Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಿಲನ ಕ್ರಿಯೆ ವೇಳೆ ತುಂಬಾ ನೋವಾಗುವುದೇ? ಪೆಲ್ವಿಕ್ ಭಾಗ ಬಲಪಡಿಸಲು ಈ ಆಸನಗಳು ಬೆಸ್ಟ್
ಸತಿ ಪತಿ ದೈಹಿಕವಾಗಿ ಸೇರುವಾಗ ಅದು ಖುಷಿಯನ್ನು ನೀಡಬೇಕು, ಆದರೆ ಕೆಲವು ಹೆಣ್ಮಕ್ಕಳಿಗೆ ಈ ಸಮಯದಲ್ಲಿ ತುಂಬಾನೇ ನೋವುಂಟಾಗುವುದು, ಆದ್ದರಿಂದ ಲೈಂಗಿಕ ತೃಪ್ತಿ ಪಡೆಯಲು ಸಾಧ್ಯವಿಲ್ಲ.
ಅನೇಕ ಕಾರಣಗಳಿಂದ ಈ ಲೈಂಗಿಕ ಸಮಸ್ಯೆ ಉಂಟಾಗುವುದು, ಅದರಲ್ಲೊಂದು ಪೆಲ್ವಿಕ್ ಭಾಗ ದುರ್ಬಲವಾಗಿರುವುದು.

ಯಾವಾಗ ಪೆಲ್ವಿಕ್ ಸ್ನಾಯಗಳಿಗೆ ಹಾನಿಯುಂಟಾಗುವುದು
* ಪೆಲ್ವಿಕ್ ಭಾಗಕ್ಕೆ ಪೆಟ್ಟಾದಾಗ: ಅಪಘಾತವಾದಗ ಆ ಭಾಗಕ್ಕೆ ಪೆಟ್ಟಾದರೆ
* ಹೆರಿಗೆಯ ಸಮಯದಲ್ಲಿ ತುಂಬಾ ಹೊತ್ತು ನೋವು ಅನುಭವಿಸಿ ಹೆರಿಗೆ ತುಂಬಾ ಕಷ್ಟವಾದಾಗ
* ಪೆಲ್ವಿಕ್ ಸರ್ಜರಿ
* ವಯಸ್ಸಾಗುತ್ತಿದ್ದಂತೆ
ಪೆಲ್ವಿಕ್ ಸ್ನಾಯುಗಳು ಬಲವಾಗಿದ್ದರೆ ಲೈಂಗಿಕ ಜೀವನ ಬದಲಾಗುತ್ತಾ?
ಪೆಲ್ವಿಕ್ ಸ್ನಾಯುಗಳು ಬಲವಾಗಿದ್ದರೆ ಲೈಂಗಿಕ ಕ್ರಿಯೆ ನಡೆದಾಗ ನೋವುಂಟಾಗುವುದಿಲ್ಲ ಅಲ್ಲದೆ ಬಲವಾದ ಪೆಲ್ವಿಕ್ ಸ್ನಾಯುಗಳು ಗರ್ಭಧಾರಣೆ ಹಾಗೂ ಹೆರಿಗೆಯ ಸಮಯದಲ್ಲಿ ಸಹಾಯ ಮಾಡುತ್ತದೆ.
ಯೋಗಾಸಾನ ಪೆಲ್ವಿಕ್ ಸ್ಟ್ರಾಂಗ್ (ಪೆಲ್ವಿಕ್ ಬಲಪಡಿಸುತ್ತೆ) ಮಾಡುತ್ತೆ, ನೀವು ಈ ಯೋಗಾಸನ ಪ್ರತಿದಿನ ಅಭ್ಯಾಸ ಮಾಡಿದರೆ ಪೆಲ್ವಿಕ್ ಭಾಗ ಬಲವಾಗುವುದು:
1. ಉತ್ಕಾಟಾಸನ
ಉತ್ಕಟ ಎಂದರೆ ಕುರ್ಚಿ, ಕುರ್ಚಿ ರೀತಿಯಲ್ಲಿ ಕೂರುವ ಆಸನವಾಗಿದೆ.
ಈ ಆಸನ ಮಾಡಲು ಮೊದಲು ನೀವು ಸಮಸ್ಥಿತಿಯಲ್ಲಿ ನಿಂತುಕೊಳ್ಳಿ, ನಂತರ ನಿಧಾನಕ್ಕೆ ಉಸಿರನ್ನು ತೆಗೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆ ಎತ್ತಿ, ನಂತರ ನಿಧಾನಕ್ಕೆ ಉಸಿರನ್ನು ಬಿಡುತ್ತಾ ಮಂಡಿಗಳನ್ನು ನಿಧಾನಕ್ಕೆ ಮಡಿಚಿ ನಿಂತುಕೊಳ್ಳಿ. ನೋಡಿದರೆ ಕುರ್ಚಿಯಲ್ಲಿ ಕೂತಂಥ ಭಂಗಿ.
ಈ ಆಸನ ಮಾಡುವಾಗ ಬೆನ್ನಿನ ಭಾಗ ನೇರವಾಗಿರಬೇಕು. ದೃಷ್ಟಿ ನೇರವಾಗಿರಲಿ. ಕೈಗಳು ಸಮಸ್ಥಿತಿಯಲ್ಲಿರಲಿ.
