Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಣ್ಣನೆ ಪಾನಿಪೂರಿಗಿಂತ ಬಿಸಿಬಿಸಿ ದೋಸೆ ಲೇಸು

ರಸ್ತೆಯಲ್ಲಿ ಸುಮ್ಮನೆ ಹೋಗುವಾಗ ಬೀದಿ ಬದಿಯ ತಿಂಡಿ ವಾಸನೆ ಮೂಗಿಗೆ ಘಮ್ಮೆಂದು ಬಡೆದರೆ ಸಾಕು ಮನಸ್ಸು ತಿನ್ನಬೇಕೆನ್ನುತ್ತದೆ, ನಾಲಗೆ ರುಚಿ ಬಯಸುತ್ತದೆ, ನಮ್ಮ ಬುದ್ಧಿ ಬೀದಿ ಬದಿಯ ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಚ್ಚರಿಸುತ್ತಿದ್ದರೂ ಆವಾಗ ಅದು ಕೆಲಸಕ್ಕೆ ಬರುವುದಿಲ್ಲ.
ಬೀದಿ ಬದಿಯಲ್ಲಿ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲವಾದರೂ ಕೆಲವೊಂದು ಸ್ಟ್ರೀಟ್ ಫುಡ್ ಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಅವುಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.
1. ಬೀದಿ ಬದಿಯ ಆಹಾರಗಳನ್ನು ಕೊಳ್ಳುವ ಮೊದಲು ಈ ಎರಡು ಅಂಶಗಳನ್ನು ಗಮನದಲ್ಲಿ ಇಡಬೇಕು.
* 60 ವಯಸ್ಸಿಗಿಂತ ಮೇಲ್ಪಟ್ಟವರಿಗೆ ಮತ್ತು ಮಕ್ಕಳಿಗೆ ಬೀದಿ ಬದಿಯ ಆಹಾರ ಸೇವನೆ ಒಳ್ಳೆಯದಲ್ಲ.
* 20 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 60 ವರ್ಷಕ್ಕಿಂತ ಕೆಳಗಿನವರು ಈ ರೀತಿಯ ಆಹಾರಗಳನ್ನು ಸೇವಿಸಹುದಾಗಿದ್ದು, ಸೇವಿಸುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನಿಸಿ.
2. ಬೀದಿ ಬದಿಯ ಆಹಾರಗಳನ್ನು ಕೊಳ್ಳುವಾಗ ಅದು ಬಿಸಿಯಾಗಿದೆಯೆ ಎಂದು ಗಮನಿಸಬೇಕು. ಅದು ಬಿಸಿಯಾಗಿದ್ದರೆ ತಿನ್ನಬಹುದಾಗಿದೆ, ತಣ್ಣಗಾದ ಆಹಾರವನ್ನು ಮುಟ್ಟಲೇಬಾರದು.
3. ಬೀದಿ ಬದಿಯ ಆಹಾರವನ್ನು ಬಿಸಿಯಾಗಿದ್ದಾಗಲೆ ತಿನ್ನಿ, ಅದು ತಣ್ಣಗಾದ ಮೇಲೆ ಬಿಸಿ ಮಾಡಿ ತಿನ್ನಬಾರದು.
4. ತಯಾರಿಸುವ ಜಾಗ ಶುದ್ಧವಾಗಿದೆಯೆ ಎಂದು ಗಮನಿಸಿ, ಸ್ಟಾರ್ ಹೋಟಲಿನಲ್ಲಿರುವ ಶುದ್ಧತೆ ಅಲ್ಲದಿದ್ದರೂ ಆ ಸ್ಥಳ ತಕ್ಕಮಟ್ಟಗೆ ಚೊಕ್ಕವಾಗಿದ್ದರೆ ಮಾತ್ರ ಆಹಾರವನ್ನು ಸೇವಿಸಿ.
5. ಹಸಿ ತರಕಾರಿಗಳನ್ನು ಹಾಕಿ ತಯಾರಿಸಿದ ಆಹಾರಕ್ಕಿಂತ ಬೇಯಿಸಿದ ಆಹಾರವನ್ನು ಸೇವಿಸುವುದು ಒಳ್ಳೆಯದು. ಏಕೆಂದರೆ ತರಕಾರಿಯನ್ನು ಯಾವ ನೀರಿನಲ್ಲಿ ತೊಳೆದಿರುತ್ತಾರೊ, ಸರಿಯಾಗಿ ತೊಳೆದಿರುತ್ತಾರೊ ಒಂದು ಗೊತ್ತಾಗುವುದಿಲ್ಲ. ಆದ್ದರಿಂದ ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ.
6. ಬೀದಿ ಬದಿಯಲ್ಲಿ ಮಾಂಸಾಹಾರವನ್ನು ಸೇವಿಸುವಾಗ ಅದನ್ನು ಚೆನ್ನಾಗಿ ಬೇಯಿಸಿದರೆ ಮಾತ್ರ ಸೇವಿಸಬೇಕು. ಅಂದಹಾಗೆ, ತಣ್ಣನೆ ಪಾನಿಪೂರಿಗಿಂತ ಬಿಸಿಬಿಸಿ ದೋಸೆ ಲೇಸು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
