Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಲ್ಯಾಪ್ ಟಾಪ್ ನಿಮ್ಮ ಪ್ರಾಣಕ್ಕೇ ಕುತ್ತಾಗಬಹುದು ಹುಷಾರ್!

ಲ್ಯಾಪ್ ಟಾಪ್ ಹೆಸರಿಗೆ ತಕ್ಕಂತೆ ಅದನ್ನು ಸಾಕಷ್ಟು ಜನರು ಕೆಲಸಮಾಡುವಾಗ ಮಾತ್ರವಲ್ಲ, ತಿನ್ನುವಾಗ, ಮಲುಗುವಾಗ ಜೊತೆಯಲ್ಲಿಯೆ ಹಿಡಿದು ಓಡಾಡುತ್ತಾರೆ.
ಬೆಳಗ್ಗೆ ಎದ್ದು ಅವರ ಮುಖ ನೋಡುತ್ತಾರೊ ಇಲ್ಲವೊ ಫೆಸ್ ಬುಕ್ ನೋಡುತ್ತಾರೆ, ಹರಟೆ, ಸಂಗೀತ, ಕಲಿಕೆ, ಮನರಂಜನೆ ಅದು ಇದು ಎಂದು ತಮ್ಮ ದಿನವನ್ನು ಪೂರ್ತಿ ಲ್ಯಾಪ್ ಟಾಪ್ ನಲ್ಲಿ ಕಳಿಯುವರು ಎಷ್ಟೊ ಮಂದಿ.
ಅತಿಯಾದರೆ ಅಮೃತವು ವಿಷವೆಂಬುದಕ್ಕೆ ಉದಾಹರಣೆ ಲ್ಪಾಪ್ ಟಾಪ್, ಇದರ ಮಿತಿ ಮೀರಿದ ಬಳಕೆ ದೇಹದ ಆರೋಗ್ಯ ಮೇಲೆ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರುವುದು. ಅವುಗಳಲ್ಲಿ ಈ ಕೆಳಗಿನವುಗಳನ್ನು ಪ್ರಮುಖವಾಗಿ ಹೆಸರಿಸಬಹುದಾಗಿದೆ.
1. ದೃಷ್ಟಿ ದೋಷ: ಲ್ಯಾಪ್ ಟಾಪ್ ಅನ್ನು ಮಿತಿ ಮೀರಿ ಬಳಸುವುದರಿಂದ ದೃಷ್ಟಿದೋಷ ಉಂಟಾಗುವುದು. ಅಷ್ಟೆ ಅಲ್ಲದೆ ತಲೆನೋವಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
2. ಷಂಡತನ: ಅತಿ ಹೆಚ್ಚಿನ ಹೊತ್ತು ಲ್ಯಾಪ್ ಟಾಪ್ ತೊಡೆಯ ಮೇಲೆ ಇಟ್ಟು ಕೆಲಸ ಮಾಡುವುದು ಒಳ್ಳೆಯದಲ್ಲ, ಅದು ಪುರುಷರಲ್ಲಿ ಷಂಡತನದ ಸಮಸ್ಯೆಯನ್ನು ತರುವುದು.
3. ಸಂಬಂಧ: ಲ್ಯಾಪ್ ಟಾಪ್ ನಲ್ಲಿಯೆ ಅತಿ ಹೆಚ್ಚು ಕಳೆಯುವುದರಿಂದ ಅವರು ಗೆಳೆಯರೊಂದಿಗೆ ಅಥವಾ ಮನೆಯವರ ಜೊತೆ ಹೆಚ್ಚಿನ ಸಮಯ ವ್ಯಯ ಮಾಡುವುದಿಲ್ಲ . ಇದರಿಂದ ಮನೆಯವರ ನಡುವೆ ಮಾತುಕತೆ ಕಡಿಮೆಯಾಗಿ ಸಂಬಂಧಗಳಲ್ಲಿ ಪ್ರೀತಿ ಕಡಿಮೆಯಾಗುತ್ತದೆ.
4. ಬೊಜ್ಜು: ದಿನದಲ್ಲಿ ಅಧಿಕ ಹೊತ್ತು ಲ್ಯಾಪ್ ಟಾಪ್ ಮುಂದೆ ಕಳಿಯುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯುವುದು.
5. ಸಾವು: ಲ್ಯಾಪ್ ಟಾಪ್ ಹೆಚ್ಚು ಬಿಸಿಯಾಗಿ ಸ್ಪೋಟಗೊಂಡು ವ್ಯಕ್ತಿಗಳು ಸತ್ತ ಮತ್ತು ಅಪಘಾತಕ್ಕೆ ಒಳಗಾಗಿದ್ದು ಇದೆ. ಉದಾಹರಣೆಗೆ 34 ವರ್ಷದ ಸಯಾನ್ ಚೌಧುರಿ ಮಲ್ಟಿ ನ್ಯಾಷನಲ್ ಕಂಪನಿಯ ಉದ್ಯೋಗಿ ಇದೆ ನವಂಬರ್ ನಲ್ಲಿ ಲ್ಯಾಪ್ ಟಾಪ್ ಸ್ಪೋಟಗೊಂಡು ಸತ್ತುಹೋದರು, ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ಲ್ಯಾಪ್ ಟಾಪ್ ನಿಂದ ಪ್ರಾಣಹಾನಿ?
1. ಲ್ಯಾಪ್ ಟ್ಯಾಪ್ ಬ್ಯಾಟರಿ ಹೆಚ್ಚು ಬಿಸಿಯಾಗುವುದರಿಂದ ಅದರ ಬ್ಯಾಟರಿ ಸ್ಪೋಟಗೊಂಡು ಕಾರ್ಬನ್ ಮೊಮೊಕ್ಸೈಡ್ ಎಂಬ ವಿಷ ಅನಿಲವನ್ನು ಉತ್ಪತ್ತಿ ಮಾಡುತ್ತದೆ.
2. ಬ್ಯಾಟರಿ ಬಿಸಿಯಾಗಿ ಶಾರ್ಟ್ ಸರ್ಕ್ಯೂಟ್ ಉಟುಮಾಡುತ್ತದೆ.
3. ಲಿಥಿಯಂ ಬ್ಯಾಟರಿನಲ್ಲಿ ಬೇಗನೆ ಹೊತ್ತಿ ಉರಿಯುವ ದ್ರವವಿದ್ದು ಇದು ಅಧಿಕ ಬಿಸಿಯಾದಾಗ ಸೋರಿಕೆಯಾಗಿ ಅದು ಗಾಳಿಯಲ್ಲಿ ಬೆರೆತು ಬೆಂಕಿಯನ್ನು ಉತ್ಪತ್ತಿ ಮಾಡುತ್ತದೆ.
ಪರಿಹಾರ:
1. ಲ್ಯಾಪ್ ಟಾಪ್ ಅನ್ನು ಮಿತವಾಗಿ ಬಳಸಬೇಕು.
2. ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಹೆಚ್ಚಿನ ಹೊತ್ತು ಇಡಬಾರದು.
3. ಮಲುಗುವ ಮೊದಲು ಲ್ಯಾಪ್ ಟಾಪ್ ಅನ್ನು ಆಫ್ ಮಾಡಿ ಮಲಗಬೇಕು.
4. ಮಲುಗುವಾಗ ಚಾರ್ಜ್ ಗೆ ಇಟ್ಟು ಮಲಗಬಾರದು, ಚಾರ್ಜ್ ಅನ್ನು ತೆಗೆದು ಮಲಗಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
