Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸರ್ವ ರೋಗಕ್ಕೂ ಸಾರಾಯಿ ಮದ್ದು!

ವಿಷಮ ಶೀತ ಜ್ವರ, ಚಳಿ ಜ್ವರ, ಕಳ್ಳೀ ಜ್ವರ, ಕೋಳಿ ಜ್ವರ, ಕುರಿ ಜ್ವರ, ಹಂದಿ ಜ್ವರ... ಜ್ವರಗಳ ಹೆಸರುಗಳ ಪಟ್ಟಿ ವರ್ಷದಿಂದ ವರ್ಷಕ್ಕೇ ಉದ್ದುದ್ದ ಬೆಳೆಯುತ್ತಲೇ ಇದೆ. ಇದೀಗ ಈ ಎಲ್ಲಾ ಜ್ವರಗಳಿಗೂ ಒಂದು ಸಾಮಾನ್ಯ ಮದ್ದನ್ನು ಕಂಡು ಹಿಡಿಯವಲ್ಲಿ ಕೆಲವು ವಿಜ್ಞಾನಿಗಳು ಪ್ರಯೋಗಶೀಲರಾಗಿದ್ದಾರೆ. ಸದ್ದಕ್ಕೇ ಕೇವಲ ಇಲಿ ಮತ್ತು ಮಂಗಗಳ ಮೇಲೆ ಮಾತ್ರ ಈ ಔಷಧಿಯನ್ನು ಪ್ರಯೋಗಿಸುತ್ತಿದ್ದಾರೆ. ಹಾಗೂ ಈ ಪ್ರಾಣಿಗಳ ರೋಗ ನಿರೋಧಕ ಶಕ್ತಿಯಲ್ಲಿ ಉತ್ತಮ ಅಭಿವೃದ್ದಿ ಕಂಡುಬಂದಿದೆ.
ಪೋಲಿಯೋ, ಧನುರ್ವಾಯು, ದಡಾರ ಮುಂತಾದ ರೋಗಗಳು ಒಂದು ಕಾಲದಲ್ಲಿ ಎಂತಹ ಭಯಾನಕ ರೋಗಗಳಾಗಿದ್ದವು ಎಂಬುದು ಬಹುಷಃ ಇತ್ತೀಚಿನ ಜೆನರೇಶನ್‌ಗೆ ಅಷ್ಟಾಗಿ ತಿಳಿದಿರಲಾರದು. ಹಿಂದಿನ ಕಾಲದಲ್ಲಿ ಒಮ್ಮೆ ಈ ರೋಗಗಳು ಕಾಣಿಸಿಕೊಂಡರೆ, ಇಡೀ ಒಂದು ಊರನ್ನೇ ಆಹುತಿ ತೆಗೆದುಕೊಳ್ಳುತ್ತಿದ್ದವು. ಅಂತಹ ಭಯಾನಕ ರೋಗಗಳನ್ನು ತಡೆಯಲು ಈಗ ಬಲು ಸುಲಭ. ಉಚಿತವಾಗಿ ಸಿಗುವ ಕೆಲವು ಲಸಿಕೆಗಳನ್ನು ಬಾಲ್ಯದಲ್ಲಿಯೇ ಹಾಕಿಸಿಬಿಟ್ಟರೇ ಮುಗಿಯಿತು. ಇಡೀ ಜೀವಮಾನದಲ್ಲಿ ಮತ್ತೊಮ್ಮೆ ಈ ರೋಗಗಳ ಭಯವಿರದು.
ಈಗ ಎಲ್ಲಾ ರೀತಿಯ ಕಳ್ಳಿ, ಕೊಳ್ಳಿ ಜ್ವರಗಳನ್ನೂ ಶಾಶ್ವತವಾಗಿ ಮಟ್ಟಹಾಕುವಂತಹ ಇಂತಹದ್ದೇ ಒಂದು ಲಸಿಕೆಯು ನಮಗೆ ಲಭಿಸಬಹುದು. ಪ್ರಯೋಗಗಳು ಇನ್ನೂ ಆರಂಬಿಕ ಹಂತದಲ್ಲಿದ್ದು, ಇನ್ನೂ ಸುಮಾರು ನಾಲ್ಕೈದು ವರ್ಷಗಳಲ್ಲಿ ಸಂಪೂರ್ಣ ಯಶಸ್ವಿಯಾಗುವ ಭರವಸೆಯನ್ನು ವಿಜ್ಞಾನಿಗಳು ಮೂಡಿಸಿದ್ದಾರೆ.
ಮುಂದಿನ ಪೀಳಿಗೆಯ ಮಕ್ಕಳಿಗೆ ಜ್ವರಲಸಿಕೆಯನ್ನು ಒಮ್ಮೆ ಹಾಕಿಸಿ, ನಂತರ ಅವಶ್ಯಕತೆಯಿದ್ದರೆ ಯೌವನದಲ್ಲಿ ಮತ್ತೊಮ್ಮೆ ಈ ಲಸಿಕೆಯನ್ನು ತೆಗೆದುಕೊಂಡರೆ ಮುಗಿಯಿತು, ನಮ್ಮ ದೇಹವು ಇಂತಹ ಜ್ವರಗಳಿಂದ ಸದಾ ಸೇಫ್. ಬನ್ನೀ, ಈ ವಿಜ್ಞಾನಿಗಳ ತಂಡಕ್ಕೆ ಒಂದು ಥಾಂಕ್ಸ್ ಹೇಳಿ. ಹಾಗೂ ತಮ್ಮ ಪ್ರಯೋಗದಲ್ಲಿ ಬೇಗ ಯಶ ಕಾಣಲಿ ಎಂದು ಹಾರೈಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
