Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚರ್ಮದ ಮೇಲೆ ಈ ಲಕ್ಷಣವಿದ್ದರೆ ನಿರ್ಲಕ್ಷಿಸಬೇಡಿ..! ಮಧುಮೇಹದ ಆರಂಭ ಇರಬಹುದು.!!
ಡಯಾಬಿಟಿಸ್ ಅಥವಾ ಮಧುಮೇಹ ಅಥವಾ ಸಕ್ಕರೆ ರೋಗ ತುಂಬಾ ಹಳೆಯ ಕಾಯಿಲೆ. ಒಮ್ಮೆ ನೀವು ಈ ಮಧುಮೇಹಕ್ಕೆ ಒಳಗಾದರೆ ನಿಮ್ಮ ಜೀವನದ ಉದ್ದಕ್ಕೂ ಕಾಡುತ್ತದೆ. ಹಾಗೆ ಅದನ್ನು ಗುಣಪಡಿಸುವ ಬದಲು ನಿಯಂತ್ರಣದಲ್ಲಿಡುವುದೇ ದೊಡ್ಡ ಸವಾಲಾಗುತ್ತದೆ. ಡಯಾಬಿಟಿಸ್ ಎಂದರೆ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣ ವ್ಯವಸ್ಥೆಯಲ್ಲಿ ಉಂಟಾಗುವ ದೋಷ ಆಗಿದೆ.
ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾನದ ಇನ್ಸುಲಿನ್ ಬಿಡುಗಡೆಯಾಗಿ ಇದು ರಕ್ತದಲ್ಲಿ ಬೆರೆಯುತ್ತದೆ. ಸಾಮಾನ್ಯವಾಗಿ ಮಧುಮೇಹಿಗಳು ತಮ್ಮ ಆಹಾರದ ಮೇಲೆ ನಿಗಾ ಇಡಬೇಕಾಗುತ್ತದೆ. ಆದ್ರೆ ಮಧುಮೇಹ ಇರುವುದು ಪತ್ತೆ ಮಾಡುವುದು ಕೂಡ ಕಷ್ಟವಾಗುತ್ತದೆ. ವೈದ್ಯರ ಬಳಿ ನಿಯಮಿತವಾಗಿ ಪರೀಕ್ಷೆ ಮಾಡಿಸಿದರೆ ಮಾತ್ರವೇ ಈ ಕುರಿತು ತಿಳಿಯಬಹುದು. ಇಲ್ಲದಿದ್ದರೆ ಈ ಮಧುಮೇಹ ದೇಹವನ್ನೆಲ್ಲಾ ಹಾಳು ಮಾಡಿದ ಬಳಿಕ ತಿಳಿಯುತ್ತದೆ.

ಆದ್ರೆ ಈ ಮಧುಮೇಹ ಆರಂಭಕ್ಕೂ ಮುನ್ನ ನಮಗೆ ಹಲವು ರೀತಿಯ ಲಕ್ಷಣಗಳು ಗೋಚರವಾಗುತ್ತದೆ. ಅದರಲ್ಲೂ ನಮ್ಮ ಚರ್ಮದಲ್ಲಿ ಉಂಟಾಗುವ ಬದಲಾವಣೆಗಳು ಮಧುಮೇಹದ ಆರಂಭಿಕ ಹಂತವನ್ನು ತೋರಿಸುತ್ತದೆ. ಹಾಗಾದ್ರೆ ಚರ್ಮದ ಮೇಲೆ ಆಗುವಂತಹ ಯಾವ ರೀತಿಯ ಬದಲಾವಣೆಯು ಮಧುಮೇಹದ ಲಕ್ಷಣವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಧುಮೇಹದ ಪರಿಣಾಮವು ದೇಹದೊಳಗೆ ಮಾತ್ರವಲ್ಲದೆ ಚರ್ಮದ ಮೇಲೂ ಕಂಡುಬರುತ್ತದೆ ಇದಕ್ಕೆ ಹಲವು ಕಾರಣಗಳಿವೆ. ಆದ್ರೆ ಚರ್ಮದ ಮೇಲಿನ ಹಲವು ರೀತಿಯ ಕಲೆಗಳಿಂದ ಮಧುಮೇಹವನ್ನು ನಾವು ಗುರುತಿಸಬಹುದು. ಈ ರೀತಿ ಸರಿಯಾದ ಸಮಯಕ್ಕೆ ಮಧುಮೇಹ ಗುರುತಿಸಿದರೆ ವೈದ್ಯರನ್ನು ಸಂಪರ್ಕಿಸಿದರೆ ಬಹುಬೇಗ ಚಿಕಿತ್ಸೆ ಪಡೆಯಬಹುದು.
