Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಜಾತಕದಿಂದ ರೋಗನಿರೋಧಕ ಶಕ್ತಿ ತಿಳಿಯಬಹುದು

ವ್ಯಕ್ತಿಯ ದೇಹದಲ್ಲಿನ ರೋಗನಿರೋಧಕ ಶಕ್ತಿಯ ಮಟ್ಟವೇ ಇದಕ್ಕೆಲ್ಲಾ ಕಾರಣ ಎಂಬುದು ಸೂಕ್ತ ಉತ್ತರ. ಆದರೆ ನಿಮ್ಮ ರೋಗನಿರೋಧಕ ಶಕ್ತಿ ಎಷ್ಟಿದೆ ಎಂಬುದನ್ನು ನಿಮ್ಮ ಜಾತಕದಿಂದ ತಿಳಿದುಕೊಳ್ಳಬಹುದು ಎಂಬುದೇ ಇಲ್ಲಿನ ಆಸಕ್ತಿದಾಯಕ ವಿಷಯ.
ಜಾತಕದಲ್ಲಿದೆ ನಿಮ್ಮ ರೋಗ ನಿರೋಧಕ ಶಕ್ತಿಯ ಗುಟ್ಟು
ವ್ಯಕ್ತಿಯ ರೋಗ ನಿರೋಧಕ ಶಕ್ತಿ ಮತ್ತು ಆತನಿಗೆ ಬರಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾತಕ ನಿಖರ ಮಾಹಿತಿ ನೀಡುತ್ತದೆ. ಜಾತಕದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಸೂಚಿಸುವುದು, ವ್ಯಕ್ತಿ ಬೇಗನೆ ಯಾವುದೇ ಆರೋಗ್ಯ ಸಮಸ್ಯೆಗೆ ಒಳಗಾಗುವುದಿಲ್ಲ. ಆದರೆ ಆತನ ದಶಾಭುಕ್ತಿಯ ಪ್ರಕಾರ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ನಿರಂತರವಾಗಿ ಆರೋಗ್ಯ ಸಮಸ್ಯೆಗೆ ತುತ್ತಾಗುವ ವ್ಯಕ್ತಿಯ ಜಾತಕ ಆತನ ಆರೋಗ್ಯ ಸ್ಥಿತಿ ಗತಿ ಮತ್ತು ಏರಿಳಿತವನ್ನು ತಿಳಿಸಿಕೊಡುತ್ತದೆ.
ಉತ್ತಮ ಆರೋಗ್ಯಕ್ಕೆ ಜ್ಯೋತಿಷ್ಯ ನೀಡುವ ಸುರಕ್ಷತಾ ಕ್ರಮ
ಎಲ್ಲಾ ಜನ್ಮ ಕುಂಡಲಿಯೂ ಕೇವಲ ಧನಾತ್ಮಕ ಅಂಶವನ್ನು ಸೂಚಿಸುವುದಿಲ್ಲ. ಅದರಲ್ಲಿ ಆರೋಗ್ಯಕ್ಕೆ ಮಾರಕ ಮತ್ತು ಪೂರಕವಾಗುವ ಎಲ್ಲಾ ಅಂಶಗಳನ್ನೂ ಹೊಂದಿರುತ್ತದೆ. ಜಾತಕದಲ್ಲಿ ಧನಾತ್ಮಕ ಅಂಶ ಹೆಚ್ಚು ಕಂಡುಬಂದಷ್ಟು ನಿಮ್ಮ ಆರೋಗ್ಯವೂ ಸುಭದ್ರವಾಗಿರುತ್ತದೆ ಎಂದರ್ಥ.
ಉತ್ತಮ ಆರೋಗ್ಯ ಸೂಚಿಸುವುದು ಯಾವುದು?
* ಆರೋಗ್ಯವನ್ನು ಸೂಚಿಸಲು ಜಾತಕದಲ್ಲಿ ಲಗ್ನ ಅಥವಾ ಲಗ್ನಾಧಿಪತಿ ಪ್ರಬಲವಾಗಿರಬೇಕು.
* ಕೇಂದ್ರ (1, 4, 7 ಮತ್ತು 10 ನೇ ಮನೆ) ಜಾತಕದ ಆಧಾರ ಸ್ಥಂಭವಿದ್ದಂತೆ. ಈ ಕೇಂದ್ರಗಳಲ್ಲಿ ಕೆಲವು ಶುಭ ಸೂಚನೆಯ ಗ್ರಹಗಳು ಇದ್ದರೆ ನಿಮ್ಮ ಆರೋಗ್ಯ ಸುಭದ್ರವಾಗಿರುತ್ತದೆ ಎಂದರ್ಥ.
* ಅಶುಭ ಗ್ರಹಗಳು ಯಾವಾಗಲೂ ಕೆಟ್ಟದ್ದನ್ನೇ ಉಂಟುಮಾಡುವುದಿಲ್ಲ. ಈ ಅಶುಭ ಗ್ರಹಗಳು 3, 6 ಮತ್ತು 11 ನೇ ಮನೆಯಲ್ಲಿದ್ದರೆ ನಿಮ್ಮ ದೇಹದ ಪ್ರತಿರೋಧಕ ಶಕ್ತಿ ಇನ್ನೂ ಹೆಚ್ಚುತ್ತದೆ.
* ಲಗ್ನ ಮತ್ತು ಲಗ್ನಾಧಿಪತಿ ಅಥವಾ ಎರಡೂ ಕೂಡ ಶುಭ ಗ್ರಹಗಳಿಂದ ಆವರಿಸಿರಬೇಕು.
* ಜಾತಕದಲ್ಲಿ ಚಂದ್ರ ಭಾದಿತ ಸ್ಥಾನದಲ್ಲಿರಬಾರದು.
* ಜಾತಕದ 6 ಅಥವಾ 8ನೇ ಮನೆಯಲ್ಲಿ ಲಗ್ನಾಧಿಪತಿ ಪೀಡಕನಾಗಿರಬಾರದು.
ಉತ್ತಮ ಆರೋಗ್ಯ ತರುವ ಈ ಅಂಶಗಳು ನಿಮ್ಮ ಜಾತಕದಲ್ಲಿ ವಿರುದ್ಧವಾಗಿದ್ದರೆ ಅದು ಅನಾರೋಗ್ಯದ ಸೂಚನೆ. ಗ್ರಹಗಳ ಚಲನವಲನ ಪರಿಶೀಲಿಸಿ ಅನಾರೋಗ್ಯದ ಕಾರಣವನ್ನು ತಿಳಿಯಬಹುದು.
* ಲಗ್ನದಲ್ಲಿ ಎಂಟನೇ ಮನೆಯ ಅಧಿಪತಿ ಇದ್ದರೆ ಅವರದು ಸದಾ ಕಾಯಿಲೆಯ ದೇಹವಾಗಿರುತ್ತದೆ.
* ಲಗ್ನಾಧಿಪತಿ 8 ನೇ ಮನೆಯಲ್ಲಿ ಬಾಧಿತ ಸ್ಥಾನದಲ್ಲಿದ್ದರೆ ಅನಾರೋಗ್ಯ, ವಾಸಿಯಾಗದ ಮತ್ತು ಕೊನೆಯಿಲ್ಲದ ಖಾಯಿಲೆಯನ್ನು ತರುತ್ತದೆ. ಇದು ಆಗಾಗ್ಗೆ ಆರೋಗ್ಯದಲ್ಲಿನ ಏರುಪೇರಿನ ಸೂಚನೆಯೂ ಆಗಿದೆ.
ಜಾತಕ ಒಬ್ಬ ವ್ಯಕ್ತಿಯ ಜೀವನ ನಿರ್ಧರಿಸಲು ಸಹಕಾರಿ. ಇದರಲ್ಲಿರುವ ದಶಾಭುಕ್ತಿ ಜೀವನದ ಮಜಲನ್ನು ತಿಳಿಸುವಲ್ಲಿ ಇನ್ನೂ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಜಾತಕ ಪರಿಶೀಲಿಸುವ ಜ್ಯೋತಿಷಿಗಳು ನಿಮ್ಮ ಜೀವನ ಚೈತನ್ಯದ ಅವಧಿಯನ್ನೂ ತಿಳಿಸುತ್ತಾರೆ.
2012ರ ವರ್ಷದಲ್ಲಿ ತಿಂಗಳ ತಿಂಗಳ ಆರೋಗ್ಯ ಕುರಿತ ವಿಚಾರವನ್ನೂ ನೀವು ತಿಳಿದುಕೊಳ್ಳಬಹುದು. ಇದರಿಂದ ನಿಮಗೆ ಮನಶಾಂತಿ ದೊರೆತು ಮುಂದೆ ಒದಗಲಿರುವ ಆರೋಗ್ಯ ಸಮಸ್ಯೆಯನ್ನೂ ನಿವಾರಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ 2012ರ ಆರೋಗ್ಯ ಮತ್ತು ಯೋಗಕ್ಷೇಮದ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಪಡೆಯುವ ಮಂತ್ರ, ಯಂತ್ರ ಮತ್ತು ಪರಿಣಾಮಕಾರಿ ಪರಿಹಾರಗಳು ನಿಮಗೆ ಸಿಗಲಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications