Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹುಕ್ಕಾ ಸೇವನೆ ಸಿಗರೇಟಿಗಿಂತ ಎಷ್ಟು ಒಳ್ಳೆಯದು?

ಹುಕ್ಕಾ ಸೇವನೆ:
ಒಂದು ಬಟ್ಟಲು, ಉದ್ದದ ಕೊಳವೆ, ಮತ್ತು ಅದರ ತುದಿಯಲ್ಲಿ ಬಾಯಿಗೆ ಇಡಲು ಒಂದು ಸಾಧನವಿರುತ್ತದೆ. ಹೊಗೆಸೊಪ್ಪನ್ನು ಕಲ್ಲಿದ್ದಲಿನೊಂದಿಗೆ ಬಟ್ಟಲಿನಲ್ಲಿ ಬಿಸಿ ಮಾಡಿ ಅದರ ಕೆಳಭಾಗವನ್ನು ನೀರಿನಿಂದ ತುಂಬಲಾಗಿರುತ್ತದೆ. ಕೊಳವೆಯನ್ನು ಆ ಬಟ್ಟಲಿಗೆ ಜೋಡಿಸಲಾಗಿರುತ್ತದೆ. ಅದರಲ್ಲಿ ಉಂಟಾಗುವ ಹೊಗೆಯನ್ನು ಕೊಳವೆ ಮುಖಾಂತರ ಸೇವಿಸಲಾಗುವುದು.
ಹಿಂದೆಲ್ಲಾ ಹುಕ್ಕಾ ಸೇವನೆ ಶ್ರೀಮಂತರ ಜೀವನ ಶೈಲಿಯಾಗಿದ್ದು ಸಿಗರೇಟು ಬಂದ ಮೇಲೆ ಇದರ ಬಳಿಕ ಕಡಿಮೆಯಾಗಿತ್ತು. ಈಗೆಲ್ಲಾ ಈ ಹುಕ್ಕಾ ಸೇವನೆ ಯುವ ಜನಾಂಗಕ್ಕೆ ಒಂದು ಫ್ಯಾಷನ್ ಆಗಿ ಬಿಟ್ಟಿದೆ. ಆದರೆ ಈ ಹುಕ್ಕಾ ಸೇವನೆ ಆರೋಗ್ಯದ ಮೇಲೆ ಸಿಗರೇಟಿಗಿಂತ ಹೆಚ್ಚಿನ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಹುಕ್ಕಾದಿಂದ ಆರೋಗ್ಯದ ಮೇಲಾಗುವ ಪರಿಣಾಮ:
1. ಹೊಗೆಸೊಪ್ಪನ್ನು ಇದ್ದಿಲು (ಕರಿಕೆಂಡ) ಬಳಸಿ ಬಿಸಿ ಮಾಡುವುದರಿಂದ ಇದ್ದಿಲು ಕಾರ್ಬನ್ ಮಾನಾಕ್ಸೈಡ್ ಉತ್ಪತ್ತಿ ಮಾಡುವುದರಿಂದ ಹೊಗೆಸೊಪ್ಪಿನ ಜೊತೆ ಕಾರ್ಬನ್ ಮಾನಾಕ್ಸೈಡ್ ಸಹ ಸೇವಿಸುವುದರಿಂದ ಶ್ವಾಸಕೋಸದ ಕ್ಯಾನ್ಸರ್ ತರುತ್ತದೆ.
2. ವಿಶ್ವ ಆರೋಗ್ಯ ಸಂಸ್ಥೆ ಇದರ ಬಗ್ಗೆ ಅಧ್ಯಾಯನ ನಡೆಸಿ ಒಂದು ಗಂಟೆಯ ಹುಕ್ಕಾ ಸೇವನೆ ನಿಕೋಟಿನ್ ಹಾಕಿದ 200 ಸಿಗರೇಟ್ ಸೇವನೆಗೆ ಸಮವಾಗಿದೆ, ಆದ್ದರಿಂದ ಹುಕ್ಕಾ ಸೇವನೆ ಸಿಗರೇಟ್ ಗಿಂತ ಸುರಕ್ಷವಾದ ವಿಧಾನ ಎಂದು ಭಾವಿಸುವುದು ತಪ್ಪು ಕಲ್ಪನೆಯಾಗಿದೆ ಎಂದು ಹೇಳಿದೆ.
