Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ತನ ಕ್ಯಾನ್ಸರ್ ಗೆ ಸ್ವಯಂ ತಪಾಸಣೆ ಹೇಗೆ?

ಸ್ತನ ಕ್ಯಾನ್ಸರ್ ಗುರುತಿಸುವ ಮತ್ತು ಅದು ಪೂರ್ಣ ಆವರಿಸುವ ಮುನ್ನ ತಡೆಯುವ ಕೆಲವು ಮಾರ್ಗೋಪಾಯಗಳೂ ಇಲ್ಲಿದೆ.
* ವಂಶವಾಹಿ ತಿಳಿದುಕೊಳ್ಳಿ: ಸ್ತನ ಕ್ಯಾನ್ಸರ್ ವಂಶವಾಹಿಯಿಂದ ಬರಬಹುದಾದ ರೋಗವೆಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ತಾಯಿಯಿಂದ ಮಗಳಿಗೋ ಅಥವಾ ಅಜ್ಜಿಯಿಂದ ಮೊಮ್ಮಗಳಿಗೋ ಕ್ಯಾನ್ಸರ್ ಜೀನ್ ಹರಡಬಹುದು. ನಿಮ್ಮ ತಾಯಿಯ ಕುಟುಂಬ ವರ್ಗದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದರೆ ವಂಶವಾಹಿಯಿಂದ ಅದು ನಿಮಗೂ ತಗುಲುವ ಸಾಧ್ಯತೆಯಿರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲೇಬೇಕಾಗುತ್ತದೆ. ಹೀಗಿದ್ದ ಪಕ್ಷದಲ್ಲಿ ಆರು ತಿಂಗಳಿಗಾದರೂ ಸ್ತ್ರೀ ರೋಗ ತಜ್ಞರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
* ಕ್ಯಾನ್ಸರ್ ಜೀನ್ ಗೆ ಪ್ರಚೋದನೆ ಬೇಡ: ನಿಮ್ಮ ವಂಶಜರಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದ ಪಕ್ಷದಲ್ಲಿ ಕ್ಯಾನ್ಸರ್ ಪ್ರಚೋದಿಸುವ ಅಂಶಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕ್ಯಾನ್ಸರ್ ತಂದೊಡ್ಡಬಹುದಾದ ಆಹಾರವಿರಲಿ, ಧೂಮಪಾನವಿರಲಿ, ಈ ಕುರಿತು ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಮೊದಲೇ ವಂಶವಾಹಿ ರೂಪದಲ್ಲಿ ಗುಪ್ತವಾಗಿದ್ದ ಕ್ಯಾನ್ಸರ್ ಜೀನ್ ಗೆ ನೀವು ಪ್ರಚೋದನೆ ನೀಡಿದಂತಾಗುತ್ತದೆ.
* ಪತ್ತೆ ಮಾರ್ಗ ತಿಳಿಯಿರಿ: ಸ್ತನ ಕ್ಯಾನ್ಸರ್ ನಲ್ಲಿ ಮೂರು ಹಂತಗಳಿವೆ. ಟ್ಯೂಮರ್, ನಾಡಲ್, ಮೆಟಾಸ್ಟಾಸಿಸ್. ಟ್ಯೂಮರ್ ಹಂತದಲ್ಲಿ ಸ್ತನ ಕ್ಯಾನ್ಸರ್ ಗಡ್ಡೆ ರೂಪದಲ್ಲಿದ್ದು, ಅದನ್ನು ಪತ್ತೆ ಹಚ್ಚಿದರೆ ಬದುಕುವ ಸಾಧ್ಯತೆ ಶೇಕಡ 90 ರಷ್ಟಿರುತ್ತದೆ. ನಾಡಲ್ ಹಂತದಲ್ಲಿ ಈ ಗಡ್ಡೆ ಒಡೆಯಲು ಆರಂಭಿಸಿರುತ್ತದೆ. ಕೊನೆಯ ಹಂತದಲ್ಲಿ ಗಡ್ಡೆ ಒಡೆದು ಹರಡಿಕೊಂಡುಬಿಟ್ಟಿರುತ್ತದೆ. ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವಲ್ಲಿ ಇರುವ ದೊಡ್ಡ ತೊಂದರೆ ಎಂದರೆ ಇದು ಕಾಣಿಸಿಕೊಳ್ಳುವುದೇ ಬದುಕುವ ಸಾಧ್ಯತೆ 50% ಕಡಿಮೆಯಾದ ನಾಡಲ್ ಹಂತದಲ್ಲಿ. ಕೊನೆಯ ಹಂತದಲ್ಲಿ ಇದು ಮಾರಕವಾಗಬಹುದು.
* ಸ್ವಯಂ ಚಿಕಿತ್ಸೆ: ಸ್ತನ ಕ್ಯಾನ್ಸರ್ ಆರಂಭಗೊಳ್ಳುವ ಸೂಚನೆ ಕಂಡು ಹಿಡಿಯುವ ಸುಲಭೋಪಾಯವೆಂದರೆ ಸ್ವಯಂ ತಪಾಸಣೆ ಮಾಡಿಕೊಳ್ಳುವುದು. ಪ್ರತಿಯೊಬ್ಬ ಮಹಿಳೆಯೂ ಇದಕ್ಕೆ ಹೊರತಾಗಿಲ್ಲ. ಸ್ನಾನ ಮಾಡುವಾಗಲೋ ಅಥವಾ ಬಟ್ಟೆ ಬದಲಾಯಿಸುವಾಗಲೋ ಆಗಾಗ್ಗೆ ಗಡ್ಡೆಯಿರುವ ಲಕ್ಷಣವನ್ನು ತಪಾಸಣೆ ನಡೆಸಿ. ವೃತ್ತಾಕಾರವಾಗಿ ಸ್ತನದ ಮೇಲೆ ಕೈಯ್ಯಾಡಿಸಿದಾಗ ಗಡ್ಡೆ ಇರುವಂತೆ ಕಂಡುಬಂದರೆ ತಡ ಮಾಡದೆ ತಕ್ಷಣವೇ ಸ್ತ್ರೀ ರೋಗ ತಜ್ಷರನ್ನು ಭೇಟಿ ಮಾಡಿ.
ಮುಟ್ಟಾದ ಸಂದರ್ಭ ಅಥವಾ ಅದಕ್ಕೆ ಮುನ್ನ ಸ್ವಲ್ಪ ಬದಲಾವಣೆ ಕಂಡು ಬರುವುದು ಸಹಜ. ಆದರೆ ಅದರ ಹೊರತೂ ಏನೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