ಕಾಲುಗಳ ಮೇಲೆ ಕಪ್ಪು ಕಲೆಗಳು
ನಿಮ್ಮ ಪಾದದಿಂದ ಮೇಲೆ ಅಂದರೆ ಗಂಟಿನಿಂದ ಮೇಲ್ಭಾಗದಲ್ಲಿ ಹಾಗೆ ಮುಂಗಾಲಿನಿಂದ ಕೆಳಭಾಗದ ಚರ್ಮದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳಬಹುದು. ಇದು ಯಾವುದೇ ನೋವು, ಸಿಡಿತ, ಉರಿ, ತುರಿಕೆ ಉಂಟು ಮಾಡುವುದಿಲ್ಲ. ಹಾಗೆ ಎಲ್ಲಿಯೂ ಗಾಯಗಳು ಕೂಡ ಇರುವುದಿಲ್ಲ. ಆದರೆ ಇದು ಇನ್ಸುಲಿನ್ ಪ್ರತಿರೋಧದ ಲಕ್ಷಣ ಆಗಿರಬಹುದು, ಹಾಗೆ ಮಧುಮೇಹದ ಆರಂಭಿಕ ಮುನ್ಸೂಚನೆ ಕೂಡ ಇದಾಗಿರಬಹುದು. ಇದು ಯಾವುದೇ ಉರಿ, ನೋವು, ತುರಿಕೆ ಇಲ್ಲದ ಕಾರಣ ಜನರು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ಗಾತ್ರದಲ್ಲಿ ಕೆಲವೊಮ್ಮೆ ಸಣ್ಣ ಮಚ್ಚೆ ಆಕಾರದಿಂದ ಹಿಡಿದು ದೊಡ್ಡದಾಗಿ ಇಡಿ ಕಾಲಿನಲ್ಲಿ ಹರಡಿರಬಹುದು.
ಹಳದಿ ಬಣ್ಣದ ಮಚ್ಚೆಗಳು
ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಹಳದಿ ಬಣ್ಣದ ಮಚ್ಚೆಗಳ ಕಾಣಿಸಿಕೊಳ್ಳಬಹುದು. ಇದು ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುವುದರ ಲಕ್ಷಣ ಆಗಿರಬಹುದು. ಈ ರೀತಿಯ ಮಚ್ಚೆಗಳು ಕೂಡ ನಿಮಗೆ ಹಾನಿ ಮಾಡುವುದಿಲ್ಲ, ಬದಲಿಗೆ ನಿಮ್ಮ ಮಧುಮೇಹದ ಲಕ್ಷಣವೆಂದು ನೀವು ಅರಿಯಬಹುದು. ಆರಂಭಿಕ ಹಂತದ ಮಧುಮೇಹಿಗಳಲ್ಲಿ ಈ ರೀತಿ ಲಕ್ಷಣ ಗೋಚರವಾಗುತ್ತದೆ.
ಮಧುಮೇಹಿಗಳಲ್ಲಿ ರಕ್ತ ಪರಿಚಲನೆಯಲ್ಲಿನ ಅಡೆತಡೆಯಿಂದ ಈ ಹಳದಿ ಮಚ್ಚೆಗಳು ಬಹುಕಾಲ ಹಾಗೆಯೇ ಉಳಿಯುತ್ತವೆ. ಇದು ನರಹಾನಿಗೂ ಕಾರಣವಾಗುತ್ತದೆ. ಹೀಗಾಗಿ ಇಂತಹ ಲಕ್ಷಣವನ್ನು ನೀವು ನಿರ್ಲಕ್ಷಿಸದಿರುವುದು ಉತ್ತಮ.
ಗುಣವಾಗದ ಗಾಯಗಳು
ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾದರೆ ದೇಹದಲ್ಲಿ ಸಣ್ಣ ಪುಟ್ಟ ಗಾಯವಾದರೂ ಕೂಡ ಬಹುಬೇಗ ವಾಸಿಯಾಗವುದಿಲ್ಲ. ದೇಹವು ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಕಳೆದುಕೊಳ್ಳುತ್ತದೆ. ಹೀಗಾಗಿ ಹಸಿಗಾಯಗಳು ಹಾಗೆಯೆ ಉಳಿಯುವುದು, ದೊಡ್ಡದಾಗುವುದು ಉಂಟಾಗುತ್ತದೆ. ಹಾಗೆ ಸಣ್ಣ ಗಾಯ ದಪ್ಪವಾಗುತ್ತಾ ಹೋಗುವುದು, ಮತ್ತಷ್ಟು ನೋವು ಉಂಟು ಮಾಡುವುದು ಕೂಡ ನೀವು ಗಮನಿಸಬಹುದು, ಇದು ಮಧುಮೇಹದ ಸಾಮಾನ್ಯ ಲಕ್ಷಣದಲ್ಲಿ ಒಂದಾಗಿದೆ. ಈ ಎಲ್ಲಾ ಚರ್ಮದ ಲಕ್ಷಣಗಳು ನೀವು ಎದುರಿಸಿದರೆ ತಕ್ಷಣ ವೈದ್ಯರ ಭೇಟಿಯಾಗುವುದು ಬಹಳ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
