Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರೇ ರಾತ್ರಿಯಲ್ಲಿ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಮಧುಮೇಹದ ಸೂಚನೆ
ಮಧುಮೇಹಿಗಳ ಕಾಯಿಲೆ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ, ಹಿಂದೆಯೆಲ್ಲಾ ಮಧುಮೇಹ 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ಯುವಕ ಯುವತಿಯರಲ್ಲಿ ಕಂಡು ಬರುತ್ತಿದೆ.
ಇನ್ನು ಮಹಿಳೆಯರಲ್ಲಿ ಚಿಕ್ಕ ಪ್ರಾಯದಲ್ಲಿಯೇ ಸಕ್ಕರೆ ಕಾಯಿಲೆ ಬಂದರೆ ಅದು ಅವರ ಗರ್ಭಧಾರಣೆ ಮೇಲೆ ಕೂಡ ಪರಿಣಾಮ ಬೀರುವುದು.
ಮಹಿಳೆಯರಲ್ಲಿ ಮಧುಮೇಹ ಬಂದರೆ ಅವರಲ್ಲಿ ಕೆಲವು ಬದಲಾವಣೆಗಳು ಕಂಡು ಬರುವುದು, ಅದರಲ್ಲಿಯೂ ರಾತ್ರಿ ವೇಳೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅದು ಮಧುಮೇಹದ ಸೂಚನೆಯಾಗಿದೆ:

ರಾತ್ರಿ ಹೊತ್ತಿನಲ್ಲಿ ಈ ರೀತಿಯೆಲ್ಲಾ ಆಗುತ್ತಿದ್ದರೆ ಅದು ಮಧುಮೇಹದ ಲಕ್ಷಣಗಳಾಗಿವೆ
1. ರಾತ್ರಿ ತುಂಬಾನೇ ಬಾಯಾರಿಕೆ
ಮಧುಮೇಹಿಗಳಿಗೆ ರಾತ್ರಿ ಸರಿಯಾಗಿ ಮಲಗಲು ಸಾಧ್ಯವಾಗಲ್ಲ, ತುಂಬಾನೇ ಬಾಯಾರಿಕೆಯಾಗುವುದು, ನೀರು ಕುಡಿದು ಮಲಗಿದ ಸ್ವಲ್ಪ ಹೊತ್ತಿನಲ್ಲಿ ಬಾಯಿ ಒಣಗಿದಂತಾಗುವುದು.
2. ಆಗಾಗ ಬಾತ್‌ರೂಂಗೆ ಹೋಗಬೇಕೆನಿಸುವುದು
ಆಗಾಗ ಬಾಯಾರಿಕೆ ಮಾತ್ರವಲ್ಲ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು. ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಕಿಡ್ನಿ ಅದರ ಕೆಲಸವನ್ನು ಸರಿಯಾಗಿ ಮಾಡಲು ಕಷ್ಟವಾಗುವುದು. ಹಾಗಾಗಿ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು.
3. ತುಂಬಾನೇ ಸುಸ್ತು
ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ತುಂಬಾ ಸುಸ್ತು ಅನಿಸುವುದು, ಏಕೆಂದರೆ ನಿಮ್ಮ ಜೀವ ಕಣಗಳಿಗೆ ಸಾಕಷ್ಟು ಗ್ಲುಕೋಸ್ ಸಿಗದೇ ಇದ್ದಾಗ ಈ ರೀತಿ ಸುಸ್ತಾಗುವುದು. ಅಲ್ಲದೆ ತಲೆಸುತ್ತಿದ್ದಂತಾಗುವುದು, ದಿನವಿಡೀ ಸುಸ್ತು ಕಾಡುತ್ತಿದ್ದರೆ ರಕ್ತ ಪರೀಕ್ಷೆ ಮಾಡಿಸಿ.
4. ಕೈ, ಕಾಲುಗಳು ಮರಗಟ್ಟಿದಂತಾಗುವುದು
ಕೈ-ಕಾಲುಗಳು ಮರಗಟ್ಟಿದಂತ ಆಗುವುದು, ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಈ ಸಮಸ್ಯೆ ಹೆಚ್ಚಾಗುವುದು, ಹೀಗಾಗಿ ರಾತ್ರಿ ಸತಿಯಾಗಿ ನಿದ್ದೆ ಬಾರದೆ ಕಷ್ಟಪಡಬೇಕಾಗುವುದು.