3.ವಾಟರ್ ಪೈಪ್ ಮುಖಾಂತರ ತಂಬಾಕು ಹೊಗೆಯನ್ನು ಸೇವಿಸುವುದರಿಂದ ಅದರಲ್ಲಿರುವ ಹಾನಿಕಾರಕ ಅಂಶಗಳನ್ನು ಬೇರ್ಪಡಿಸಿ, ದೇಹಕ್ಕೆ ಹೆಚ್ಚೇನು ಹಾನಿಕಾರವಲ್ಲದ ಹೊಗೆಯನ್ನು ಸೇವಿಸುತ್ತಿದ್ದೇವೆ ಎಂದು ಭಾವಿಸಿದರೆ ಅದು ಭ್ರಮೆಯಾಗಿದೆ. ಪೈಪ್ ಯಾವುದೆ ಹಾನಿಕಾರಕ ಅಂಶವನ್ನು ಬೇರ್ಪಡಿಸುವುದಿಲ್ಲ, ಅದರ ಬದಲು ಒಂದು ಸಲ ಹುಕ್ಕಾದಲ್ಲಿ ಹೊಗೆ ಸೇವನೆ ಮಾಡಿದರೆ, ಒಂದು ಸಿಗರೇಟಿಗಿಂತ ಅಧಿಕ ಹೊಗೆ ದೇಹದ ಒಳಗೆ ಸೇರಿಸುತ್ತದೆ.
4. ಹುಕ್ಕಾ ಚಟದಿಂದ ಬಾಯಿಯಲ್ಲಿ ಸಹ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಗಂಟಲಿನಲ್ಲಿ ನೋವು ಮತ್ತು ಹುಣ್ಣು, ಗಂಟಲಿನ ಕ್ಯಾನ್ಸರ್, ಬಾಯಿಯಲ್ಲಿ ಹುಣ್ಣು ಮತ್ತು ಹಲ್ಲುಗಳು ಕಪ್ಪಾಗತೊಡಗುತ್ತದೆ.
5. ಗರ್ಭಿಣಿಯರು ಹುಕ್ಕಾ ಸೇವನೆ ಮಾಡುದರೆ ಗರ್ಭಪಾತ ಅಥವಾ ಹೆರಿಗೆಯಾದರೆ ಕಡಿಮೆ ತೂಕದ ಮಗು ಹುಟ್ಟುತ್ತದೆ.
ಸ್ನೇಹಿತರೊಂದಿಗೆ ಸೇರಿ ಮಜಾ ತೆಗೆದುಕೊಳ್ಳಲು ಹುಕ್ಕಾ ಸೇವನೆ ಮಾಡುತ್ತಾರೆ, ಅದರಲ್ಲೂ ಹುಕ್ಕಾ ವಿವಿಧ ರೀತಿಯ ಸ್ವಾದದಲ್ಲಿ ದೊರೆಯುತ್ತಿದೆ. ಇದನ್ನು ಹುಡುಗರು ಮಾತ್ರವಲ್ಲ ಹುಡುಗಿಯರು ಸೇವಿಸುತ್ತಿದ್ದು ಇದು ಯುವ ಜನರ ಫ್ಯಾಷನ್ ಆಗಿದೆ. ಮಜಾಕ್ಕಾಗಿ ಸೇವಿಸುವ ಈ ಹುಕ್ಕಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ, ಸ್ನೇಹಿತರರೊಂದಿಗೆ ಪಾರ್ಟಿಗಳಿಗೆ ಹೋದಾಗ ಇದನ್ನು ತೆಗೆದುಕೊಳ್ಳುವ ಮುನ್ನ ಯೋಚಿಸಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