* ಆಸನ ಮಾಡುವುದರಿಂದ ಪೆಲ್ವಿಕ್ ಭಾಗ ಬಲವಾಗುವುದು ಮಾತ್ರವಲ್ಲ, ಕಾಲುಗಳು ಬಲವಾಗುವುದು, ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ.
2. ಪದ್ಮಾಸನ
ನಿಮ್ಮ ಕಾಲುಗಳನ್ನು ತೊಡೆಯ ಮೇಲೆ ಇಟ್ಟು ಸಮಸ್ಥಿತಿಯಲ್ಲಿ ಕೂರುವ ಭಂಗಿಯಾಗಿದೆ. ಈ ಆಸನವನ್ನು ಒಂದು ನಿಮಿಷ ಅಭ್ಯಾಸ ಮಾಡಿ. ಈ ರೀತಿ ಪ್ರತಿದಿನ ಅಭ್ಯಾಸ ಮಾಡುವುದರಿಂದ ಪೆಲ್ವಿಕ್ ಭಾಗ ಬಲವಾಗುವುದು.
3. ಬದ್ಧಕೋನಾಸ
ಸಮಸ್ಥಿತಿಯಲ್ಲಿ ಕುಳಿತುಕೊಳ್ಳಿ, ನಂತರ ಕಾಲುಗಳನ್ನು ಮಡಚಿ ಕೂರುವಂತೆ ಈ ಆಸನದಲ್ಲಿ ಪಾದಗಳನ್ನು ಜೋಡಿಸಿ ಕೂರುವುದಾಗಿದೆ. ಈ ಆಸನದಲ್ಲಿ 30 ಸೆಕೆಂಡ್ ಕೂರಿ. ಈ ಆಸನವನ್ನು ನೀವು ದಿನದಲ್ಲಿ ಯಾವಾಗ ಬೇಕಾದರೂ ಮಾಡಬಹುದು. ಟಿವಿ ನೋಡುವಾಗ ಈ ಭಂಗಿಯಲ್ಲಿ 1 ನಿಮಿಷ ಕೂರಿ. ಈ ರೀತಿ ಮಾಡುವುದರಿಂದ ಪೆಲ್ವಿಕ್ ಭಾಗ ಬಲವಾಗುತ್ತದೆ.
4. ಧನುರ್ಸಾನ
ಬಿಲ್ಲಿನಂತೆ ಭಾಗುವ ಭಂಗಿ ಇದಾಗಿದೆ. ಈ ಆಸನ ಮಾಡಲು ಹೊಟ್ಟೆಯ ಮೇಲೆ ಮಲಗಿ, ನಂತರ ಕಾಲುಗಳನ್ನು ಮಡಚಿ, ತಲೆಯನ್ನು ಎತ್ತಿ ಕೈಗಳಿಂದ ಕಾಲನ್ನು ಹಿಡಿಯಿರಿ.
ಈ ಆಸನ ಹೊಟ್ಟೆಯ ಭಾಗದ ಅಂಗಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಈ ಆಸನ ಮಾಡುವುದರಿಂದ ಪೆಲ್ವಿಕ್ ಸ್ನಾಯುಗಳು ಬಲವಾಗುವುದು.
ಚಕ್ರಾಸನ
ಮೊದಲು ಶವಾಸನದಲ್ಲಿ ಮಲಗಬೇಕು. ಎರಡು ಒಆದಗಳ ನಡುವೆ ಅಂತರವಿರಲಿ, ನಂತರ ಮೊಣಕೈ ಬಗ್ಗಿಸಿ ಅಂಗೈಗಳನ್ನು ನೆಲದ ಮೇಲೆ ಇರಿಸಿ. ನಂತರ ಎದೆ, ಹೊಟ್ಟೆಯನ್ನು ಮೇಲಕ್ಕೆ ಎತ್ತಬೇಕು. ಆಗ ದೇಹದ ಆಕೃತಿ ಚಕ್ರದಂತೆ ಕಾಣುವುದು.
ಈ ಆಸನ ಮಾಡಲು ಸ್ವಲ್ಪ ಅಭ್ಯಾಸ ಬೇಕಾಗುತ್ತದೆ. ಈ ಆಸನ ಮಾಡುವುದರಿಂದ ದೇಹದ ಶಕ್ತಿ ವೃದ್ಧಿಸುವುದು, ಹೊಟ್ಟೆ ಬೊಜ್ಜು ಕರಗಿಸುತ್ತದೆ, ಪೆಲ್ವಿಕ್ ಭಾಗ ಬಲವಾಗಲು ಸಹಕರಿ.
ಈ ಆಹಾರಗಳು ಕೂಡ ಪೆಲ್ವಿಕ್ ಭಾಗವನ್ನು ಬಲಪಡಿಸುತ್ತದೆ
* ಸಾಕಷ್ಟು ನೀರು ಕುಡಿಯಿರಿ
* ಬಾಳೆಹಣ್ಣು ಸೇವಿಸಿ, ಆಲೂಗಡ್ಡೆ, ದವಸಧಾನ್ಯಗಳು, ಬೀನ್ಸ್, ನಟ್ಸ್ ಸೇವಿಸಿ.
* ಮೀನಿನ ಆಹಾರ ಒಳ್ಳೆಯದು
* ಬೆಣ್ಣುಹಣ್ಣು
* ಮೊಟ್ಟೆ
ಈ ಬಗೆಯ ಆಹಾರಗಳು ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