5. ಇದ್ದಕ್ಕಿದ್ದಂತೆ ಮೈ ತೂಕ ಕಡಿಮೆಯಾಗುವುದು
ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಮೈ ತೂಕ ತುಂಬಾ ಕಡಿಮೆಯಾದರೆ ಅದರ ಮಧುಮೇಹದ ಲಕ್ಷಣವಾಗಿದೆ. ನೀವು ನಿಮ್ಮ ಆಹಾರಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ವ್ಯಾಯಾಮ ಮಾಡುತ್ತಿಲ್ಲ ಆದರೂ ಮೈ ತೂಕ ಕಡಿಮೆಯಾಗುತ್ತಿದೆ ಎಂದಾದರೆ ನೀವು ನಿರ್ಲಕ್ಷ್ಯ ಮಾಡಬೇಡಿ.
6. ಕಣ್ಣುಗಳು ಮಂಜಾಗುವುದು
ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ಕಣ್ಣುಗಳು ಮಂಜಾಗುವುದು. ಅದರಲ್ಲೂ ರಾತ್ರಿ ಡಿಮ್ ಲೈಟ್‌ನಲ್ಲಿ ತುಂಬಾನೇ ಸಮಸ್ಯೆ ಹೆಚ್ಚಾಗುವುದು, ನಿಮ್ಮ ದೃಷ್ಟಿಯಲ್ಲಿ ಇದ್ದಕ್ಕಿದ್ದಂತೆ ತುಂಬಾ ಬದಲಾವಣೆಯಾದರೆ ನೀವು ಜಾಗ್ರತೆವಹಿಸಬೇಕು.
7. ಚಿಕ್ಕ ಗಾಯವಾದರೂ ಬೇಗನೆ ಒಣಗದಿರುವುದು
ಮಧುಮೇಹ ಬಂದರೆ ಚಿಕ್ಕ ಗಾಯವಾದರೂ ಬೇಗನೆ ಒಣಗುವುದಿಲ್ಲ. ಹಾಗಾಗಿ ಏನಾದರೂ ಗಾಯವಾಗಿ ಒಣಗದೇ ಇದ್ದರೆ ನೀವು ಈ ಬಗ್ಗೆ ಜಾಗ್ರತೆವಹಿಸಬೇಕು.
8. ತುಂಬಾನೇ ಹಸಿವು
ನಿಮಗೆ ಆಗಾಗ ಹಸಿವು ಉಂಟಾಗುತ್ತಿದೆ, ರಾತ್ರಿ ಮಲಗಿದ ಮೇಲೂ ಹಸಿವು ಉಂಟಾಗಿ ಆಹಾರ ಸೇವಿಸುತ್ತಿದ್ದೀರಿ ಎಂದಾದರೆ ನೀವು ನಿರ್ಲಕ್ಷ್ಯ ಮಾಡಬೇಡಿ, ಏಕೆಂದರಡ ಇದು ಮಧುಮೇಹದ ಲಕ್ಷಣವಾಗಿದೆ.
ಮಹಿಳೆಯರಲ್ಲಿ ಮಧುಮೇಹ ಬಂದರೆ ಉಂಟಾಗುವ ತೊಂದರೆಗಳು
ಮೂತ್ರ ಸೋಂಕು: ಮಧುಮೇಹಿ ಮಹಿಳೆಯರಲ್ಲಿ ಮೂತ್ರ ಸೋಂಕು ಹೆಚ್ಚಾಗಿ ಕಂಡು ಬರುವುದು. ಮೂತ್ರ ತಡೆಗಟ್ಟಲು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಬೇಕು.
ಅನಿಯಮಿತ ಮುಟ್ಟು
ಮಧುಮೇಹದ ಸಮಸ್ಯೆ ಉಂಟಾದಾಗ ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗುತ್ತದೆ. ಹಾಗಾಗಿ ಮುಟ್ಟು ಆಗದೇ ಇರುವುದು, ಆದರೆ ಅತಿಯಾದ ರಕ್ತಸ್ರಾವ ಈ ಬಗೆಯ ಸಮಸ್ಯೆ ಕಂಡು ಬರುವುದು.
ಲೈಂಗಿಕ ಆಸಕ್ತಿ ಕಡಿಮೆಯಾಗುವುದು
ಮಹಿಳೆಯರಲ್ಲಿ ಮಧುಮೇಹ ಬಂದರೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಜನನೇಂದ್ರೀ ಡ್ರೈಯಾಗುವುದು, ಲೈಂಗಿಕ ಕ್ರಿಯೆ ನಡೆಸುವಾಗ ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು.
ಮಧುಮೇಹ ಬಂದರೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ವ್ಯಾಯಾಮ ಹಾಗೂ ಆಹಾರಕ್ರಮದತ್ತ ಗಮನಹರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications