Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಬುದ್ಧಿ ಹಲ್ಲಿನ ನೋವಿಗೆ ತಕ್ಷಣದ ಉಪಶಮನ ಹೇಗೆ?

ಒಸಡು ಮತ್ತು ಮೂಳೆಯ ಮಧ್ಯೆ ಸಿಕ್ಕಿಕೊಳ್ಳುವ ಈ ಹಲ್ಲಿಗೆ ಸರಿಯಾಗಿ ಹೊರಬರಲು ಸಾಧ್ಯವಾಗುವುದರಿಂದ ನೋವು ಸಹಜವಾಗಿರುತ್ತೆ. ಈ ನೋವಿನ ನಿವಾರಣೆಗೆಂದು ಇಲ್ಲಿ ಕೆಲವೊಂದು ತಕ್ಷಣದ ಮನೆಮದ್ದನ್ನು ನೀಡಲಾಗಿದೆ.
ಬುದ್ಧಿ ಹಲ್ಲಿನ ನೋವಿಗೆ ತಕ್ಷಣದ ಉಪಶಮನ ಹೇಗೆ?
1. ಈ ನೋವಿಗೆ ತಕ್ಷಣವೇ ತಾತ್ಕಾಲಿಕ ಪರಿಹಾರ ನೀಡಬೇಕೆಂದಿದ್ದರೆ ಒಂದು ಎಸಳು ಬೆಳ್ಳುಳ್ಳಿಯನ್ನು ಉಪ್ಪಿನೊಂದಿಗೆ ಬೆರೆಸಿ ಅದನ್ನು ನೋವಿರುವ ಜಾಗದಲ್ಲಿಟ್ಟುಕೊಂಡರೆ ಅಥವಾ ಅಗಿಯುತ್ತಿದ್ದರೆ ಹಲ್ಲು ಗಟ್ಟಿಯಾಗುವುದರೊಂದಿಗೆ ಆರೋಗ್ಯವಾಗಿಯೂ ಇರುತ್ತದೆ.
2. ಹಲ್ಲು ಬರುತ್ತಿರುವ ಜಾಗದಲ್ಲಿ ಚಿಕ್ಕ ಈರುಳ್ಳಿ ಪೀಸನ್ನು ಇಟ್ಟುಕೊಂಡು 3 ನಿಮಿಷ ಅಗಿಯಬೇಕು. ಇದರಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶ ಹಲ್ಲಿನಲ್ಲಿರುವ ಕ್ರಿಮಿಯನ್ನು ಕೊಲ್ಲುತ್ತದೆ. ನೋವನ್ನೂ ಕಡಿಮೆಗೊಳಿಸುತ್ತದೆ.
3. ಸೌತೆಕಾಯಿ ಬುದ್ಧಿ ಹಲ್ಲಿನ ನೋವಿನ ನಿವಾರಣೆಗೆ ತುಂಬಾ ಪರಿಣಾಮಕಾರಿ ಮದ್ದು. ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು 15-20 ನಿಮಿಷ ನೋವಿನ ಜಾಗದಲ್ಲಿಟ್ಟುಕೊಂಡರೆ ನೋವಿನೊಂದಿಗೆ ಊತವನ್ನೂ ಉಪಶಮನ ಮಾಡುತ್ತದೆ.
4. ಬುದ್ಧಿ ಹಲ್ಲು ಹುಟ್ಟುವಾಗ ಕಾಣಿಸಿಕೊಳ್ಳುವ ನೋವಿನ ಪ್ರಮಾಣವನ್ನು ಕಡಿಮೆಗೊಳಿಸಲು ಲವಂಗವನ್ನು ಬಾಯಿಯಲ್ಲಿಟ್ಟುಕೊಂಡು ಮೆಲ್ಲಗೆ ಅಗಿಯಬೇಕು. ಲವಂಗದ ಎಣ್ಣೆಯನ್ನೂ ಹಚ್ಚಿಕೊಳ್ಳಬಹುದು.
5. ಬ್ಲ್ಯಾಕ್ ಟೀ ಬ್ಯಾಗನ್ನು ಬಿಸಿ ಮಾಡಿ ನೋವಿನ ಜಾಗದಲ್ಲಿಟ್ಟುಕೊಂಡರೆ ನೋವು ಕಡಿಮೆಯಾಗುವುದಲ್ಲದೆ, ರಕ್ತಸ್ರಾವವಾಗುವುದನ್ನೂ ತಡೆಯುತ್ತದೆ.
6. ಮೆಣಸಿನ ಪುಡಿ ಅಥವಾ ಪುದೀನಾ ಕೂಡ ಹಲ್ಲುನೋವಿಗೆ ಉಪಶಮನ ನೀಡುತ್ತದೆ.
7. ಐಸ್ ಕ್ಯೂಬ್ ಗಳನ್ನು ಕೆನ್ನೆ ಮೇಲೆ ನಯವಾಗಿ ಉಜ್ಜಬಹುದು. ಇದು ಊತ ಮತ್ತು ನೋವನ್ನು ನಿವಾರಿಸುತ್ತದೆ. ಆದರೆ ನೇರವಾಗಿ ಐಸ್ ಕ್ಯೂಬನ್ನು ಹಲ್ಲಿನ ಮೇಲೆ ಇಟ್ಟುಕೊಳ್ಳಬಾರದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
