Latest Updates
-
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಮಗುವಿನಲ್ಲಿ ಜಾಂಡೀಸ್ ಗೆ ಕಾರಣ ಮತ್ತು ಚಿಕಿತ್ಸೆ?

ನವಜಾತ ಶಿಶುಗಳಲ್ಲಿ ಜಾಂಡೀಸ್ ಗೆ ಕಾರಣ?
ರಕ್ತದಲ್ಲಿ ಬಿಲಿರುಬಿನ್ (ಹಳದಿ ಪಿತ್ತ ದ್ರವ್ಯ) ಹೆಚ್ಚಾಗುವುದೇ ಜಾಂಡೀಸ್ ಗೆ ಮುಖ್ಯ ಕಾರಣ. ರಕ್ತದಲ್ಲಿ ಕಂಡುಬರುವ ಈ ಹಳದಿ ಅಂಶ ತ್ವಚೆಯಲ್ಲಿ ಸೇರಿಕೊಂಡು ಚರ್ಮವನ್ನೂ ಹಳದಿ ಬಣ್ಣಕ್ಕೆ ತಿರುಗಿಸುತ್ತದೆ ಮತ್ತು ಈ ಹಳದಿ ಅಂಶದ ವಿರುದ್ಧ ಹೋರಾಡಲು ನವಜಾತ ಶಿಶುವಿನ ಲಿವರ್ ಇನ್ನೂ ಸಾಮರ್ಥ್ಯ ಹೊಂದಿಲ್ಲದ ಕಾರಣ ಜಾಂಡೀಸ್ ಉಲ್ಬಣಗೊಳ್ಳುತ್ತದೆ. ತಕ್ಷಣವೇ ಪರಿಹಾರ ಕಂಡುಕೊಳ್ಳದಿದ್ದ ಪಕ್ಷ, ಕರುಳಿನಲ್ಲಿ ಸೇರಿಕೊಂಡು ಜಾಂಡೀಸ್ ಗಂಭೀರವಾಗುತ್ತದೆ.
ಎಂತಹ ಮಗುವಿನಲ್ಲಿ ಜಾಂಡೀಸ್ ಸಾಧ್ಯತೆ ಹೆಚ್ಚು?
ಅವಧಿಗೆ ಮುನ್ನ ಜನಿಸುವ ಮಗುವಿನಲ್ಲಿ, ಪಿತ್ತಜನಕಾಂಗ (ಲಿವರ್) ಬೆಳವಣಿಗೆ ಇಲ್ಲದ ಮಗುವಿನಲ್ಲಿ, ಕೆಲವೊಮ್ಮೆ ಎದೆಹಾಲಿನ ಮೂಲಕವೂ ಜಾಂಡೀಸ್ ಬರಬಹುದು.
ಮಗುವಿನಲ್ಲಿನ ಜಾಂಡೀಸ್ ಗೆ ಚಿಕಿತ್ಸೆ ಏನು?
* ನವಜಾತ ಶಿಶುವಿನಲ್ಲಿ ಕಾಣಿಸಿಕೊಂಡ ಜಾಂಡೀಸ್ ನಿವಾರಣೆಗೆ ಫೋಟೊಥೆರಪಿ ಚಿಕಿತ್ಸೆ ನೀಡಲಾಗುತ್ತೆ. ಈ ಚಿಕಿತ್ಸೆಯ ವಿಧಾನದಲ್ಲಿ ಮಗುವನ್ನು ಒಂದು ಅಥವಾ ಎರಡು ದಿನ ಬೀಮ್ ಲೈಟ್ ನಲ್ಲಿ ಇಡಲಾಗುತ್ತದೆ.
ಈ ಫ್ಲೋರೊಸೆಂಟ್ ಲೈಟ್ ಮಗುವಿನ ದೇಹದಲ್ಲಿದ್ದ ಬಿಲಿರುಬಿನ್ ಅಂಶವನ್ನು ಲುಮಿರುಬಿನ್ (ನೀರು) ಅಂಶಕ್ಕೆ ಪರಿವರ್ತನೆ ಮಾಡಿ ಮೂತ್ರದ ಮೂಲಕ ಹೊರಹೋಗುವಂತೆ ಮಾಡುತ್ತದೆ. ಈ ಸಮಯದಲ್ಲಿ ಗಾಢ ಬೆಳಕಿನಿಂದ ಮಕ್ಕಳ ಕಣ್ಣಿಗೆ ತೊಂದರೆ ಉಂಟಾಗದಿರಲು ರಕ್ಷಣೆ ಒದಗಿಸಿರಲಾಗುತ್ತೆ.
* ಜಾಂಡೀಸ್ ಚಿಕಿತ್ಸೆಗೆಂದು ಕೆಲವು ಆಸ್ಪತ್ರೆಗಳಲ್ಲಿ ಫೈಬರ್ ಆಪ್ಟಿಕ್ ಬ್ಲಾಂಕೆಟ್ ಗಳನ್ನೂ ಉಪಯೋಗಿಸಲಾಗುತ್ತೆ.
* ಫೋಟೊಥೆರಪಿಯಿಂದಲು ಈ ಬಿಲಿರುಬಿನ್ ಅಂಶ ಕಡಿಮೆಯಾಗಿಲ್ಲದ ಪಕ್ಷದಲ್ಲಿ ಮಗುವಿನ ರಕ್ತವನ್ನು ಸಂಪೂರ್ಣವಾಗಿ ಬದಲಾಗಿಸಲಾಗುತ್ತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
