Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಜಾಗೃತಿವಹಿಸದಿದ್ದರೆ ಕಾಂಟಾಕ್ಟ್ ಲೆನ್ಸ್ ಕಣ್ಣಿಗೆ ಅಪಾಯ

ಕಾಂಟ್ಯಾಕ್ಟ್ ಲೆನ್ಸ್ ಕಣ್ಣಿನ ಸಮಸ್ಯೆ ಇದ್ದವರು ಮಾತ್ರವಲ್ಲ, ಇದನ್ನು ಸ್ಟೈಲಿಷ್ ಲುಕ್ ಗಾಗಿ ಕೂಡ ಧರಿಸುತ್ತಾರೆ. ಕಾಂಟ್ಯಾಕ್ಟ್ ಲೆನ್ಸ್ ಅನ್ನು ನೇತ್ರ ತಜ್ಞರಿಂದ ಪರೀಕ್ಷಿಸಿ ಕಣ್ಣಿಗೆ ಹೊಂದುವ ಲೆನ್ಸ್ ಹಾಕಿಕೊಳ್ಳಬಹುದು. ಆದರೆ ಲೆನ್ಸ್ ತುಂಬಾ ಸೂಕ್ಷ್ಮವಾದ ಸಾಧನವಾಗಿರುವುದರಿಂದ ಕನ್ನಡಕ ಬಳಸುವಾಗ ಎಚ್ಚರ ವಹಿಸದಿದ್ದರೆ ಕಣ್ಣಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದ ಕಾಂಟಾಕ್ಟ್ ಲೆನ್ಸ್ ಬಳಸುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಕಣ್ಣಿನ ರಕ್ಷಣೆ ಮಾಡಿ.
1. ಕಾಂಟಾಕ್ಟ್ ಲೆನ್ಸ್ ಗಳಲ್ಲಿ ಕಲರ್ ಲೆನ್ಸ್ ಬಳಸುವುದನ್ನು ನಿಲ್ಲಿಸಬೇಕು. FDA ರಿಪೋರ್ಟ್ ನಲ್ಲಿ ಕಲರ್ ಲೆನ್ಸ್ ಬಳಸುವುದು ಕಣ್ಣಿಗೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಏಕೆಂದರೆ ಕಲರ್ ಲೆನ್ಸ್ ಕಣ್ಣಿನ ಅಕ್ಷಿಪಟಲಕ್ಕೆ ಆಮ್ಲಜನಕ ಪೂರೈಕೆಗೆ ತಡೆಯೊಡ್ಡುತ್ತದೆ. ಇದರಿಂದ ಕಣ್ಣಿನಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
2. ಲೆನ್ಸ್ ಅನ್ನು ಸರಿಯಾದ ದ್ರಾವಣದಲ್ಲಿ ಹಾಕಿ ಇಡಬೇಕು. ಪ್ರತಿ ಬಾರಿ ಹೊಸ ದ್ರಾವಣದಲ್ಲಿ ಹಾಕಿಡಬೇಕು.
3. ಲೆನ್ಸ್ ಅನ್ನು ಸೌಂದರ್ಯವರ್ಧಕ ಮತ್ತು ಸುಗಂಧ ದ್ರವ್ಯಗಳಿಂದ ದೂರವಿಡಿ. ಇದರಲ್ಲಿರುವ ರಾಸಾಯನಿಕಗಳು ಲೆನ್ಸ್ ಗೆ ಹಾನಿ ಮಾಡಿ ಕಣ್ಣಿನ ಸಮಸ್ಯೆಯನ್ನು ಉಂಟುಮಾಡುತ್ತದೆ.
4. ಕಣ್ಣಿನ ಮೇಕಪ್ ಮಾಡುವುದಾದರೆ ಮೇಕಪ್ ಮುಗಿದ ಮೇಲೆ ಲೆನ್ಸ್ ಧರಿಸಿ.
5. ಕಾಂಟಾಕ್ಟ್ ಲೆನ್ಸ್ ಅನ್ನು ವಾರಕ್ಕೆ ಒಮ್ಮೆ ಸ್ವಚ್ಛಮಾಡಬೇಕು ಮತ್ತು 3 ತಿಂಗಳಿಗೊಮ್ಮೆ ಬದಲಾಯಿಸಬೇಕು.
6. ಕಾಂಟಾಕ್ಟ್ ಲೆನ್ಸ್ ಬಳಸುವ ಮೊದಲು ಕೈಗಳನ್ನು ಶುಚಿಗೊಳಿಸಬೇಕು. ಕೈಗಳನ್ನು ತೊಳೆಯಲು ತುಂಬಾ ಪರಿಮಳವಿರುವ ಸೋಪ್ ಬಳಸಬಾರದು.
7. ದೂಳು, ಹೊಗೆ ಇರುವ ಜಾಗದಲ್ಲಿ ಲೆನ್ಸ್ ಹಾಕಬಾರದು, ಇಂತಹ ಜಾಗದಲ್ಲಿ ಲೆನ್ಸ್ ಧರಿಸಿದರೆ ಕಣ್ಣಿನಲ್ಲಿ ಅಲರ್ಜಿ ಉಂಟಾಗುವುದು.
ಕಣ್ಣಿನ ಬಗ್ಗೆ ಎಚ್ಚರಿಕೆವಹಿಸದಿದ್ದರೆ ಕುರುಡತನ ಕೂಡ ಬರಬಹುದು ಆದ್ದರಿಂದ ಲೆನ್ಸ್ ಬಳಸುವವರು ಈ ಮೇಲಿನ ಸಲಹೆಗಳನ್ನು ಪಾಲಿಸಿ ಕಣ್ಣಿನ ಸಮಸ್ಯೆಯನ್ನು ತಡೆಗಟ್ಟಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
