Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ದೇಹದಲ್ಲಿ ನೀರಿನ ಕೊರತೆ ತಲೆನೋವು ತರಬಹುದಂತೆ!

ಆದರೆ ಇವೆಲ್ಲದರ ಹೊರತಾಗಿ ತಲೆ ನೋವಿಗೆ ಇನ್ನೊಂದು ಮುಖ್ಯ ಕಾರಣವೂ ಇದೆ. ದೇಹದಲ್ಲಿ ನೀರಿನ ಕೊರತೆಯಾದರೆ ತಲೆ ನೋವು ಬರಲು ಕಾರಣವಾಗುತ್ತದೆ. ಆಮ್ಲಜನಕದ ನಂತರ ದೇಹಕ್ಕೆ ಅತಿ ಅಗತ್ಯವಿರುವ ಅಂಶ ನೀರು. ಕನಿಷ್ಠ 2 ತಿಂಗಳು ಆಹಾರವಿಲ್ಲದೆ ಇರಬಹುದು, ಆದರೆ ನೀರಿಲ್ಲದೆ ಕೆಲವು ದಿನಗಳೂ ಕೂಡ ಬದುಕಲು ಸಾಧ್ಯವಿಲ್ಲ.
ಆದರೆ ಹಲವರಿಗೆ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಎಷ್ಟು ನೀರಿನ ಅವಶ್ಯಕತೆ ಎಂಬುದರ ಬಗ್ಗೆ ಅರಿವಿರುವುದಿಲ್ಲ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸಂದರ್ಭದಲ್ಲಿಯೇ ಉಂಟಾಗುವುದು ತಲೆನೋವಿನ ಸಮಸ್ಯೆ.
ನಿರ್ಜಲೀಕರಣವೆಂದರೆ ದೇಹದಲ್ಲಿ ನೀರು ಮತ್ತು ಸೋಡಿಯಂ, ಕ್ಲೋರೈಡ್, ಪೊಟಾಶಿಯಂ ಮುಂತಾದ ಅವಶ್ಯಕ ಅಂಶಗಳು ಕಡಿಮೆಗೊಳ್ಳುತ್ತಿರುವುದರ ಸಂಕೇತ. ದೇಹಕ್ಕೆ ಅಗತ್ಯವಿದ್ದಷ್ಟು ನೀರು ದೊರಕದಿರುವುದೇ ಇದಕ್ಕೆ ಕಾರಣ.
ತಲೆನೋವು ಅನಾರೋಗ್ಯಕರವಲ್ಲ, ಆದರೆ ಆರೋಗ್ಯದಲ್ಲಿ ಏನೋ ವ್ಯತ್ಯಾಸಗೊಂಡಿರುವುದನ್ನು ತೋರ್ಪಡಿಸುವ ವಿಧಾನವೇ ತಲೆನೋವು. ದೇಹಕ್ಕೆ ನೀರಿನಂಶ ಬೇಕೆಂದಾಗ ದಾಹವೇ ಆಗಬೇಕೆಂದೇನಿಲ್ಲ. ಅದು ತಲೆನೋವಿನ ಮೂಲಕವು ವ್ಯಕ್ತಗೊಳ್ಳಬಹುದು. ಆದ್ದರಿಂದ ನೀರಿನ ಸೇವನೆ ಹೆಚ್ಚಿದ್ದಷ್ಟೂ ಒಳ್ಳೆಯದು. ದಿನಕ್ಕೆ 8 ರಿಂದ 10 ಲೋಟ ನೀರು ಸೇವನೆ ಅತ್ಯವಶ್ಯಕ. ಅದರಲ್ಲೂ ತಲೆನೋವು ಆಗಾಗ್ಗೆ ಕಾಡುತ್ತಿದ್ದರೆ ನೀರನ್ನು ಹೆಚ್ಚು ಕುಡಿಯಲು ಆರಂಭಿಸಿ. ಇದು ಬೇಗನೆ ಕೆಲಸ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
