Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕಪ್ಪು ಚಾಕಲೇಟ್ ನಲ್ಲಿದೆ ಔಷಧೀಯ ಗುಣ

ಆದರೆ ಈ ಕಪ್ಪು ಚಾಕಲೇಟ್ ಸ್ವಲ್ಪ ಕಹಿಯಾಗಿರುವುದರಿಂದ ಕೆಲವು ಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇತರ ಚಾಕಲೇಟ್ ಗೆ ಹೋಲಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಕೋಕಾ ದೇಹವನ್ನು ಸೇರಿದಾಗ ಈ ಕೆಳಗಿನ ಪ್ರಯೋಜನಗಳು ಉಂಟಾಗುತ್ತವೆ.
1. ಹೃದಯದ ಆರೋಗ್ಯ: ಕಪ್ಪು ಚಾಕಲೇಟ್ ನಲ್ಲಿರುವ ಫ್ಲೇವೊನಾಯ್ಡ್ಸ್ ದೇಹದಲ್ಲಿ antioxidants ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ದೇಹವನ್ನು ಹಾನಿಕಾರಕ ರಾಸಯನಿಕಗಳಿಂದ ಸಂರಕ್ಷಿಸುತ್ತದೆ. ಈ ರಾಸಾಯನಿಕಗಳು ಕಲ್ಮಶ ಗಾಳಿಯನ್ನು ಉಸಿರಾಡುವುದರಿಂದ ಮತ್ತು ಬಿಸಿಲಿನಲ್ಲಿ ಹೆಚ್ಚು ತಿರುಗುವುದರಿಂದ ದೇಹವನ್ನು ಸೇರುತ್ತದೆ. ಇವು ಹೃದಯ ಸಂಬಂಧಿ ಕಾಯಿಲೆಗಳನ್ನು ಉಂಟುಮಾಡುತ್ತದೆ. ಕಪ್ಪು ಚಾಕಲೇಟ್ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ.
2. ಮಾನಸಿಕ ಆರೋಗ್ಯ: ಕಹಿ ಚಾಕಲೇಟ್ ನಲ್ಲಿರುವ ಫಿನಾತೈಲಮೈನ್ ಎಂಬ ಅಂಶವು ಎಂಡ್ರೊಫೈನ್ಸ್ ಉತ್ಪತ್ತಿ ಮಾಡುವುದರಿಂದ ಸಂತೋಷದಿಂದ ಇರುವಂತೆ ಮಾಡುತ್ತದೆ. ಇದನ್ನು ತಿಂದರೆ ಖಿನ್ನತೆ ಮಾಯವಾಗುತ್ತದೆ. ಮಹಿಳೆಯರಲ್ಲಿ ಸೆರೊಟೊನಿನ್ ಪ್ರಮಾಣ ಕಡಿಮೆ ಇರುವುದರಿಂದ ಮುಟ್ಟುವಿನ ಸಮಯದಲ್ಲಿ ಸುಸ್ತು ಆಗುತ್ತಾರೆ , ಆ ಸಮಯದಲ್ಲಿ ಇದನ್ನು ತಿನ್ನುವುದು ಒಳ್ಳೆಯದು.
3. ಸಮಸ್ತ ಜನರಿಗೆ : ಇದನ್ನು ಎಲ್ಲಾ ವಯಸ್ಸಿನ ಮತ್ತು ಮಧುಮೇಹ, ರಕ್ತದೊತ್ತಡ, ಹೃದಯದ ಕಾಯಿಲೆ ಹೀಗೆ ಯಾವುದೇ ಕಾಯಿಲೆಯಿಂದ ಬಳಲುವವರು ತಿನ್ನವುದರಿಂದ ತುಂಬಾ ಪ್ರಯೋಜನ ದೊರೆಯುತ್ತದೆ.
4. ಸೌಂದರ್ಯ: ಇದನ್ನು ತಿಂದರೆ ತ್ವಚೆಯನ್ನು ನೇರಳಾತೀತ ಕಿರಣಗಳಿಂದ ರಕ್ಷಿಸಿ, ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಇದನ್ನು ಬಳಸಿ ಫೇಶಿಯಲ್ ಮಾಡುವುದರಿಂದ ತ್ವಚೆಯ ಅಂದ ಕೂಡ ಹೆಚ್ಚುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications