಾಯಿಲೆ ಖಸಾಲೆಯಾವುದೂ ಹತ್ತಿರ ಸುಳಿಯುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications